Latest Updates
-
ಮಾಸಿಕ ಶಿವರಾತ್ರಿ ಉಪವಾಸ: ಸುಸ್ತಾಗದಂತೆ ಇರಲು 6 ನಿಮಿಷದ ಸರಳ ವ್ಯಾಯಾಮ ಮತ್ತು ಟಿಪ್ಸ್ -
ಮನೆಯವರ ವಿರೋಧದ ನಡುವೆ ಮದುವೆ: ಅಲಹಾಬಾದ್ ಹೈಕೋರ್ಟ್ನಿಂದ ಜೋಡಿಗಳಿಗೆ ಸಿಕ್ಕಿತು ಭರ್ಜರಿ ರಕ್ಷಣೆ! -
ಮಳೆ ನಂತರ ದೆಹಲಿ-ಎನ್ಸಿಆರ್ನಲ್ಲಿ ಶುದ್ಧ ಗಾಳಿ: ನಿಮ್ಮ ಮನೆಯನ್ನು ಫ್ರೆಶ್ ಆಗಿಡಲು ಈ ಸರಳ ಟಿಪ್ಸ್ ಪಾಲಿಸಿ! -
ಯೋಗಿನಿ ಏಕಾದಶಿ: ಮಧುಮೇಹಿಗಳು ಉಪವಾಸ ಮಾಡುವಾಗ ಈ ಆರೋಗ್ಯ ಟಿಪ್ಸ್ ಮರೆಯದಿರಿ! -
ವಿಶ್ವ ಜನಸಂಖ್ಯಾ ದಿನ: ಉಚಿತ ಗರ್ಭನಿರೋಧಕಗಳು ಮತ್ತು ನಿಮ್ಮ ಗೌಪ್ಯತೆ ಬಗ್ಗೆ ತಿಳಿಯಲೇಬೇಕಾದ ಸತ್ಯಗಳು -
ಭಾರತ-ಇಂಗ್ಲೆಂಡ್ ಟಿ20 ಪಂದ್ಯದ ರೋಚಕತೆ ನಡುವೆ ಫಿಟ್ ಆಗಿರಲು ಈ 7 ನಿಮಿಷದ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ಡೇಟಿಂಗ್: ಬಜೆಟ್ ಸ್ನೇಹಿ ಐಡಿಯಾಗಳು ಮತ್ತು ಸುರಕ್ಷಿತವಾಗಿರಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಕೋಲ್ಕತ್ತಾದಲ್ಲಿ ಭಾರಿ ಮಳೆ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಮಿಸ್ ಮಾಡಬೇಡಿ! -
ಮಳೆಗಾಲದಲ್ಲಿ ಹೊಟ್ಟೆಯ ಸಮಸ್ಯೆ ಕಾಡ್ತಿದೆಯಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ -
ಧಮಾಲ್ 4 ರಿಲೀಸ್: ಅಜಯ್ ದೇವಗನ್ ಕಾಮಿಡಿ ಹಬ್ಬಕ್ಕೆ ಫ್ಯಾಮಿಲಿ ಜೊತೆ ರೆಡಿಯಾಗಿ!
ಅಸಾಧ್ಯ ಕುತ್ತಿಗೆ ನೋವೇ? ಈ ಕಾರಣಗಳಿರಬಹುದು ನೋಡಿ
ಲ್ಯಾಪ್ ಮುಂದೆ ಅತೀ ಹೆಚ್ಚು ಕೂರುವವರಿಗೆ ಆಗಾಗ ಕುತ್ತಿಗೆ ನೋವಿನ ಸಮಸ್ಯೆ ಕಾಡುವುದು ಸಹಜವೇ. ಅದರಲ್ಲೂ ಕೂರುವ ಚೇರ್ ಹಾಗೂ ಭಂಗಿ ಸರಿಯಾಗಿ ಇರದಿದ್ದರೆ ಈ ತೊಂದರೆ ತಪ್ಪಿದ್ದಲ್ಲ. ಕುತ್ತಿಗೆ ನೋವು ಸಹಿಸಲು ಅಸಾಧ್ಯ ಎನ್ನುವಷ್ಟರ ಮಟ್ಟಿಗೆ ತೀವ್ರವಾಗುವುದು. ಕೆಲವರಿಗೆ ಕೆಲವು ದಿನಗಳ ಚಿಕಿತ್ಸೆಯಲ್ಲಿ ಈ ಸಮಸ್ಯೆ ಪರಿಹಾರವಾದರೆ ಇನ್ನು ಕೆಲವರಿಗೆ ತಿಂಗಳು ಬೇಕಾಗಬಹುದು.
ಬಲಭಾಗದಲ್ಲಿ ಕುತ್ತಿಗೆ ನೋವು ಕುತ್ತಿಗೆ ಭಾಗದಲ್ಲಿ ಮಾತ್ರವಲ್ಲದೆ ಭುಜ, ಬೆನ್ನು ಈ ಭಾಗದಲ್ಲಿ ಕಾಣಿಸಿಕೊಳ್ಳುವುದರ ಜೊತೆಗೆ ತಲೆನೋವು ಕೂಡ ಉಂಟಾಗುವುದು. ಈ ಲೇಖನದಲ್ಲಿ ಭುಜ ನೋವಿಗೆ ಕಾರಣ ಮತ್ತು ಅದಕ್ಕೆ ಪರಿಹಾರವೇನು ಎಂಬುವುದರ ಬಗ್ಗೆ ಮಾಹಿತಿ ನೀಡಿದ್ದೇವೆ ನೋಡಿ:
ಕುತ್ತಿಗೆ ಭಾಗದಲ್ಲಿ ನೋವು ಕಾಣಿಸಿಕೊಳ್ಳಲು ಪ್ರಮುಖ ಕಾರಣಗಳು

ವಯಸ್ಸಾಗುತ್ತಿದ್ದಂತೆ ಕುತ್ತಿಗೆ ಭಾಗದ ಡಿಸ್ಕ್‌ಗೆ ಹಾನಿಯುಂಟಾಗುವುದು
ವಯಸ್ಸಾತ್ತಿದ್ದಂತೆ ಹಲವಾರು ಕಾರಣಗಳಿಂದಾಗಿ ಕುತ್ತಿಗೆ ಭಾಗಕ್ಕೆ ಹಾನಿಯಂಟಾಗಿ ನೋವು ಉಂಟಾಗುವುದು. ಅದಕ್ಕೆ ಪ್ರಮುಖ ಕಾರಣಗಳೆಂದರೆ
- ಉರಿಯೂತದ ಸಮಸ್ಯೆ
- ನರ ಹಿಡಿದುಕೊಳ್ಳುವುದು
- ನರಕ್ಕೆ ಪೆಟ್ಟಾಗುವುದು
- ಸಂಧಿವಾತ
- ಗರ್ಭಕಂಠದ ಡಿಸ್ಕ್ ಕ್ಷೀಣತೆ
- ಕೈಗಳು ಮರಗಟ್ಟುವುದು
- ಕೈಗಳಿಗೆ ಸೂಜಿ ಚುಚ್ಚಿದಂತೆ ನೋಬವಾಗುವುದು
- ಕೈಗಳಲ್ಲಿ ನೋವು ಹಾಗೂ ಬಲಹೀನತೆ
- ಸಂಧಿವಾತ
- ಕ್ಯಾನ್ಸರ್
- ಗಾಯ
- ಸೋಂಕು
- ಮೂಳೆ ಸಂಬಂಧಿತ ಸಮಸ್ಯೆ
- ನೋವು ನಿವಾರಕ ಮಾತ್ರೆ ತೆಗೆದುಕೊಳ್ಳುವುದು (ವೈದ್ಯರ ಸಲಹೆ ಪಡೆದಿರಬೇಕು)
- ಹೀಟಿಂಗ್ ಪ್ಯಾಡ್ ಅಥವಾ ಟವಲ್ ಅನ್ನು ಬಿಸಿ ನೀರಿನಲ್ಲಿ ಅದ್ದಿ ನೀರನ್ನು ಹಿಂಡಿ ಕುತ್ತಿಗೆ ಭಾಗದಲ್ಲಿ ಇಡುವುದು
- ಕುತ್ತಿಗೆ ಭಾಗಕ್ಕೆ ಮಸಾಜ್ ಮಾಡುವುದು
- ಮಾನಸಿಕ ಒತ್ತಡ ಕಡಿಮೆ ಮಾಡುವುದು
- ಗಾಯವಾದ ಜಾಗಕ್ಕೆ ಐಸ್ ಇಡುವುದು
- ಮಲಗುವ ಭಂಗಿ ಸರಿಯಾಗಿ ಇರುವಂತೆ ನೋಡಿಕೊಳ್ಳುವುದು
- ಮಲಗುವಾಗ ಕುತ್ತಿಗೆಗೆ ಸಪೋರ್ಟ್ ಆಗಿ ತಲೆ ದಿಂಬು ಇಟ್ಟು ಮಲಗುವುದು
- ಕುತ್ತಿಗೆಗೆ ಸಂಬಂಧಿಸಿದ ವ್ಯಾಯಾಮ ಮಾಡುವುದು
- ಆಕ್ಯೂಪ್ರೆಷರ್ ಕೂಡ ಮಾಡಿಸಬಹುದು

ನಿದ್ದೆಯ ಭಂಗಿ ಸರಿಯಾಗಿ ಇರದಿದ್ದರೆ
ಮಲಗುವ ಭಂಗಿ, ತಲೆ ದಿಂಬು ಇವು ಸರಿಯಾಗಿ ಇರದಿದ್ದರೆ ಕೂಡ ಕುತ್ತಿಗೆ ಭಾಗದಲ್ಲಿ ನೋವು ಕಂಡು ಬರುವುದು. ಮಲಗಿವಾಗ ತಲೆಗೆ ಸರಿಯಾದ ಸಪೋರ್ಟ್ ಬೇಕು, ಅದಕ್ಕೆ ತಲೆ ದಿಂಬು ಸರಿಯಾಗಿ ಇರಬೇಕು, ಇಲ್ಲದಿದ್ದರೆ ಏಳುವಾಗ ನೋವು ಕಾಣಿಸಿಕೊಳ್ಳುವುದು.
ಮಲಗಿದ ಭಂಗಿಯಿಂದಾಗಿ ಕುತ್ತಿಗೆ ನೋವು ಕಾಣಿಸಿಕೊಂಡಿದ್ದರೆ ಬೆಡ್ ಹಾಗೂ ತಲೆ ದಿಂಬು ಕಂಫರ್ಟ್ ಇದ್ದರೆ ಕುತ್ತಿಗೆ ನೋವು ಉಂಟಾಗುವುದಿಲ್ಲ.

ಯಾವುದೇ ನಿಖರ ಕಾರಣಗಳಿಲ್ಲದೆ ಕುತ್ತಿಗೆ ನೋವು ಉಂಟಾಗುವುದು
ಕೆಲವೊಮ್ಮೆ ಕುತ್ತಿಗೆ ನೋವಿಗೆ ಕಾರಣವೇನೆಂದು ತಿಳಿಯುವುದಿಲ್ಲ. ಈ ರೀತಿಯ ನೋವು ನೀವು ಲ್ಯಾಪ್‌ಟಾಪ್ ಅಥವಾ ಕಂಪ್ಯೂಟರ್ ಮುಂದೆ ಕೆಲಸ ಮಾಡುವಾಗ ಕೂರುವ ಭಂಗಿ ಸರಿಯಾಗಿ ಇರದಿದ್ದರೆ ಉಂಟಾಗುವುದು. ಇನ್ನು ಕೆಲವೊಮ್ಮೆ ತುಂಬಾ ಹೊತ್ತು ಬಗ್ಗಿ ಕೆಲಸ ಮಾಡಿದರೆ ಕುತ್ತಿಗೆ ಭಾಗಕ್ಕೆ ಒತ್ತಡ ಬಿದ್ದು ಕೂಡ ಕುತ್ತಿಗೆ ನೋವು ಉಂಟಾಗುವುದು.

ಮಾನಸಿಕ ಒತ್ತಡ ಮತ್ತು ಆತಂಕ
ಮಾನಸಿಕ ಒತ್ತಡ ಹಾಗೂ ಆತಂಕದಿಂದಾಗಿ ಸ್ನಾಯುಗಳು ಬಿಗಿಯಾಗುತ್ತವೆ. ಯಾರು ಅತೀ ಹೆಚ್ಚು ಮಾನಸಿಕ ಒತ್ತಡ ಅನುಭವಿಸುತ್ತಾರೋ ಅವರಿಗೆ ಕುತ್ತಿಗೆ ನೋವಿನ ಸಮಸ್ಯೆ ಇದ್ದಿದ್ದೇ. ಇಂಥವರು ಎಷ್ಟೇ ಔಷಧಿ ಪಡೆದುಕೊಂಡರೂ ಮಾನಸಿಕ ಒತ್ತಡ ಕಡಿಮೆಯಾಗದೇ ನೋವು ಕಡಿಮೆಯಾಗುವುದಿಲ್ಲ.

ಕುತ್ತಿಗೆ ಉಳುಕುವುದು
ಇದನ್ನು ವೈದ್ಯಕೀಯ ಭಾಷೆಯಲ್ಲಿ Torticollis ಎಂದು ಕರೆಯಲಾಗುವುದು. ಈ ರೀತಿ ಉಂಟಾದಾಗ ತುಂಬಾ ನೋವು ಉಂಟಾಗುವುದು. ಕುತ್ತಿಗೆ ಉಳುಕುವುದು ಸಾಮಾನ್ಯವಾಗಿ ರಾತ್ರಿ ಉಂಟಾಗುತ್ತದೆ. ಮಲಗುವಾಗ ಯಾವುದೇ ತೊಂದರೆ ಇರುವುದಿಲ್ಲ, ಆದರೆ ಮಲಗಿ ಎದ್ದೇಳುವಾಗ ಅಸಾಧ್ಯ ನೋವು ನಿಮ್ಮನ್ನು ಕಾಡುವುದು. ಈ ರೀತಿ ಉಂಟಾದಾಗ ಮೆಲ್ಲನೆ ಕುತ್ತಿಗೆ ಭಾಗಕ್ಕೆ ಮಸಾಜ್ ಮಾಡಿದರೆ ಬೇಗನೆ ಸರಿ ಹೋಗುವುದು, ಏನೂ ಮಾಡದೇ ಇದ್ದರೂ ಕೆಲವು ದಿನಗಳಲ್ಲಿ ಸರಿ ಹೋಗುವುದು.

ಕೈಗೆ ಸರ್ಜರಿ ಆಗಿದ್ದರೆ
ಕೈಗೆ ಸರ್ಜರಿಯಾಗಿದ್ದರೆ ಇದನ್ನು ವೈದ್ಯಕೀಯ ಭಾಷೆಯಲ್ಲಿ ಬ್ರಾಚಿಯಲ್ ಪ್ಲೆಕ್ಸಸ್ ಇಂಜ್ಯೂರಿ ಎಂದು ಕರೆಯುತ್ತಾರೆ. ಈ ರೀತಿ ಉಂಟಾದಾಗ ಕುತ್ತಿಗೆ ನೋವು ಉಂಟಾಗುವುದು. ಈ ರೀತಿಯ ಗಾಯ ಆಟಗಾರರಿಗೆ ಅಥವಾ ಅಪಘಾತ ಸಂಭವಿಸಿದಾಗ ಉಂಟಾಗುವುದು.

ಗರ್ಭಕಂಠದ ರಾಡಿಕ್ಯುಲೋಪತಿ
ಈ ಸಮಸ್ಯೆ ಮೊದಲಿಗೆ ಬೆನ್ನು ಮೂಳೆಯಲ್ಲಿ ಕಾಣಿಸಿಕೊಂಡು ನಂತರ ಕುತ್ತಿಗೆ ಭಾಗಕ್ಕೆ ಬರುವುದು. ಈ ರೀತಿ ಉಂಟಾದಾಗ ಇದರ ಪ್ರಮುಖ ಲಕ್ಷಣಗಳೆಂದರೆ
ಈ ರೀತಿಯ ಲಕ್ಷಣಗಳು ಕಂಡು ಬಂದಾಗ ಕೂಡ ಬೆನ್ನು ನೀವು ಕಾಡುವುದು.

ಕುತ್ತಿಗೆಯ ಬಲಭಾಗದಲ್ಲಿ ನೋವಿಗೆ ಇತರ ಕಾರಣಗಳು

ಕುತ್ತಿಗೆ ನೋವು ಕಾಣಿಸಿದಾಗ ಈ ಟಿಪ್ಸ್ ಪಾಲಿಸಬಹುದು
ಯಾವಾಗ ವೈದ್ಯರನ್ನು ನೋಡಬೇಕು
ನೋವು ನಿವಾರಕ ಮಾತ್ರೆಗಳನ್ನು ತೆಗೆದುಕೊಂಡರೂ ಸ್ವಲ್ಪವೂ ಕಡಿಮೆಯೇ ಆಗದಿದ್ದರೆ ಸಮಸ್ಯೆ ಗಂಭೀರವಾಗಿದ್ದು ವೈದ್ಯರು ನಿಮಗೆ ಯಾವ ರೀತಿಯ ಚಿಕಿತ್ಸೆ ಸೂಕ್ತ ಎಂಬ ಸಲಹೆ ನೀಡುತ್ತಾರೆ.



Click it and Unblock the Notifications