Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಸ್ಮಾರ್ಟ್‌ಫೋನ್ ತಪ್ಪಾಗಿ ಬಳಸಿ ದೃಷ್ಟಿಕಳೆದುಕೊಂಡ ಹೈದರಾಬಾದ್ ಮಹಿಳೆ: ಸ್ಮಾರ್ಟ್‌ಫೋನ್‌ನಿಂದ ಕಣ್ಣು ರಕ್ಷಣೆಗೆ ಈ ರೀತಿ ಮಾಡಿ
ಹೈದರಾಬಾದ್ ಮೂಲದ ಅಪೊಲೋ ಆಸ್ಪತ್ರೆಯಲ್ಲಿ ನ್ಯೋರೋಲಾಜಿಸ್ಟ್ ಆಗಿರುವ ಡಾ. ಸುಧೀರ್ ಅವರು ಇತ್ತೀಚೆಗೆ ತಮ್ಮ ಟ್ವೀಟ್‌ನಲ್ಲಿ 30 ವರ್ಷದ ಮಹಿಳೆಯೊಬ್ಬರು ಸ್ಮಾರ್ಟ್‌ಫೋನ್ ಬಳಸಿ ತಾತ್ಕಾಲಿಕವಾಗಿ ಕಣ್ಣಿನ ದೃಷ್ಟಿ ಕಳೆದುಕೊಂಡಿರುವುದಾಗಿ ಹೇಳಿದ್ದರು.

ಸ್ಮಾರ್ಟ್‌ಫೋನ್ ಬಂದ ಮೇಲೆ ನಮ್ಮ ಜೀವನಶೈಲಿಯೇ ಬದಲಾಗಿದೆ. ಬೆಳಗ್ಗೆ ಎದ್ದ ತಕ್ಷಣ ಸ್ಮಾರ್ಟ್‌ಫೋನ್ ಮೇಲೆ ಕಣ್ಣಾಡಿಸಲು ಪ್ರಾರಂಭಿಸಿದರೆ ಮಲಗುವವರೆಗೆ ಸ್ಮಾರ್ಟ್‌ಫೋನ್ ಬಳಸುವವರು ಇದ್ದಾರೆ. ದಿನದಲ್ಲಿ 4-5 ತಾಸು ಅಥವಾ ಅದಕ್ಕಿಂತ ಹೆಚ್ಚಿನ ಸಮಯ ಸ್ಮಾರ್ಟ್‌ಫೋನ್ ಬಳಸುವವರು ಇದ್ದಾರೆ. ನೀವು ಹೆಚ್ಚಾಗಿ ಸ್ಮಾರ್ಟ್‌ಫೋನ್ ನೋಡುತ್ತಿದ್ದರೆ ಕಣ್ಣಿಗೆ ಅಪಾಯ ತಪ್ಪಿದ್ದಲ್ಲ ಎಂ;ಬುವುದರ ಬಗ್ಗೆ ಜನರಿಗೆ ಜಾಗೃತಿ ಮೂಡಿಸುವ ಸಲುವಾಗಿ ಡಾ. ಸುಧೀರ್ ಟ್ವೀಟ್ ಮಾಡಿದ್ದಾರೆ.
ಕೆಲವರಂತೂ ಸ್ಮಾರ್ಟ್‌ಫೋನ್ ಬಳಸುತ್ತಾರೆ, ಹೀಗೆ ಮಾಡಿದರೆ ಕಣ್ಣಿಗೆ ಮತ್ತಷ್ಟು ಹಾನಿಯುಂಟಾಗುವುದು, ಉದಾಹರಣೆಗೆ ಲೈಟ್ ಆಫ್ ಮಾಡಿದ ಮೇಲೆ ಮೊಬೈಲ್ ನೋಡುವುದು, ಮಲಗಿಕೊಂಡು ಮೊಬೈಲ್ ನೋಡುವುದು ಇವೆಲ್ಲಾ ಕುರುಡುತನ ತರಬಹುದು ಹುಷಾರ್!
ಸ್ಮಾರ್ಟ್‌ಫೋನ್ ಅನ್ನು ಸುರಕ್ಷಿತವಾಗಿ ಬಳಸುವುದು ಹೇಗೆ ಎಂದು ನೋಡೋಣ:
ಡಾರ್ಕ್ ಮೋಡ್ ಬಳಸಿ
ಎಲ್ಲಾ ಸ್ಮಾರ್ಟ್‌ಫೋನ್‌ನಲ್ಲಿ ಡಾರ್ಕ್ ಥೀಮ್ ಇರುತ್ತದೆ, ನಿಮ್ಮ ಡಿವೈಸ್ ಅನ್ನು ಡಾರ್ಕ್ ಥೀಮ್‌ನಲ್ಲಿ ಇಡುವುದರಿಂದ ಟೆಕ್ಸ್ಟ್ ಡಾರ್ಕ್ ಬ್ಯಾಕ್‌ಗ್ರೌಂಡ್‌ನಲ್ಲಿ ಕಾಣುವುದು. ಡಾರ್ಕ್ ಮೋಡ್ ಬ್ಲೂ ಲೈಟ್ ಕಡಿಮೆ ಮಾಡುವುದು, ಇದರಿಂದ ಮೊಬೈಲ್ ನೋಡಿದಾಗ ಕಣ್ಣು ಬೇಗ ಸುಸ್ತಾಗುವುದಿಲ್ಲ. ಈ ಮೋಡ್ ಅನ್ನು ನಮ್ಮ ಅವಶ್ಯಕತೆಗೆ ತಕ್ಕಂತೆ ಆನ್ ಅಂಡ್ ಆಫ್ ಆಗಿ ಇಡಬಹುದು.
ಸ್ಕ್ರೀನ್ ಬ್ರೈಟ್‌ನೆಸ್ ಸೆಟ್ಟಿಂಗ್ ಅಡ್ಜೆಸ್ಟ್ ಮಾಡಿ
ಅತ್ಯಧಿಕ ಹಾಗೂ ಅತೀ ಕಡಿಮೆ ಬ್ರೈಟ್‌ನೆಸ್ ಕೂಡ ಕಣ್ಣಿಗೆ ಒಳ್ಳೆಯದಲ್ಲ, ಬ್ರೈಟ್ನೆಸ್ ಅನ್ನು ಮೀಡಿಯಂನಲ್ಲಿಡಿ. ರಾತ್ರಿಯಲ್ಲಿ ತುಂಬಾ ಬ್ರೈಟ್ನೆಸ್ ಇಟ್ಟು ಮೊಬೈಲ್ ನೋಡಬೇಡಿ.
ಕಣ್ಣು ಮಿಟುಕಿಸಲು ಮರೆಯಬೇಡಿ
ನೀವು ಮೊಬೈಲ್, ಲ್ಯಾಪ್‌ಟಾಪ್, ಟಿವಿ ಇವೆಲ್ಲಾ ನೋಡುವಾಗ ಕಣ್ಣು ಮಿಟುಕಿಸುತ್ತಾ ಇರಬೇಕು. ನೀವು 10-20 ನಿಮಿಷಕ್ಕೊಮ್ಮೆ ಕಣ್ಣು ಮಿಟುಕಿಸಬೇಕು, ಕಣ್ಣು ಆಗಾಗ ಮಿಟುಕಿಸುವುದರಿಂದ ಕಣ್ಣಿಗೆ ಹಾನಿಯಾಗುವುದನ್ನು ತಡೆಗಟ್ಟಬಹುದು.
ಐಫೋನ್ ಮತ್ತು ಇತರ ಡಿಜಿಟಲ್‌ನಲ್ಲಿ ಸ್ಕ್ರೀನ್ ಟೈಮ್ ಸೆಟ್ ಮಾಡಿ
ನೀವು ನಿಮ್ಮ ಮೊಬೈಲ್‌ನಲ್ಲಿ ಈ ರೀತಿ ಸೆಟ್ಟಿಂಗ್ ಮಾಡುವ ಮೂಲಕ ಮೊಬೈಲ್ ಹೆಚ್ಚು ನೋಡುವುದಕ್ಕೆ ಕಡಿವಾಣ ಹಾಕಬಹುದು.
ಐಫೋನ್‌ನಲ್ಲಿ ನೈಟ್ ಶಿಫ್ಟ್ ಹಾಗೂ ಆಂಡ್ರೋಯ್ಡ್ ಮೊಬೈಲ್‌ನಲ್ಲಿ ನೈಟ್ ಲೈಟ್ ಸೆಟ್ ಮಾಡಿ
ಇದು ನಿಮ್ಮ ಮೊಬೈಲ್‌ಗಳಲ್ಲಿ ಇರುತ್ತದೆ, ಈ ರೀತಿ ಮಾಡುವುದರಿಂದ ಮೊಬೈಲ್ ಸ್ಕ್ರೀನ್ ಲೈಟ್ ಕಣ್ಣಿಗೆ ಬಿದ್ದು ಹಾನಿಯಾಗುವುದು ತಡೆಯಬಹುದು.
ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಟೆಕ್ಸ್ಟ್ ಸೈಜ್ ಹೆಚ್ಚು ಮಾಡಿ
ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಏನಾದರೂ ಓದುವಾಗ ಟೆಕ್ಸ್ಟ್ ಸೈಜ್ ಹೆಚ್ಚು ಇಟ್ಟುಕೊಳ್ಳಿ, ಇದರಿಂದ ನಿಮ್ಮ ಕಣ್ಣುಗಳ ಮೇಲೆ ಒತ್ತಡ ಬೀರುವುದು ತಡೆಗಟ್ಟಬಹುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications

