Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಪುರುಷರ ಮೆನೋಪಾಸ್ ಸ್ತ್ರೀಯರ ಮೆನೋಪಾಸ್‌ಗಿಂತ ಹೇಗೆ ಭಿನ್ನವಾಗಿರುತ್ತೆ?
ಮೆನೋಪಾಸ್ 40 ವರ್ಷದ ಬಳಿಕ ಮಹಿಳೆಯರನ್ನು ಕಾಡುವುದು ಸಹಜ, ಅದೇ ಮೆನೋಪಾಸ್ ಪುರುಷರಿಗೂ ಬರುತ್ತದೆ ಎಂಬುವುದು ಗೊತ್ತೇ? ಆದರೆ ಇದರ ಬಗ್ಗೆ ಹೆಚ್ಚಿನವರಿಗೆ ತಿಳಿದಿರುವುದಿಲ್ಲ. ಮೆನೋಪಾಸ್ ಎಂಬುವುದು ಮಹಿಳೆಯರಿಗೆ ಮಾತ್ರ ಬರುವುದು ಎಂದು ಹೆಚ್ಚಿನವರು ಅಂದುಕೊಂಡಿರುತ್ತಾರೆ. ಆದರೆ ಮೆನೋಪಾಸ್ ಪುರುಷರನ್ನೂ ಕಾಡುತ್ತೆ.

ವಯಸ್ಸಾಗುತ್ತಿದ್ದಂತೆ ಹಾರ್ಮೋನ್‌ಗಳ ಬದಲಾವಣೆ ಉಂಟಾಗುತ್ತದೆ. ಆಗ ಮೆನೋಪಾಸ್ ಉಂಟಾಗುವುದು. ವಯಸ್ಸಾಗುತ್ತಿದ್ದಂತೆ ಪುರುಷರಿಗೆ ಕೆಲವು ಬದಲಾವಣೆಗಳು ಅನುಭವಕ್ಕೆ ಬರುವುದು, ಇದಕ್ಕೆ ಕಾರಣ ಪುರುಷ ಹಾರ್ಮೋನ್ ಕಡಿಮೆಯಾಗುವುದು, ಅಂದರೆ ಟೆಸ್ಟೋಸ್ಟಿರೋನ್ ಪ್ರಮಾಣ ಕಡಿಮೆಯಾಗುವುದು.
ನಾವಿಲ್ಲಿ ಪುರುಷರ ಮೆನೋಪಾಸ್ ಹಂತ ಮಹಿಳೆಯರ ಮೆನೋಪಾಸ್‌ಗಿಂತ ಹೇಗೆ ಭಿನ್ನವಾಗಿರುತ್ತದೆ, ಈ ಸಂದರ್ಭದಲ್ಲಿ ದೇಹದಲ್ಲಾಗುವ ಬದಲಾವಣೆಯೇನು ಎಂಬುವುದರ ಬಗ್ಗೆ ಮಾಹಿತಿ ನೀಡಿದ್ದೇವೆ ನೋಡಿ:

ಪುರುಷರಲ್ಲಿ ಮೆನೋಪಾಸ್ ಹಂತ ಮಹಿಳೆಯರಿಗಿಂತ ಹೇಗೆ ಭಿನ್ನವಾಗಿರುತ್ತೆ?
ಮಹಿಳೆಯರಲ್ಲಿ ಸ್ತ್ರೀ ಹಾರ್ಮೋನ್ ಸಂಪೂರ್ಣ ನಿಂತು ಹೋದರೆ, ಪುರುಷರಲ್ಲಿ ಪುರುಷ ಹಾರ್ಮೋನ್ ನಿಧಾನಕ್ಕೆ ಕಡಿಮೆಯಾಗುತ್ತಾ ಹೋಗುವುದು. ಪುರುಷರಲ್ಲಿ ಮೆನೋಪಾಸ್ ಕೆಲವರಲ್ಲಿ ಮಾತ್ರ 45-50ರ ಪ್ರಾಯದಲ್ಲಿ ಕಂಡು ಬರುತ್ತದೆ, ಆದರೆ ಹೆಚ್ಚಿನವರಲ್ಲಿ 70 ಬಳಿಕ ಈ ಸಮಸ್ಯೆ ಕಂಡು ಬರುವುದು.
ಅನೇಕ ರೀತಿಯಿಂದ ಪುರುಷ ಮೆನೋಪಾಸ್ ಮಹಿಳೆಯರಿಗಿಂತ ಭಿನ್ನವಾಗಿರುತ್ತದೆ. ಅಲ್ಲದೆ ಪುರುಷರಲ್ಲಿ ಸಂತಾನೋತ್ಪತ್ತಿ ಸಾಮರ್ಥ್ಯ ಸ್ವಲ್ಪ ಕಡಿಮೆಯಾಗುವುದು, ಅದೇ ಮಹಿಳೆಯರಲ್ಲಿ ದೈಹಿಕ, ಲೈಂಗಿಕ, ಮಾನಸಿಕ ತೊಂದರೆಗಳು ಕಂಡು ಬರುವುದು.
ಆರೋಗ್ಯ ತಜ್ಞರ ಪ್ರಕಾರ ಪುರುಷರಲ್ಲಿ ವಯಸ್ಸಾಗುತ್ತಿದ್ದಂತೆ ಮೆನೋಪಾಸ್ ಸಮಸ್ಯೆ ಕಂಡು ಬರುವುದು.

ಪುರುಷ ಮೆನೋಪಾಸ್ ಲಕ್ಷಣಗಳು
ಶಿಶ್ನ ನಿಮುರುವಿಕೆಯಲ್ಲಿ ತೊಂದರೆ
ಶೀಘ್ರ ಸ್ಖಲನ
ಮಾಂಸಖಂಡಗಳಲ್ಲಿ ಶಕ್ತಿ ಕಡಿಮೆಯಾಗುವುದು
ಅಲ್ಲದೆ ಮೈ ತೂಕ ಹೆಚ್ಚಾಗುತ್ತದೆ, ದೇಹದಲ್ಲಿ ಖನಿಜಾಂಶಗಳು , ಪೋಷಕಾಂಶಗಳು ಕಡಿಮೆಯಾಗುವುದು. ಅಲ್ಲದೆ ಸ್ವಲ್ಪ ಬೇಸರ ಕೂಡ ಈ ಸಮಯದಲ್ಲಿ ಕಾಡುವುದು.

ಪುರುಷ ಮೆನೋಪಾಸ್ ಕಂಡು ಹಿಡಿಯುವುದು ಹೇಗೆ, ಇದಕ್ಕೆ ಚಿಕಿತ್ಸೆ ಏನು?
ಪುರುಷರಲ್ಲಿ ಮೆನೋಪಾಸ್ ಲಕ್ಷಣಗಳು ಕಂಡು ಬಂದರೆ ಅವರಲ್ಲಿ ಟೆಸ್ಟೋಸ್ಟಿರೋನ್ ಪರೀಕ್ಷೆ ಮಾಡಿಸುವಂತೆ ವೈದ್ಯರು ಸೂಚಿಸುತ್ತಾರೆ. ಈ ರೀತಿ ಪರೀಕ್ಷೆ ಮಾಡಿದಾಗ ಟೆಸ್ಟೋಸ್ಟಿರೋನ್ ಪ್ರಮಾಣ ಕಡಿಮೆಯಾಗಿದ್ದರೆ ಅದು ಮೆನೋಪಾಸ್ ಲಕ್ಷಣಗಳಿರಬಹುದು.

ಮೆನೋಪಾಸ್ ತಡೆಗಟ್ಟಲು ಏನು ಮಾಡಬೇಕು?
ಆರೋಗ್ಯಕರ ಆಹಾರ ಪಾಲಿಸಬೇಕು
ನಿಮ್ಮ ಆಹಾರದಲ್ಲಿ ಸೊಪ್ಪು, ತರಕಾರಿ ಹೆಚ್ಚಾಗಿ ಬಳಸಬೇಕು. ಅಲ್ಲದೆ ತುಂಬಾ ಜಂಕ್ ಫುಡ್ಸ್ ತಿನ್ನುವುದು ಬಿಡಬೇಕು. ಹೀಗೆ ಮಾಡುವುದರಿಂದ ಒಬೆಸಿಟಿ ತಡೆಗಟ್ಟಬಹುದು.
ನಿಯಮಿತ ವ್ಯಾಯಾಮ
ಆರೋಗ್ಯಕರ ದೇಹಕ್ಕೆ ವ್ಯಾಯಾಮ ತುಂಬಾನೇ ಮುಖ್ಯ. ಅದರಲ್ಲೂ ವಯಸ್ಸಾದಂತೆ ಕಾಡುವ ಸಮಸ್ಯೆ ತಡೆಗಟ್ಟುವಲ್ಲಿ ವ್ಯಾಯಾಮ ತುಂಬಾನೇ ಸಹಕಾರಿಯಾಗಿದೆ.
ಸಾಕಷ್ಟು ನಿದ್ದೆ ಮಾಡಬೇಕು
ದೇಹಕ್ಕೆ 8 ಗಂಟೆ ನಿದ್ದೆ ಅವಶ್ಯಕ. ಸಮಯಕ್ಕೆ ಸರಿಯಾಗಿ ನಿದ್ದೆ ಮಾಡುವ ಅಭ್ಯಾಸ ರೂಢಿಸಿಕೊಳ್ಳಿ.
ಮಾನಸಿಕ ಒತ್ತಡ ಕಡಿಮೆ ಮಾಡಿ
ಮಾನಸಿಕ ಒತ್ತಡ ಹೆಚ್ಚಾದರೆ ದೇಹದ ಮೇಲೆ ಹಲವಾರು ಅಡ್ಡಪರಿಣಾಮ ಬೀರುತ್ತದೆ. ಮಾನಸಿಕ ಒತ್ತಡ ಖಿನ್ನತೆ ಉಂಟು ಮಾಡುತ್ತದೆ, ಲೈಂಗಿಕ ಸಾಮರ್ಥ್ಯ ಕುಗ್ಗಿಸುವುದು, ಒಂಥರಾ ಅಸ್ವಸ್ಥ ಮನೋಭಾವ ಉಂಟು ಮಾಡುತ್ತದೆ.
ಅದೇ ಆರೋಗ್ಯಕರ ಜೀವನಶೈಲಿ ಪುರುಷರ ಆರೋಗ್ಯ ಕಾಪಾಡುತ್ತೆ, ಅಲ್ಲದೆ ಈ ರೀತಿ ಮೆನೋಪಾಸ್ ಸಮಸ್ಯೆ ಬರುವುದನ್ನು ತಡೆಗಟ್ಟುತ್ತದೆ.



Click it and Unblock the Notifications
