For Quick Alerts
ALLOW NOTIFICATIONS  
For Daily Alerts

ಹೆಣ್ಣು ಮಕ್ಕಳಿಗೆ ಈ ಲಕ್ಷಣಗಳಿದ್ದರೆ ನಿಮಗೆ ವ್ಯಾಜಿನಿಸ್ಮಸ್ ಸಮಸ್ಯೆ ಇದೆ ಎಂದರ್ಥ..! ಎಚ್ಚರ

|

ಲೈಂಗಿಕತೆ ಅನ್ನುವ ಪದ ಇಂದಿನ ದಿನಗಳಲ್ಲಿ ಸಾಮಾನ್ಯ ಪದವಾಗಿ ಬಿಟ್ಟಿದೆ. ಈ ಹಿಂದಿನಂತೆ ಲೈಂಗಿಕತೆ ಅಂದಾಗ ಕಣ್ಣು ದೊಡ್ಡದು ಮಾಡುವ ಸಮಯವೂ ಕಳೆದು ಹೋಗಿದೆ. ಯಾಕೆಂದರೆ ಇದೀಗ ಲೈಂಗಿಕತೆ ಬಗ್ಗೆ ಸಾಕಷ್ಟು ಶಿಕ್ಷಣ ಜನರಿಗೆ ಸಿಗುತ್ತಿದೆ.

ಇಷ್ಟೇಲ್ಲ ಶಿಕ್ಷಣವಿದ್ದರೂ ಕೂಡ ಲೈಂಗಿಕತೆಯ ಬಗ್ಗೆ ನಾವು ತಿಳಿದುಕೊಳ್ಳುವುದು ಅನೇಕ ವಿಷಯಗಳಿದೆ. ಯಾಕೆಂದರೆ ಅನೇಕರಿಗೆ ಲೈಂಗಿಕ ಆರೋಗ್ಯದ ಬಗ್ಗೆ ತಿಳಿದುವುದಿಲ್ಲ. ತಮ್ಮ ಲೈಂಗಿಕ ಭಾಗದಲ್ಲಿ ಸಮಸ್ಯೆ ಹಾಗೂ ಬದಲಾವಣೆಯ ಅರಿವು ಇರುವುದಿಲ್ಲ. ಈ ಸಮಸ್ಯೆ ಉಲ್ಬಣಗೊಂಡಾಗ ಮಾತ್ರ ಅದರ ಬಗ್ಗೆ ಕಾಳಜಿ ವಹಿಸುವುದು ಜಾಸ್ತಿ.

ಹೀಗಾಗಿ ಸಮಸ್ಯೆಯ ಬಗ್ಗೆ ಅರಿತಿರುವುದು ಒಳ್ಳೆಯದು. ಅಂದ ಹಾಗೇ ಮಹಿಳೆಯರ ಲೈಂಗಿಕ ಆರೋಗ್ಯದ ಪ್ರಮುಖ ವಿಚಾರವೆಂದರೆ ಅದುವೇ ವ್ಯಾಜಿನಿಸ್ಮಸ್. ಮಹಿಳೆಯರ ಲೈಂಗಿಕತೆಯಲ್ಲಿ ವ್ಯಾಜಿನಿಸ್ಮಸ್ ಸಮಸ್ಯೆ ಪ್ರಮುಖ ಪಾತ್ರವಹಿಸುತ್ತದೆ. ಇದು ಲೈಂಗಿಕ ಕ್ರಿಯೆಯ ಮೇಲೆಯೇ ಪರಿಣಾಮ ಬೀರುತ್ತದೆ. ಹಾಗಾದರೆ ಏನಿದು ವ್ಯಾಜಿನಿಸ್ಮಸ್ ಅನ್ನುವ ಕುತೂಹಲ ನಿಮಗಿದ್ದರೆ ಓದು ಮುಂದುವರೆಸಿ.

ಏನಿದು ವ್ಯಾಜಿನಿಸ್ಮಸ್?

ಏನಿದು ವ್ಯಾಜಿನಿಸ್ಮಸ್?

ವ್ಯಾಜಿನಿಸ್ಮಸ್ ಎನ್ನುವುದು ಮಹಿಳೆಯರಿಗಿರುವ ಸಮಸ್ಯೆಯಾಗಿದೆ ಕೆಲವೊಂದು ಬಾರಿ ಇದನ್ನು ಕಾಯಿಲೆಯಂತಲೂ ಕರೆಯುತ್ತಾರೆ. ವ್ಯಾಜಿನಿಸ್ಮಸ್ ಅಂದರೆ ಸೆಕ್ಸ್ ನಡೆಸುವ ವೇಳೆ ಮಹಿಳೆಯರ ವಜಿನಾ ಅಥವಾ ಯೋನಿಯ ಸ್ನಾಯುಗಳು ಅನೈಚ್ಛಿಕವಾಗಿ ಬಿಗಿಗೊಳಿಸಿದಾಗ ಸಂಭವಿಸುವ ಪ್ರಕ್ರಿಯೆಯಾಗಿದೆ.

ಸುಲಭವಾಗಿ ಹೇಳುವುದಾದರೆ ಲೈಂಗಿಕತೆ ಸಂದರ್ಭದಲ್ಲಿ ಯೋನಿ ಸರಿಯಾಗಿ ತೆರೆಯದೆ ಪುರುಷರ ಶಿಶ್ನವನ್ನು ಸರಿಯಾಗಿ ಒಳಗೆ ಹಾಕಲು ಆಗದ ಒಂದು ಪರಿಸ್ಥಿತಿಯಾಗಿದೆ.

ಹೀಗಾಗಿ ಇದು ಸಮಸ್ಯೆಯಾಗಿದೆ. ದುರದೃಷ್ಟವಶಾತ್, ಈ ಪ್ರಕ್ರಿಯೆ ಮಹಿಳೆಯರ ಅರಿವಿಲ್ಲದೆ ನಡೆಯುವ ಪ್ರಕ್ರಿಯೆಯಾಗಿದ್ದು ಅವರಿಗೆ ಇದರ ಬಗ್ಗೆ ನಿಯಂತ್ರಣ ಇರುವುದಿಲ್ಲ. ಅದು ಅಟೋಮ್ಯಾಟಿಕ್ ಆಗಿ ಮುಚ್ಚುವುದು ಅಥವಾ ಕಿರಿದಾಗುವುದು ಆಗಿದೆ. ಈ ಸಮಸ್ಯೆಯಿಂದ ಲೈಂಗಿಕ ಸಂಭೋಗ, ವೈದ್ಯಕೀಯ ಪರೀಕ್ಷೆ ಮತ್ತು ಟ್ಯಾಂಪೂನ್‌ಗಳ ಅಳವಡಿಕೆಗೆ ಅಡ್ಡಿಯಾಗಬಹುದು. ಇದು ಅತ್ಯಂತ ಕಷ್ಟಕರ ಎಂದು ಅನಿಸಬಹುದು.

ಇದರಿಂದಾಗುವ ಸಮಸ್ಯೆ ಏನು?

ಇದರಿಂದಾಗುವ ಸಮಸ್ಯೆ ಏನು?

ವಜಿನಾ ಅಥವಾ ಯೋನಿಯ ಸ್ನಾಯುಗಳು ಅನೈಚ್ಛಿಕವಾಗಿ ಬಿಗಿಗೊಳಿಸಿದಾಗ ಯೋನಿ ಸರಿಯಾಗಿ ತೆರೆಯದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಇದರಿಂದಾಗಿ ಸರಿಯಾಗಿ ಸಂಭೋಗ ನಡೆಸಲು ಸಾಧ್ಯವಾಗುವುದಿಲ್ಲ. ಅಲ್ಲದೇ ಶಿಶ್ನ ಒಳಗೆ ಹಾಕಲು ಪ್ರಯತ್ನಿಸಿದಂತ ಮಹಿಳೆಯರಿಗೆ ತೀವ್ರ ತರದ ನೋವು ಉಂಟಾಗಲು ಆರಂಭವಾಗುತ್ತದೆ. ಸೆಕ್ಸ್ ಬೇಡ ಅನ್ನುವಷ್ಟರಮಟ್ಟಿಗೆ ನೋವು ಕಾಡುತ್ತದೆ.

ವ್ಯಾಜಿನಿಸ್ಮಸ್ ಉಂಟಾಗಲು ಕಾರಣವೇನು?

ವ್ಯಾಜಿನಿಸ್ಮಸ್ ಉಂಟಾಗಲು ಕಾರಣವೇನು?

ಲೈಂಗಿಕ ದೌರ್ಜನ್ಯ!

ವ್ಯಾಜಿನಿಸ್ಮಸ್ ಸಮಸ್ಯೆಗೆ ಕೆಲವೊಂದು ಕಾರಣಗಳಿದೆ. ಅದರಲ್ಲಿ ಪ್ರಮುಖವಾದದ್ದು ಲೈಂಗಿಕ ದೌರ್ಜನ್ಯ. ಹೌದು, ನೀವು ಯಾವುದೇ ರೀತಿಯ ಲೈಂಗಿಕ ದೌರ್ಜನ್ಯವನ್ನು ಅನುಭವಿಸಿದ್ದರೆ ಅಂದರೆ ಬಲವಂತದ ಸೆಕ್ಸ್ ಅನುಭವಿಸಿದ್ದರೆ ಇದು ವ್ಯಾಜಿನಿಸ್ಮಸ್ ಗೆ ಕಾರಣವಾಗಿರಬಹುದು.

ಇಂತಹ ಸಮಸ್ಯೆ ಇದ್ದರೆ ಕೂಡಲೇ ಇದನ್ನು ಪರಿಹರಿಸಿಕೊಳ್ಳುವುದು ಮುಖ್ಯ. ಲೈಂಗಿಕ ದೌರ್ಜನ್ಯದಂತಹ ಪ್ರಕರಣ ನಡೆದಿದ್ದರೆ ಇದು ನಿಮ್ಮ ಮಾನಸಿಕ ಆರೋಗ್ಯದ ಮೇಲೆಯೂ ಪರಿಣಾಮ ಬೀರಿರುತ್ತದೆ. ಇದರಿಂದ ವ್ಯಾಜಿನಿಸ್ಮಸ್ ಸಮಸ್ಯೆ ಹೊಂದಿರಬಹುದು.

ಹೀಗಾಗಿ ಉತ್ತಮ ಲೈಂಗಿಕ ಜೀವನವನ್ನು ಆನಂದಿಸಲು ಸಹಾಯ ಮಾಡುವ, ಅದೇ ಭಯವನ್ನು ನಿಭಾಯಿಸಲು ನಿಮಗೆ ಸಹಾಯ ಮಾಡುವ ಸಲಹೆಗಾರರನ್ನು ಭೇಟಿ ಮಾಡಿ ಸಲಹೆ ಪಡೆಯುವುದು ಒಳ್ಳೆಯದು.

ನೋವಿನ ಸಂಭೋಗದಿಂದ ಉಂಟಾಗಬಹುದು!

ನೋವಿನ ಸಂಭೋಗದಿಂದ ಉಂಟಾಗಬಹುದು!

ನೀವು ಹಿಂದೆ ಅತ್ಯಂತ ನೋವಿನ ಸಂಭೋಗ ಅನುಭವಿಸಿದ್ದರೆ, ನಿಮ್ಮ ದೇಹದ ರಕ್ಷಣಾ ಕಾರ್ಯವಿಧಾನವನ್ನು ಸಕ್ರಿಯಗೊಳಿಸಿರಬಹುದು ಇದರಿಂದ ವ್ಯಾಜಿನಿಸ್ಮಸ್ ಉಂಟಾಗಿರಬಹುದು ಎಂದು ತಜ್ಞರು ಹೇಳುತ್ತಾರೆ.

ನೀವು ನೋವಿನ ಲೈಂಗಿಕತೆಯ ಕಾರಣವನ್ನು ಅರ್ಥಮಾಡಿಕೊಳ್ಳಲು ನೀವು ಆಳವಾಗಿ ಅಧ್ಯಯನ ಮಾಡಬೇಕಾಗಬಹುದು. ನಿಮ್ಮ ಸಮಸ್ಯೆಯ ಮೂಲ ಕಾರಣವನ್ನು ಅಳೆಯಲು ಮತ್ತು ಚಿಕಿತ್ಸೆಯನ್ನು ಸೂಚಿಸಲು ವೈದ್ಯಕೀಯ ಪರೀಕ್ಷೆಯನ್ನು ಕೈಗೊಳ್ಳುವ ಸ್ತ್ರೀರೋಗತಜ್ಞರನ್ನು ನೀವು ಭೇಟಿ ಮಾಡುವುದು ಒಳ್ಳೆಯದು.

ಭಯ!

ಭಯ!

ನಿಮ್ಮ ವಜಿನ ಅಥವಾ ಯೋನಿಯೊಳಗೆ ವಿದೇಶಿ ಮೆಷಿನ್ ಹಾಕಿದ್ದು ಇದರಿಂದ ನೀವು ವಜಿನದ ನೋವನ್ನು ಅನುಭವಿಸಿದ್ದಿರಿ ಎಂದಾದರೆ ಇದು ನಿಮಗೆ ವ್ಯಾಜಿನಿಸ್ಮಸ್ ಭಯವನ್ನು ಉಂಟುಮಾಡಿರಬಹುದು. ಹೀಗಾಗಿ ನೀವು ಈ ಭಯವನ್ನು ಹೋಗಲಾಡಿಸಬೇಕು.

ಶಿಶ್ನ ಅಥವಾ ಲೈಂಗಿಕತೆ ಖುಷಿ ನೀಡುವ ಮೆಷಿನ್ ಗಳಿಂದ ಯಾವುದೇ ನೋವಿಲ್ಲ ಎನ್ನುವುದನ್ನು ನೀವು ಭಯ ಹೋಗಲಾಡಿಸುವ ಮೂಲಕ ಕಂಡುಕೊಳ್ಳಬೇಕು. ಒಂದು ವೇಳೆ ನೀವು ಭಯದಿಂದ ಸಂಭೋಗ ಮಾಡಿಸಿಕೊಂಡರೆ ನಿಮ್ಮ ವಜಿನದ ಸ್ನಾಯುಗಳು ಇನ್ನಷ್ಟು ಉದ್ವಿಗ್ನಗೊಂಡು ಹೆಚ್ಚು ನೋವು ಉಂಟು ಮಾಡುತ್ತದೆ.

ಶಸ್ತ್ರಚಿಕಿತ್ಸೆ!

ಶಸ್ತ್ರಚಿಕಿತ್ಸೆ!

ನೀವು ಸಂತಾನೋತ್ಪತ್ತಿ ಅಂಗಗಳು ಅಥವಾ ಯೋನಿಯ ಯಾವುದೇ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರೆ, ಇದರಿಂದಲೂ ವ್ಯಾಜಿನಿಸ್ಮಸ್ ಸಮಸ್ಯೆ ಉಂಟಾಗಬಹುದು. ಹೀಗಾಗಿ ಶಸ್ತ್ರಚಿಕಿತ್ಸೆ ಬಳಿಕ ಅದಕ್ಕೆ ಬೇಕಾದ ಔಷದಿಯನ್ನು ಪಡೆದುಕೊಂಡು ಸರಿಯಾದ ಬಳಿಕ ಸೆಕ್ಸ್ ಮಾಡುವುದು ಒಳ್ಳೆಯದು.

ವ್ಯಾಜಿನಿಸ್ಮಸ್ ಸಮಸ್ಯೆ ಪರಿಹರಿಸಿಕೊಳ್ಳುವುದು ಹೇಗೆ?

ವ್ಯಾಜಿನಿಸ್ಮಸ್ ಸಮಸ್ಯೆ ಪರಿಹರಿಸಿಕೊಳ್ಳುವುದು ಹೇಗೆ?

* ವಜಿನಾದ ಉದ್ವಿಗ್ನ ಸ್ನಾಯುಗಳನ್ನು ವಿಶ್ರಾಂತಿ ಮಾಡುವ ಕೆಲಸವನ್ನು ಮೊದಲು ಮಾಡಿದರೆ ವ್ಯಾಜಿನಿಸ್ಮಸ್ ಸಮಸ್ಯೆ ಪರಿಹರಿಸಿಕೊಂಡಂತೆ. ಹೀಗಾಗಿ ವಜಿನಾದ ಭಾಗಕ್ಕೆ ಸಂಯೋಜಿತ ಕ್ರೀಮ್‌ಗಳನ್ನು ಹಚ್ಚಲು ಸ್ತ್ರೀರೋಗ ವೈದ್ಯರು ಸಲಹೆ ನೀಡಬಹುದು. ಇದು ನೋವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

* ನಿಮ್ಮ ವೈದ್ಯರು ನಿಮ್ಮ ಶ್ರೋಣಿಯ ಮಹಡಿ ಸ್ನಾಯುಗಳನ್ನು ವಿಶ್ರಾಂತಿ ಮಾಡಲು ಕೆಲವು ವ್ಯಾಯಾಮಗಳನ್ನು ಸಹ ಸೂಚಿಸಬಹುದು.

* ಲೈಂಗಿಕ ಚಿಕಿತ್ಸಕರು ನಿಮಗೆ ಮತ್ತು ನಿಮ್ಮ ಸಂಗಾತಿಗೆ ಮತ್ತೆ ಸಂಭೋಗದಲ್ಲಿ ಸಂತೋಷವನ್ನು ಕಂಡುಕೊಳ್ಳಲು ಸಹಾಯ ಮಾಡುತ್ತಾರೆ.

* ಆದರೆ, ದಂಪತಿ ಚಿಕಿತ್ಸೆಯಲ್ಲಿ ಮನೋವೈದ್ಯರ ಪಾತ್ರವನ್ನು ಹೆಚ್ಚು ಶಿಫಾರಸು ಮಾಡಲಾಗಿದೆ; ಇದು ಮಾನಸಿಕ ಮೌಲ್ಯಮಾಪನವನ್ನು ಒಳಗೊಂಡಿದೆ.

* 95% ವ್ಯಾಜಿನಿಸ್ಮಸ್ ಆತಂಕ, ಭಯ, ಒತ್ತಡ ಮತ್ತು ಚಿಂತೆಯಿಂದ ಉಂಟಾಗುವ ಮಾನಸಿಕ ಕಾರಣಗಳಿಂದ ಉಂಟಾಗುತ್ತದೆಯಾದರೂ, 5% ಪ್ರಕರಣಗಳಲ್ಲಿ ಸಾವಯವ ಕಾರಣಗಳಿವೆ. ಹೀಗಾಗಿ ಮಾನಸಿಕ ಆರೋಗ್ಯ ಅತೀ ಮುಖ್ಯ.

* ವ್ಯಾಜಿನಿಸ್ಮಸ್ 100% ಗುಣಪಡಿಸಬಹುದಾದ ರೋಗವಾಗಿದೆ ಮತ್ತು ವ್ಯಕ್ತಿಗೆ ಅನ್ವಯಿಸಲಾದ ಸರಿಯಾದ ಚಿಕಿತ್ಸೆಯೊಂದಿಗೆ 1-5 ಅವಧಿಗಳಲ್ಲಿ ಪರಿಹರಿಸಬಹುದು. ವ್ಯಾಜಿನಿಸ್ಮಸ್ ಚಿಕಿತ್ಸೆಯ ನಂತರ, ವ್ಯಕ್ತಿಯು ಆರೋಗ್ಯಕರ ಲೈಂಗಿಕ ಸಂಬಂಧವನ್ನು ಹೊಂದಬಹುದು.

English summary

Vaginismus: Know about the condition that can cause problems in sexual intercourse in kannada

vaginismus: Know about the condition that can cause problems in sexual intercourse in kannada , readon.
X
Desktop Bottom Promotion