Latest Updates
-
ಆರ್ಬಿಐ ರೆಪೋ ದರ ನಿರ್ಧಾರ: ನಿಮ್ಮ ಇಎಂಐ ಮೇಲೆ ಬರೆ ಬೀಳುತ್ತಾ? ಇಲ್ಲಿದೆ ಲೆಕ್ಕಾಚಾರ -
ದೆಹಲಿ-ಎನ್ಸಿಆರ್ ಭೂಕಂಪನ: ಆತಂಕ ಬೇಡ, ಸುರಕ್ಷಿತವಾಗಿರಲು ಈ ತಕ್ಷಣದ ಕ್ರಮಗಳನ್ನು ಪಾಲಿಸಿ -
IND vs WI T20 ಮ್ಯಾಚ್ ನೋಡುವಾಗ ಸಂಗಾತಿಯೊಂದಿಗೆ ಜಗಳವಾಡ್ತೀರಾ? ಈ ಸಿಂಪಲ್ ಪ್ಲಾನ್ ಟ್ರೈ ಮಾಡಿ! -
ಇಂದೇ ಎಚ್ಚರ! ದೆಹಲಿ-ಎನ್ಸಿಆರ್ನಲ್ಲಿ ಭಾರಿ ಮಳೆ, ಸಿಡಿಲು: ನಿಮ್ಮ ಸುರಕ್ಷತೆಗಾಗಿ ಈ 30 ನಿಮಿಷಗಳ ಚೆಕ್ಲಿಸ್ಟ್ ಪಾಲಿಸಿ -
ಎವರೆಸ್ಟ್ ಜೀರಿಗೆ ಪುಡಿ ಬಳಸುತ್ತಿದ್ದೀರಾ? ತಕ್ಷಣ ಈ ಬ್ಯಾಚ್ ನಂಬರ್ ಚೆಕ್ ಮಾಡಿ, ಇಲ್ಲದಿದ್ದರೆ ಅಪಾಯ! -
ಹುಟ್ಟುಹಬ್ಬದ ದಿನವೇ ಫ್ಯಾನ್ಸ್ಗೆ ಭರ್ಜರಿ ಗಿಫ್ಟ್ ಕೊಟ್ಟ ಧ್ರುವ ಸರ್ಜಾ: ಹೊಸ ಸಿನಿಮಾ 'ಕೆಮಿಸ್ಟ್ರಿ' ಅನೌನ್ಸ್! -
ಚೆನ್ನೈ-ಕೊಯಮತ್ತೂರಿನಲ್ಲಿ ಭಾರಿ ಮಳೆ: ಹೊರಗೆ ಹೋಗಬೇಡಿ, ಮನೆಯಲ್ಲೇ ಮಾಡಿ ಈ ಸಿಂಪಲ್ ವರ್ಕ್ಔಟ್! -
ಬೆಂಗಳೂರು ಮಳೆ: ಟ್ರಾಫಿಕ್ ಜಾಮ್ ತಪ್ಪಿಸಿ ಸುರಕ್ಷಿತವಾಗಿ ಮನೆ ತಲುಪಲು ಇಲ್ಲಿದೆ ಸ್ಮಾರ್ಟ್ ಟ್ರಾವೆಲ್ ಪ್ಲಾನ್! -
ಡೆಂಗ್ಯೂ ಭೀತಿ: ನಿಮ್ಮ ಬಾಲ್ಕನಿಯಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಲು 10 ನಿಮಿಷದ ಸಿಂಪಲ್ ಟಿಪ್ಸ್! -
ಮುಂಬೈನಲ್ಲಿ ತೀವ್ರ ಬಿಸಿಲು: IMD ಯಿಂದ ಹಳದಿ ಎಚ್ಚರಿಕೆ; ಆರೋಗ್ಯ ಕಾಪಾಡಿಕೊಳ್ಳಲು ಈ ಮುನ್ನೆಚ್ಚರಿಕೆ ಅಗತ್ಯ!
ಈ ಸಣ್ಣಪುಟ್ಟ ಲಕ್ಷಣಗಳೇ ಲಿವರ್‌ಗೆ ಸಮಸ್ಯೆಯಾಗಿದೆ ಎನ್ನುವ ಮುನ್ಸೂಚನೆಗಳು, ನಿರ್ಲಕ್ಷ್ಯ ಮಾಡಿದರೆ ಅಪಾಯ
ಲಿವರ್ ಸಮಸ್ಯೆ ಯಾರಿಗೆ ಯಾವಾಗ ಬೇಕಾದರೂ ಬರಬಹುದು. ಭಾರತದಲ್ಲಿ ತುಂಬಾ ಜನರು ಈ ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದಾರೆ, ಅದರಲ್ಲಿ ಫ್ಯಾಟಿ ಲಿವರ್ ಸಮಸ್ಯೆ ಸಾಮಾನ್ಯವಾಗಿ ಹೆಚ್ಚಾಗಿ ಕಂಡು ಬರುತ್ತಿರುವ ಸಮಸ್ಯೆಯಲ್ಲಿ ಒಂದಾಗಿದೆ.
ಲಿವರ್‌ಗೆ ಪ್ರಾರಂಭದಲ್ಲಿ ಗೊತ್ತೇ ಆಗಿರಲಿಲ್ಲ, ತುಂಬಾ ತಡವಾಗಿ ಗೊತ್ತಾಯ್ತು ಎಂದು ಕೆಲವರು ಹೇಳುತ್ತಾರೆ, ಆದರೆ ಲಿವರ್‌ಗೆ ಸಮಸ್ಯೆಯಾದಾಗಲೇ ನಮ್ಮ ದೇಹದಲ್ಲಿ ಕೆಲವೊಂದು ಬದಲಾವಣೆಯಾಗಿರುತ್ತದೆ, ಆದರೆ ನಾವು ಅದನ್ನು ಅಷ್ಟಾಗಿ ಗಮನಿಸಿರುವುದಿಲ್ಲ, ಹೀಗಾಗಿ ಸಮಸ್ಯೆ ತುಂಬಾ ತಡವಾಗಿ ತಿಳಿಯುವುದು.
ಆದ್ದರಿಂದ ದೇಹದಲ್ಲಿ ಈ ಬದಲಾವಣೆ ಕಂಡು ಬಂದರೆ ನಿರ್ಲಕ್ಷ್ಯ ಮಾಡಬೇಡಿ, ಏಕೆಂದರೆ ಅವುಗಳು ಲಿವರ್‌ಗೆ ಹಾನಿಯಾಗಿದೆ ಎಂದು ಸೂಚಿಸುವ ಮುನ್ಸೂಚನೆಗಳಾಗಿವೆ:

ಮೊದಲಿಗೆ ಯಾವೆಲ್ಲಾ ಬಗೆಯ ಲಿವರ್ ಕಾಯಿಲೆಗಳಿವೆ ಎಂದು ತಿಳಿಯೋಣ:
ಅಟೋಇಮ್ಯೂನೆ ಲಿವರ್ ಡಿಸೀಜ್: ಹೊರಗಿನಿಂದ ದೇಹ ಹೊಳಹೊಕ್ಕುವ ರೋಗಾಣುಗಳ ವಿರುದ್ಧ ಹೋರಾಡಲು ಇರುವಂಥ ರೋಗ ನಿರೋಧಕ ವ್ಯವಸ್ಥೆ ನಮ್ಮದೇ ದೇಹದ ಮೇಲೆ ದಾಳಿ ಮಾಡುವುದಕ್ಕೆ ಅಟೋಇಮ್ಯೂನೆ ಡಿಸೀಜ್ ಎಂದು ಕರೆಯಲಾಗುವುದು. ಈ ರೋಗ ನಿರೋಧಕ ವ್ಯವಸ್ಥೆ ಲಿವರ್‌ನ ಮೇಲೆ ದಾಳಿ ಮಾಡಿದಾಗ ಲಿವರ್‌ನ ಆರೋಗ್ಯ ಹಾಳಾಗುತ್ತದೆ.
ಹೆಪಟೈಟಿಸ್: ಹೆಪಟೈಟಿಸ್ ಎ ಹಾಗೂ ಹೆಪಟೈಟಿಸ್ ಬಿ ವೈರಲ್ ಸೋಂಕಿನಿಂದಾಗಿ ಉಂಟಾಗುತ್ತದೆ.
ವಂಶವಾಹಿ ಕಾಯಿಲೆ: ಲಿವರ್ ಸಮಸ್ಯೆ ವಂಶವಾಹಿಯಾಗಿಯೂ ಬರುವುದು, ಕುಟುಂಬದಲ್ಲಿ ಅಮ್ಮ-ಅಪ್ಪ, ಸಹೋದರ-ಸಹೋದರಿ ಯಾರಿಗಾದರೂ ಇದ್ದರೆ ಬರುವ ಸಾಧ್ಯತೆ ಇದೆ.
ಲಿವರ್ ಕ್ಯಾನ್ಸರ್: ಲಿವರ್‌ನಲ್ಲಿ ಅಸಹಜ ಕಣಗಳು ಹುಟ್ಟಿಕೊಂಡು ಲಿವರ್ ಕ್ಯಾನ್ಸರ್ ಉಂಟಾಗುವುದು.
ಫ್ಯಾಟಿ ಲಿವರ್ ಕಾಯಿಲೆ: ಹೆಚ್ಚಿನವರಿಗೆ ಈ ಸಮಸ್ಯೆ ಇದೆ. ಮದ್ಯಪಾನಿಗಳಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಂಡು ಬರುವುದು. ಮದ್ಯಪಾನ ಮಾಡದವರಲ್ಲಿಯೂ ಕೆಲವರಲ್ಲಿ ಕಂಡು ಬರುತ್ತದೆ, ಅದಕ್ಕೆ ನಾನ್ ಆಲ್ಕೋಹಾಲಿಕ್ ಫ್ಯಾಟಿ ಲಿವರ್ ಕಾಯಿಲೆ ಎಂದು ಕರೆಯಲಾಗುವುದು.

ಲಿವರ್‌ಗೆ ಸಮಸ್ಯೆಯಾಗಿದೆ ಎಂದು ಸೂಚಿಸುವ ಲಕ್ಷಣಗಳು
* ಹೊಟ್ಟೆ ಉಬ್ಬುವುದು, ತುಂಬಾ ಗ್ಯಾಸ್ಟ್ರಿಕ್
* ಕಣ್ಣಿನ ಸುತ್ತ ಡಾರ್ಕ್ ಸರ್ಕಲ್
* ಇತ್ತೀಚಿನ ದಿನಗಳಲ್ಲಿ ತುಂಬಾ ಕೋಪ
* ಒಂಥರಾ ಕಿರಿಕಿರಿ
* ಹೊಟ್ಟೆ ದಪ್ಪಗಾಗುವುದು
* ಮೊಡವೆ ಅಥವಾ ಗುಳ್ಳೆಗಳು
* ಮುಟ್ಟಿನ ಚಕ್ರದಲ್ಲಿ ಸಮಸ್ಯೆ
* ರೋಗ ನಿರೋಧಕ ಶಕ್ತಿ ಕಡಿಮೆಯಾಗುವುದು
* ಆಹಾರ ವಿಷಯದಲ್ಲಿ ತುಂಬಾ ಸೆನ್ಸಿಟಿವ್
* ಸುಸ್ತು
ಈ ಬಗೆಯ ಲಕ್ಷಣಗಳು ಕಂಡು ಬಂದರೆ ವೈದ್ಯರ ಬಳಿ ಹೋಗಿ ಲಿವರ್ ಪರೀಕ್ಷೆ ಮಾಡಿಸಿ , ಲಿವರ್‌ನ ಆರೋಗ್ಯದ ಕಡೆ ಗಮನ ನೀಡಿ.

ಲಿವರ್‌ನ ಆರೋಗ್ಯ ಕಾಪಾಡಲು ಏನು ಮಾಡಬೇಕು?
1. ಮದ್ಯಪಾನ ಮಾಡಬಾರದು, ಮಾಡುವುದಾದರೂ ತುಂಬಾ ಮಿತಿಯಲ್ಲಿ ಮಾಡಿ.
2. ಹೆಪಟೈಟಿಸ್ ಎ, ಬಿ, ಸಿ ತಡೆಗಟ್ಟಿ
* ಹೆಪಟೈಟಿಸ್ ಲಸಿಕೆ ಪಡೆಯಿರಿ: 14 ವರ್ಷದೊಳಗಿನ ಮಕ್ಕಳಿಗೆ ಹೆಪಟೈಟಿಸ್ ಲಸಿಕೆ ಹಾಕಿಸಬೇಕು, ದೊಡ್ಡವರಿಗೂ ಇದೆ ನೀವು ಇನ್ನೂ ಹೆಪಟೈಟಿಸ್ ಲಸಿಕೆ ಪಡೆಯದಿದ್ದರೆ ನಿಮ್ಮ ವೈದ್ಯರ ಬಳಿ ಕೇಳಿ ಪಡೆಯಿರಿ.
* ಸುರಕ್ಷಿತ ಲೈಂಗಿಕ ಕ್ರಿಯೆ ಅನುಸರಿಸಿ: ಹೆಪಟೈಟಿಸ್ ಬಿ ಮತ್ತು ಸಿ ಲೈಂಗಿಕ ಕ್ರಿಯೆ ಮೂಲಕ ಹರಡುತ್ತದೆ. ಒಬ್ಬರೇ ಸಂಗಾತಿ ಜೊತೆ ಲೈಂಗಿಕ ಕ್ರಿಯೆ ಸುರಕ್ಷಿತ. ಒಂದಕ್ಕಿಂತ ಅಧಿಕ ಜನರ ಜೊತೆ ಲೈಂಗಿಕ ಕ್ರಿಯೆ ನಡೆಸುವವರು ಸುರಕ್ಷಿತಾ ಕ್ರಮಗಳನ್ನು ಅನುಸರಿಸಬೇಕು.
* ಕೈಗಳನ್ನು ಆಗಾಗ ತೊಳೆಯಿರಿ.

ಈ ಬಗೆಯ ಆಹಾರಗಳು ಲಿವರ್‌ನ ಆರೋಗ್ಯಕ್ಕೆ ಒಳ್ಳೆಯದು:
1. ಕಾಫಿ
2. ಟೀ
3. ಗ್ರೇಪ್‌ಫ್ರೂಟ್
4. ಬ್ಲೂ ಬೆರ್ರಿ, ಕ್ರ್ಯಾನ್ ಬೆರ್ರಿ
5. ದ್ರಾಕ್ಷಿ
6. ಪಿಯರ್ಸ್
7. ಬೀಟ್‌ರೂಟ್ ಜ್ಯೂಸ್
8. ಕ್ಯಾಬೇಜ್, ಹೂಕೋಸು, ಬ್ರೊಕೋಲಿ ಬಗೆಯ ಆಹಾರಗಳು
9. ನಟ್ಸ್
10.ಮೀನು
12. ಆಲೀವ್ ಎಣ್ಣೆ
ಈ ಯೋಗಾಸನಗಳು ಲಿವರ್ ಆರೋಗ್ಯ ಹೆಚ್ಚಿಸುತ್ತದೆ
* ಬಾಲಾಸನ
* ಅಲೋಮ ವಿಲೋಮ ಪ್ರಾಣಯಾಮ
* ಧನುರ್ಸಾನ
* ಅಧೋಮುಖ ಶ್ವಾನಾಸನ
* ನೌಕಾಸನ



Click it and Unblock the Notifications
