Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ವೈರಸ್ ಬಳಸಿ ಕ್ಯಾನ್ಸರ್ ಕಣಗಳ ಸಂಪೂರ್ಣ ನಾಶ! ಲಂಡನ್‌ನಲ್ಲಿ ನಡೆಸಿದ ಸಂಶೋಧನೆ
ಕ್ಯಾನ್ಸರ್ ಗುಣಪಡಿಸುವ ಯಾವುದೇ ಸುದ್ದಿ ಕೇಳಿದರೂ ತುಂಬಾನೇ ಖುಷಿಯಾಗುತ್ತಿದೆ. ಕ್ಯಾನ್ಸರ್ ಎಂಬ ಮಹಾಮಾರಿಗೆ ಪ್ರತೀವರ್ಷ ಎಷ್ಟೋ ಜನರು ಬಲಿಯಾಗುತ್ತಿದ್ದಾರೆ. ಈ ಕ್ಯಾನ್ಸರ್‌ನಿಂದಾಗಿ ಎಷ್ಟೋ ಕುಟುಂಬಗಳ ನೆಮ್ಮದಿ ದೂರಾಗಿದೆ, ಆರ್ಥಿಕವಾಗಿ ಸಂಕಷ್ಟ ಎದುರಾಗಿದೆ. ಮಧ್ಯಮವರ್ಗದವರಿಗೆ ಈ ಕಾಯಿಲೆ ಬಂದರಂತೂ ಚಿಕಿತ್ಸೆಗೆ ತುಂಬಾನೇ ಹಣ ಬೇಕಾಗಿರುವುದರಿಂದ ಆರ್ಥಿಕವಾಗಿ ಹೈರಾಣಾಗಿ ಬಿಡುತ್ತಾರೆ. ಈ ಕ್ಯಾನ್ಸರ್ ಮೊದಲ ಹಂತದಲ್ಲಿ ಪತ್ತೆಯಾದರೆ ಗುಣಪಡಿಸುವುದು ಸುಲಭ, ಆದರೆ ಮೂರನೇ, ನಾಲ್ಕನೇ ಹಂತದಲ್ಲಿ ಪತ್ತೆಯಾದರೆ ಗುಣಮುಖರಾಗುವುದು ಕಷ್ಟ.

ಆದರೆ ಇತ್ತೀಚಿನ ದಿನಗಳಲ್ಲಿ ವಿಜ್ಞಾನ ತುಂಬಾನೇ ಸಾಧನೆ ಮಾಡುತ್ತಿದೆ, ಇತ್ತೀಚೆಗೆ Dostarlimab ಡ್ರಗ್‌ನಿಂದ ಕ್ಯಾನ್ಸರ್ ರೋಗಿಗಳು ಗುಣಮುಖರಾಗಿರುವ ಸುದ್ದಿ ಪ್ರಕಟವಾಗಿತ್ತು. ಇದೀಗ ವೈರಸ್‌ನಿಂದ ವೈರಸ್‌ನಿಂದ ಕ್ಯಾನ್ಸರ್ ಕಣಗಳನ್ನು ಕೊಲ್ಲಬಹುದು, ಲಂಡನ್‌ನಲ್ಲಿ ಸಾಯುತ್ತಿರುವ ವ್ಯಕ್ತಿಯನ್ನು ವೈರಸ್ ಬಳಸಿ ಬದುಕಿಸಲಾಯಿತು ಎಂದು ವಿಜ್ಞಾನಿಗಳು ಹೇಳಿದ್ದಾರೆ. ಕ್ಯಾನ್ಸರ್ ಕಣಗಳನ್ನು ಬಳಸಲು ಯಾವ ವೈರಸ್ ಬಳಸಲಾಯಿತು, ಈ ಕುರಿತು ವಿಜ್ಞಾನಿಗಳು ಏನು ಹೇಳಿದ್ದಾರೆ ನೋಡಿ:

ವೈರಸ್ ಬಳಿ ಕ್ಯಾನ್ಸರ್ ಕಣಗಳ ನಾಶ
ಲಂಡನ್‌ನ ವಿಜ್ಞಾನಿಗಳು ಸಾಯುವ ಹಂತದಲ್ಲಿದ್ದ ವ್ಯಕ್ತಿಯನ್ನು ವೈರಸ್ ಚಿಕಿತ್ಸೆ ನೀಡಿ ಬದುಕಿಸಿದರು. ಕೆಲವರಲ್ಲಿ ಈ ಚಿಕಿತ್ಸೆಯಿಂದಾಗಿ ಗಡ್ಡೆಗಳು ಕ್ಯಾನ್ಸರ್ ಗಡ್ಡೆಗಳು ಒಣಗಿದೆವು ಎಂದು ವಿಜ್ಞಾನಿಗಳು ಹೇಳಿದ್ದಾರೆ. ವರದಿಯ ಪ್ರಕಾರ ಈ ಔಷಧಿಯನ್ನು ದುರ್ಬಲ ಹರ್ಪೀಸ್ ವೈರಸ್‌ನಿಂದ ತಯಾರಿಸಿದ್ದು ಇವುಗಳು ಕ್ಯಾನ್ಸರ್ ಕಣಗಳನ್ನು ನಾಶ ಪಡಿಸುತ್ತದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ವರದಿ ಏನು ಹೇಳಿದೆ?
ಲಂಡನ್‌ನ ವ್ಯಕ್ತಿಯಲ್ಲಿ ಲಾಲಾರಸ ಗ್ರಂಥಿಯಲ್ಲಿ ಕ್ಯಾನ್ಸರ್ ಪತ್ತೆಯಾಯಿತು. ಆ ವ್ಯಕ್ತಿ ತುಂಬಾ ಚಿಕಿತ್ಸೆಯನ್ನು ಪಡೆದರು, ಶಸ್ತ್ರ ಚಿಕಿತ್ಸೆ ಕೂಡ ಮಾಡಲಾಯಿತು, ಆದರೆ ಯಾವುದೇ ಚಿಕಿತ್ಸೆ ಪರಿಣಾಮ ಬೀರಲಿಲ್ಲ. ಆದರೆ ಈ ಕ್ಯಾನ್ಸರ್‌ನಿಂದ ಗುಣಮುಖರಾಗಲು ತುಂಬಾನೇ ಬಯಸುತ್ತಿದ್ದರು, ಹಾಗಾಗಿ ಕ್ಲಿನಿಕಲ್ ಟ್ರಯಲ್‌ಗೆ ಒಪ್ಪಿದರು, ಆದರೆ ಈಗ ಆ ವ್ಯಕ್ತಿ ಕ್ಯಾನ್ಸರ್‌ನಿಂದ ಸಂಪೂರ್ಣ ಗುಣಮುಖರಾಗಿ ಎರಡು ವರ್ಷಗಳಾಯಿತು.

ಎರಡು ರೀತಿಯಲ್ಲಿ ಸಹಾಯವಾಗುವ ಚಿಕಿತ್ಸೆ
ವರದಿಯ ಪ್ರಕಾರ ಈ ವೈರಸ್ ಡ್ರಗ್ ಅನ್ನು ನೇರವಾಗಿ ಗಡ್ಡೆಗೆ ಚುಚ್ಚಲಾಗುವುದು, ಆಗ ಕ್ಯಾನ್ಸರ್ ಕಣಗಳು ಅಲ್ಲಿಯೇ ಹೆಚ್ಚಾಗಿ ಒಡೆಯಲಾರಂಭಿಸುತ್ತೆ, ಇದರಿಂದಾಗಿ ಮುಂದೆ ಪ್ರೊಟೀನ್ ಹೆಚ್ಚಾಗುವುದನ್ನು ಬ್ಲಾಕ್ ಮಾಡಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ, ಕ್ಯಾನ್ಸರ್‌ಗಳನ್ನು ಒಡೆದು ಹಾಕಿ, ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಕೆಲಸವನ್ನು ಈ ಚುಚ್ಚು ಮದ್ದು ಮಾಡುತ್ತದೆ.

9ರಲ್ಲಿ ಮೂರು ಜನರಲ್ಲಿ ಕ್ಯಾನ್ಸರ್ ಗಡ್ಡೆಗಳು ಕಿರಿದಾಗಿತ್ತು
ವರದಿ ಪ್ರಕಾರ 40 ಕ್ಯಾನ್ಸರ್ ರೋಗಿಗಳು ಮೊದಲ ಪ್ರಯೋಗದಲ್ಲಿ ಭಾಗವಹಿಸಿದ್ದರು. ಅವರಿಗೆ RP2 ಇಂಜೆಕ್ಷನ್ ನೀಡಲಾಗಿತ್ತು. ಅವರಲ್ಲಿ 9ರಲ್ಲಿ 3 ಜನರ ಗಡ್ಡೆಗಳು ಕಿರಿದಾಗಿ ಒಣಗಲಾರಂಭಿಸಿತ್ತು. ಮೂವತ್ತರಲ್ಲಿ ಏಳು ಜನರು ಚೇತರಿಸಿಕೊಳ್ಳಲಾರಂಭಿಸಿದರು. ಈ ಔಷಧಿಯ ಅಡ್ಡಪರಿಣಾಮ ಕೂಡ ಅಷ್ಟೇನೂ ಇಲ್ಲ.
ಈ ಹರ್ಪೀಸ್ ವೈರಸ್ ಬಳಸಿ ಕ್ಯಾನ್ಸರ್ ಚಿಕಿತ್ಸೆ ನೀಡಿದಾಗ ರೋಗಿಗಳು ಗುಣಮುಖರಾಗುತ್ತಿರುವುದು ಕ್ಯಾನ್ಸರ್ ಮಹಾಮಾರಿಯಿಂದ ಪಾರಾಗಲು ಹೊಸ ಭರವಸೆ ಮೂಡಿಸಿದೆ.



Click it and Unblock the Notifications
