Latest Updates
-
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು?
ಸ್ಮೋಕಿಂಗ್ ಬಿಡಲೇ ಬೇಕೆನ್ನುವವರಿಗಾಗಿ ಮಾತ್ರ ಈ ಟಿಪ್ಸ್!
ಕೆಲ ಕೆಟ್ಟ ಅಭ್ಯಾಸಗಳೇ ಹಾಗೇ ಪ್ರಾರಂಭದಲ್ಲಿ ತುಂಬಾನೇ ಖುಷಿ ನೀಡುವುದು, ಆದರೆ ಅದು ಚಟವಾಗಿ ಬದಲಾದಾಗ ಅದರಿಂದ ಸಮಸ್ಯೆಯಾಗುತ್ತಿರುವುದು ಅರಿವುಗೆ ಬರುತ್ತೆ, ಆದರೆ ಆ ಚಟದಿಂದ ಹೊರಬರುವುದು ತುಂಬಾನೇ ಕಷ್ಟವಾಗುವುದು, ಅದರಲ್ಲೊಂದು ಧೂಮಪಾನ ಚಟ.
ಧೂಮಪಾನ ಅಭ್ಯಾಸವನ್ನು ಹೆಚ್ಚಿನವರು ಕೆಟ್ಟ ಸಂಗದಿಂದ ಕಲಿಯುತ್ತಾರೆ. ಧೂಮಪಾನಿಗಳಾದ ಫ್ರೆಂಡ್ಸ್ ಜೊತೆ ಸೇರಿದಾಗ ಅವರು ಸಿಗರೇಟ್ ಸೇದುವಂತೆ ಆಫರ್ ಮಾಡಬಹುದು.. ಪ್ರಾರಂಭದಲ್ಲಿ ಅವರೇ ನಿಮಗೆ ಆಫರ್ ಮಾಡುತ್ತಾರೆ, ಯಾವಾಗ ನಿಮಗೆ ಧೂಮಪಾನ ಚಟ ಬೆಳೆಯುತ್ತದೆಯೋ ಆಗ ಅವರು ಫ್ರೀಯಾಗಿ ಸಿಗರೇಟ್ ಕೊಡುವುದು ನಿಲ್ಲಿಸುತ್ತಾರೆ, ಆಗ ನಾವೇ ಕೊಂಡು ಸೇದಿಸಲಾರಂಭಿಸುತ್ತೇವೆ. ತಮಾಷೆಗೆ, ಖುಷಿಗಾಗಿ ಸೇದಿದ ಧೂಮಪಾನ ಚಟವಾದಾಗ ಚಿಕ್ಕ ಟೆನ್ಷನ್ ಆದರೂ ಸಿಗರೇಟ್ ಸಂಖ್ಯೆ ಹೆಚ್ಚುವುದು. ಕೊನೆಗೆ ಹಣ, ನೆಮ್ಮದಿ, ಆರೋಗ್ಯ ಎಲ್ಲವೂ ಹಾಳಾಗುವುದು.

ಧೂಮಪಾನಿಗಳಲ್ಲಿ ಹೆಚ್ಚಿನವರಿಗೆ ಧೂಮಪಾನ ಬಿಡಬೇಕೆಂದು ಅನಿಸುತ್ತಿರುತ್ತದೆ, ಆದರೆ ಬಿಡುವುದು ಕಷ್ಟವಾಗುವುದು, ಕೆಲವರು ಒಂದೆರಡು ದಿನ ಪ್ರಯತ್ನ ಮಾಡಿ ಇನ್ನು ಸಾಧ್ಯವಿಲ್ಲ ಎಂದು ಮತ್ತೆ ಆ ಚಟಕ್ಕೆ ಮರಳುವವರು ತುಂಬಾ ಜನ ಇದ್ದಾರೆ.
ಧೂಮಪಾನ ಬಿಡುವವರಿಗೆ ಹುರಿದುಂಬಿಸಲು, ಧೂಮಪಾನದಿಂದ ಉಂಟಾಗುವ ಅಪಾಯದ ಬಗ್ಗೆ ಅರಿವು ಮೂಡಿಸಲು ಮಾರ್ಚ್ 9ನ್ನು ಧೂಮಪಾನ ನಿಷೇಧ ದಿನವೆಂದು ಆಚರಿಸಲಾಗುವುದು.
ನೀವು ಈ ಕೆಟ್ಟ ಚಟದಿಂದ ಹೇಗಾದರೂ ಹೊರಬೇಕೆಂದು ಬಯಸುವುದಾದರೆ ಈ ಟಿಪ್ಸ್ ಖಂಡಿತ ನಿಮಗೆ ಸಹಾಯ ಮಾಡುತ್ತೆ ನೋಡಿ:

1. ಧೂಮಪಾನ ಬಿಡಲು ದಿನಾಂಕವನ್ನು ನಿಗದಿ ಮಾಡಿ
ಧೂಮಪಾನ ಬಿಡಬೇಕೆಂದರೆ ಯೋಚನೆ ಮಾಡಿದ ಕ್ಷಣದಿಂದ ಬಿಟ್ಟರೆ ಸಾಧ್ಯವಾಗದೇ? ಎಂಬ ಪ್ರಶ್ನೆ ಹಲವರಲ್ಲಿ ಇರುತ್ತದೆ, ಆದರೆ ಆ ರೀತಿ ಮಾಡಿದರೆ ನಿಮ್ಮ ಪ್ಲ್ಯಾನ್ ಫ್ಲಾಪ್ ಆಗುತ್ತೆ. ಆದ್ದರಿಂದ ಧೂಮಪಾನ ಬಿಡಲು ಒಂದು ದಿನಾಂಕ ನಿಗದಿ ಪಡಿಸಿ, ಅಲ್ಲಿಂದ ಮೊದಲು ಮಾನಸಿಕವಾಗಿ ಸಿದ್ಧರಾಗಿ, ನಿಮ್ಮ ಸಿಗರೇಟ್ ಸಂಖ್ಯೆ ಕಡಿಮೆ ಮಾಡುತ್ತಾ ಬನ್ನಿ.

2. ಸಿಗರೇಟ್ ಎಳೆಯಲು ನಿಮ್ಮನ್ನು ಪ್ರೇರೇಪಿಸುವ ಅಂಶ ಯಾವುದು?
ಕೆಲವೊಂದು ಅಂಶಗಳು ಸಿಗರೇಟ್ ಎಳೆಯಲು ಪ್ರೇರೇಪಿಸುತ್ತದೆ. ಮಾನಸಿಕ ಒತ್ತಡ ಅದರಲ್ಲೊಂದು. ನೀವು ಧೂಮಪಾನ ಬಿಡಲು ಮಾನಸಿಕ ಒತ್ತಡವನ್ನು ಹೊರಹಾಕಿ, ಮೊದಲು ಮನಸ್ಸನ್ನು ಖುಷಿಯಾಗಿಡಿ ಹಾಗೂ ಶಕ್ತವಾಗಿಡಿ.

3. ಧೂಮಪಾನ ಬಿಡಲು ಸಹಾಯಕ ವಸ್ತುಗಳನ್ನು ಬಳಸಿ
ನೀವು ಧೂಮಪಾನ ಬಿಡಲು ಬಯಸಿದಾಗ ನಿಮ್ಮ ವೈದ್ಯರ ಬಳಿ ಮಾತನಾಡಿ, ಅವರು ನಿಮಗೆ ಕೆಲವೊಂದು ಸಲಹೆ ನೀಡುತ್ತಾರೆ, ಕೆಲವೊಂದು ಔಷಧಿ ನೀಡುವುದು, ಚ್ಯುಯಿಂಗ್‌ಗಮ್ ತಿನ್ನಲು ಸಲಹೆ ನೀಡುವುದು, ಇತರ ವಿಧಾನಗಳನ್ನು ಸಲಹೆ ನೀಡುತ್ತಾರೆ. ಅವುಗಳು ನಿಮ್ಮ ಸಿಗರೇಟ್ ಬಯಕೆ ತಡೆಗಟ್ಟಲು ಸಹಕಾರಿಯಾಗಿದೆ.

4. ನೀವು ಸಿಗರೇಟ್ ಬಿಡುತ್ತಿದ್ದೀರಿ ಮನೆಯವರಿಗೆ ಅಥವಾ ಫ್ರೆಂಡ್ಸ್‌ಗೆ ಹೇಳಿ
ನೀವು ಸಿಗರೇಟ್ ಬಿಡಲು ಬಯಸಿದಾಗ ಅದನ್ನು ಸಂಗಾತಿ, ಮನೆಯವರ ಬಳಿ ಹೇಳಿ, ಆಗ ಅವರು ಸಿಗರೇಟ್ ಬಿಡಲು ನಿಮಗೆ ಸಹಾಯ ಮಾಡುತ್ತಾರೆ, ಅಂದರೆ ಅವರು ನಿಮಗೆ ಮಾನಸಿಕವಾಗಿ ಬೆಂಬಲ ನೀಡುತ್ತಾರೆ, ಇದರಿಂದ ಸಿಗರೇಟ್ ಬಿಡಬೇಕೆಂಬ ಹಠ ಹೆಚ್ಚುವುದು.

5. ಸೋತರೆ ಮತ್ತೊಮ್ಮೆ ಪ್ರಯತ್ನಿಸಿ
ಒಮ್ಮೆ ಧೂಮಪಾನ ಬಿಡಬೇಕೆಂದು ಪ್ರಯತ್ನಿಸಿ ಸೋತರೆ ಅಂದ್ರೆ ಮತ್ತೆ ನೀವು ಸಿಗರೇಟ್ ಎಳೆದರೆ ಮತ್ತೊಮ್ಮೆ ಧೂಮಪಾನ ಬಿಡಲು ಟ್ರೈ ಮಾಡಿ ಸಕ್ಸಸ್ ಆಗುತ್ತೀರಿ. ಧೂಮಪಾನ ಬಿಡಲು ಮೊದಲು ನೀವು ಮಾಡಬೇಕಾಗಿರುವುದು ಮನಸ್ಸನ್ನು ಗಟ್ಟಿ ಮಾಡುವುದು, ಅಂದರೆ ಸಿಗರೇಟ್ ಎಳೆಯಬೇಕೆಂಬ ಬಯಕೆಯನ್ನು ನಿಯಂತ್ರಿಸುವುದು, ಆಗ ಮಾತ್ರ ಧೂಮಪಾನ ಬಿಡಲು ಸಾಧ್ಯ. ಧೂಮಪಾನ ಬಿಡಬೇಕೆಂದು ಇದ್ದೀರಾ, ಮತ್ಯಾಕೆ ತಡ ಮನಸ್ಸು ನಿಯಂತ್ರಿಸಿ, ಕೆಟ್ಟ ಚಟಕ್ಕೆ ಹೇಳಿ ಗುಡ್, ಆಲ್ ದಿ ಬೆಸ್ಟ್....



Click it and Unblock the Notifications
