Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಕಾಂಡೋಮ್ ಸೈಜ್ ಕೂಡ ಮ್ಯಾಟರ್ ಆಗುವುದೇ? ಸರಿಯಾದ ಸೈಜ್ ಆಯ್ಕೆ ಹೇಗೆ?
ಸರಿಯಾದ ಕಾಂಡೋಮ್ ಆಯ್ಕೆ ಮಾಡುವುದು ಸ್ವಲ್ಪ ಟ್ರಿಕ್ಕಿ. ಕಾಂಡೋಮ್ ಕಂಫರ್ಟ್ ಅನಿಸದಿದ್ದರೆ ಅದನ್ನು ಬಳಸಲು ಇಷ್ಟಪಡುವುದಿಲ್ಲ. ಆದರೆ ಬೇಡದ ಗರ್ಭ ತಡೆಗಟ್ಟಲು, ಲೈಂಗಿಕ ಸೋಂಕು ಹರಡುವುದನ್ನು ತಡೆಗಟ್ಟಲು ಕಾಂಡೋಮ್ ಬಳಸಲೇಬೇಕು.

ಮಾರ್ಕೆಟ್‌ನಲ್ಲಿ ಹಲವಾರು ಬ್ರ್ಯಾಂಡ್‌ನ ಕಾಂಡೋಮ್ ಇದೆ, ಅದರೆ ಎಲ್ಲರಿಗೆ ಆ ಎಲ್ಲಾ ಬ್ರ್ಯಾಂಡ್‌ಗಳು ಸೂಟ್ ಆಗುವುದಿಲ್ಲ. ಕೆಲವರಿಗೆ ಕಂಫರ್ಟ್ ಅನಿಸಿದ ಬ್ರ್ಯಾಂಡ್ ಇನ್ನು ಕೆಲವರಿಗೆ ಕಂಫರ್ಟ್ ಆಗದೇ ಇರಬಹುದು. ಆಗದರೆ ಕಾಂಡೋಮ್ ಸೈಜ್ ಮ್ಯಾಟರ್ ಆಗುವುದೇ?

ಕಾಂಡೋಮ್ ಸವಾಲುಗಳು
ಕಾಂಡೋಮ್ ಅನ್ನು ಲ್ಯಾಟೆಕ್ಸ್ ಅಥವಾ ಪಾಲಿಯುರೆಥೇನ್ ಅಥವಾ ಇನ್ನಿತರ ವಸ್ತುಗಳನ್ನು ಬಳಸಿ ತಯಾರಿಸಲಾಗುವುದು. ಎಲ್ಲಾ ಕಾಂಡೋಮ್‌ಗಳು ISO ಸ್ಟ್ಯಾಂಡರ್ಡ್‌ನಂತೆ ಇರಬೇಕು, ಇಲ್ಲದಿದ್ದರೆ ಮಾರಾಟಕ್ಕೆ ಅನುಮತಿ ಸಿಗಲ್ಲ.
ISOದಲ್ಲಿ ಏರ್ ಬರ್ಸ್ಟ್ ಅಥವಾ ಎಲೆಕ್ಟ್ರಿಕಲ್ ವಿಧಾನದಲ್ಲಿ ಪರೀಕ್ಷೆ ಮಾಡಲಾಗುವುದು, ಆಗ ಕಾಂಡೋಮ್ ಒಡೆದು ಹೋಗಬಾರದು. ಕಾಂಡೋಮ್ ದಪ್ಪ ISO ಸ್ಟ್ಯಾಂಡರ್ಡ್‌ನಂತೆ ಇರಬೇಕು. ಆದರೆ ಶೇ. 50ರಷ್ಟು ಪುರುಷರು ಕಾಂಡೋಮ್ ನಮಗೆ ಸರಿಯಾಗಿ ಫಿಟ್ ಆಗುತ್ತಿಲ್ಲ ಎಂದು ದೂರುತ್ತಾರೆ.

ಕಾಂಡೋಮ್ ಸೈಜ್ ಸಮಸ್ಯೆಯಾಗುತ್ತಿದೆ
ಇತ್ತೀಚೆಗೆ ಇದರ ಕುರಿತು ಸರ್ವೇ ನಡೆಸಲಾಗಿತ್ತು, ಆಗ ತುಂಬಾ ಪುರುಷರು ಕಾಂಡೋಮ್ ಗಾತ್ರ ನಮಗೆ ಸರಿಯಾಗಿ ಫಿಟ್ ಆಗುತ್ತಿಲ್ಲ ಎಂಬುವುದಾಗಿ ದೂರಿದರು. ಒಂದೋ ತುಂಬಾ ದೊಡ್ಡದಾಗಿರುತ್ತೆ, ಒಂದೋ ಚಿಕ್ಕದಾಗಿರುತ್ತೆ, ಕೆಲವೊಂದು ಸಡಿಲ, ಕೆಲವೊಂದು ಬಿಗಿ ಅನಿಸುವುದು.

ಜಾರುವುದು, ಒಡೆಯುವುದೂ ಕೂಡ ಇದೆ
ಕಾಂಡೋಮ್ ಕೆಲವೊಮ್ಮೆ ಜಾರುವುದು, ಇನ್ನು ಕೆಲವೊಮ್ಮೆ ಒಡೆದು ಹೋಗುವುದು. ಈ ರೀತಿ ಆಗಾಗ ಆಗುವುದು ಎಂಬುವುದು ಪುರುಷರ ದೂರಾಗಿದೆ. ಕೆಲವರಿಗೆ ಕಾಂಡೋಮ್ ಧರಿಸಿದರೆ ಸೆಕ್ಸ್ ತೃಪ್ತಿ ನೀಡುವುದಿಲ್ಲ, ಸ್ಖಲನಕ್ಕೆ ಸಮಸ್ಯೆಯಾಗುವುದು, ಕೆಲವೊಮ್ಮೆ ಕಾಂಡೋಮ್ ಡ್ರೈ ಫೀಲ್ ನೀಡುವುದು ಎಂಬ ದೂರಿದೆ.

ಕಾಂಡೋಮ್‌ಗೆ ಸರಿಯಾದ ಸೈಜ್ ಎಂಬುವುದು ಇದೆಯೇ?
ಸಾಮಾನ್ಯವಾಗಿ ಶಿಶ್ನದ ಉದ್ದ 5 ಮತ್ತು 7 ಇಂಚಿನ ನಡುವೆ ಇರುತ್ತದೆ, 3.5ರಿಂದ 6 ಇಂಚಿನವರೆಗೆ ಅದರ ಸುತ್ತಳತೆ ಇರುತ್ತದೆ. ಶಿಶ್ನ ಗಾತ್ರ ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುವುದು. ISO ಸ್ಯಾಂಡರ್ಡ್‌ನಂತೆ ಕಾಂಡೋಮ್ 6.3 ಇಂಚಿನಷ್ಟು ಇರುತ್ತದೆ, ಕೆಲವೊಂದು 7 ಇಂಚು ಇರುತ್ತದೆ, ಅದರಲ್ಲಿ ವೀರ್ಯ ಸಮಗ್ರಹಿಸಲು ಸ್ಥಳಾವಕಾಶವಿರುವುದು. ತುದಿಯಲ್ಲಿ ವೀರ್ಯ ಸಂಗ್ರಹಿಸಲು ಅರ್ಧ ಇಂಚು ಬಿಡುವಂತೆ ಸಿಡಿಸಿ ರೆಕಮಂಡ್ ಮಾಡಿದೆ.

ತಜ್ಞರು ಏನು ಹೇಳುತ್ತಾರೆ?
ಕೆಲ ಕಂಪನಿಗಳು ಅನೇಕ ಸೈಜ್‌ನಲ್ಲಿ ಕಾಂಡೋಮ್ ಮಾರಾಟ ಮಾಡುತ್ತಿದೆ, ನಿಮಗೆ ಫಿಟ್ ಹಾಗೂ ಕಂಫರ್ಟ್ ನೀಡುವ ಕಾಂಡೋಮ್ ಬಳಸಿ. ತಜ್ಞರು ಹೇಳುವ ಪ್ರಕಾರ ನಿಮಿರಿದಾಗ ಕಾಂಡೋಮ್ ಧರಿಸಬೇಕು. ಇನ್ನು ನೀವು ಬಳಸುತ್ತಿರುವ ಕಾಂಡೋಮ್ ಕಂಫರ್ಟ್ ಅನಿಸದಿದ್ದರೆ ಬೇರೆ-ಬೇರೆ ಬ್ರ್ಯಾಂಡ್ ಟ್ರೈ ಮಾಡಿ.
ಓವರ್ ಥಿಂಕ್ ಮಾಡಬೇಡಿ...ನಿಮಗೆ ಕಂಫರ್ಟ್ ಅನಿಸುವ ಕಾಂಡೋಮ್ ಬಳಸಿ.



Click it and Unblock the Notifications
