ಥೈರಾಯ್ಡ್ ನಿಯಂತ್ರಣಕ್ಕೆ ಕೊತ್ತಂಬರಿ ಹೇಗೆ ಸಹಕಾರಿ ನೋಡಿ

ಥೈರಾಯ್ಡ್‌ ಸಮಸ್ಯೆ ಹೆಚ್ಚಿನವರಲ್ಲಿ ಕಂಡು ಬರುತ್ತಿದೆ, ಬದಲಾಗುತ್ತಿರುವ ಜೀವನಶೈಲಿ ಕೂಡ ಥೈರಾಯ್ಡ್‌ ಸಮಸ್ಯೆ ಹೆಚ್ಚಾಗಕು ಕಾರಣವಾಗಿದೆ. ಥೈರಾಯ್ಡ್ ಹಾರ್ಮೋನ್‌ಗಳಲ್ಲಿ ವ್ಯತ್ಯಾಸ ಉಂಟಾದರೆ ಇದರಿಂದ ಹೃದಯ, ಮೆದುಳು, ಲಿವರ್‌, ಕಿಡ್ನಿ, ರಕ್ತನಾಳ ವ್ಯವಸ್ಥೆ, ರಕ್ತದೊತ್ತಡ, ಜೀರ್ಣಕ್ರಿಯೆ, ಚಯಪಚಯ ಕ್ರಿಯೆಗೆ ತೊಂದರೆ ಉಂಟಾಗುವುದು, ಈ ಅಂಗಾಂಗಗಳು ಸರಿಯಾಗಿ ಕಾರ್ಯನಿರ್ವಹಿಸಬೇಕೆಂದರೆ ಈ ಥೈರಾಯ್ಡ್‌ ಹಾರ್ಮೋನ್‌ ಸರಿಯಾಗಿರಬೇಕು.

Thyroid awareness month,

ಯಾವುದೇ ಆರೋಗ್ಯ ಸಮಸ್ಯೆಗೆ ನಿಸರ್ಗದಲ್ಲಿ ಪರಿಹಾರವಿದ್ದೇ ಇರುತ್ತದೆ. ಥೈರಾಯ್ಡ್ ಸಮಸ್ಯೆ ಹೋಗಲಾಡಿಸಲು ಅನೇಕ ನೈಸರ್ಗಿಕ ವಿಧಾನಗಳಿವೆ, ಅದರಲ್ಲೊಂದು ಕೊತ್ತಂಬರಿ.

ಹೌದು ಕೊತ್ತಂಬರಿ ಥೈರಾಯ್ಡ್ ಹಾರ್ಮೋನ್‌ಗಳನ್ನು ನಿಯಂತ್ರಣದಲ್ಲಿಡಲು ತುಂಬಾನೇ ಸಹಕಾರಿ, ಹೇಗೆ ಎಂದು ನೋಡೋಣ ಬನ್ನಿ:

ಕೊತ್ತಂಬರಿಯ ಪ್ರಯೋಜನಗಳು
ಕೊತ್ತಂಬರಿ ಥೈರಾಯ್ಡ್‌ಗೆ ಅತ್ಯುತ್ತಮವಾದ ಆಹಾರವಾಗಿದೆ. ಇದರಲ್ಲಿ ವಿಟಮಿನ್‌ ಎ, ಸಿ ಮತ್ತು ಕೆ ಅಧಿಕವಿದೆ. ಕೊತ್ತಂಬರಿ ಬೀಜದಲ್ಲೂ ಕೂಡ ವಿಟಮಿನ್ ಸಿ ಅಧಿಕವಿದೆ. ಇದು ರಾಸಾಯನಿಕಗಳ ವಿರುದ್ಧ ಜೀವಕಣಗಳನ್ನು ರಕ್ಷಣೆ ಮಾಡುತ್ತದೆ, ಥೈರಾಯ್ಡ್‌ ಸಮಸ್ಯೆ ಇರುವವರು ಕೊತ್ತಂಬರಿ ಬೀಜ ಹಾಗೂ ಸೊಪ್ಪು ಬಳಸುವುದು ಒಳ್ಳೆಯದು.

ಥೈರಾಯ್ಡ್ ಸಮಸ್ಯೆ ಇರುವವರಿಗೆ ಕೊತ್ತಂಬರಿ ಈ ರೀತಿಯಲ್ಲಿ ಪ್ರಯೋಜನಕಾರಿಯಾಗಿದೆ

*ಆ್ಯಂಟಿಆಕ್ಸಿಡೆಂಟ್‌ ಅಧಿಕವಿದೆ
ಕೊತ್ತಂಬರಿ ಸೊಪ್ಪನ್ನು ನಾವು ಅಡುಗೆ ಮಾಡಿದ ಮೇಲೆ ಅಲಂಕಾರಕ್ಕೆ, ರುಚಿಗೆ ಬಳಸುತ್ತೇವೆ ಅಂದುಕೊಳ್ಳಬೇಡಿ. ಕೊತ್ತಂಬರಿ ಸೊಪ್ಪು ಥೈರಾಯ್ಡ್‌ ಹಾರ್ಮೋನ್‌ಗಳನ್ನು ನಿಯಂತ್ರಣದಲ್ಲಿಡುವಲ್ಲಿ ತುಂಬಾನೇ ಸಹಕಾರಿ. ಇದರಲ್ಲಿರುವ ಆ್ಯಂಟಿಆಕ್ಸಿಡೆಂಟ್ ಅಂಶ ನಮ್ಮ ದೇಹವನ್ನು ಕಾಯಿಲೆಯಿಂದ ರಕ್ಷಣೆ ಮಾಡುತ್ತದೆ.

ಕೊಲೆಸ್ಟ್ರಾಲ್‌ ನಿಯಂತ್ರಣಕ್ಕೆ ಸಹಕಾರಿ
ಥೈರಾಯ್ಡ್‌ ಹಾರ್ಮೋನ್‌ಗೂ ನಮ್ಮ ದೇಹದಲ್ಲಿ ಕಾಣಿಸಿಕೊಳ್ಳುವ ಹಲವು ಸಮಸ್ಯೆಗಳಿಗೆ ಒಂದಕ್ಕೊಂದು ಸಂಬಂಧವಿರುತ್ತದೆ. ಥೈರಾಯ್ಡ್‌ ಸಮಸ್ಯೆ ಇರುವವರಿಗೆ ಕೊಲೆಸ್ಟ್ರಾಲ್‌ ಸಮಸ್ಯೆ ಕಾಣಿಸಿಕೊಳ್ಳುತ್ತದೆ, ಕೊತ್ತಂಬರಿ ಬೀಜ ಬಳಸುವುದರ ಮೂಲಕ ಕೊಲೆಸ್ಟ್ರಾಲ್‌ ನಿಯಂತ್ರಿಸಬಹುದು. ಕೊಲೆಸ್ಟ್ರಾಲ್‌ ಸಮಸ್ಯೆ ಇರುವವರು ತಮ್ಮ ಆಹಾರದಲ್ಲಿ ಕೊತ್ತಂಬರಿ ಬೀಜ ಹಾಗೂ ಕೊತ್ತಂಬರಿ ಸೊಪ್ಪನ್ನು ಬಳಸುವುದು ಒಳ್ಳೆಯದು.

ತೂಕ ಇಳಿಕೆಗೆ ಸಹಕಾರಿ
ಕೊತ್ತಂಬರಿ ಬೀಜದ ನೀರು ಕುಡಿಯುವುದರಿಂದ ತೂಕ ಇಳಿಕೆಗೆ ಸಹಕಾರಿ. ಹೈಪೋಥೈರಾಯ್ಡ್ ಸಮಸ್ಯೆ ಇರುವವರಿಗೆ ಮೈ ತೂಕ ತುಂಬಾನೇ ಹೆಚ್ಚಾಗುವುದು. ಥೈರಾಯ್ಡ್‌ ಹಾರ್ಮೋನ್‌ಗಳನ್ನು ಸಮತೋಲನಕ್ಕೆ ತಂದು ಮೈ ತೂಕವನ್ನು ನಿಯಂತ್ರಣಲ್ಲಿಡಲು ಕೊತ್ತಂಬರಿ ಬೀಜ ಸಹಕಾರಿಯಾಗಿದೆ.

ಥೈರಾಯ್ಡ್‌ ಇರುವವರು ಕೊತ್ತಂಬರಿ ಬೀಜ ಬಳಸುವುದರಿಂದ ಈ ಪ್ರಯೋಜನಗಳನ್ನು ಪಡೆಯಬಹುದು
* ಕೊತ್ತಂಬರಿ ಬೀಜದ ನೀರು ಕುಡಿಯುವುದರಿಂದ ತೂಕ ಇಳಿಕೆಗೆ ಸಹಕಾರಿ
* ಕೊಲೆಸ್ಟ್ರಾಲ್ ಪ್ರಮಾಣವನ್ನು ನಿಯಂತ್ರಣದಲ್ಲಿ ಇಡುವಲ್ಲಿ ಸಹಕಾರಿಯಾಗಿದೆ.
* ಸಂಧಿವಾತದ ಸಮಸ್ಯೆ, ಮಂಡಿನೋವು ಕಡಿಮೆ ಮಾಡಲು ಸಹಕಾರಿಯಾಗಿದೆ.
* ಇದು ದೇಹವನ್ನು ರಾಸಾಯನಿಕಗಳಿಂದ ರಕ್ಷಣೆ ಮಾಡುತ್ತದೆ.
* ಜೀರ್ಣಕ್ರಿಯೆಗೆ ತುಂಬಾನೇ ಸಹಕಾರಿ.
* ರಕ್ತದಲ್ಲಿ ಸಕ್ಕರೆಯಂಶ ನಿಯಂತ್ರಣದಲ್ಲಿಡಲು ಸಹಕಾರಿ.
* ದೇಹದಿಂದ ಕಶ್ಮಲವನ್ನು ತೆಗೆಯುವಲ್ಲಿ ಸಹಕಾರಿ.

Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.

English summary

Thyroid awareness month: How coriander helps To Control Thyroid in kannada

Thyroid Problem: How coriander helps to control thyroid read on....
Story first published: Tuesday, January 31, 2023, 18:16 [IST]
X
Desktop Bottom Promotion