Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
World Kidney Day : ಕಿಡ್ನಿ ಡಯಾಲಿಸಿಸ್: ಕಿಡ್ನಿ ಡಯಾಲಿಸಿಸ್ ವಿಧಗಳೇನು? ಡಯಾಸಿಸ್ ಹೇಗೆ ಮಾಡಲಾಗುವುದು?
ಇಂದು ವಿಶ್ವ ಕಿಡ್ನಿ ದಿನ. ವಿಶ್ವದ ಶೆ. 10ರಷ್ಟು ಜನರು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಕೆಲವರ ಕಿಡ್ನಿ ಸಂಪೂರ್ಣವಾಗಿ ತನ್ನ ಕಾರ್ಯವನ್ನು ಮಾಡಲು ಅಸಮರ್ಥವಾಗಿರುತ್ತದೆ, ಅಂಥ ಸಂದರ್ಭದಲ್ಲಿ ಡಯಾಲಿಸಿಸ್ ಅಗ್ಯತವಾಗಿರುತ್ತದೆ. ಈ ಕಿಡ್ನಿ ಡಯಾಲಿಸಿಸ್ ಕಾರ್ಯವೇನು ಎಂಬುವುದನ್ನು ವಿವರವಾಗಿ ತಿಳಿಯೋಣ:

ಡಯಾಲಿಸಿಸ್ ಎಂದರೇನು?
ಯಾವಾಗ ಕಿಡ್ನಿ ಸಂಪೂರ್ಣ ತನ್ನ ಕಾರ್ಯವನ್ನು ಮಾಡಲು ಅಸಮರ್ಥವಾಗುವುದೋ ಆವಾಗ ಕಿಡ್ನಿ ರಕ್ತವನ್ನು ಶುದ್ಧೀಕರಿಸುವುದಿಲ್ಲ, ಇದರ ಪರಿಣಾಮವಾಗಿಕಶ್ಮಲಗಳು ರಕ್ತನಾಳಗಳಲ್ಲಿ ಶೇಖರವಾಗುವುದು. ಡಯಾಲಿಸಿಸ್ ಮೂಲಕ ರಕ್ತನಾಳಗಳಲ್ಲಿರುವ ಕಶ್ಮಲ ಹಾಗೂ ಹಾಗೂ ಅಧಿಕ ನೀರಿನಂಶ ತೆಗೆಯಲಾಗುವುದು. ಕಿಡ್ನಿ ಮಾಡುವ ಕಾರ್ಯವನ್ನು ಡಯಾಲಿಸಿಸ್ ಮೂಲಕ ಮಾಡಲಾಗುವುದು.
ಯಾರಿಗೆ ಡಯಾಲಿಸಿಸ್ ಅವಶ್ಯಕವಾಗಿರುತ್ತದೆ?
ಯಾರಿಗೆ ಕಿಡ್ನಿ ಫೈಲ್ಯೂರ್ ಅಥವಾ ESRD ಕಾಯಿಲೆಯ ಕೊನೆಯ ಹಂತದಲ್ಲಿ ಇರುತ್ತಾರೋ ಅವರಿಗೆ ಕಿಡ್ನಿ ಡಯಾಲಿಸಿಸ್ ಅವಶ್ಯಕವಾಗಿರುತ್ತದೆ. ಅತ್ಯಧಿಕ ರಕ್ತದೊತ್ತಡ, ಮಧುಮೇಹ, ಲೂಪಸ್ ಈ ಬಗೆಯ ಸಮಸ್ಯೆಯಿದ್ದರೆ ಕಿಡ್ನಿಗೆ ಹಾನಿಯುಂಟಾಗುವುದು, ಇದರಿಂದ ಕಿಡ್ನಿ ಸಮಸ್ಯೆ ಉಂಟಾಗಿ ಡಯಾಲಿಸಿಸ್ ಮಾಡಬೇಕಾಗಿ ಬರುವುದು.
ಕೆಲವರಿಗೆ ಯಾವುದೇ ಕಾರಣವಿಲ್ಲದೆ ಕಿಡ್ನಿಗೆ ಹಾನಿಯುಂಟಾಗುವುದು. ಕೆಲವರಿಗೆ ನಿಧಾನಕ್ಕೆ ಕಿಡ್ನಿಗೆ ಹಾನಿಯುಂಟಾಗುವುದು, ಇನ್ನು ಕೆಲವರಿಗೆ ಇದ್ದಕ್ಕಿದ್ದಂತೆ ಕಿಡ್ನಿಯಲ್ಲಿ ಸಮಸ್ಯೆ ಕಂಡು ಬರಬಹುದು, ಕಿಡ್ನಿಗೆ ಹಾನಿಯುಂಟಾದರೆ ದೀರ್ಘಕಾಲದ ಸಮಸ್ಯೆಯಾಗಿ ಕಾಡುವುದು.
ಕಿಡ್ನಿ ಸಮಸ್ಯೆಯನ್ನು 5 ಹಂತದಲ್ಲಿ ಗುರುತಿಸಲಾಗಿದೆ, ಅದರಲ್ಲಿ ಕೊನೆಯ ಹಂತ ಎಂಡ್ ಸ್ಟೇಜ್ ರೆನಾಲ್ ಡಿಸೀಜ್ ((ESRD) ಅಥವಾ ಕಿಡ್ನಿ ಫೈಲ್ಯೂರ್. ಈ ಹಂತದಲ್ಲಿ ಕಿಡ್ನಿ ಶೇ. 10-15ರಷ್ಟು ಮಾತ್ರ ಕಾರ್ಯನಿರ್ವಹಿಸುವುದು. ಈ ಹಂತಕ್ಕೆ ತಲುಪಿದ ಮೇಲೆ ಬದುಕಬೇಕೆಂದರೆ ಡಯಾಲಿಸಿಸ್ ಮಾಡಬೇಕು ಅಥವಾ ಕಿಡ್ನಿ ಬದಲಾಯಿಸಬೇಕು.
ಕಿಡ್ನಿಯ ಕಾರ್ಯವೇನು?
ಕಿಡ್ನಿ ರಕ್ತದಲ್ಲಿರುವ ಕಶ್ಮಲಗಳನ್ನು ಹೊರಹಾಕುವ ಕಾರ್ಯ ಮಾಡುತ್ತದೆ, ದೇಹದಲ್ಲಿನ ಕಶ್ಮಲಗಳು ಮೂತ್ರದ ಮೂಲಕ ಹೊರಹೋಗುವಂತೆ ಮಾಡಿ ದೇಹದಲ್ಲಿ ರಕ್ತದೊತ್ತಡ ನಿಯಂತ್ರಣದಲ್ಲಿಡುತ್ತದೆ.
ಡಯಾಲಿಸಿಸ್ ವಿಧಗಳು
* ಹೆಮೋಡಯಾಲಿಸಿಸ್
* ಪೆರ್ಟಿನಿಯಲ್ ಡಯಾಲಿಸಿಸ್
ಹೆಮೋಡಯಾಲಿಸಿಸ್ ಎಂದರೇನು: ಇದರಲ್ಲಿ ಮೆಷಿನ್ ಮೂಲಕ ದೇಹದಿಂದ ರಕ್ತವನ್ನು ತೆಗೆದು ಡಯಾಲೈಸರ್‌ನಲ್ಲಿ ಶುದ್ಧ ಮಾಡಿ ಮತ್ತೆ ದೇಹಕ್ಕೆ ಸೇರಿಸಲಾಗುವುದು. ಇದು ಮಾಡಲು 3-5 ಗಂಟೆ ಬೇಕಾಗುವುದು. ಇದನ್ನು ಆಸ್ಪತ್ರೆ ಅಥವಾ ಡಯಾಲಿಸಿಸ್ ಸೆಂಟರ್‌ಗಳಲ್ಲಿ ಮಾಡಲಾಗುವುದು.
ಪೆರ್ಟಿನಿಯಲ್ ಡಯಾಲಿಸಿಸ್ ಎಂದರೇನು?
ಡಯಾಲಿಸಿಸ್ ಸಲ್ಯೂಷನ್ ಮೂಲಕ ದೇಹದಲ್ಲಿರುವ ಕಷ್ಮಲಗಳನ್ನು ತೆಗೆಯಲಾಗುವುದು. ಇದನ್ನು ಮಾಡುವ ಮೂರು ವಾರಗಳ ಮೊದಲು ಸರ್ಜನ್ ಚಿಕ್ಕ ಸರ್ಜರಿ ಮಾಡಿ ಮೃದುವಾದ ತೆಳುವಾದ ಟ್ಯೂಬ್ (catheter) ಅನ್ನು ಹೊಟ್ಟೆಯಲ್ಲಿ ಹಾಕಲಾಗುವುದು. ಇದು ಶಾಶ್ವತವಾಗಿ ಹೊಟ್ಟೆಯಲ್ಲಿಯೇ ಇರುತ್ತದೆ.
ಹೆಮೋಡಯಾಲಿಸಿಸ್ ಅಡ್ಡಪರಿಣಾಮಗಳು
* ರಕ್ತದೊತ್ತಡ ಕಡಿಮೆಯಾಗಬಹುದು: ರಕ್ತದೊತ್ತಡ ಕಡಿಮೆಯಾಗುವುದು ಡಯಾಲಿಸಿಸ್ ಮಾಡಿಸುವುದರ ಸಾಮಾನ್ಯ ಅಡ್ಡಪರಿಣಾಮವಾಗಿದೆ.
* ಸ್ನಾಯು ಸೆಳೆತ: ಡಯಾಲಿಸಿಸ್ ಬಳಿಕ ಸ್ನಾಯು ಸೆಳೆತ ಉಂಟಾಗುವುದು.
* ತುರಿಕೆ: ತುಂಬಾ ಜನರಿಗೆ ಡಯಾಲಿಸ್ ಬಳಿಕ ತುರಿಕೆ ಸಮಸ್ಯೆ ಕಂಡು ಬರುವುದು
* ನಿದ್ರಾಹೀನತೆ: ಡಯಾಲಿಸಿಸ್ ಮಾಡಿಸಿಕೊಂಡ ಬಂದ ಮೇಲೆ ತುಂಬಾ ಜನರಿಗೆ ಸರಿಯಾಗಿ ನಿದ್ದೆ ಮಾಡಲು ತೊಂದರೆಯಾಗುವುದು.
* ನಿದ್ರಾಹೀನತೆ: ಡಯಾಲಿಸಿಸ್ ಮಾಡಿಸುವವರಲ್ಲಿ ರಕ್ತ ಹೀನತೆ ಸಮಸ್ಯೆ ಸರ್ವೇ ಸಾಮಾನ್ಯ.
ಇತರ ಸಮಸ್ಯೆಗಳು
* ನಿದ್ರಾಹೀನತೆ
* ಸಂಧಿನೋವು
* ಲೈಂಗಿಕ ಆಸಕ್ತಿ ಕಡಿಮೆಯಾಗುವುದು
* ಬಾಯಿ ಒಣಗುವುದು
* ಮಾನಸಿಕ ಒತ್ತಡ ಹೆಚ್ಚಾಗುವುದು.
ಪೆರಿಟೋನಿಯಲ್ ಡಯಾಲಿಸಿಸ್ ಅಡ್ಡಪರಿಣಾಮಗಳು
* ಕಿಬ್ಬೊಟ್ಟೆನೋವು
* ಚಳಿ-ಜ್ವರ ಬರುವುದು
* ಹೊಟ್ಟೆ ಉಬ್ಬಿದಂತಾಗುವುದು
* ಹರ್ನಿಯಾ ಅಪಾಯ ಹೆಚ್ಚುವುದು
* ಮೈ ತೂಕ ಹೆಚ್ಚಾಗುವುದು
ಡಯಾಲಿಸಿಸ್ ಮಾಡಿಸುವವರು ಚಟುವಟಿಕೆಯಿಂದ ಇರಬಹುದೇ?
ತುಂಬಾ ಜನ ಡಯಾಲಿಸಿಸ್ ಮಾಡಿಸುತ್ತಿದ್ದರೂ ತುಂಬಾ ಚಟುವಟಿಕೆಯಿಂದ ಇರುತ್ತಾರೆ. ಕೆಲಸ ಮಾಡುವುದು, ಪ್ರಯಾಣ ಮಾಡುವುದು ಎಲ್ಲಾ ಮಾಡುತ್ತಾರೆ. ಪರ್ಟಿನಿಯಲ್ ಡಯಾಲಿಸಿಸ್ ಮಾಡುವವರು ಕಡಿಮೆ ವ್ಯಾಯಾಮ ಮಾಡಬೇಕು.
ಯಾವಾಗ ವೈದ್ಯರನ್ನು ಸಂಪರ್ಕಿಸಬೇಕು?
* ಮೂತ್ರ ವಿಸರ್ಜನೆಗೆ ತೊಂದರೆ ಉಂಟಾದಾಗ
* ತಲೆಸುತ್ತು
* ವಾಂತಿ
* ಸೋಂಕಿನ ಲಕ್ಷಣಗಳು ಕಂಡು ಬಂದಾಗ
* ಕಿಬ್ಬೊಟ್ಟೆ ನೋವು
* ಹೊಟ್ಟೆ ಉಬ್ಬುವುದು
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
