Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಅತ್ಯಂತ ಕೆಟ್ಟ ಹಾರ್ಮೋನ್ ಸಮಸ್ಯೆಯಾದ ಪಿಸಿಒಎಸ್ ವಿರುದ್ಧ ಹೋರಾಡುತ್ತಿರುವೆ ಎಂದು ಶ್ರುತಿ ಹಾಸನ್, ಈ ಕಾಯಿಲೆಯ ಅಪಾಯಗಳೇನು?
ದಕ್ಷಿಣ ಭಾರತ ಹಾಗೂ ಬಾಲಿವುಡ್ ನಟಿ ಶ್ರುತಿ ಹಾಸನ್ ತಾವು ಪಿಸಿಒಎಸ್ ಸಮಸ್ಯೆಯಿಂದ ಬಳಲುತ್ತಿರುವುದಾಗಿ ಹೇಳಿದ್ದಾರೆ.

ಇನ್‌ಸ್ಟಾಗ್ರಾಮ್‌ನಲ್ಲಿ ತಮ್ಮ ವರ್ಕೌಟ್ ಪೋಟೋ ಶೇರ್ ಮಾಡಿ ತಾನು ಎರಡು ಪ್ರಮುಖ ಕಾಯಿಲೆಗಳ ವಿರುದ್ಧ ಹೋರಾಡುತ್ತಿರುವುದಾಗಿ ಹೇಳಿದ್ದಾರೆ, ತಾನು ಅತ್ಯಂತ ಕೆಟ್ಟ ಹಾರ್ಮೋನ್ ಸಮಸ್ಯೆಯಿಂದ ಬಳಲುತ್ತಿರುವುದಾಗಿ ಕೂಡ ಹೇಳಿದ್ದಾರೆ.

ಪಿಸಿಒಎಸ್ ಹಾಗೂ ಎಂಡೋಮೆಟ್ರೋಸಿಸ್ ಸಮಸ್ಯೆ ವಿರುದ್ಧ ಹೋರಾಡುತ್ತಿರುವ ಶ್ರುತಿ ಹಾಸನ್
ಈ ಎರಡು ಸಮಸ್ಯೆ ಮಹಿಳೆಯರ ಪಾಲಿಗೆ ಅತ್ಯಂತ ಕೆಟ್ಟ ಕಾಯಿಲೆಯಾಗಿದೆ. ಇದರಿಂದಾಗಿ ಅನೇಕ ಸಮಸ್ಯೆಗಳು ಕಂಡು ಬರುವುದು. ಬಂಜೆತನ, ಖಿನ್ನತೆ, ಮಧುಮೇಹ ಮುಂತಾದ ಸಮಸ್ಯೆಗಳಿಗೆ ಮೂಲ ಇದಾಗಿರುತ್ತೆ. ಆದರೆ ನಮ್ಮ ಜೀವನಶೈಲಿ, ಆಹಾರಶೈಲಿ ಹಾಗೂ ಸರಿಯಾದ ನಿದ್ದೆ ಮಾಡುವುದು ಈ ಮೂಲಕ ಈ ಸಮಸ್ಯೆ ತಡೆಗಟ್ಟಬಹುದಾಗಿದೆ ಅಥವಾ ಸಮಸ್ಯೆ ಉಂಟಾಗಿದ್ದರೆ ಅದರಿಂದ ಮುಕ್ತಿ ಪಡೆಯಬಹುದಾಗಿದೆ, ಇದು ಹಾರ್ಮೋನ್ ಸಂಬಂಧಿತ ಸಮಸ್ಯೆಗಳಾಗಿದ್ದು ಹಾರ್ಮೋನ್ ಸಮತೋಲನದಲ್ಲಿದ್ದರೆ ಈ ಯಾವ ಸಮಸ್ಯೆಯೂ ಬರಲ್ಲ.

ಪಿಸಿಒಎಸ್ ಪ್ರಾಣಕ್ಕೆ ಅಪಾಯಕಾರಿಯೇ?
ಪಿಸಿಒಎಸ್, ಎಂಡೋಮೆಟ್ರೋಸಿಸ್ ಇವೆಲ್ಲಾ ಮಹಿಳೆಯರನ್ನು ಕಾಡುತ್ತಿರುವ ಸಾಮಾನ್ಯ ಆರೋಗ್ಯ ಸಮಸ್ಯೆಯಾಗಿದೆ. ಇದು ಮಾರಾಣಾಂತಿಕವಾದ ಕಾಯಿಲೆಯಲ್ಲ. ಈ ಹಾರ್ಮೋನ್ ಸಂಬಂಧಿತ ಸಮಸ್ಯೆಗಳಿಗೆ ಪ್ರಮುಖ ಕಾರಣ ಜೀವನಶೈಲಿ, ಮಾನಸಿಕ ಒತ್ತಡ, ಆಹಾರಶೈಲಿ ಹಾಗೂ ನಿದ್ದೆಯ ವಿಧಾನ. ಕೆಲವರಿಗಷ್ಟೇ ವಂಶಪಾರಂಪರ್ಯವಾಗಿ ಬರುತ್ತದೆ.

ಈ ಹಾರ್ಮೋನ್ ಸಮಸ್ಯೆಗಳು ಮಾರಾಣಾಂತಿಕವಲ್ಲದಿದ್ದರೂ ಇದರಿಂದ ಈ ಗಂಭೀರ ಸಮಸ್ಯೆಗಳು ಬರಬಹುದು
* ಮಧುಮೇಹ
* ಗರ್ಭಕೋಶದ ಕ್ಯಾನ್ಸರ್
*ಲಿವರ್‌ನ ಉರಿಯೂತ
* ಅತ್ಯಧಿಕ ರಕ್ತದೊತ್ತಡ
* ಪಾರ್ಶ್ವವಾಯು
* ಒಬೆಸಿಟಿ
*ದೇಹದಲ್ಲಿ ಕೂದಲು ಬೆಳೆಯುವುದು
* ಬಂಜೆತನ
* ಗರ್ಭಪಾತ
* ಅವಧಿಪೂರ್ವ ಜನನ
* ಕಿಬ್ಬೊಟ್ಟೆ ನೋವು
* ಗರ್ಭಾವಸ್ಥೆಯಲ್ಲಿ ಮಧುಮೇಹ
* Preeclampsia (ಗರ್ಭಾವಸ್ಥೆಯಲ್ಲಿ ಅತ್ಯಧಿಕ ರಕ್ತದೊತ್ತಡ)
* ಖಿನ್ನತೆ
* ನಿದ್ರಾಹೀನತೆ

ಪಿಸಿಒಎಸ್ ಸಮಸ್ಯೆಯಿದ್ದರೆ ಗರ್ಭಿಣಿಯಾಗಬಹುದೇ?
ಗರ್ಭಿಣಿ ಆಗಬಹುದು. ಪಿಸಿಒಎಸ್ ಸಮಸ್ಯೆಗೆ ಚಿಕಿತ್ಸೆ ಪಡೆದರೆ ಅಥವಾ ನಿಮ್ಮ ಜೀವನ ಶೈಲಿಯಲ್ಲಿ ಬದಲಾವಣೆ ತಂದು ಹಾರ್ಮೋನ್‌ಗಳನ್ನು ನಿಯಂತ್ರಣದಲ್ಲಿಟ್ಟರೆ ಗರ್ಭಧರಿಸಬಹುದು. ಪಿಸಿಒಎಸ್ ಸಮಸ್ಯೆಯಿದ್ದರೆ ನೀವು ಸೂಕ್ತ ತಜ್ಞರ ಮಾರ್ಗದರ್ಶನ ಪಡೆದರೆ ಮಕ್ಕಳಾಗುವುದು.



Click it and Unblock the Notifications