Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಈ ಎಣ್ಣೆಯನ್ನು ಹಚ್ಚಿದರೆ ಶೀಘ್ರದಲ್ಲೇ ನೋವು ನಿವಾರಣೆಯಾಗುತ್ತದೆ
ಹಿಂದೆಲ್ಲಾ ಬಹುತೇಕ ಆರೋಗ್ಯ ಸಮಸ್ಯೆಗಳಿಗೆ ಮನೆಯಲ್ಲೇ ಮನೆಮದ್ದನ್ನು ಮಾಡಿ ನಿವಾರಿಸಿಕೊಳ್ಳುತ್ತಿದ್ದರು, ಈಗ ಒಂದು ಸಣ್ಣ ಶೀತ-ಕೆಮ್ಮಿಗೂ ವೈದ್ಯರ ಬಳಿ ಹೋಗುವ ಅಭ್ಯಾಸ ಇದೆ. ಅದರಲ್ಲೂ ಇತ್ತೀಚಿನ ನಮ್ಮ ಜೀವನಶೈಲಿಯಿಂದ ಇಲ್ಲದ ಸಲ್ಲದ ಆರೋಗ್ಯ ಸಮಸ್ಯೆಗಳು ಕಾಡುತ್ತಿದೆ. ಅದರಲ್ಲಿ ಬಹುತೇಕರನ್ನು ಕಾಡುವ ಸಮಸ್ಯೆ ದೇಹದ ವಿವಿಧ ಭಾಗಗಳಲ್ಲಿ ನೋವು.

ನೋವು ಎಂದರೆ ಯಾವುದೋ ಭಾಗದಲ್ಲಿ ನಮಗೆ ತೊಂದರೆಯಾಗಿದೆ ಎಂದು ಮೆದುಳಿಗೆ ನಮಗೆ ನೀಡುವ ಸೂಚನೆಯಾಗಿದೆ. ಆರಂಭದಲ್ಲಿ ಕಾಡುವ ಸಣ್ಣಪುಟ್ಟ ನೋವಿಗೂ ವೈದ್ಯರ ಬಳಿ ಹೋಗಬೇಕೆ ಇದು ನೋವಿನ ಪರಿಮಾಣವನ್ನು ಅನುಸರಿಸಿ ನಿರ್ಧರಿಸಬೇಕು. ಆದರೆ ತುಂಬಾ ದಣಿದು, ಅತಿಯಾಗಿ ಕೆಲಸ ಮಾಡಿ ಉಂಟಾಗುವ ಮೈ ಕೈ ನೋವಿಗೆ ಹಿಂದಿನಿಂದಲೂ ಅನುಸರಿಸಿಕೊಂಡು ಬಂಧ ಕೆಲವು ಮನೆಮದ್ದುಗಳಿವೆ.
ಈ ಕೆಳಗೆ ಹೇಳಿರುವ ತೈಲಗಳನ್ನು ನಿಯಮಿತವಾಗಿ ಬಳಸಿದರೆ ನಿಮ್ಮ ಎಲ್ಲಾ ನೋವು ಶಮನವಾಗುತ್ತದೆ ಎನ್ನುತ್ತದೆ ಆಯುರ್ವೇದ:

1. ನೀಲಗಿರಿ ಎಣ್ಣೆ
ಹಿಂದಿನಿಂದಲೂ ಹಲವಾರು ಬಗೆಯ ನೋವುಗಳಿಗೆ ಹಚ್ಚಲು ನೀಲಗಿರಿ ಎಣ್ಣೆ ಬಳಸಲಾಗುತ್ತದೆ. ಅಲ್ಲದೇ ಬಾವು ಮತ್ತು ಉರಿಯೂತಕ್ಕೂ ನೀಲಗಿರಿ ಎಣ್ಣೆ ಉತ್ತಮವಾಗಿದೆ. ನೀಲಗಿರಿ ಎಣ್ಣೆಯ ಹಬೆಯನ್ನು ಎಳೆದುಕೊಂಡಾಗ ಕೆಲವು ಬಗೆಯ ನೋವುಗಳು ಶೀಘ್ರವಾಗಿ ಕಡಿಮೆಯಾಗುತ್ತದೆ. ನೀಲಗಿರಿ ಎಣ್ಣೆ ಮಕ್ಕಳಿಗೆ ಮತ್ತು ಸಾಕುಪ್ರಾಣಿಗಳಿಗೆ ಸೂಕ್ತವಲ್ಲ. ಶ್ವಾಸಕೋಶದ ತೊಂದರೆ ಇರುವವರಿಗೂ ನೀಲಗಿರಿ ಎಣ್ಣೆ ಸೂಕ್ತವಲ್ಲ.

2. ಪುದಿನಾ ತೈಲ
ಪುದಿನಾದಲ್ಲಿ ಉರಿಯೂತ ನಿವಾರಕ, ಅತಿಸೂಕ್ಷ್ಮಜೀವಿ ನಿವಾರಕ, ನೋವು ನಿವಾರಕ ಗುಣಗಳಿವೆ. ಇದರಲ್ಲಿ ಮುಖ್ಯವಾಗಿರುವ ಪೋಷಕಾಂಶಗಳೆಂದರೆ ಕಾರ್ವಾಕ್ರಾಲ್, ಮೆಂಥಾಲ್ ಮತ್ತು ಲಿಮೋಲೀನ್. ಈ ಎಣ್ಣೆಯು ಪ್ರಬಲವಾಗಿದ್ದು ಚರ್ಮಕ್ಕೆ ಹಚ್ಚಿಕೊಳ್ಳುವ ಮುನ್ನ ಸುರಕ್ಷಿತ ತೈಲದೊಂದಿಗೆ ಮಿಶ್ರಣ ಮಾಡಿ ಹಚ್ಚಿಕೊಳ್ಳಬೇಕು. ವಿಶೇಷವಾಗಿ ನೋವಿನೊಂದಿಗೆ ತುರಿಕೆ ಇದ್ದರೆ ಈ ತೈಲ ಅತ್ಯುತ್ತಮವಾಗಿದೆ.

3. ಲವಂಗದ ಎಣ್ಣೆ
ಲವಂಗದ ಎಣ್ಣೆ ಹಲ್ಲು ನೋವಿಗೆ ಶಮನಕಾರಕವಾಗಿ ಹೆಚ್ಚು ಬಳಸಲ್ಪಡುತ್ತದೆ. ಹಲ್ಲುಗಳಲ್ಲಿ ಕುಳಿ ಇದ್ದಾಗ ಈ ಕುಳಿಯಲ್ಲಿ ಲವಂಗದ ಚಿಕ್ಕ ಚೂರನ್ನು ಭರ್ತಿ ಮಾಡುವ ಮೂಲಕ ನೋವು ಕಡಿಮೆಯಾಗಿರುವುದು. ಲವಂಗದಲ್ಲಿರುವ ಆಂಟಿ ಆಕ್ಸಿಡೆಂಟ್, ಉರಿಯೂತ ನಿವಾರಕ, ಶಿಲೀಂಧ್ರ ನಿವಾರಕ ಮತ್ತು ವೈರಸ್ ನಿವಾರಕ ಗುಣಗಳು ಆರೋಗ್ಯವನ್ನು ವೃದ್ಧಿಸುತ್ತವೆ.

4. ಲ್ಯಾವೆಂಡರ್ ತೈಲ
ಬಾಹ್ಯ ನೋವನ್ನು ತಕ್ಷಣವೇ ನಿವಾರಿಸಲು ಈ ತೈಲ ಉಪಯುಕ್ತವಾಗಿದೆ. ನೋವು ನಿವಾರಣೆಯ ಹೊರತಾಗಿ ಸುಖನಿದ್ದೆ ಪಡೆಯಲು ಹಾಗೂ ಉದ್ವೇಗವನ್ನು ನಿವಾರಿಸಲೂ ಈ ತೈಲವನ್ನು ಬಳಸಲಾಗುತ್ತಿದೆ. ಈ ಎಣ್ಣೆಯಲ್ಲಿ ನೋವು ನಿವಾರಕ, ಉರಿಯೂತ ನಿವಾರಕ ಮತ್ತು ಪ್ರಬಲ ಆಂಟಿ ಆಕ್ಸಿಡೆಂಟ್ ಗುಣಗಳಿದ್ದು ಪ್ರಾಣಿಗಳ ಮೇಲಿನ ಪ್ರಯೋಗದಲ್ಲಿ ಪರಿಣಾಮಕಾರಿಯಾಗಿದೆ.

5. ರೋಸ್ಮರಿ ತೈಲ
ಈ ಎಣ್ಣೆಯನ್ನೂ ನೋವು ಶಮನಕವಾಗಿ ಬಳಸಬಹುದು. ರೋಸ್ಮರಿ ಗಿಡದಿಂದ ಪಡೆದ ಪೋಷಕಾಂಶಗಳಿಗೆ ತಲೆನೋವು, ಸ್ನಾಯುಗಳ ನೋವು ಮತ್ತು ಮೂಳೆಗಳ ನೋವನ್ನು ಹಾಗೂ ಸ್ನಾಯುಗಳ ಜೆಡ್ಡು ಹಿಡಿಯುವುದನ್ನು ನಿವಾರಿಸುವ ಕ್ಷಮತೆ ಇದೆ. ಈ ಎಣ್ಣೆ ಉರಿಯೂತ ನಿವಾರಿಸುವ, ಪೆಡಸಾದ ಸ್ನಾಯುಗಳನ್ನು ಸಡಿಲಗೊಳಿಸುವ ಮತ್ತು ಸ್ಮರಣಶಕ್ತಿಯನ್ನು ಹೆಚ್ಚಿಸುವ ಗುಣವನ್ನೂ ಪಡೆದಿವೆ.

6. ಹಸಿಶುಂಠಿ ತೈಲ
ನೂರಾರು ವರ್ಷಗಳಿಂದ ಭಾರತದಲ್ಲಿ ನೋವು ನಿವಾರಕವಾಗಿ ಶುಂಠಿ ಬಳಸಲ್ಪಡುತ್ತಿದೆ. ವ್ಯಾಯಾಮದ ಅಥವಾ ಓಟದ ಬಳಿಕ ಸ್ನಾಯು ನೋವಿನಿಂದ ಬಳಲುತ್ತಿದ್ದ ವ್ಯಕ್ತಿಗಳಿಗೆ ಶುಂಠಿ ಅತ್ಯುತ್ತಮ ನೋವು ನಿವಾರಕವಾಗಿದೆ. ಶುಂಠಿಯನ್ನು ಮಸಾಲೆಯಾಗಿ ಆಹಾರಪದಾರ್ಥಗಳಲ್ಲಿ ಬಳಸುವ ಜೊತೆಗೇ ನಿತ್ಯದ ಸೇವನೆಯ ಟೀ, ಸ್ಮೂಥಿ ಮೊದಲಾದವುಗಳಲ್ಲಿ ಬೆರೆಸಿ ಸೇವಿಸುವ ಮೂಲಕವೂ ಇದರ ಪ್ರಯೋಜನವನ್ನು ಪಡೆಯಬಹುದು.ಹುದು.

7. ಅರಿಶಿನದ ತೈಲ
ಅರಿಶಿನ ಮತ್ತು ಲಿಂಬೆ ಇವೆರಡು ಎಲ್ಲದಕ್ಕೂ ಔಷಧಿ. ಇದಕ್ಕೆ ಮುಖ್ಯ ಕಾರಣ ಅರಿಶಿನದಲ್ಲಿರುವ ಕುರ್ಕುಮಿನ್ ಪೋಷಕಾಂಶವಾಗಿದ್ದು ಅತ್ಯುತ್ತಮ ನೋವು ನಿವಾರಕವೂ ಆಗಿದೆ. ಅಲ್ಲದೇ ಇದು ಅತ್ಯುತ್ತಮ ಉರಿಯೂತ ನಿವಾರಕವೂ ಆಗಿದ್ದು ಹಲವಾರು ಬಗೆಯ ನೋವುಗಳನ್ನು ಶಮನಗೊಳಿಸುತ್ತದೆ. ಅರಿಶಿನವನ್ನು ಇದರ ನೈಸರ್ಗಿಕ ರೂಪದಲ್ಲಿ ಸೇವಿಸಿದರೆ ಗರಿಷ್ಟ ಪ್ರಯೋಜನವಿದೆ. ಉಳಿದಂತೆ ಇದರ ಪುಡಿಯನ್ನು ನಿತ್ಯದ ಆಹಾರಗಳಲ್ಲಿ ಸೇರಿಸಿ ಸೇವಿಸಬಹುದು ಹಾಗೂ ರಾತ್ರಿ ಮಲಗುವ ಮುನ್ನ ಬಿಸಿ ಹಾಲಿಗೆ ಬೆರೆಸಿಯೂ ಸೇವಿಸಬ



Click it and Unblock the Notifications