Latest Updates
-
ಸುಡು ಬಿಸಿಲಲ್ಲೂ ನಿಮ್ಮ ಮುಖ ಹಾಲಿನಂತೆ ಬೆಳ್ಳಗಾಗುತ್ತೆ! ಕೇವಲ 2 ನಿಮಿಷ ಈ ಮಸಾಜ್ ಸಾಕು.. ಮುಖ ಹೊಳೆಯುತ್ತೆ! -
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ? -
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ -
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ -
ದೇಹಕ್ಕೆ ಬಲ ನೀಡುವ ಹುರಿದಕ್ಕಿ ಉಂಡೆ ಸಲೀಸಾಗಿ ಮಾಡಿ! ಇಲ್ಲಿದೆ ಸುಲಭದ ಮನೆಮದ್ದು! -
ಹೋಟೆಲ್ ರುಚಿಯ ಅಕ್ಕಿ ರೊಟ್ಟಿ.. ಮುರಿಯದಂತೆ ಸಾಫ್ಟ್ ಆಗಿ ಮಾಡೋದು ಹೇಗೆ? ಹೊಸಬರಿಗೆ ಕೂಡ ಸುಲಭ -
ಹೊಸ ಮನೆ, ವಾಹನ ಖರೀದಿಸುವ ಯೋಗ! ಜೀವನದಲ್ಲಿ ಹೆಚ್ಚಲಿದೆ ಸಂತಸ
ಪಲ್ಮನರಿ ಫೈಬ್ರೋಸಿಸ್: ಈ ಸಮಸ್ಯೆ ಗುಣವಾಗಲ್ಲ ಆದರೆ ಈ ರೀತಿ ತಡೆಗಟ್ಟಬಹುದು
ಪಲ್ಮನರಿ ಫೈಬ್ರೋಸಿಸ್ ಎನ್ನೋದು ಶ್ವಾಸಕೋಶದ ಖಾಯಿಲೆಯಾಗಿದ್ದು ಶ್ವಾಸಕೋಶದ ಅಂಗಾಂಶವು ಹಾನಿಗೊಳಗಾದಾಗ ಅಥವಾ ಗಾಯಕ್ಕೊಳಗಾದಾಗ ಉಂಟಾಗುತ್ತೆ. ದಪ್ಪವಾಗಿ ಬೆಳೆಯುವ ಗಟ್ಟಿಯಾದ ಅಂಗಾಶವು ಶ್ವಾಸಕೋಶವು ತನ್ನ ಕಾರ್ಯ ನಿರ್ವಹಿಸಲು ಕಷ್ಟಕರವಾಗಿಸುತ್ತದೆ. ಈ ಸಮಸ್ಯೆ ಹೆಚ್ಚಾಗುತ್ತಿದ್ದರೆ ಕ್ರಮೇಣ ಉಸಿರಾಟದ ಸಮಸ್ಯೆಯೂ ಕಾಣಿಸಿಕೊಳ್ಳುತ್ತದೆ. ಹಲವಾರು ಆರೋಗ್ಯ ಸಮಸ್ಯೆಗೆ ಪರಿಹಾರ ಔಷಧಿಗಳಿದ್ರೂ ಈ ಸಮಸ್ಯೆಯಿಂದ ಉಂಟಾಗೋ ಶ್ವಾಸಕೋಶದ ಹಾನಿಯನ್ನು ಸರಿಪಡಿಸಲಾಗದು. ಹಾಗಾಗಿ ಈ ಸಮಸ್ಯೆ ಗಂಭೀರವಾಗದಂತೆ ನೋಡಿಕೊಳ್ಳುವುದು ಹೇಗೆ ಎನ್ನುವ ಮಾಹಿತಿ ಈ ಲೇಖನದಲ್ಲಿದೆ.

ಶ್ವಾಸಕೋಶದ ಫೈಬ್ರೋಸಿಸ್‌ನ ಲಕ್ಷಣಗಳು
ಶ್ವಾಸಕೋಶದ ಫೈಬ್ರೋಸಿಸ್‌ನ ಲಕ್ಷಣವು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಕೆಲವರು ಈ ತೀವ್ರವಾದ ಕಾಯಿಲೆಯಿಂದ ಬೇಗನೆ ಅನಾರೋಗ್ಯಕ್ಕೆ ಒಳಗಾಗುತ್ತಾರೆ. ಇತರರು ಮಧ್ಯಮ ರೋಗಲಕ್ಷಣಗಳನ್ನು ಹೊಂದಿರಬಹುದು. ಆದರೆ ಸಮಯ ಕಳೆದಂತೆ ಹೆಚ್ಚಾಗುತ್ತಾ ಹೋಗಬಹುದು. ಈ ಸಮಸ್ಯೆಯ ಲಕ್ಷಣಗಳು ಹೀಗಿರುತ್ತೆ ನೋಡಿ.
* ಉಸಿರಾಟದ ಸಮಸ್ಯೆ
*ಒಣಕೆಮ್ಮು
* ಆಯಾಸ
* ಸಡನ್ನಾಗಿ ತೂಕದಲ್ಲಿ ಇಳಿಕೆ
* ಸ್ನಾಯು ಮತ್ತು ಕೀಲುಗಳಲ್ಲಿ ನೋವು
* ಬೆರಳು ಮತ್ತು ಕಾಲ್ಬೆರಳ ತುದಿಯನ್ನು ಅಗಲಿಸುವಾಗ ನೋವು
ಕಾರಣಗಳು
ಪಲ್ಮನರಿ ಫೈಬ್ರೋಸಿಸ್ ನಿಮ್ಮ ಶ್ವಾಸಕೋಶದಲ್ಲಿ ಗಾಳಿ ಚೀಲಗಳ ಸುತ್ತಲೂ ಮತ್ತು ನಡುವಿನ ಅಂಗಾಂಶವನ್ನು ದಪ್ಪವಾಗಿಸುತ್ತದೆ. ಇದು ರಕ್ತಕ್ಕೆ ಆಮ್ಲಜನಕವನ್ನು ಸೇರಿಸಲು ಹೆಚ್ಚು ಕಷ್ಟಕರವಾಗಿಸುತ್ತದೆ. ಶ್ವಾಸಕೋಶಕ್ಕೆ ಹಾನಿಯು ವಿವಿಧ ಅಂಶಗಳಿಂದ ಉಂಟಾಗಬಹುದು. ಕೆಲವು ಟಾಕ್ಸಿನ್‌ಗಳಿಗೆ ದೀರ್ಘಾವಧಿಯಿಂದ ಒಡ್ಡಿಕೊಳ್ಳುತ್ತಿರುವುದು, ಕೆಲವು ವೈದ್ಯಕೀಯ ಸಮಸ್ಯೆಗಳು, ರೇಡಿಯೇಷನ್ ಥೆರಪಿ ಸೇರಿದಂತೆ ಮತ್ತು ಕೆಲವು ಔಷಧಿಗಳು ಸೇರಿದಂತೆ ಈ ಕೆಳಗೆ ವಿವರಿಸಿರುವ ಕೆಲವೊಂದು ಅಂಶಗಳು ಶ್ವಾಸಕೋಶದ ಫೈಬ್ರೋಸಿಸ್‌ಗೆ ಕಾರಣವಾಗುತ್ತವೆ.
ಔದ್ಯೋಗಿಕ ಅಂಶಗಳು ಮತ್ತು ಪರಿಸರ ಅಂಶಗಳು
ಹಲವಾರು ಟಾಕ್ಸಿನ್ ಮತ್ತು ಮಾಲಿನ್ಯಕಾರಕಗಳಿಗೆ ದೀರ್ಘಕಾಲದವರೆಗೆ ಒಡ್ಡಿಕೊಳ್ಳುವುದು ಶ್ವಾಸಕೋಶವನ್ನು ಹಾನಿಗೊಳಿಸುತ್ತದೆ. ಮಾಲಿನ್ಯ ಕಾರಕಗಳೆಂದರೆ,
* ಸಿಲಿಕಾ ಧೂಳು
* ಆಸ್ಬೆಸ್ಟೋಸ್ ಫೈಬರ್ಗಳು
* ಗಟ್ಟಿಯಾದ ಲೋಹದ ಧೂಳುಗಳು
* ಕಲ್ಲಿದ್ದಲು ಧೂಳು
* ಧಾನ್ಯದ ಧೂಳು
* ಪಕ್ಷಿ ಮತ್ತು ಪ್ರಾಣಿಗಳ ಹಿಕ್ಕೆಗಳು
ಸ್ವಯಂ ಆರೈಕೆ
ನೀವು ಶ್ವಾಸಕೋಶದ ಫೈಬ್ರೋಸಿಸ್ ಸಮಸ್ಯೆ ಎದುರಿಸುತ್ತಿದ್ದರೆ, ಈ ಸಮಸ್ಯೆಯನ್ನು ನಿಯಂತ್ರಿಸಲು ಹಲವು ದಾರಿಗಳಿದೆ. ಮೊದಲೇ ಹೇಳಿದಂತೆ ಈ ಸಮಸ್ಯೆಯನ್ನು ಗುಣಪಡಿಸಲಾಗುವುದಿಲ್ಲ. ಆದರೆ ಖಂಡಿತವಾಗಿಯೂ ಉಲ್ಬಣವಾಗದಂತೆ ನಿಯಂತ್ರಿಸಬಹುದು. ಇದಕ್ಕೇನು ಮಾಡಬೇಕು ಎಂದರೆ,
* ಮೊದಲನೆಯದಾಗಿ ನೀವು ಧೂಮಪಾನ ಮಾಡುತ್ತಿದ್ದರೆ ಧೂಮಪಾನವನ್ನು ನಿಲ್ಲಿಸಿ.
* ನಿಯಮಿತವಾಗಿ ವ್ಯಾಯಾಮ ಮಾಡಿ, ಸಾಧ್ಯವಾದಷ್ಟು ಫಿಟ್ ಆಗಿರಲು ಪ್ರಯತ್ನಿಸಿ.
* ಆರೋಗ್ಯಕರ ಸಮತೋಲಿತ ಆಹಾರ ಸೇವಿಸಿ
* ನೀವುವರ್ಷಕ್ಕೊಮ್ಮೆ ಫ್ಲೂ ವ್ಯಾಕ್ಸಿನ್ ಮತ್ತು ಒಂದು ಆಫ್ ನ್ಯುಮೋಕೊಕಲ್ ವ್ಯಾಕ್ಸಿನ್ ಪಡೆದುಕೊಳ್ಳಿ. ನೀವು ಈಗಾಗಲೇ ಶ್ವಾಸಕೋಶದ ಫೈಬ್ರೋಸಿಸ್ ಹೊಂದಿದ್ದರೆ ಈ ಸಮಸ್ಯೆಗಳು ಗಂಭೀರವಾಗಬಹುದು. ಹಾಗಾಗಿ ಮುಂಜಾಗ್ರತೆಗಾಗಿ ಈ ಲಸಿಕೆಯನ್ನು ಹಾಕಿಸಿಕೊಳ್ಳಿ.
* ಸಾಧ್ಯವಾದಷ್ಟು ಶ್ವಾಸಕೋಶದ ಸೋಂಕು, ಶೀತವಿರುವ ವ್ಯಕ್ತಿಗಳಿಂದ ದೂರವಿರಿ.
ಔಷಧಿಗಳು
ಕೆಲವು ಜನರಲ್ಲಿ ಪೈಬ್ರೋಸಿಸ್ ಹೆಚ್ಚಾಗುವುದನ್ನು ನಿಧಾನಗೊಳಿಸಲು ಸಹಾಯ ಮಾಡುವ 2 ಔಷಧಿಗಳಿವೆ ಅವೆಂದರೆ ಪಿರ್ಫೆನಿಡೋನ್ ಮತ್ತು ನಿಂಟೆಡಾನಿಬ್.
ಪಿರ್ಫೆನಿಡೋನ್
ಪಿರ್ಫೆನಿಡೋನ್ ಪ್ರತಿರಕ್ಷಣಾ ವ್ಯವಸ್ಥೆಯ ಚಟುವಟಿಕೆಯನ್ನು ಕಡಿಮೆ ಮಾಡುವ ಮೂಲಕ ಶ್ವಾಸಕೋಶದಲ್ಲಿ ಹಾನಿಯ ಪ್ರಕ್ರಿಯೆಯನ್ನು ನಿಧಾನಗೊಳಿಸಲು ಸಹಾಯ ಮಾಡುತ್ತದೆ..ಇದನ್ನು ಸಾಮಾನ್ಯವಾಗಿ ದಿನಕ್ಕೆ 3 ಬಾರಿ ಮಾತ್ರೆಯ ರೂಪದಲ್ಲಿ ತೆಗೆದುಕೊಳ್ಳಲಾಗುತ್ತದೆ.ಉಸಿರಾಟದ ಪರೀಕ್ಷೆಗಳ ಮೂಲಕ ನಿಮ್ಮ ಶ್ವಾಸಕೋಶದ ಸಾಮರ್ಥ್ಯವು ಸಾಮಾನ್ಯವಾಗಿ ನಿರೀಕ್ಷಿತ 50% ರಿಂದ 80% ರಷ್ಟಿದೆ ಎಂದಲ್ಲಿ ಈ ಮಾತ್ರೆಯನ್ನು ವೈದ್ಯರು ನೀಡುತ್ತಾರೆ. ಪಿರ್ಫೆನಿಡೋನ್ ತೆಗೆದುಕೊಂಡರೂ ನಿಮ್ಮ ಸ್ಥಿತಿಯು ಹದಗೆಟ್ಟರೆ ಮತ್ತು ನಿಮ್ಮ ಶ್ವಾಸಕೋಶದ ಸಾಮರ್ಥ್ಯವು ಒಂದು ವರ್ಷದೊಳಗೆ 10% ಅಥವಾ ಅದಕ್ಕಿಂತ ಹೆಚ್ಚು ಕಡಿಮೆಯಾದರೆ, ಔಷಧಿಯನ್ನು ಸಾಮಾನ್ಯವಾಗಿ ನಿಲ್ಲಿಸಲಾಗುತ್ತದೆ.
ನಿಂಟೆಡಾನಿಬ್
ನಿಂಟೆಡಾನಿಬ್ ಹೊಸ ಔಷಧಿಯಾಗಿದ್ದು, ಪಲ್ಮನರಿ ಫೈಬ್ರೋಸಿಸ್ ಹೊಂದಿರುವ ಜನರಲ್ಲಿ ಶ್ವಾಸಕೋಶದ ಗಾಯವನ್ನು ನಿಧಾನಗೊಳಿಸಲು ಸಹಾಯ ಮಾಡುತ್ತದೆ. ಇದನ್ನು ಸಾಮಾನ್ಯವಾಗಿ ದಿನಕ್ಕೆ ಎರಡು ಬಾರಿ ಕ್ಯಾಪ್ಸುಲ್ಗಳಾಗಿ ತೆಗೆದುಕೊಳ್ಳಲಾಗುತ್ತದೆ. ಪಿರ್ಫೆನಿಡೋನ್‌ನಂತೆ, ನಿಮ್ಮ ಶ್ವಾಸಕೋಶವು 50% ರಿಂದ 80% ರಷ್ಟು ಸಾಮರ್ಥ್ಯವನ್ನು ಹೊಂದಿದ್ದರೆ ಇದನ್ನು ಬಳಸಬಹುದು ಮತ್ತು ಅದನ್ನು ತೆಗೆದುಕೊಳ್ಳುವಾಗ ನಿಮ್ಮ ಶ್ವಾಸಕೋಶದ ಸಾಮರ್ಥ್ಯವು ಒಂದು ವರ್ಷದಲ್ಲಿ 10% ಅಥವಾ ಅದಕ್ಕಿಂತ ಹೆಚ್ಚು ಕುಸಿದರೆ ಇದನ್ನು ನಿಲ್ಲಿಸಬೇಕು. ಯಾವುದೇ ಔಷಧವಾಗಲಿ ವೈದ್ಯರ ಸಲಹೆ ಪಡೆದೇ ತೆಗೆದುಕೊಳ್ಳಿ.
ಆಕ್ಸಿಜನ್ ಸಪೋರ್ಟ್
ಪಲ್ಮನರಿ ಫೈಬ್ರೋಸಿಸ್ ನಿಮ್ಮ ರಕ್ತದಲ್ಲಿನ ಆಮ್ಲಜನಕದ ಮಟ್ಟವು ಕುಸಿಯಲು ಕಾರಣವಾಗಬಹುದು, ಇದು ಹೆಚ್ಚು ಉಸಿರುಗಟ್ಟುವಂತೆ ಮಾಡುತ್ತದೆ. ಹೀಗಾದಲ್ಲಿ, ಆಮ್ಲಜನಕ ಚಿಕಿತ್ಸೆಯು ನಿಮ್ಮ ಉಸಿರಾಟ ಸರಾಗಗೊಳಿಸಲು ಸಹಾಯ ಮಾಡುತ್ತದೆ. ಮೂಗಿನ ಕೊಳವೆಗಳ ಮೂಲಕ ಅಥವಾ ಸಣ್ಣ ಯಂತ್ರಕ್ಕೆ ಜೋಡಿಸಲಾದ ಮಾಸ್ಕ್ ಮೂಲಕ ಆಮ್ಲಜನಕವನ್ನು ತೆಗೆದುಕೊಳ್ಳಲಾಗುತ್ತದೆ. ಈ ಸಾಧನವು ಗಾಳಿಗಿಂತ ಹೆಚ್ಚಿನ ಮಟ್ಟದ ಆಮ್ಲಜನಕವನ್ನು ಒದಗಿಸುತ್ತದೆ. ಈ ಯಂತ್ರದ ಟ್ಯೂಬ್‌ಗಳು ಉದ್ದವಾಗಿರುವುದರಿಂದ ನೀವು ಇದನ್ನು ಹಾಕಿಕೊಂಡರೂ ಮನೆಯಿಡೀ ಓಡಾಡಬಹುದು. ನೀವು ಮನೆಯಿಂದ ಹೊರಗೆ ಹೋಗಬೇಕಾದಾಗಲೂ ಬಳಸಬಹುದಾದ ಪೋರ್ಟಬಲ್ ಆಮ್ಲಜನಕ ಸಾಧನಗಳು ಸಹ ಲಭ್ಯವಿವೆ.
ಪಲ್ಮನರಿ ರಿಹ್ಯಾಬಿಲಿಟೇಷನ್
ದೀರ್ಘಕಾಲದಿಂದ ಶ್ವಾಸಕೋಶದ ಫೈಬ್ರೋಸಿಸ್ ಸಮಸ್ಯೆಯನ್ನು ಎದುರಿಸುತ್ತಿರುವವರು ಈ ಸಮಸ್ಯೆಯ ನಿಯಂತ್ರಣಕ್ಕಾಗಿ ಪಲ್ಮನರಿ ರಿಹ್ಯಾಬಿಲಿಟೇಷನ್ ಕೇಂದ್ರ ಸೇರಿಕೊಳ್ಳಬಹುದು. ಇಲ್ಲಿ ಉಸಿರಾಟದ ಸಮಸ್ಯೆಯನ್ನು ನಿಭಾಯಿಸಲು ಕಲಿಯಬಹುದು. ಈ ಕೇಂದ್ರಗಳು ಸಾಮಾನ್ಯವಾಗಿ ಪಲ್ಮನರಿ ಫೈಬ್ರೋಸಿಸ್ ಬಗ್ಗೆ ಮಾಹಿತಿಯೊಂದಿಗೆ ದೈಹಿಕ ಚಟುವಟಿಕೆ, ಉಸಿರಾಟದ ವ್ಯಾಯಾಮಗಳು, ಪೋಷಣೆಯ ಬಗ್ಗೆ ಸಲಹೆ, ಮಾನಸಿಕ ಬೆಂಬಲ, ಸಾಮಾಜಿಕ ಬೆಂಬಲವನ್ನೂ ನೀಡುತ್ತವೆ. ಈ ಕೋರ್ಸ್ ಸೇರುವ ಮೂಲಕ ನಿಮ್ಮಲ್ಲಿ ಈ ಸಮಸ್ಯೆಯನ್ನು ನಿರ್ವಹಿಸುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬಹುದು.
ಶ್ವಾಸಕೋಶದ ಕಸಿ
ಚಿಕಿತ್ಸೆ ಮಾಡಿದರೂ ನಿಮ್ಮ ಸಮಸ್ಯೆಯು ಇನ್ನಷ್ಟು ಬಿಗಡಾಯಿಸುತ್ತಿದ್ದಲ್ಲಿ ವೈದ್ಯರು ಶ್ವಾಸಕೋಶದ ಕಸಿ ಮಾಡಲು ಸಲಹೆ ನೀಡಬಹುದು. ಇದು ನಿಮ್ಮ ಸ್ಥಿತಿ ಎಷ್ಟು ಕೆಟ್ಟದಾಗಿಯೇ, ನಿಮ್ಮ ಸಮಸ್ಯೆ ಎಷ್ಟು ಬೇಗನೆ ಹದಗೆಡುತ್ತಿದೆ, ನಿಮ್ಮ ವಯಸ್ಸು ಮತ್ತು ಸಾಮಾನ್ಯ ಆರೋಗ್ಯ ಹೇಗಿದೆ, ಕಸಿ ಮಾಡಿದ ನಂತರ ನಿಮ್ಮ ಆರೋಗ್ಯ ಸುಧಾರಿಸಬಹುದೇ ಹಾಗೂ ದಾನಿ ಶ್ವಾಸಕೋಶ ಲಭ್ಯವಿದೆಯೇ ಎನ್ನುವು ಅಂಶಗಳನ್ನು ನೋಡಿ ಶ್ವಾಸಕೋಶದ ಕಸಿ ಮಾಡಲು ವೈದ್ಯರು ನಿರ್ಧರಿಸುತ್ತಾರೆ.
ಶ್ವಾಸಕೋಶದ ಕಸಿಯು ಪಲ್ಮನರಿ ಫೈಬ್ರೋಸಿಸ್ ಹೊಂದಿರುವ ರೋಗಿಯ ಜೀವಿತಾವಧಿಯನ್ನು ಹೆಚ್ಚಿಸುತ್ತದೆ. ಆದರೂ ಇದು ದೇಹದ ಮೆಲೆ ಹೆಚ್ಚಿನ ಒತ್ತಡವನ್ನುಂಟುಮಾಡುವ ಪ್ರಮುಖ ವಿಧಾನವಾಗಿದೆ. ಪಲ್ಮನರಿ ಫೈಬ್ರೋಸಿಸ್‌ಗೆ ಪ್ರಸ್ತುತ ಯಾವುದೇ ಚಿಕಿತ್ಸೆ ಇಲ್ಲ. ರೋಗಲಕ್ಷಣಗಳನ್ನು ಸಾಧ್ಯವಾದಷ್ಟು ನಿವಾರಿಸುವುದು ಮತ್ತು ಫೈಬ್ರೋಸಿಸ್ ಬೆಳವಣಿಗೆಯನ್ನು ನಿಧಾನಗೊಳಿಸುವ ಮೂಲಕ ಈ ಸಮಸ್ಯೆಯನ್ನು ಆದಷ್ಟು ನಿಯಂತ್ರಿಸಬಹುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications














