Latest Updates
-
ಬೆಂಗಳೂರು ಮಳೆ: ಟ್ರಾಫಿಕ್ ಜಾಮ್ ತಪ್ಪಿಸಿ ಸುರಕ್ಷಿತವಾಗಿ ಮನೆ ತಲುಪಲು ಇಲ್ಲಿದೆ ಸ್ಮಾರ್ಟ್ ಟ್ರಾವೆಲ್ ಪ್ಲಾನ್! -
ಡೆಂಗ್ಯೂ ಭೀತಿ: ನಿಮ್ಮ ಬಾಲ್ಕನಿಯಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಲು 10 ನಿಮಿಷದ ಸಿಂಪಲ್ ಟಿಪ್ಸ್! -
ಮುಂಬೈನಲ್ಲಿ ತೀವ್ರ ಬಿಸಿಲು: IMD ಯಿಂದ ಹಳದಿ ಎಚ್ಚರಿಕೆ; ಆರೋಗ್ಯ ಕಾಪಾಡಿಕೊಳ್ಳಲು ಈ ಮುನ್ನೆಚ್ಚರಿಕೆ ಅಗತ್ಯ! -
ಅಮೆಜಾನ್-ಫ್ಲಿಪ್ಕಾರ್ಟ್ ಸೇಲ್: ಅತಿ ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ 72 ಗಂಟೆಗಳ ಪ್ಲಾನ್ ಫಾಲೋ ಮಾಡಿ! -
ದೆಹಲಿ ವಾಯು ಮಾಲಿನ್ಯ: AQI ಏರಿಕೆ, ಹೊರಗೆ ಹೋಗುವ ಮುನ್ನ ಈ ಮಾಸ್ಕ್ ಧರಿಸುವುದು ಕಡ್ಡಾಯ! -
ವಿಶ್ವ ಶಿಕ್ಷಕರ ದಿನ: ಶಿಕ್ಷಕರಿಗೆ ಗೌರವ ಸಲ್ಲಿಸುವಾಗ ಪೋಷಕರು ಪಾಲಿಸಬೇಕಾದ ಶಿಷ್ಟಾಚಾರಗಳೇನು? -
ಕೇರಳ-ತಮಿಳುನಾಡು ಮಳೆ ಅಲರ್ಟ್: ನಿಮ್ಮ ಮನೆ ಮತ್ತು ಕಾರನ್ನು ಸುರಕ್ಷಿತವಾಗಿಡಲು ಈ 5 ತಕ್ಷಣದ ಕ್ರಮಗಳನ್ನು ಕೈಗೊಳ್ಳಿ! -
ಜಿಮ್ಗೆ ಹೋಗುವವರೇ ಎಚ್ಚರ! ಪ್ರೊಟೀನ್ ಸಪ್ಲಿಮೆಂಟ್ಸ್ ಮೇಲೆ FDA ದಾಳಿ, ನಕಲಿ ಉತ್ಪನ್ನ ಪತ್ತೆಹಚ್ಚುವುದು ಹೇಗೆ? -
ಏಷ್ಯನ್ ಗೇಮ್ಸ್ ಕ್ರಿಕೆಟ್ ಫೈನಲ್: ಭಾರತದ ಗೆಲುವಿನ ಸಂಭ್ರಮಕ್ಕೆ ಇಲ್ಲಿದೆ ವೈರಲ್ ಮೀಮ್ಸ್ ಮತ್ತು ಸೇಫ್ ಸೆಲೆಬ್ರೇಷನ್ ಗೈಡ್! -
ಕೋಲ್ಕತ್ತಾದಲ್ಲಿ ಕಳಪೆ ಗಾಳಿ: ವಾಕಿಂಗ್ ಹೋಗುವ ಮುನ್ನ ಈ ಸುರಕ್ಷಿತ ಸಮಯ ಮತ್ತು ಮಾರ್ಗಗಳನ್ನು ತಪ್ಪದೇ ತಿಳಿಯಿರಿ
ಚಳಿಗಾಲದಲ್ಲಿ ಮುಟ್ಟಿನ ಹೊಟ್ಟೆ ನೋವು ಹೆಚ್ಚಾಗಿರುತ್ತದೆ ಏಕೆ? ಹೊಟ್ಟೆ ನೋವು ಕಡಿಮೆ ಮಾಡಲು ಮನೆಮದ್ದುಗಳು
ಕೆಲವು ಸ್ತ್ರೀಯರಿಗೆ ಮುಟ್ಟಿನ ಸಮಯದಲ್ಲಿ ಕಿಬ್ಬೊಟ್ಟೆ ನೋವು, ವಾಂತಿ, ಸುಸ್ತು ಈ ಬಗೆಯ ಸಮಸ್ಯೆ ಎಲ್ಲಾ ತಿಂಗಳಿನಲ್ಲಿ ಇರುತ್ತದೆ, ಇನ್ನು ಕೆಲವರಿಗೆ ಕೆಲವೊಂದು ತಿಂಗಳುಗಳಲ್ಲಿ ಮಾತ್ರ ಕಂಡು ಬರುವುದು.
ಅದರಲ್ಲೂ ಚಳಿಗಾಲದ ತಿಂಗಳಿನಲ್ಲಿ ಹೆಚ್ಚಾಗಿ ಕಂಡು ಬರುವುದು. ಚಳಿಗಾಲದಲ್ಲಿ ಮುಟ್ಟಿನ ನೋವು ಅಧಿಕವಿರಲು ಕಾರಣವೇನು? ಮುಟ್ಟಿನ ಸಮಯದಲ್ಲಿ ಕಾಡುವ ಕಿಬ್ಬೊಟ್ಟೆ ನೋವು, ಇತರ ಆರೋಗ್ಯ ಸಮಸ್ಯೆ ತಡೆಗಟ್ಟಲು ಏನು ಮಾಡಬೇಕು ಎಂದು ನೋಡೋಣ ಬನ್ನಿ:

ಚಳಿಗಾಲದಲ್ಲಿ ಮುಟ್ಟಿನ ನೋವು ಹೆಚ್ಚಾಗಲು ಕಾರಣವೇನು?
ಚಳಿಗಾಲದಲ್ಲಿ ದೇಹಕ್ಕೆ ವಿಟಮಿನ್ ಡಿ ಕಡಿಮೆಯಾಗುವುದು, ಏಕೆಂದರೆ ಸೂರ್ಯನ ಬಿಸಿಲು ಬೆಳಗ್ಗೆ ಹೊತ್ತಿನಲ್ಲಿ ಬೀಳುವುದು ಕಡಿಮೆ, ವಿಟಮಿನ್ ಡಿ ಬೆಳಗ್ಗೆ ಬೀಳುವ ಸೂರ್ಯನ ರಶ್ಮಿಯಲ್ಲಿ (9 ಗಂಟೆಯ ಒಳಗೆ) ನಂತರ ಸಂಜೆಯ ಸೂರ್ಯನ ರಶ್ಮಿಗೆ ಮೈಯೊಡ್ಡಿದರೆ ವಿಟಮಿನ್ ಡಿ ಸಿಗುವುದು, ಆದರೆ ಚಳಿಗಾಲದಲ್ಲಿ ಈ ಸಮಯದಲ್ಲಿ ಚಳಿ ಇರುವುದರಿಂದ ಮನೆಯಿಂದ ಹೊರಬರುವುದು ಕಡಿಮೆ, ಹೀಗಾಗಿ ವಿಟಮಿನ್ ಡಿ ಕಡಿಮೆಯಾಗುವುದು. ಈ ಸಮಯದಲ್ಲಿ ರಕ್ತ ಸಂಚಾರ ಕಡಿಮೆಯಾಗುವುದು ಹೀಗಾಗಿ ಮುಟ್ಟಿನಲ್ಲಿ ಸ್ನಾಯುಗಳ ಸೆಳೆತ ಅಧಿಕವಾಗುವುದರಿಂದ ತುಂಬಾ ನೋವು ಉಂಟಾಗುವುದು.
ಚಳಿಗಾಲದಲ್ಲಿ ರಕ್ತ ಸಂಚಾರ ಕಡಿಮೆಯಾಗುವುದು
ವಾತಾವರಣ ತುಂಬಾ ಚಳಿಯಿದ್ದಾಗ ರಕ್ತನಾಳಗಳಲ್ಲಿ ಸರಿಯಾಗಿ ರಕ್ತ ಸಂಚಾರವಾಗುವುದಿಲ್ಲ, ಇದರಿಂದ ಹೃದಯದ ಮೇಲೆ ಅಧಿಕ ಒತ್ತಡ ಹಾಕುತ್ತದೆ. ಇದರಿಂದ ರಕ್ತದೊತ್ತಡ ಹೆಚ್ಚುವುದು, ಇದರಿಂದಾಗಿ ಚಳಿಗಾಲದಲ್ಲಿ ಮುಟ್ಟಿನ ಸಮಯದಲ್ಲಿ ರಕ್ತಸ್ರಾವ ಕಡಿಮೆಯಾಗಬಹುದು, ಕೆಲವರಲ್ಲಿ ಅನಿಯಮಿತ ಮುಟ್ಟಿನ ಸಮಸ್ಯೆ ಉಂಟು ಮಾಡಬಹುದು.
ಚಳಿಗಾಲದಲ್ಲಿ ಮುಟ್ಟಿನ ನೋವು ಕಡಿಮೆ ಮಾಡಲು ಮನೆಮದ್ದು
ಹಾಲಿಗೆ ಅರಿಶಿಣ ಹಾಕಿ ಕುಡಿದರೆ ಮುಟ್ಟಿನ ನೋವು ಕಡಿಮೆಯಾಗುವುದು. ಸೂಪ್, ಕರಿ, ಸಾರು ಇವುಗಳಲ್ಲಿ ಅರಿಶಿಣ ಹಾಕಿ ಬಳಸಿ.
ಸಾಕಷ್ಟು ನೀರು ಕುಡಿಯಿರಿ
ಚಳಿಗಾಲದಲ್ಲಿ ಬಾಯಾರಿಕೆ ಕಡಿಮೆ ಎಂದು ನೀರು ಕುಡಿಯದೆ ಇರಬೇಡಿ, ದಿನದಲ್ಲಿ 8 ಲೋಟ ನೀರು ಕುಡಿಯಿರಿ, ದೇಹದಲ್ಲಿ ನೀರಿನಂಶ ಕಡಿಮೆಯಾದರೆ ಮುಟ್ಟಿನ ಸಮಯದಲ್ಲಿ ನೋವು ಹೆಚ್ಚುವುದು.
ಈ ಬಗೆಯ ಹರ್ಬಲ್ ಟೀ ಕುಡಿಯಿರಿ
ಮುಟ್ಟಿನ ಸಮಯದಲ್ಲಿ ಸೋಂಪು, ಶುಂಠಿ ಟೀ ಕುಡಿಯುವುದರಿಂದ ಮುಟ್ಟಿನ ನೋವು ಕಡಿಮೆಯಾಗುವುದು, ಆದ್ದರಿಂದ ಮುಟ್ಟಿನ ದಿನ ಹತ್ತಿರವಾಗುವಾಗ ಈ ಬಗೆಯ ಹರ್ಬಲ್ ಟೀ ಕುಡಿಯುವುದರಿಂದ ಮುಟ್ಟಿನ ನೋವು ಕಡಿಮೆಯಾಗುವುದು.
ಹಾಟ್ ವಾಟರ್ ಕಂಪ್ರೆಸ್
ಮುಟ್ಟಿನ ನೋವು ಕಡಿಮೆ ಮಾಡಲು ಹಾಟ್ ವಾಟರ್ ಕಂಪ್ರೆಸ್ ಸಹಕಾರಿ. ಹಾಟ್ ವಾಟರ್ ಬ್ಯಾಗ್ ಹೊಟ್ಟೆಯ ಮೇಲಿಟ್ಟು ಮಲಗಿದರೆ ತುಂಬಾ ರಿಲ್ಯಾಕ್ಸ್ ಅನಿಸುವುದು.
ಹೊಟ್ಟೆಯ ಭಾಗಕ್ಕೆ ಮಸಾಜ್ ಮಾಡಿ
ಮುಟ್ಟಿನ ಸಮಯದಲ್ಲಿ ತುಂಬಾ ಹೊಟ್ಟೆ ನೋವು ಇದ್ದರೆ ಹೊಟ್ಟೆ ಭಾಗಕ್ಕೆ ಮಸಾಜ್ ಮಾಡಿ, ಆದರೆ ತುಂಬಾ ಒತ್ತಡ ಹಾಕಿ ಮಾಡಬೇಡಿ.
ಯೋಗ
ಕೆಲವೊಂದು ಬಗೆಯ ಯೋಗಾಸನ ಮುಟ್ಟಿನ ನೋವು ಕಡಿಮೆ ಮಾಡಲು ಸಹಕಾರಿ. ಬಾಲಾಸನ, ಶವಾಸನ ಹೊಟ್ಟೆ ನೋವು ಕಡಿಮೆ ಮಾಡುತ್ತದೆ.
ಜಂಕ್ ಫುಡ್ಸ್ ತಿನ್ನಬೇಡಿ
ಪಿಜ್ಜಾ, ಪಾಸ್ತಾ, ಚೈನೀಸ್, ಬೇಕರಿ, ಸಂಸ್ಕರಿಸಿದ ಆಹಾರಗಳು ತಿನ್ನಲು ರುಚಿಯಾಗಿರುತ್ತದೆ, ಆದರೆ ಇದರಿಂದ ನಿಮ್ಮ ಮುಟ್ಟಿನ ನೋವು ಮತ್ತಷ್ಟು ಹೆಚ್ಚಾಗುವುದು. ಮುಟ್ಟಿನ ಸಮಯದಲ್ಲಿ ನೀವು ತೆಗೆದುಕೊಳ್ಳುವ ಆಹಾರ ಕೂಡ ನಿಮ್ಮ ಆರೋಗ್ಯದ ಮೇಲೆ ಪ್ರಭಾವ ಬೀರುತ್ತದೆ.
ಜೀರಿಗೆ-ಮೆಂತೆ ನೀರು
2 ಕಪ್ ನೀರಿಗೆ 2 ಚಮಚ ಜೀರಿಗೆ, 1 ಚಮಚ ಮೆಂತೆ ಹಾಕಿ ಕುದಿಸಿ ಆ ನೀರನ್ನು ಬಿಸಿ ಬಿಸಿಯಾಗಿ ಹೀರುವುದರಿಂದ ಕೂಡ ಮುಟ್ಟಿನ ನೋವು ಕಡಿಮೆಯಾಗುವುದು.
ಎಳನೀರು ಕುಡಿಯಿರಿ
ಮುಟ್ಟಿನ ಚಕ್ರ ಪ್ರಾರಂಭವಾಗು ಒಂದೆರಡು ದಿನಕ್ಕಿಂತ ಮುಂಚೆಯೇ ಒಂದೊಂದು ಎಳನೀರು ಕುಡಿಯಿರಿ, ಹೀಗೆ ಮಾಡಿದರೆ ನೋವು ತುಂಬಾ ಕಡಿಮೆಯಾಗುವುದು.
Antispasmodic ಔಷಧ
ಮುಟ್ಟಿನ ನೋವು ತುಂಬಾ ಇದ್ದರೆ, ಮನೆಮದ್ದುಗಳಿಗೆ ಕಂಟ್ರೋಲ್ ಆಗದೇ ಇದ್ದರೆ ಈ ಔಷಧ ತೆಗೆದುಕೊಳ್ಳಿ.
ಕೊನೆಯದಾಗಿ
ಮುಟ್ಟಿನ ನೋವು ಇದ್ದರೆ ಹೀಗೆ ಮಾಡಿ ಕಡಿಮೆಯಾಗುವುದು
* ಪ್ಯಾರಾಸಿಟಮೋಲ್ ಬಳಸಿ
* ಹೊಟ್ಟೆಯ ಭಾಗಕ್ಕೆ ಮೆಲ್ಲನೆ ಮಸಾಜ್ ಮಾಡಿ
* ಹರ್ಬಲ್ ಟೀ ಕುಡಿಯಿರಿ
* ಯೋಗ ಮಾಡಿ
* ಹಾಟ್ ಕಂಪ್ರೆಸ್ ಬಳಸಿ
* ಹದ ಬಿಸಿ ನೀರಿನಲ್ಲಿ ಸ್ನಾನ ಮಾಡಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications



