ಅಸ್ತಮಾ ರಾತ್ರಿ ಹೊತ್ತಿನಲ್ಲಿ ಹೆಚ್ಚಾಗಲು ಕಾರಣವೇನು? ತಡೆಗಟ್ಟುವುದು ಹೇಗೆ?

ಅಸ್ತಮಾ ಕಾಯಿಲೆ ಇದ್ದವರಿಗೆ ರಾತ್ರಿಯಾಗುತ್ತಿದ್ದಂತೆ ಒಂದು ರೀತಿಯ ಭಯ ಶುರುವಾಗುವುದು, ಏಕೆಂದರೆ ಅಸ್ತಮಾ ಕಾಯಿಲೆ ಉಲ್ಭಣವಾಗುವುದೇ ರಾತ್ರಿ ಹೊತ್ತಿನಲ್ಲಿ. ಮಲಗಲು ಆಗದೆ, ಸರಿಯಿಡೀ ಉಸಿರು ಬಿಡಲೂ ಆಗದೆ ಉಬ್ಬಸದಿಂದ ಒದ್ದಾಡುವಂಥ ಪರಿಸ್ಥತಿ ನೆನೆದರೇ ಭಯವಾಗುವುದು.

ಉಸಿರಾಟದ ತೊಂದರೆ, ದಮ್ಮು, ಕೆಮ್ಮು ಇವೆಲ್ಲಾ ಹಗಲು ಹೊತ್ತಿನಲ್ಲಿ ಕಡಿಮೆ ಇದ್ದು ರಾತ್ರಿಯಾಗುತ್ತಿದ್ದಂತೆ ರೋಗ ಲಕ್ಷಣಗಳು ಉಲ್ಭಣವಾಗುವುದು. ಅಸ್ತಮಾ ಕಾಯಿಲೆ ಏಕೆ ರಾತ್ರಿ ಹೊತ್ತಿನಲ್ಲಿಯೇ ಹೆಚ್ಚಾಗುವುದು? ಇದಕ್ಕೆ ಕಾರಣವೇನೆಂಬುವುದನ್ನು ಅಧ್ಯಯನವೂ ತಿಳಿಸಿದೆ, ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ:

ರಾತ್ರಿ ಹೊತ್ತಿನಲ್ಲಿ ಅಸ್ತಮಾ ಹೆಚ್ಚಾಗುವುದು ಏಕೆ?

ರಾತ್ರಿ ಹೊತ್ತಿನಲ್ಲಿ ಅಸ್ತಮಾ ಹೆಚ್ಚಾಗುವುದು ಏಕೆ?

ರಾತ್ರಿ ಹೊತ್ತಿನಲ್ಲಿ ಶ್ವಾಸ ಕೋಶದ ಕಾರ್ಯಚಟುವಟಿಕೆ ಕುಸಿಯುವುದು, ಇದರಿಂದಾಗಿ ನಿದ್ದೆ ಹಾಗೂರೋಗ ಲಕ್ಷಣಗಳಲ್ಲಿ ವ್ಯತ್ಯಾಸ ಉಂಟಾಗುವುದು. ಅಸ್ತಮಾ ರೋಗಿ ಇನ್‌ಹೇಲರ್‌ ಬಳಸುವುದು ದಿನಕ್ಕಿಂತ ರಾತ್ರಿ ನಾಲ್ಕು ಪಟ್ಟು ಅಧಿಕ ಎಂಬುವುದು ಲ್ಯಾಬೋರೇಟರಿಯಲ್ಲಿ ನಡೆಸಿದ ಪರೀಕ್ಷೆಯಿಂದ ತಿಳಿದು ಬಂದಿದೆ.

ಈ ಕಾರಣಗಳಿಂದಲೂ ತಾತ್ರಿ ಹೊತ್ತಿನಲ್ಲೂ ಅಸ್ತಮಾ ಸಮಸ್ಯೆ ಹೆಚ್ಚಾಗುವುದು

ಈ ಕಾರಣಗಳಿಂದಲೂ ತಾತ್ರಿ ಹೊತ್ತಿನಲ್ಲೂ ಅಸ್ತಮಾ ಸಮಸ್ಯೆ ಹೆಚ್ಚಾಗುವುದು

ತಿಗಣೆ, ನಾಯಿ ಅಥವಾ ಬೆಕ್ಕಿನ ರೋಮ ಇವೆಲ್ಲಾ ಬೆಡ್‌ನಲ್ಲಿದ್ದರೆ ರಾತ್ರಿ ಹೊತ್ತಿನಲ್ಲಿ ಅಸ್ತಮಾ ಸಮಸ್ಯೆ ಹೆಚ್ಚಾಗುವುದು. ಬೆಡ್‌ 6-8 ಗಂಟೆ ಮಲಗುತ್ತೇವೆ. ಅಷ್ಟು ಹೊತ್ತು ಈ ಅಲರ್ಜಿ ಕಾರಣಗಳಿಂದಾಗಿ ಮುಂಜಾನೆ ಹೊತ್ತಿಗೆ ಉಸಿರಾಟದಲ್ಲಿ ತೊಂದರೆ, ದಮ್ಮು ಕಂಡು ಬರುವುದು.

ಅಸ್ತಮಾ ಸಮಸ್ಯೆ ಇರುವವರು ಬೆಕ್ಕು, ನಾಯಿ ಇವುಗಳನ್ನು ನಿಮ್ಮ ಕೋಣೆಯ ಒಳಗಡೆ ಬಿಡಬೇಡಿ, ಅವುಗಳ ರೋಮಗಳ ಬಿದ್ದರೆ ಅಲರ್ಜಿ ಉಂಟಾಗುವುದು, ಈ ಕುರಿತು ಎಚ್ಚರವಹಿಸಿ.

ಮಲಗುವ ಭಂಗಿ, ಆ್ಯಸಿಡ್ ರಿಫ್ಲೆಕ್ಸ್

ಮಲಗುವ ಭಂಗಿ, ಆ್ಯಸಿಡ್ ರಿಫ್ಲೆಕ್ಸ್

ಮಲಗಿದಾಗ ಹೊಟ್ಟೆಯಲ್ಲಿರುವ ಆಮ್ಲ ಸುಲಭವಾಗಿ ಅನ್ನ ನಾಳದ ಮೂಲಕ ವಾಪಾಸಾಗುವುದು. ಇದನ್ನು ನುಂಗುವಾಗ ಕೆಲವೊಮ್ಮೆ ಆ ದ್ರವ ಶ್ವಾಸಕೋಶದ ನಾಳಕ್ಕೆ ಪ್ರವೇಶಿಸಿದರೆ ಇದರಿಂದಾಗಿ ತುಂಬಾ ಕೆಮ್ಮು ಉಂಟಾಗಿ ಉಸಿರಾಟದಲ್ಲಿ ತೊಂದರೆ ಉಂಟಾಗುವುದು.

ಶ್ವಾಸಕೋಶದ ಕಾರ್ಯ ಚಟುವಟಿಕೆಯಲ್ಲಿ ಬದಲಾವಣೆ

ಶ್ವಾಸಕೋಶದ ಕಾರ್ಯ ಚಟುವಟಿಕೆಯಲ್ಲಿ ಬದಲಾವಣೆ

ನಮ್ಮ ಶ್ವಾಸಕೋಶ ಭಿನ್ನವಾಗಿ ಕಾರ್ಯ ನಿರ್ವಹಿಸುತ್ತದೆ. ನಾವು ದಿನದಲ್ಲಿ ಚಟುವಟಿಕೆಯಿಂದ ಇರುವುದರಿಂದ ಹಗಲಿನಲ್ಲಿ ಶ್ವಾಸಕೋಶ ತುಂಬಾ ಚಟುವಟಿಕೆಯಿಂದ ಇರುತ್ತದೆ. ರಾತ್ರಿ ಹೊತ್ತಿನಲ್ಲಿ ಇದರ ಕಾರ್ಯ ಚಟುವಟಿಕೆ ಕಡಿಮೆಯಾಗುವುದು. ಈ ಕಾರಣದಿಂದ ಅಸ್ತಮಾ ಇರುವವರೆಗೆ ರಾತ್ರಿ ಹೊತ್ತಿನಲ್ಲಿ ದಮ್ಮು ಹೆಚ್ಚಾಗುವುದು.

ಮಾನಸಿಕ ಒತ್ತಡ

ಮಾನಸಿಕ ಒತ್ತಡ

ಮಾನಸಿಕ ಒತ್ತಡ ಹಾಗೂ ಅಸ್ತಮಾಕ್ಕೆ ಉಲ್ಭಣಕ್ಕೆ ಸಂಬಂಧವಿದೆ ಎಂದು ಅಧ್ಯಯನಗಳು ಹೇಳಿವೆ. ದೇಹದಲ್ಲಿ ಒತ್ತಡದ ಹಾರ್ಮೋನ್‌ ಹೆಚ್ಚಾದಾಗ ಅಸ್ತಮಾದ ಸಮಸ್ಯೆಯೂ ಅಧಿಕವಾಗುವುದು.

FAQs
ರಾತ್ರಿಯಲ್ಲಿ ಕಾಡುವ ಅಸ್ತಮಾ ಸಮಸ್ಯೆ ತಡೆಗಟ್ಟುವುದು ಹೇಗೆ?

* ಮಲಗುವ ಭಂಗಿಯಲ್ಲಿ ವ್ಯತ್ಯಾಸ ತರುವುದು, ಅಂದ್ರೆ ತಲೆ ಹಾಗೂ ಎದೆ ಭಾಗ ಸ್ವಲ್ಪ ಎತ್ತರದಲ್ಲಿ ಇರುವಂತೆ ಮಲಗಿದರೆ ಉಸಿರಾಟಕ್ಕೆ ಸುಲಭವಾಗುವುದು. ಕೆಲವರಿಗೆ ರಾತ್ರಿ ಹೊತ್ತು ಬಿಸಿ-ಬಿಸಿ ನೀರು ಕುಡಿಯುವುದರಿಂದ ಅಸ್ತಮಾ ಸಮಸ್ಯೆ ಕಡಿಮೆಯಾಗುವುದು.

* ಪ್ರತಿದಿನ ರಾತ್ರಿ ದಮ್ಮು ಸಮಸ್ಯೆ ಕಾಡುತ್ತಿದ್ದರೆ ವೈದ್ಯರಿಗೆ ತಿಳಿಸಿ. ನಿಮ್ಮ ಔಷಧಿಯಲ್ಲಿ ಬದಲಾವಣೆ ಮಾಡಿಕೊಡುತ್ತಾರೆ. 800ಮೈಕ್ರೋಗ್ರಾಮ್ Azmacort ಅನ್ನು ಮಧ್ಯಾಹ್ನ 3 ಗಂಟೆಗೆ ತೆಗೆಯುವುದು 200 ಮೈಕ್ರೋಗ್ರಾಮ್‌ ಅನ್ನು ದಿನದಲ್ಲಿ ನಾಲ್ಕು ಬಾರಿ ತೆಗೆದುಕೊಳ್ಳುವುದಕ್ಕಿಂತ ಪರಿಣಾಮಕಾರಿ ಎಂದು ಅಧ್ಯಯನ ವರದಿ ತಿಳಿಸಿದೆ.

* ವ್ಯಾಯಾಮಾ ಕೂಡ ರಾತ್ರಿ ಹೊತ್ತಿನಲ್ಲಿ ಕಾಡುವ ಅಸ್ತಮಾ ಸಮಸ್ಯೆಯನ್ನು ಕಡಿಮೆ ಮಾಡುವುದು. ಅಸ್ತಮಾ ಇರುವ ಮಕ್ಕಳು ವಾರದಲ್ಲಿ 2-3 ದಿನ ವ್ಯಾಯಾಮ ಮಾಡಿದರೆ 6-8 ವಾರಗಳಾಗುವಷ್ಟರಲ್ಲಿ ರಾತ್ರಿ ಹೊತ್ತು ದಮ್ಮು ಸಮಸ್ಯೆ ಕಡಿಮೆಯಾಗುವುದು. ದೊಡ್ಡವರು ವ್ಯಾಯಾಮ ಅಭ್ಯಾಸ ಮಾಡಿದರೆ 12 ವಾರಗಳಲ್ಲಿ ರಾತ್ರಿ ಹೊತ್ತು ದಮ್ಮು ಸಮಸ್ಯೆ ಕಡಿಮೆಯಾಗುವುದು ಎಂದು ಅಧ್ಯಯನಗಳಿಂದ ತಿಳಿದು ಬಂದಿದೆ.

ರಾತ್ರಿ ಹೊತ್ತು ಕಾಡುವ ದಮ್ಮು ಸಮಸ್ಯೆಗೆ ಮನೆಮದ್ದುಗಳೇನು?

* ಹಬೆ ತೆಗೆಯುವುದು

* ಬಿಸಿ-ಬಿಸಿಯಾದ ನೀರು ಕುಡಿಯುವುದು

* ಉಸಿರಾಟದ ವ್ಯಾಯಾಮ

* ಹ್ಯೂಮಿಡಿಫೈಯರ್

ಇದು ಚಳಿಗಾಲ ಹಾಗೂ ಮಳೆಗಾಲದಲ್ಲಿ ಕೋಣೆಯ ಉಷ್ಣತೆ ಕಾಪಾಡಲು ಸಹಕಾರಿ.

*ಏರ್‌ ಫಿಲ್ಟರ್ ಬಳಸುವುದು

* ಅಲರ್ಜಿ ಉಂಟು ಮಾಡುವ ವಸ್ತುಗಳಿಂದ ದೂರವಿರುವುದು(ದೂಳು, ಸಾಕು ಪ್ರಾಣಿಗಳ ರೋಮ, ಕೆಲವೊಂದು ಬಗೆಯ ಹೂಗಳು)

*ಅಲರ್ಜಿಗೆ ಔಷಧ ತೆಗೆದುಕೊಳ್ಳುವುದು

BoldSky Lifestyle

English summary

Study Reveals' Why Asthma Worsens At Night time?

Study reveals' why asthma worsens at night time?, read on....
Story first published: Tuesday, September 7, 2021, 18:00 [IST]
X
Desktop Bottom Promotion