Latest Updates
-
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ
ಹೀಗೆ ಮಾಡಿ ಟೆನ್ಷನ್ ದೂರ, ಮನಸ್ಸು ನಿರಾಳ
ಟೆನ್ಷನ್ ಅಥವಾ ಮಾನಸಿಕ ಒತ್ತಡ ಎಂಬುವುದು ಯಾರಿಗೆ ತಾನೆ ಇಲ್ಲ ಹೇಳಿ... ಪ್ರತಿನಿತ್ಯ ಒಂದೆಲ್ಲಾ ಒಂದು ಸವಾಲುಗಳು ಬಂದೇ ಬರುತ್ತದೆ, ಇವುಗಳಿಂದ ನಮ್ಮಲ್ಲಿ ಮಾನಸಿಕ ಒತ್ತಡ ಅಧಿಕವಾಗುವುದು. ಈ ಮಾನಸಿಕ ಒತ್ತಡ ಎನ್ನುವುದು ಚಿಕ್ಕ ಮಕ್ಕಳಿಗೂ ಇದೆ ಎಂದರೆ ತಪ್ಪಾಗಲಾರದು.
ಹೌದು ಮಕ್ಕಳು ಮೂರು ವರ್ಷ ಇರುವಾಗಲೇ ಅವರನ್ನು ಪ್ಲೇ ಸ್ಕೂಲ್‌ಗೆ ಸೇರಿಸುತ್ತಾರೆ. ನಂತರದ ದಿನಗಳಲ್ಲಿ ಓದು, ಹೋಂವರ್ಕ್ ಮಾಡು ಎಂದು ಅವರನ್ನು ಮನೆಯಲ್ಲಿ ಹಾಗೂ ಶಾಲೆಯಲ್ಲಿ ಒತ್ತಾಯಿಸುತ್ತಾರೆ, ಇವೆಲ್ಲಾ ಮಕ್ಕಳಲ್ಲಿ ಮಾನಸಿಕ ಒತ್ತಡ ಉಂಟು ಮಾಡುತ್ತದೆ.

ಇನ್ನು ಸ್ವ ಉದ್ಯೋಗ ಮಾಡುವುದಾದರೆ ಒಂದು ಟೆನ್ಷನ್, ಉದ್ಯೋಗ ಮಾಡುವುದಾದರೆ ಅಲ್ಲಿಯೂ ಟಾರ್ಗೆಟ್ ಟೆನ್ಷನ್, ನಿವೃತ್ತಿ ಹೊಂದಿದವರೆಗೆ ಇನ್ಯಾವುದೋ ಚಿಂತೆ ಹೀಗೆ ಒಂದೆಲ್ಲಾ ಒಂದು ಕಾರಣದಿಂದ ನಾವೆಲ್ಲರೂ ಮಾನಸಿಕ ಒತ್ತಡಕ್ಕೆ ಒಳಗಾಗುವುದು ಅಂತು ಇದ್ದೇ ಇದೆ.
ಮಾನಸಿಕ ಒತ್ತಡ ಬಂದೇ ಬರುತ್ತದೆ ಆದರೆ ಅದನ್ನು ಹೊರಹಾಕುವ ಕಲೆ ಗೊತ್ತಿದ್ದರೆ ಬದುಕು ನಿರಾಳವಾಗುತ್ತದೆ, ಚಿಂತೆ ಮರೆತು ನಗಬಹುದು. ಮಾನಸಿಕ ಒತ್ತಡ ಕಡಿಮೆಯಾದಷ್ಟೂ ನಮ್ಮ ಆರೋಗ್ಯ ಚೆನ್ನಾಗಿರುತ್ತದೆ. ಇಲ್ಲಿ ನಾವು ಮಾನಸಿಕ ಒತ್ತಡ ಕಡಿಮೆ ಮಾಡುವುದು ಹೇಗೆ ಎಂಬ 5 ಸರಳ ಇನ್ನು ಸ್ವ ಉದ್ಯೋಗ ಮಾಡುವುದಾದರೆ ಒಂದು ಟೆನ್ಷನ್, ಉದ್ಯೋಗ ಮಾಡುವುದಾದರೆ ಅಲ್ಲಿಯೂ ಟಾರ್ಗೆಟ್ ಟೆನ್ಷನ್, ನಿವೃತ್ತಿ ಹೊಂದಿದವರೆಗೆ ಇನ್ಯಾವುದೋ ಚಿಂತೆ ಹೀಗೆ ಒಂದೆಲ್ಲಾ ಒಂದು ಕಾರಣದಿಂದ ನಾವೆಲ್ಲರೂ ಮಾನಸಿಕ ಒತ್ತಡಕ್ಕೆ ಒಳಗಾಗುವುದು ಅಂತು ಇದ್ದೇ ಇದೆ.
ಮಾನಸಿಕ ಒತ್ತಡ ಬಂದೇ ಬರುತ್ತದೆ ಆದರೆ ಅದನ್ನು ಹೊರಹಾಕುವ ಕಲೆ ಗೊತ್ತಿದ್ದರೆ ಬದುಕು ನಿರಾಳವಾಗುತ್ತದೆ, ಚಿಂತೆ ಮರೆತು ನಗಬಹುದು. ಮಾನಸಿಕ ಒತ್ತಡ ಕಡಿಮೆಯಾದಷ್ಟೂ ನಮ್ಮ ಆರೋಗ್ಯ ಚೆನ್ನಾಗಿರುತ್ತದೆ. ಇಲ್ಲಿ ನಾವು ಮಾನಸಿಕ ಒತ್ತಡ ಕಡಿಮೆ ಮಾಡುವುದು ಹೇಗೆ ಎಂಬ 5 ಸರಳವಾದ ಟಿಪ್ಸ್ ನೀಡಿದ್ದೇವೆ. ಈ ಟಿಪ್ಸ್ ಯಾರು ಬೇಕಾದರೂ ಪಾಲಿಸಬಹುದು ಅಷ್ಟೊಂದು ಸರಳವಾಗಿದೆ. ವಾದ ಟಿಪ್ಸ್ ನೀಡಿದ್ದೇವೆ. ಈ ಟಿಪ್ಸ್ ಯಾರು ಬೇಕಾದರೂ ಪಾಲಿಸಬಹುದು ಅಷ್ಟೊಂದು ಸರಳವಾಗಿದೆ.

1. ಪ್ರಾಣಯಾಮ
ಪ್ರಾಣಯಾಮ ಎನ್ನುವುದು ಉಸಿರನ್ನು ನಿಧಾನಕ್ಕೆ ತೆಗೆದು ಅದನ್ನು ಹೊರಹಾಕುವ ಒಂದು ಪ್ರಕ್ರಿಯೆ. ಮೊದಲಿಗೆ ಎಡಮೂಗಿನಿಂದ ಉಸಿರನ್ನು ನಿಧಾನಕ್ಕೆ ತೆಗೆದುಕೊಳ್ಳಬೇಕು, ಹೀಗೆ ಉಸಿರು ತೆಗೆಯುವಾಗ ಬಲಮೂಗನ್ನು ಕೈ ಬೆರಳಿನಿಂದ ಒತ್ತಿ ಹಿಡಿಯಿರಿ. ಈಗ ತೆಗೆದ ಉಸಿರನ್ನು ನಿಧಾನಕ್ಕೆ ಬಲಮೂಗಿನಲ್ಲಿ ಬಿಡಿ. ನಂತರ ಬಲ ಮೂಗಿನಿಂದ ಉಸಿರು ತೆಗೆದು ಎಡ ಮೂಗಿನಲ್ಲಿ ಬಿಡಿ. ಈ ರೀತಿ 9 ಬಾರಿ ಮಾಡಿ. ಕೊನೆಯಲ್ಲಿ ಎಡಮೂಗಿನ ಮೂಲಕ ಉಸಿರನ್ನು ನಿಧಾನಕ್ಕೆ ಬಿಟ್ಟು ನಂತರ ಸಹಜ ಉಸಿರಾಟ ನಡೆಸಿ.

2. ವಿಪರೀತಕರಣಿ
ಇದು ತುಂಬಾ ಸರಳವಾಗಿದೆ. ನಿಮಗೆ ತುಂಬಾ ಸುಸ್ತು ಅನಿಸಿದಾಗ ಯೋಗಾ ಮ್ಯಾಟ್ ಮೇಲೆ ಅಥವಾ ಚಾಪೆ ಮೇಲೆ ಮಲಗಿ ಕಾಲುಗಳನ್ನು ಗೋಡೆಯ ಮೇಲೆ ಇಡಿ. ಕೈಗಳು ನೆಲಕ್ಕೆ ಮುಖ ಮಾಡಿರಲಿ, ಈ ರೀತಿ ಸ್ವಲ್ಪ ಹೊತ್ತು ಮಲಗಿ.. ಮೊದಲಿಗೆ ಒಂದು ಐದು ನಿಮಿಷ ಮಲಗಿ, ಬರ್ತಾ ಬರ್ತಾ 20 ನಿಮಿಷದವರೆಗೆ ಮಲಗಬಹುದು. ಹೀಗೆ ಮಾಡುವುದರಿಂದಲೂ ಮಾನಸಿಕ ಒತ್ತಡ ಕಡಿಮೆಯಾಗುವುದು.

3. ವಜ್ರಾಸನ
ಇದನ್ನು ಕೂಡ ಯಾರು ಬೇಕಾದರೂ ಮಾಡಬಹುದು. ಟೆನ್ಷನ್ ಅಧಿಕವಾದರೆ ಅದು ಜೀರ್ಣಕ್ರಿಯೆಗೆ ತೊಂದರೆ. ನೀವು ಊಟವಾದ ಬಳಿಕ ಒಂದು 5 ನಿಮಿಷ ಮಂಡಿ ಮೇಲೆ ಕೂತರೆ ಮಾನಸಿಕ ಒತ್ತಡ ಕಡಿಮೆಯಾಗುವುದು, ಜೀರ್ಣಕ್ರಿಯೆಯೂ ಚೆನ್ನಾಗಿ ನಡೆಯುವುದು.

4. ಉತ್ತಾಂಗಾಸನ
ಇದನ್ನು ನೇರವಾಗಿ ನಿಂತು ಕೈಗಳನ್ನು ಮೇಲಕ್ಕೆ ಎತ್ತಿ ಪಾದದ ಕಡೆ ಬಾಗಿ. ಇದು ಅಭ್ಯಾಸದಿಂದ ಸಾಧ್ಯವಾಗುವುದು. ಮೊದಲಿಗೆ ನೆಲ ಮುಟ್ಟುವುದು ಕಷ್ಟವಾಗಬಹುದು. ಅಭ್ಯಾಸ ಮಾಡುತ್ತಿದ್ದರೆ ಮಾಡಬಹುದು. ಇದು ಕೂಡ ತುಂಬಾ ಸರಳವಾಗಿದ್ದು ಮಾನಸಿಕ ಒತ್ತಡ ಕಡಿಮೆ ಮಾಡುವಲ್ಲಿ ಸಹಕಾರಿ.

5. ಯೋಗ ನಿದ್ರಾ
ಇದು ಅತ್ಯಂತ ಪ್ರಯೋಜನಕಾರಿಯಾಗಿದೆ. ಇದನ್ನು ಮಾಡುವುದು ಹೇಗೆ ಎಂದು ಯೂ ಟ್ಯೂಬ್ ನೋಡಿ. ಪ್ರಧಾನಿ ಮೋದಿಯವರು ಕೂಡ ತಮ್ಮ ದೈಹಿಕ ಆರೋಗ್ಯಕ್ಕಾಗಿ ಹಾಗೂ ಮಾನಸಿಕ ಒತ್ತಡ ಕಡಿಮೆ ಮಾಡಲು ಯೋಗ ನಿದ್ರಾ ಮೊರೆ ಹೋಗುವುದಾಗಿ ಹೇಳಿದ್ದಾರೆ. ಇದನ್ನು ಮಾಡುವುದರಿಂದ ತುಂಬಾ ವಿಶ್ರಾಂತಿಯ ಅನುಭವ ಉಂಟಾಗುವುದು. ಇದನ್ನು ಮಾಡುವುದರಿಂದ ಕೂಡ ಮಾನಸಿಕ ಒತ್ತಡ ಸಂಪೂರ್ಣ ಕಡಿಮೆಯಾಗುವುದು.



Click it and Unblock the Notifications
