Latest Updates
-
ದಸರಾ ಟ್ರಾಫಿಕ್ ಜಾಮ್: ತಡವಾದರೂ ಸಂಬಂಧ ಹಾಳಾಗದಂತೆ ನಿಭಾಯಿಸಲು ಇಲ್ಲಿದೆ 90 ಸೆಕೆಂಡ್ಗಳ ಸ್ಕ್ರಿಪ್ಟ್ -
ವಿಜಯದಶಮಿ ಸಂಭ್ರಮ: ಕೊನೆ ನಿಮಿಷದಲ್ಲಿ ಮನೆಯನ್ನು ಆಕರ್ಷಕವಾಗಿಸಲು 5 ಸಿಂಪಲ್ ಎಕೋ-ಫ್ರೆಂಡ್ಲಿ ಐಡಿಯಾಗಳು -
ಮೂಳೆಗಳ ಆರೋಗ್ಯಕ್ಕೆ ಬಜೆಟ್ ಸ್ನೇಹಿ ಆಹಾರ: ಆಸ್ಟಿಯೋ ಪೋರೋಸಿಸ್ ತಡೆಯಲು ಇಂದೇ ಈ ಬದಲಾವಣೆ ಮಾಡಿ! -
ಮೈಸೂರು ದಸರಾ 2026: ಪಂಜಿನ ಕವಾಯತು ಮತ್ತು ಡ್ರೋನ್ ಶೋ ವೀಕ್ಷಿಸಲು ಇಲ್ಲಿದೆ ಕಂಪ್ಲೀಟ್ ಗೈಡ್! -
ದೇವಸ್ಥಾನದ ಉದ್ದದ ಕ್ಯೂನಲ್ಲಿ ನಿಂತು ಸುಸ್ತಾಗಿದ್ದೀರಾ? ನೋವು ಮರೆಸುವ 7 ನಿಮಿಷದ ಮ್ಯಾಜಿಕ್ ಟಿಪ್ಸ್ ಇಲ್ಲಿದೆ! -
ವಿಜಯದಶಮಿ ಹಬ್ಬದ ಗಡಿಬಿಡಿ ಬೇಡ: ನೆಮ್ಮದಿಯಿಂದ ಹಬ್ಬ ಆಚರಿಸಲು ದಂಪತಿಗಳಿಗೆ ಇಲ್ಲಿದೆ ಸೀಕ್ರೆಟ್ ಪ್ಲಾನ್ -
ಬೆಂಗಳೂರು ಮಳೆ ಅಲರ್ಟ್: ನಿಮ್ಮ ಅಪಾರ್ಟ್ಮೆಂಟ್ ಮತ್ತು ಬೇಸ್ಮೆಂಟ್ ಸುರಕ್ಷತೆಗೆ ಇಂದೇ ಈ ಕ್ರಮಗಳನ್ನು ಕೈಗೊಳ್ಳಿ! -
ವಿಜಯದಶಮಿ ಹಬ್ಬದೂಟ: ಬ್ಲಡ್ ಶುಗರ್ ಏರಿಕೆಯಾಗದಂತೆ ಹೋಳಿಗೆ-ಪಾಯಸ ಸವಿಯುವುದು ಹೇಗೆ? -
ದಸರಾ ಸಂಭ್ರಮ: ರಾವಣ ದಹನ, ಟ್ರಾಫಿಕ್ ನಿರ್ಬಂಧ ಮತ್ತು ಮಳೆ ಎಚ್ಚರಿಕೆ - ಹೊರಡುವ ಮುನ್ನ ಇದನ್ನು ಓದಿ! -
ದಸರಾ ಟ್ರಾವೆಲ್ ರಶ್: ಕುಳಿತ ಸೀಟಿನಲ್ಲೇ ಮಾಡಿ ಈ 9 ನಿಮಿಷಗಳ ಮ್ಯಾಜಿಕ್ ಸ್ಟ್ರೆಚಿಂಗ್!
Marburg Virus: ಅಪಾಯಕಾರಿ ಮಾರ್ಬರ್ಗ್ ವೈರಸ್ ಪತ್ತೆ: ಲಕ್ಷಣಗಳೇನು, ಹೇಗೆ ಹರಡುವುದು, ಚಿಕಿತ್ಸೆಯೇನು?
ಕೊರೊನಾ ಬಂದ ಮೇಲೆ ಯಾವುದಾದರು ದೇಶದಲ್ಲಿ ಏನಾದರೂ ಹೊಸ ವೈರಸ್ ಪತ್ತೆಯಾದರೆ ವಿಶ್ವಕ್ಕೆ ಸಹಜವಾಗಿಯೇ ಆತಂಕ ಹೆಚ್ಚುವುದು. ಏಕೆಂದರೆ ಇತಿಹಾಸದಲ್ಲಿಯೇ ಕಂಡಿರದ ಕೊರೊನಾ ಮನುಕುಲಕ್ಕೆ ತಂದಿಟ್ಟ ಸಂಕಷ್ಟ ಎಂಥದ್ದು ಎಂಬುವುದನ್ನು ಜಗತ್ತು ಕಂಡಿದೆ. ಇದೀಗ ವಿಶ್ವ ಆರೋಗ್ಯ ಸಂಸ್ಥೆ ಪಶ್ಚಿಮ ಆಫ್ರಿಕದಲ್ಲಿ ಮತ್ತೊಂದು ಅಪಾಯಕಾರಿ ವೈರಸ್ ಪತ್ತೆಯಾಗಿರುವುದಾಗಿ ಹೇಳಿದೆ. ಅದನ್ನು ಮಾರ್ಬರ್ಗ್ ವೈರಸ್ ಎಂದು ಕರೆಯಲಾಗಿದೆ. ಇದು ಬಾವಲಿಗಳಿಂದ ಹರಡುವಂಥ ಕಾಯಿಲೆಯಾಗಿದ್ದು ಈ ಕಾಯಿಲೆ ಬಂದ್ರೆ ಸಾವನ್ನಪ್ಪುವ ಸಾಧ್ಯತೆ ಶೇ. 88ರಷ್ಟು ಎಂದು ಹೇಳಿದೆ. ಆಗಸ್ಟ್ 2ಕ್ಕೆ ಸಾವನ್ನಪ್ಪಿರುವ ವ್ಯಕ್ತಿಯ ಸ್ಯಾಂಪಲ್ ಪರೀಕ್ಷಿಸಿದಾಗ ಆ ವ್ಯಕ್ತಿ ಮಾರ್ಬರ್ಗ್ ವೈರಸ್ನಿಂದಾಗಿ ಸತ್ತಿದ್ದು ಎಂದು ಸಾಬೀತಾಗಿದೆ.
ವಿಶ್ವ ಆರೋಗ್ಯ ಸಂಸ್ಥೆಯ ಆಫ್ರಿಕದ ಪ್ರಾದೇಶಿಕ ನಿರ್ದೇಶಕರಾಗಿರುವ ಡಾ. ಮತ್ಶಿದಿಸೋ ಮೋಯಿಟಿ ಪ್ರಕಾರ ಮಾರ್ಬರ್ಗ್ ವೈರಸ್ ವೇಗವಾಗಿ ಹರಡಬಹುದು, ಇದನ್ನು ಸರಿಯಾದ ಟ್ರ್ಯಾಕ್ನಿಂದ ನಿಲ್ಲಿಸಬೇಕಾಗಿದೆ ಎಂದಿದ್ದಾರೆ.
ವಿಶ್ವ ಆರೋಗ್ಯ ಸಂಸ್ಥೆ ಗಿನಿಯದಲ್ಲಿ ಎಬೋಲೋದ ಎರಡನೇ ಅಲೆ ಮುಕ್ತಾಯವಾಗಿದೆ ಎಂದು ಹೇಳಿದ ಬೆನ್ನಲ್ಲೇ ಈ ವೈರಸ್ ಪತ್ತೆಯಾಗಿದೆ. ಮಾರ್ಬರ್ಗ್ ವೈರಸ್ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ:

ಮಾರ್ಬರ್ಗ್ ವೈರಸ್ ಎಂದರೇನು?
ಎಬೋಲಾ ವೈರಸ್ ಕುಟುಂಬದಿಂದಲೇ ಬರುವ ವೈರಸ್ ಇದಾಗಿದೆ. ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ ಮಾರ್ಬರ್ಗ್ ಹಾಗೂ ಫ್ರಾಂಕ್ಫರ್ಟ್ ಜರ್ಮನಿ, ಸೆರ್ಬಿಯಾ, ಬೆಲ್ಗ್ರೇಡ್ನಲ್ಲಿ 1967ರಲ್ಲಿ ಒಂದೇ ಸಮಯದಲ್ಲಿ ಕಂಡು ಬಂದಿತ್ತು, ಆಗ ಈ ವೈರಸ್ ಮೊತ್ತ ಮೊದಲಿಗೆ ಪತ್ತೆಯಾಗಿತ್ತು.
ಉಗಾಂಡದಿಂದ ತಂದ ಆಫ್ರಿಕನ್ ಗ್ರೀನ್ ಮಂಕಿಗಳ ಕುರಿತು ಲ್ಯಾಬ್ನಲ್ಲಿ ಪರೀಕ್ಷೆ ಮಾಡುತ್ತಿರುವಾಗ ಈ ವೈರಸ್ ಸ್ಪೋಟವಾಯ್ತು. ಬಾವಲಿಗಳು ಹೆಚ್ಚಾಗಿರುವ ಗಣಿಗಳು ಹಾಗೂ ಗುಹೆಗಳಲ್ಲಿ ಕೆಲಸ ಮಾಡಿದಾಗ ಅಥವಾ ಹೋದಾಗ ಈ ವೈರಸ್ ಮನುಷ್ಯರಿಗೆ ಹರಡುವುದು ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

ಬಾವಲಿಯಿಂದ ಮುನುಷ್ಯರಿಗೆ ಹಾಗೂ ಮನುಷ್ಯರಿಂದ -ಮನುಷ್ಯರಿಗೆ ಹರಡುವುದು
ಈ ವೈರಸ್ ಒಮ್ಮೆ ಬಾವಲಿಯಿಂದ ಮನುಷ್ಯನಿಗೆ ಹರಡಿದರೆ ಆ ವ್ಯಕ್ತಿ ಮುಖಾಂತರ ಇತರ ವ್ಯಕ್ತಿಗೆ ಹರಡುತ್ತಾ ಸಾಗುವುದು. ಸೋಂಕಿತ ವ್ಯಕ್ತಿಯ ರಕ್ತ, ಮೂತ್ರ ಅಥವಾ ಅಂಗಾಂಗಗಳ ದ್ರವ ತಾಗಿದರೆ ಅಥವಾ ಅವುಗಳು ಬಿದ್ದಿರುವ ಸ್ಥಳಕ್ಕೆ ಮತ್ತೊಬ್ಬ ವ್ಯಕ್ತಿ ಹೋದರೆ ಹರಡುವುದು. ಈ ವೈರಸ್ ಸೋಂಕಿದ 2-21 ದಿನಗಳಲ್ಲಿ ರೋಗ ಲಕ್ಷಣಗಳು ಕಂಡು ಬರುವುದು. 2008ರಲ್ಲಿ ಬಾವಲಿಗಳು ಅತ್ಯಧಿಕವಿರುವ ಉಗಾಂಡದ ಕಾಲೋನಿಗೆ ಭೇಟಿ ನೀಡಿದ್ದ ಇಬ್ಬರು ಪ್ರವಾಸಿಗರಿಗೆ ವೈರಸ್ ತಗುಲಿತ್ತು.

ಮಾರ್ಬರ್ಗ್ ಸೋಂಕು ತಗುಲಿದ ವ್ಯಕ್ತಿಗಳಿಗೆ ಈ ಲಕ್ಷಣಗಳು ಕಂಡು
ಬರುವುದು
ಅತ್ಯಧಿಕ ಜ್ವರ
ತಲೆ ನೋವು
ವಿಪರೀತ ಮೈಕೈ ನೋವು
ಬೇಧಿ
ಕಿಬ್ಬೊಟ್ಟೆ ನೋವು
ಸ್ನಾಯು ಸೆಳೆತ
ತಲೆ ಸುತ್ತು
ವಾಂತಿ
ನೋವು
ವಾಂತಿ ಹಾಗೂ ತಲೆ ಸುತ್ತು ಸೋಂಕು ತಗುಲಿದ 3 ದಿನಗಳಲ್ಲಿ ಕಂಡು ಬರುವುದು. ಇದು ವಾರದವರೆಗೆ ಇರುತ್ತದೆ, ಈ ಹಂತದಲ್ಲಿ ವ್ಯಕ್ತಿ ದೆವ್ವದ ರೀತಿ ಕಂಡು ಬರುತ್ತಾನೆ ಅಂದ್ರೆ ಮುಖದಲ್ಲಿ ಯಾವುದೇ ಭಾವನೆ ವ್ಯಕ್ತಪಡಿಸಲು ಸಾಧ್ಯವಾಗದ ರೀತಿಯಲ್ಲಿರುತ್ತಾನೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
ಜೊತೆಗೆ ರೋಗ ಲಕ್ಷಣಗಳು ಉಲ್ಭಣವಾದಾಗ ದೇಹದ ಭಾಗಗಳಿಂದ ರಕ್ತಸ್ರಾವ ಉಂಟಾಗುವುದು. ಮೂಗು, ದವಡೆಗಳು, ಗುದ್ವಾರ, ಜನನೇಂದ್ರೀಯದಿಂದ ರಕ್ತಸ್ರಾವ ಬರುವುದು.
ವೈರಸ್ ತಗುಲಿದ 8-9 ದಿನಗಳಲ್ಲಿ ಅತ್ಯಧಿಕ ರಕ್ತಸ್ರಾವದಿಂದಾಗಿ ವ್ಯಕ್ತಿ ಸಾವನ್ನಪ್ಪುವ ಸಾಧ್ಯತೆ ಹೆಚ್ಚು.

ಚಿಕಿತ್ಸೆ ಏನು?
ಮಾರ್ಬರ್ಗ್ ವೈರಸ್ ಕಾಯಿಲೆಯನ್ನು ಇತರ ಸೋಂಕಿನ ಕಾಯಿಲೆಗಳಾದ ಮಲೇರಿಯಾ, ಟೈಫಾಯ್ಡ್ ಜ್ವರ, ಶಿಗೆಲೋಸಿಸ್, ಮೆನಿಂಜೈಟಿಸ್ ಇವುಗಳಂತೆಯೇ ಮೊದಲಿಗೆ ಕಂಡು ಬರುವುದು. ಆದ್ದರಿಂದ ಪ್ರಾರಂಭದಲ್ಲಿಯೇ ಪತ್ತೆ ಹಚ್ಚಲು ಕಷ್ಟವಾಗಬಹದುದು. ಈ ವೈರಸ್ ಅನ್ನು ಆ್ಯಂಟಿಜೆನ್ ಪರೀಕ್ಷೆ, ಸೆರಮ್ ನ್ಯೂಟ್ರಲೈಸೇಷನ್ ಪರೀಕ್ಷೆ, RT-PCR ಇವುಗಳ ಮೂಲಕ ಪತ್ತೆ ಮಾಡಲಾಗುವುದು.
ಇದಕ್ಕೆ ರಕ್ತ ನಿಡುವುದು, ಇಮ್ಯೂನೆ ಥೆರಪಿ, ಡ್ರಗ್ ಥೆರಪಿ ಚಿಕಿತ್ಸೆ ನೀಡಲಾಗುವುದು.
ಮಾರ್ಬರ್ಗ್ ವೈರಸ್ಗಾಗಿಯೇ ಪ್ರತ್ಯೇಕವಾದ ಚಿಕಿತ್ಸೆ ವಿಧಾನವಿಲ್ಲ. ದೇಹದಲ್ಲಿ ನಿರ್ಜಲೀಕರಣ ಉಂಟಾಗದಂತೆ ನೋಡಿಕೊಂಡು ರೊಗಿಗೆ ಚಿಕಿತ್ಸೆ ನೀಡಲಾಗುವುದು.



Click it and Unblock the Notifications
