Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಕೋವಿಡ್ 19 ಚಿಕಿತ್ಸೆ ಬಳಿಕ ನೀವು ಮಾಡಲೇಬೇಕಾದ ಕಾರ್ಯಗಳಿವು
ಭಾರತದಲ್ಲಿ ಕೊರೊನಾವೈಸರ್ ಸೋಂಕು ತಗುಲಿದವರ ಸಂಖ್ಯೆ ಆಗಸ್ಟ್ 20ಕ್ಕೆ 2,841, 337ಕ್ಕೆ ಏರಿಕೆಯಾಗಿದ್ದು 54, 017 ಜನರು ಸಾವನ್ನಪ್ಪಿದ್ದಾರೆ. ದೆಹಲಿಯಲ್ಲಿ ಶೇ. 21ರಷ್ಟು ಜನರು ಕೊರೊನಾವೈರಸ್ ಸೋಂಕಿಗೆ ತುತ್ತಾಗಿದ್ದಾರೆ. ಕರ್ನಾಟದಲ್ಲಿಯೇ ಸೋಂಕಿತರ ಸಂಖ್ಯೆ 2 ಲಕ್ಷ ಗಡಿ ದಾಟಿದೆ.
ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾದರೂ ಒಂದು ಸಮಧಾನಕರ ಸಂಗತಿಯೆಂದರೆ ಕೊರೊನಾದಿಂದ ಗುಣಮುಖರಾಗುತ್ತಿರುವ ಸಂಖ್ಯೆಯಲ್ಲಿ ಹೆಚ್ಚಳ ಕಂಡು ಬರುತ್ತಿದೆ. ಕೊರೊನಾವೈರಸ್‌ನ ಸಣ್ಣ ಪುಟ್ಟ ಲಕ್ಷಣಗಳು ಕಂಡು ಬಂದವರಿಗೆ ಮನೆಯಲ್ಲಿಯೇ ಚಿಕಿತ್ಸೆ ನೀಡಲಾಗುತ್ತದೆ. ಕೊರೊನಾ ವೈರಸ್ ಆರ್ಭಟ ಶುರುವಾಗಿ 9 ತಿಂಗಳುಗಳಾಗಿವೆ. ಕೆಲವರಿಗೆ ಈ ಸೋಂಕು ಚಿಕ್ಕ ಜ್ವರದಂತೆ ಬಂದು ಹೋದರೆ ಇನ್ನು ಕೆಲವರಿಗೆ ಉಸಿರಾಟದ ತೊಂದರೆಯಂಥ ಗಂಭೀರ ಸಮಸ್ಯೆಗಳನ್ನು ತಂದೊಡ್ಡುತ್ತಿದೆ.
ಕೋವಿಡ್ 19ನಿಂದ ಗುಣಮುಖವಾದರೂ ನಂತರ ದಿನಗಳಲ್ಲಿ ಕೆಲವರಿಗೆ ತಲೆ ನೋವು, ಉಸಿರಾಟದ ತೊಂದರೆ, ಸುಸ್ತು ಮುಂತಾದ ಲಕ್ಷಣಗಳು ಕಂಡು ಬಂದಿರುವುದಾಗಿ ವರದಿಯಾಗಿವೆ. ಕೋವಿಡ್ 19 ಗಂಭೀರವಾಗಿ ನಂತರ ಚೇತರಿಸಿಕೊಂಡವರ ಶ್ವಾಸಕೋಶಕ್ಕೆ ಶಾಶ್ವತವಾಗಿ ಹಾನಿಯುಂಟಾಗುವ ಸಾಧ್ಯತೆಯೂ ಇದೆ. ಕೋವಿಡ್ 19 ವರದಿ ನೆಗೆಟಿವ್ ಬಂದು ಆಸ್ಪತ್ರೆಯಿಂದ ಬಿಡುಗಡೆಯಾದ ಬಳಿಕ ಸಂಪೂರ್ಣವಾಗಿ ಚೇತರಿಸಿಕೊಳ್ಳಲು ಸಾಮಾನ್ಯವಾಗಿ 3 ವಾರಗಳು ಬೇಕಾಗುವುದು.
ಕೋವಿಡ್ 19ನಿಂದ ಗುಣಮುಖರಾದರೂ ಸಂಪೂರ್ಣವಾಗಿ ಚೇತರಿಸಿಕೊಳ್ಳಲು ಕೆಲವು ದಿನಗಳು ಬೇಕು. ಆದ್ದರಿಂದ ಕೋವಿಡ್ 19 ಸೋಂಕಿನಿಂದ ಗುಣಮುಖರಾದವರು ಈ ಟಿಪ್ಸ್ ಪಾಲಿಸಿದರೆ ಆರೋಗ್ಯ ಮತ್ತಷ್ಟು ಸುಧಾರಿಸುವುದು:

ವಿಶ್ರಾಂತಿ ತೆಗೆದುಕೊಳ್ಳಿ
ಕೋವಿಡ್ ವರದಿ ನೆಗೆಟಿವ್ ಬಂತು ಅಂತ ನಿಮ್ಮ ಕೆಲಸ ಕಾರ್ಯಗಳಿಗೆ ಮರಳಬೇಡಿ. ನಿಮ್ಮ ದೇಹ ದಣಿದಿರುತ್ತದೆ, ಅದಕ್ಕೆ ವಿಶ್ರಾಂತಿಯ ಅವಶ್ಯಕತೆ ಇದೆ. ನಿಮ್ಮ ದಿನನಿತ್ಯದ ಕೆಲಸ ಕಾರ್ಯಗಳನ್ನು ನಿಧಾನಕ್ಕೆ ಪ್ರಾರಂಭಿಸಿ. ಮೊದಲಿಗೆ ಚೆನ್ನಾಗಿ ವಿಶ್ರಾಂತಿ ತೆಗೆದುಕೊಳ್ಳಿ. ನೀವು ವಿಶ್ರಾಂತಿ ತೆಗೆದುಕೊಂಡಷ್ಟೂ ದೇಹ ಬೇಗ ಚೇರಿಸಿಕೊಳ್ಳುತ್ತದೆ.

ನಿಮ್ಮ ಮೆದುಳು ಚುರುಕಾಗಿಸುವ ಆಟಗಳನ್ನು ಆಡಿ
ಚುಟುಕು, ಪದಬಂಧ ಮುಂತಾದ ಆಟಗಳನ್ನು ಆಡಿ, ಇವೆಲ್ಲಾ ನಿಮ್ಮ ಮೆದುಳನ್ನು ಚುರುಕುಗೊಳಿಸುತ್ತದೆ. ಹೀಗೆ ಮಾಡುವುದರಿಂದ ನೆನಪಿನ ಶಕ್ತಿ, ಏಕಾಗ್ರತೆ ಇವುಗಳನ್ನು ಮರಳಿ ಪಡೆಯಬಹುದು, ಅಲ್ಲದೆ ಇಂಥ ಆಟಗಳು ಮನಸ್ಸಿಗೆ ಖುಷಿ ಕೊಡುವುದರಿಂದ ಸೋಂಕು ತಗುಲಿದಾಗ ಮನಸ್ಸಿಗೆ ಕಾಡಿದ ಭಯ, ಖಿನ್ನತೆ ದೂರವಾಗುವುದು.

ದೇಹದಲ್ಲಿ ಏನಾದರೂ ಬದಲಾವಣೆ ಉಂಟಾಗುತ್ತದೆಯೇ ಗಮನಿಸಿ
ಆಗಾಗ ತಲೆನೋವು ಉಂಟಾಗುವುದು, ಉಸಿರಾಟಕ್ಕೆ ತೊಂದರೆ ಕಾಣಿಸಿದರೆ ನಿಮ್ಮ ದೇಹ ಸಂಪೂರ್ಣ ಚೇತರಿಸಿಕೊಂಡಿಲ್ಲ ಎಂಬ ಸೂಚನೆಯಾಗಿದೆ. ಈ ಸಂದರ್ಭದಲ್ಲಿ ವೈದ್ಯರಿಗೆ ಕರೆ ಮಾಡಿ ಸೂಕ್ತ ಸಲಹೆ ಸೂಚನೆಗಳನ್ನು ಪಡೆದುಕೊಳ್ಳಿ.

ದೀರ್ಘಕಾಲಿಕ ಸಮಸ್ಯೆಗಳಿದ್ದರೆ ಔಷಧಿ ಮುಂದುವರೆಸಿ
ಮಧುಮೇಹ, ರಕ್ತದೊತ್ತಡ ಮುಂತಾದ ಸಮಸ್ಯೆಯಿದ್ದರೆ ಔಷಧಿಯನ್ನು ಮುಂದುವರೆಸಿ, ಅಲ್ಲದೆ ಡೋಸೇಜ್ ಬಗ್ಗೆ ತಿಳಿದುಕೊಳ್ಳಲು ನಿಮ್ಮ ವೈದ್ಯರ ಸಲಹೆ ಕೇಳಿ.

ಕೊರೊನಾವೈರಸ್ ಮತ್ತೆ ಮರುಕಳಿಸದಂತೆ ಎಚ್ಚರವಹಿಸಿ
ಕೊರೊನಾವೈರಸ್ ಸೋಂಕು ತಗುಲಿ ಚೇತರಿಸಿಕೊಂಡ ಅನೇಕರಲ್ಲಿ ಮತ್ತೆ ಸೋಂಕು ಕಾಣಿಸಿಕೊಂಡಿದೆ. ಹಾಗಾಗಿ ಕೋವಿಡ್ 19ನಿಂದ ಗುಣಮುಖರಾದರೂ ಮತ್ತೆ ಆ ಸೋಂಕು ಬಾರದಿರಲು ಸಾರ್ವಜನಿಕ ಸ್ಥಳಗಳಿಗೆ ಹೋಗುವಾಗ ಮಾಸ್ಕ್ ಧರಿಸಿ, ಕೈಗಳಿಗೆ ಸ್ಯಾನಿಟೈಸರ್ ಹಚ್ಚಿ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳಿ.

ಚೇರಿಸಿಕೊಳ್ಳುವುದೇ ನಿಮ್ಮ ಪ್ರಮುಖ ಕೆಲಸ
ಕೋವಿಡ್ 19 ಸೋಂಕಿನಿಂದ ಗುಣಮುಖರಾಗಿ ಮನೆಗೆ ಬಂದ ಮೇಲೆ ಕೆಲವು ವಾರಗಳ ಕಾಲ ನಿಮ್ಮ ಆರೋಗ್ಯದ ಕಡೆ ಸಂಪೂರ್ಣ ಗಮನ ನೀಡಿ. ಆರೋಗ್ಯಕರ ಆಹಾರ ಸೇವಿಸಿ, ಚೆನ್ನಾಗಿ ನಿದ್ದೆ ಮಾಡಿ. ಉಳಿದ ಕಾರ್ಯಗಳ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ, ಅವುಗಳೆನ್ನೆಲ್ಲಾ ನಿಧಾನಕ್ಕೆ ಮಾಡಬಹುದು.



Click it and Unblock the Notifications
