Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಪಿಎಸ್ಒಎಸ್ ಸಮಸ್ಯೆ ಇದ್ದಾಗ ದೈಹಿಕವಾಗಿ ಈ ಬದಲಾವಣೆಗಳಾಗುವುದು
polycystic ovarian syndrome) ಸಮಸ್ಯೆ ಹೆಚ್ಚಾಗಲು ಪ್ರಮುಖ ಕಾರಣವಾಗಿದೆ. ಪಿಸಿಒಎಸ್ ಸಮಸ್ಯೆ 20 ವರ್ಷದೊಳಗೆ ಕೆಲವರಲ್ಲಿ ಕಂಡು ಬರುತ್ತಿದೆ. ಪಿಸಿಒಎಸ್ ಸಮಸ್ಯೆ ಹೆಚ್ಚಾಗುತ್ತಿರುವುದರಿಂದ ಬಂಜೆತನದ ಸಮಸ್ಯೆ ಕೂಡ ಹೆಚ್ಚಾಗುತ್ತಿದೆ.

ಪ್ರತಿ ಮಹಿಳೆಯರಲ್ಲಿ ಒಬ್ಬರಿಗೆ ಬಂಜೆತನದ ಸಮಸ್ಯೆ ಕಂಡು ಬರುತ್ತಿದೆ, ಪಿಸಿಒಎಸ್ ಸಮಸ್ಯೆಯಿದ್ದಾಗ ದೇಹದಲ್ಲೂ ಕೆಲವೊಂದು ಬದಲಾವನೆಗಳು ಕಂಡು ಬರುತ್ತದೆ, ಆ ಬದಲಾವಣೆಗಳೇನು ಎಂದು ನೋಡೋಣ ಬನ್ನಿ:
ಅನಿಯಮಿತ ಮುಟ್ಟು:
ಪಿಸಿಒಎಸ್ ಸಮಸ್ಯೆಯಿದ್ದಾಗ ಮುಟ್ಟಿನಲ್ಲಿ ವ್ಯತ್ಯಾಸ ಉಂಟಾಗುತ್ತದೆ. ಪ್ರತಿ ತಿಂಗಳು ಮುಟ್ಟಾಗುವುದಿಲ್ಲ, ಒಮ್ಮೆ ಮುಟ್ಟಾದರೆ ನಂತರ 3-4 ತಿಂಗಳು ಕೆಲವೊಮ್ಮೆ 6 ತಿಂಗಳು ಕಳೆದರೂ ಮುಟ್ಟಾಗುವುದಿಲ್ಲ. ಇನ್ನು ಋತುಸ್ರಾವದಲ್ಲೂ ವ್ಯತ್ಯಾಸ ಉಂಟಾಗುವುದು. ಕೆಲವರಿಗೆ ಮುಟ್ಟಾದಾಗ ವಿಪರೀತ ರಕ್ತಸ್ರಾವ ಉಂಟಾಗುವುದು, ಆ ರಕ್ತಸ್ರಾವ ನಿಲ್ಲಲು ಮತ್ತೆ ವೈದ್ಯರನ್ನು ಭೇಟಿಯಾಗಬೇಕಾಗುತ್ತದೆ. ಪ್ರತಿ ತಿಂಗಳು ಮುಟ್ಟಾಗದಿದ್ದರೆ ಪಿಸಿಒಎಸ್ ಪ್ರಮುಖ ಲಕ್ಷಣವಾಗಿದೆ. ವರ್ಷದಲ್ಲಿ 9 ಮುಟ್ಟಿಗಿಂತ ಕಡಿಮೆಯಾಗುತ್ತಿದ್ದರೆ ನಿರ್ಲಕ್ಷ್ಯ ಮಾಡಬೇಡಿ, ಅದರಿಂದ ಮುಂದೆ ಗರ್ಭಧಾರನೆಗೆ ತೊಂದರೆಯಾಗುವುದು, ಪ್ರಾರಂಭದಲ್ಲಿಯೇ ಚಿಕಿತ್ಸೆ ಪಡೆಯಿರಿ.
ದೇಹದಲ್ಲಿ ವಿಪರೀತ ಕೂದಲು ಬೆಳೆಯಲಾರಂಭಿಸುತ್ತದೆ
ಪಿಸಿಒಎಸ್ ಸಮಸ್ಯೆ ಇದ್ದವರಲ್ಲಿ ಹಾರ್ಮೋನ್‌ಗಳ ವ್ಯತ್ಯಾಸದಿಂದಾಗಿ ಮೈ ಮೇಲೆ ಕೂದಲು ಬರಲಾರಂಭಿಸುವುದು. ಮುಖದಲ್ಲಿ ಕೂದಲು ಬರಲಾರಂಭಿಸುವುದು, ಹೊಟ್ಟೆಯ ಭಾಗದಲ್ಲಿ , ಬೆನ್ನಿನ ಭಾಗದಲ್ಲಿ ಕೂದಲು ಬರಲಾರಂಭಿಸುತ್ತದೆ.
ಪುರುಷರ ರೀತಿಯಲ್ಲಿ ಬಕ್ಕ ತಲೆ
ಕೂದಲು ಉದುರುವುದು ಸಹಜ ಆದರೆ ಮಹಿಳೆಯರಿಗೆ ಬಕ್ಕತಲೆಯ ಸಮಸ್ಯೆ ತುಂಬಾನೇ ವಿರಳ, ಪುರುಷರ ರೀತಿಯಲ್ಲಿ ಬಕ್ಕತಲೆ ಸಮಸ್ಯೆ ಉಂಟಾಗುತ್ತಿದ್ದರೆ ಅದು ಹಾರ್ಮೋನ್‌ಗಳ ಬದಲಾವಣೆಯಿಂದ ಉಂಟಾಗುತ್ತಿದೆ. ಆದ್ದರಿಂದ ಕೂದಲು ಉದುರುತ್ತಿದ್ದರೆ ಪಿಸಿಒಎಸ್ ಸಮಸ್ಯೆ ಇದೆಯೇ ಎಂದು ಪರೀಕ್ಷೆ ಮಾಡಿಸಿ.
ಮೊಡವೆ
ಪಿಸಿಒಎಸ್ ಸಮಸ್ಯೆಯಿದ್ದರೆ ತುಂಬಾ ಮೊಡವೆ ಸಮಸ್ಯೆ ಕೂಡ ಕಾಡುವುದು. ಆಂಡ್ರೋಜಿನ್ ಉತ್ಪತ್ತಿ ಹೆಚ್ಚಾಗುವುದರಿಂದ ಮುಖ, ಬೆನ್ನು, ಎದೆ ಈ ಭಾಗಗಳಲ್ಲಿ ಮೊಡವೆ ಕಂಡು ಬರುವುದು.
ವ್ಯಕ್ತಿಯಿಂದ ವ್ಯಕ್ತಿಗೆ ಲಕ್ಷಣದಲ್ಲಿ ವ್ಯತ್ಯಾಸ ಇರಬಹುದು
ಪಿಸಿಒಎಸ್ ಲಕ್ಷಣಗಳು ಎಲ್ಲರಿಗೆ ಒಂದೇ ರೀತಿ ಇರುವುದಿಲ್ಲ, ವ್ಯಕ್ತಿಯಿಂದ ವ್ಯಕ್ತಿಗೆ ವ್ಯತ್ಯಾಸವಿರುತ್ತದೆ. ಕೆಲವರಿಗೆ ಸಣ್ಣ ಪುಟ್ಟ ಲಕ್ಷಣಗಳು ಕಂಡು ಬಂದರೆ ಇನ್ನು ಕೆಲವರಿಗೆ ಗಂಭೀರ ಲಕ್ಷಣಗಳು ಕಂಡು ಬರುವುದು.
ಪಿಸಿಒಎಸ್ ಸಮಸ್ಯೆ ಇದೆ ಎಂದು ಕಂಡು ಹಿಡಿಯುವುದು ಹೇಗೆ?
* ಪೆಲ್ವಿಕ್ ಪರೀಕ್ಷೆ
* ರಕ್ತ ಪರೀಕ್ಷೆ
* ಅಲ್ಟ್ರಾಸೌಂಡ್
ಚಿಕಿತ್ಸೆಯೇನು?
ಜೀವನಶೈಲಿಯಲ್ಲಿ ಬದಲಾವಣೆ
ಪಿಸಿಒಎಸ್‌ಗೆ ಚಿಕಿತ್ಸೆ ಪಡೆದರೆ ಸಾಕಾಗಲ್ಲ ಮೊದಲು ಜೀವನಶೈಲಿಯಲ್ಲಿ ಬದಲಾವಣೆ ಮಾಡಬೇಕು. ಆರೋಗ್ಯಕರ ಆಹಾರ ಸೇವಿಸಬೇಕು, ದೈಹಿಕ ವ್ಯಾಯಾಮ ಮಾಡಬೇಕು. ಡಯಟಿಷಿಯನ್ ನಿಮಗೆ ಯಾವ ಬಗೆಯ ಆಹಾರ ಸೇವಿಸಿದರೆ ಒಳ್ಳೆಯದು ಎಂಬ ಸಲಹೆ ಮಾಡುತ್ತಾರೆ. ಪ್ರತಿದಿನ ವ್ಯಾಯಾಮ ಮಾಡಬೇಕು.
ಧ್ಯಾನ'
ಮಾನಸಿಕ ಒತ್ತಡದಿಂದ ಕೂಡ ಪಿಸಿಒಎಸ್ ಸಮಸ್ಯೆ ಹೆಚ್ಚಾಗುವುದು, ಆದ್ದರಿಂದ ದಿನಾ 15 ನಿಮಿಷ ಧ್ಯಾನ ಮಾಡಿ.
ಯೋಗ
ಕೆಲವೊಂದು ಯೋಗಾ ಭಂಗಿಗಳು ಪಿಸಿಒಎಸ್ ಸಮಸ್ಯೆ ಕಡಿಮೆ ಮಾಡುತ್ತದೆ.
ಔಷಧಗಳು
ಗರ್ಭನಿರೋಧಕ ಮಾತ್ರೆಗಳು: ಈಸ್ಟ್ರೋಜಿನ್ ಹಾಗೂ ಪ್ರೊಗೆಸ್ಟೈನ್ ಇರುವ ಮಾತ್ರ ಆಂಡ್ರೋಜಿನ್ ಉತ್ಪತ್ತಿ ಕಡಿಮೆ ಮಾಡುತ್ತದೆ. ಆದ್ದರಿಂದ ಪಿಸಿಒಎಸ್ ಹಾರ್ಮೋನ್‌ಗಳನ್ನು ನಿಯಂತ್ರಣದಲ್ಲಿಡಲು ಈ ಮಾತ್ರೆಯನ್ನು ನೀಡಲಾಗುವುದು.
ಪ್ರೊಗೆಸ್ಟೈನ್ ಥೆರಪಿ?
2 ತಿಂಗಳು 14 ದಿನಗಳ ಅವಧಿಗೆ ಪ್ರೊಗೆಸ್ಟೈನ್ ಮಾತ್ರೆ ತೆಗೆದುಕೊಂಡರೆ ಆಂಡ್ರೋಜಿನ್ ಉತ್ಪತ್ತಿ ಕಡಿಮೆ ಮಾಡುತ್ತದೆ, ಇದರಿಂದ ಗರ್ಭಧಾರಣೆಯ ಸಾಧ್ಯತೆ ಹೆಚ್ಚುವುದು. ಗರ್ಭಧಾರಣೆಗೆ ಪ್ರಯತ್ನಿಸುತ್ತಿದ್ದು ಪಿಸಿಒಎಸ್ ಸಮಸ್ಯೆಯಿದ್ದರೆ ಈ ಚಿಕಿತ್ಸೆ ನೀಡಲಾಗುವುದು.
ಅಂಡೋತ್ಪತ್ತಿ ಹೆಚ್ಚಿಸಿ ಗರ್ಭಧರಿಸಲು ಸಹಕಾರಿಯಾಗಲು
ಕ್ಲೋಮಿಫೆನೆ (Clomiphene)
ಲೆಟ್ರೋಜೋಲ್ (Letrozole)
ಮೆಟ್‌ಫಾರ್ಮಿನ್ (Metformin)
ಗೊನೊಡೊಟ್ರೋಫಿನ್ಸ್ (Gonadotropins)
ಚಿಕಿತ್ಸೆ ಕೂಡ ನೀಡಲಾಗುವುದು.
ಇನ್ನು ಮುಖದಲ್ಲಿ ಅಧಿಕ ಕೂದಲು ಬಂದಿದ್ದರೆ
* ಮುಖದಲ್ಲಿ ಕೂದಲು ಬಂದಿದ್ದರೆ ಲೇಸರ್ ಟ್ರೀಟ್ಮೆಂಟ್ ಪಡೆಯಬಹುದು
* ಜೀವನಶೈಲಿ ಬದಲಾವಣೆ ಮಾಡಿದರೆ ಈ ಸಮಸ್ಯೆಯಿಂದ ಹೊರಬರಬಹುದು. ಪಿಜ್ಜಾ, ಬರ್ಗರ್ ಮುಂತಾದ ಜಂಕ್ ಫುಡ್ಸ್, ಪಾನಿಪುರಿ, ಮಸಾಲೆ ಮುಂತಾದ ಫಾಸ್ಟ್ ಫುಡ್ಸ್ ಮುಟ್ಟಲೇಬೇಡಿ. ನಿಮ್ಮ ಆಹಾರದಲ್ಲಿ ಹಣ್ಣು, ತರಕಾರಿಗಳು ಅಧಿಕವಿರಲಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications

