Latest Updates
-
ಬೆಂಗಳೂರು ಮಳೆ: ಮನೆಯಲ್ಲೇ ಮಾಡಿ 15 ನಿಮಿಷದ ನೋ-ಜಂಪ್ ವರ್ಕೌಟ್, ಫಿಟ್ ಆಗಿರಿ! -
ಮಳೆಗಾಲದ ಪ್ರಯಾಣ: ಜಾರುವ ರಸ್ತೆಯಲ್ಲಿ ಸುರಕ್ಷಿತವಾಗಿ ನಡೆಯಲು 7 ನಿಮಿಷದ ಸರಳ ವ್ಯಾಯಾಮಗಳು -
ಮಳೆಗಾಲದ ಪ್ರಯಾಣ: ಟ್ರಾಫಿಕ್ ಮತ್ತು ಕ್ಯಾಬ್ ಸಮಸ್ಯೆಗಳ ನಡುವೆ ದಂಪತಿಗಳು ನೆಮ್ಮದಿ ಕಾಪಾಡಿಕೊಳ್ಳುವುದು ಹೇಗೆ? -
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ಇಂದಿನ ಪರಿಷ್ಕೃತ ಪಟ್ಟಿ ಮತ್ತು ನಿಮ್ಮ ಪ್ರಕರಣದ ಸ್ಥಿತಿ ಪರಿಶೀಲಿಸಿ -
ಓಣಂ ಹಬ್ಬ: ಮಳೆಗೆ ಹಾಳಾಗದ, ₹500ರೊಳಗೆ ಸುಂದರ ಪೂಕಳಂ ಬಿಡಿಸುವ ಸರಳ ಟಿಪ್ಸ್! -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಜಾಗ ಉಳಿಸುವ ಸುಂದರ ಪೂಕಳಂ ಐಡಿಯಾಗಳು -
ಓಣಂ ಸದ್ಯದ ಸಂಭ್ರಮ: ಡಯಾಬಿಟಿಸ್ ಇದ್ದರೂ ಆರೋಗ್ಯಕರವಾಗಿ ಸವಿಯುವುದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ಮೊಟ್ಟೆ ದರ ಏರಿಕೆ ಚಿಂತೆಯೇ? ಕಡಿಮೆ ಬಜೆಟ್ನಲ್ಲಿ ಪ್ರೋಟೀನ್ ಪಡೆಯಲು ಈ ಸ್ಮಾರ್ಟ್ ಟಿಪ್ಸ್ ಫಾಲೋ ಮಾಡಿ -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ಕುಟುಂಬದೊಂದಿಗೆ ಸಂಭ್ರಮಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಪ್ಲಾನ್! -
ವರ್ಕ್ ಫ್ರಮ್ ಹೋಮ್ ಜೊತೆ ಭಾರತ-ಶ್ರೀಲಂಕಾ ಟೆಸ್ಟ್ ಮ್ಯಾಚ್: ಲೈವ್ ಸ್ಕೋರ್ ಮತ್ತು ಸ್ಮಾರ್ಟ್ ಟಿಪ್ಸ್ ಇಲ್ಲಿದೆ!
ಲಾಕ್‌ಡೌನ್‌ನಿಂದ ಹೆಚ್ಚುತ್ತಿರುವ ಒಬೆಸಿಟಿ: ತಜ್ಞರ ಸಲಹೆ ಏನು?
ಕೊರೊನಾವೈರಸ್ ಬಂದ ಎಲ್ಲರ ಜೀವನವೇ ಬದಲಾಗಿದೆ. ಒಂದಿಷ್ಟು ಸಮಯವಿಲ್ಲವೆಂದು ಕಾಲಿಗೆ ಚಕ್ರ ಕಟ್ಟಿಕೊಂಡು ಓಡುತ್ತಿದ್ದ ಬದುಕುಗಳಿಗೆ ಕಾಲಿಗೆ ಸರಪಳಿ ತೊಡಿಸಿದಂತಾಗಿದೆ. ಲಾಕ್‌ಡೌನ್‌ನಿಂದಾಗಿ ಮನೆಯಲ್ಲಿಯೇ ಇರಬೇಕಾದ ಪರಿಸ್ಥಿತಿ.

ಇನ್ನು ಲಾಕ್‌ಡೌನ್ ಸಡಲಿಕೆಯಾದರೂ ಕೂಡ ಮೊದಲಿನಂತೆ ಓಡಾಡಲು ಸಾಧ್ಯವಿಲ್ಲ, ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕೊರೊನಾವೈರಸ್ ಸೋಂಕಿತರ ಸಂಖ್ಯೆಯನ್ನು ನೋಡುವಾಗ ಮನೆಯಲ್ಲಿ ಇರುವುದೇ ಸೇಫ್ ಅನಿಸಿದೆ.
ಮನೆಯೊಳಗೇ ಇರುವುದರಿಂದ ಕೊರೊನಾವೈರಸ್ ಬರದಂತೆ ತಡೆಯಬಹುದು, ದೈಹಿಕ ವ್ಯಾಯಾಮವಿಲ್ಲದೆ ಮನೆಯಲ್ಲಿಯೇ ಕುಳಿತುಕೊಂಡಿರುವುದರಿಂದ ಮೈ ತೂಕ ಹೆಚ್ಚಾಗುತ್ತಿರುವುದರಿಂದ ಇತರ ಆರೋಗ್ಯ ಸಮಸ್ಯೆ ಬರುವ ಸಾಧ್ಯತೆ ಇದೆ.
ಆದ್ದರಿಂದ ಈ ಸಂದರ್ಭದಲ್ಲಿ ನಾವು ಕೊರೊನಾವೈರಸ್‌ನಿಂದ ಪಾರಾಗುವುದರ ಜೊತೆಗೆ ನಮ್ಮ ದೇಹದ ಮೈ ತೂಕ, ದೈಹಿಕ ಹಾಗೂ ಮಾನಸಿಕ ಆರೋಗ್ಯದ ಕಡೆ ಗಮನ ಕೊಡುವುದು ಅವಶ್ಯಕವಾಗಿದೆ.

ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವ ಒಬೆಸಿಟಿ ಸಮಸ್ಯೆ
ಈಗಾಗಲೇ ವಿಶ್ವದ ಜನಸಂಖ್ಯೆಯಲ್ಲಿನ ಶೇ.13ರಷ್ಟು ಜನರು ಒಬೆಸಿಟಿ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಬೊಜ್ಜು ಮೈ ಹಾಗೂ ಸ್ಥೂಲಕಾಯ(ಒಬೆಸಿಟಿ) ಸಮಸ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದ್ದು, ಇದು ಅನಾರೋಗ್ಯಕರ ಜೀವನ ಶೈಲಿಯ ಕೊಡುಗೆಯಾಗಿದೆ. ಇದೀಗ ಕೊರೊನಾವೈರಸ್ ಲಾಕ್‌ಡೌನ್ ಕೂಡ ಒಬೆಸಿಟಿ ಸಮಸ್ಯೆ ಹೆಚ್ಚಾಗಲು ಕಾರಣವಾಗುತ್ತಿದೆ.

ಲಾಕ್‌ಡೌನ್ ಪ್ರಭಾವ
ನೀವೇ ನಿಮ್ಮ ದೇಹದ ಕಡೆ ಗಮನ ಹರಿಸಿ ನೋಡಿ, ಈ ಲಾಕ್‌ಡೌನ್ ಬಳಿಕ ಏಕೋ ಮೈ ತೂಕ ಹೆಚ್ಚಾಗುತ್ತಿದೆ ಎಂದು ಅನಿಸುತ್ತಿರಬಹುದು ಅಲ್ವಾ? ಯಾರು ಮನೆಯಲ್ಲಿ ವರ್ಕೌಟ್ ಮಾಡುತ್ತಿದ್ದರೂ, ತೋಟ ಕೆಲಸ ಅಂತ ಬ್ಯುಸಿಯಾಗಿದ್ದರೂ ಅವರಿಗೆ ಅನಿಸಲ್ಲ, ಆದರೆ ಒಂದು ಕಡೆ ಕೂತು ಕೆಲಸ ಮಾಡುತ್ತಿದ್ದರೆ ಈಗಾಗಲೇ ಒಂದು ರೌಂಡ್ ಅಧಿಕವಾಗಿಯೇ ಆಗಿರುತ್ತೀರಿ.
ಇನ್ನು ಕೊರೊನಾವೈರಸ್ ಮಾನಸಿಕ ಆರೋಗ್ಯದ ಮೇಲೂ ಗಂಭೀರ ಪರಿಣಾಮ ಬೀರಿದೆ. ಕೊರೊನಾವೈರಸ್‌ನಿಂದಾಗಿ ಮನಸ್ಸಿನಲ್ಲಿ ಆತಂಕ, ಮಾನಸಿಕ ಒತ್ತಡ ಕೂಡ ಅಧಿಕವಾಗಿದೆ, ಇದು ದೇಹದ ಜೀರ್ಣಕ್ರಿಯೆ ಮೇಲೆ ಪರಿಣಾಮ ಬೀರಿ ಇದರಿಂದಾಗಿ ಕೂಡ ಮೈ ತೂಕ ಹೆಚ್ಚಾಗುವುದು.
ಇನ್ನು ಮನೆಯಲ್ಲಿಯೇ ಇರುವುದರಿಂದ ಕುರುಕುಲು ತಿನ್ನುವುದು ಕೂಡ ಅಧಿಕವಾಗಿರುತ್ತದೆ, ಇದು ಕೂಡ ಮೈ ತೂಕ ಹೆಚ್ಚಾಗುತ್ತಿರಲು ಒಂದು ಕಾರಣವಾಗಿದೆ. ಇಲ್ಲಿ ನಾವು ಲಾಕ್‌ಡೌನ್ ನಿಮ್ಮ ದೇಹದ ತೂಕದ ಮೇಲೆ ಕೆಟ್ಟ ಪರಿಣಾಮ ಬೀರದಿರಲು ಏನು ಮಾಡಬೇಕೆಂದು ಎಕ್ಸ್‌ಪರ್ಟ್ ಡಾ. ಸಂದೀಪ್ ರಾಧಾಕೃಷ್ಣನ್, ಸನ್‌ರೈಸ್ ಆಸ್ಪತ್ರೆ, ಇವರು ನೀಡಿರುವ ಕೆಲವೊಂದು ಸಲಹೆಗಳನ್ನು ನಿಮ್ಮೊಂದಿಗೆ ಶೇರ್ ಮಾಡುತ್ತಿದ್ದೇವೆ. ಆ ಸಲಹೆಗಳೆಂದರೆ

ಆಹಾರ ಮತ್ತು ನೀರು
1. ಆರೋಗ್ಯಕರ ಆಹಾರಕ್ರಮ: ಆರೋಗ್ಯಕರ ಹಾಗೂ ಸಮತೋಲಿತ ಆಹಾರಕ್ರಮ ಪಾಲಿಸಿ. ಇದು ನಿಮ್ಮನ್ನು ಫಿಟ್ ಆಗಿಡುವುದು ಮಾತ್ರವಲ್ಲ, ದೇಹದಲ್ಲಿ ರೋಗ ನಿರೋಧಕ ಶಕ್ತಿ ಕೂಡ ಹೆಚ್ಚಿಸುತ್ತದೆ. ದೇಹಕ್ಕೆ ಅವಶ್ಯಕವಾದ ಎಲ್ಲಾ ವಿಟಮಿನ್ಸ್ ನಿಮ್ಮ ಆಹಾರದಲ್ಲಿ ಇರುವಂತೆ ನೋಡಿಕೊಳ್ಳಿ, ಸರಿಯಾದ ಪ್ರಮಾಣದಲ್ಲಿ ಪ್ರೊಟೀನ್ ಹಾಗೂ ನಾರಿನಂಶವಿರುವ ಆಹಾರ ಸೇವಿಸಿ. ಆದಷ್ಟು ಸಕ್ಕರೆ ಸೇವನೆ ಕಡಿಮೆ ಮಾಡಿ, ಇದರ ಬದಲಿಗೆ ಬೆಲ್ಲ ಬಳಸಿ.
2. ನೀರು ಕುಡಿಯಿರಿ
ಸಾಕಷ್ಟು ನೀರು ಕುಡಿಯಿರಿ, ಅದರಲ್ಲೂ ಈ ಸಮಯದಲ್ಲಿ ಬೆಚ್ಚಗಿನ ನೀರು ಕುಡಿಯಿರಿ. ದಿನದಲ್ಲಿ 3 ಲೀಟರ್ ನೀರು ಕುಡಿಯುವ ಅಭ್ಯಾಸ ಬೆಳೆಸಿಕೊಳ್ಳಿ. ಬರೀ ನೀರು ಕುಡಿಯುವುದು ಬೇಸರವಾದರೆ ಹಣ್ಣಿನ ಅಥವಾತರಕಾರಿ ಜ್ಯೂಸ್ ಕುಡಿಯಿರಿ.

ಮಾನಸಿಕ ಆರೋಗ್ಯ ಹಾಗೂ ಸ್ನೇಹಿತರ ಜೊತೆ ಸಂಪರ್ಕ
ಈ ಸಮಯದಲ್ಲಿ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವುದು ಅವಶ್ಯಕ. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕಗಿರುವುದರಿಂದ ಯಾರನ್ನೂ ನೇರವಾಗಿ ಹೋಗಿ ಭೇಟಿ ಮಾಡಬೇಡಿ. ಬದಲಿಗೆ ಕರೆ ಮಾಡಿ, ವೀಡಿಯೋ ಕಾಲ್ ಮಾಡಿ, ಈ ರೀತಿ ನಿಮ್ಮ ಸ್ನೇಹಿತರು, ಆಪ್ತರ ಜೊತೆ ಮಾತನಾಡುವುದರಿಂದ ಮನಸ್ಸಿಗೆ ಖುಷಿ ನೀಡುವುದು. ಈ ಸಮಯದಲ್ಲಿ ಕ್ರಿಯೇಟಿವ್ ಆಗಿ ಏನಾದರೂ ಯೋಚಿಸಿ, ಹೊಸತನ್ನು ಕಲಿಯಿರಿ. ನಿಮ್ಮನ್ನು ನೀವು ಬ್ಯುಸಿಯಾಗಿಡಿ.

ದೈಹಿಕ ವ್ಯಾಯಾಮ
ದಿನದಲ್ಲಿ ಕಮ್ಮಿಯೆಂದರೂ 30 ನಿಮಿಷ ದೈಹಿಕ ವ್ಯಾಯಾಮ ಮಾಡಿ. ಮನೆಯಲ್ಲಿಯೇ ಯೋಗ ಮಾಡಿ. ಆನ್‌ಲೈನ್ ಯೋಗ ಕ್ಲಾಸ್‌ಗಳು ಇವೆ. ಅದಕ್ಕೆ ಸೇರಬಹುದು. ಇದು ನಿಮ್ಮ ಮನಸ್ಸು ಹಾಗೂ ದೈಹಿಕ ಆರೋಗ್ಯವನ್ನು ಕಾಪಾಡುವಲ್ಲಿ ತುಂಬಾ ಸಹಕಾರಿ.

ನಿದ್ದೆ ಅವಶ್ಯಕ
ಇನ್ನು ಸರಿಯಾದ ಸಮಯಕ್ಕೆ ನಿದ್ದೆ ಮಾಡಿ. ಅತೀಯಾದ ನಿದ್ದೆ ಹಾಗೂ ಅತೀ ಕಡಿಮೆ ನಿದ್ದೆ ಕೂಡ ಒಳ್ಳೆಯದಲ್ಲ. ದಿನದಲ್ಲಿ 6-8 ಗಂಟೆ ನಿದ್ದೆ ಅವಶ್ಯಕ. ಮಲಗುವ ಸಮಯದಲ್ಲಿ ಟಿವಿ, ಮೊಬೈಲ್ ದೂರವಿಡಿ. ಒಳ್ಳೆಯ ನಿದ್ದೆ ತೂಕ ನಿಯಂತ್ರಣಕ್ಕೆ ಹಾಗೂ ಆರೋಗ್ಯ ವೃದ್ಧಿಸಲು ಅವಶ್ಯಕ.



Click it and Unblock the Notifications