Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ತಂಬಾಕು ಕಂಪನಿಗಳು ಯುವಕರ ಹಾದಿ ತಪ್ಪಿಸಲು ಬಳಸುವ ಭಯಂಕರ ಟ್ರಿಕ್ಸ್
ಪ್ರತೀವರ್ಷ ಮೇ 31ನ್ನು ವಿಶ್ವ ತಂಬಾಕು ರಹಿತ ದಿನವನ್ನಾಗಿ ಆಚರಿಸಲಾಗುವುದು. ತಂಬಾಕು ಸೇವನೆಯಿಂದ ಆರೋಗ್ಯದ ಮೇಲೆ ಉಂಟಾಗುತ್ತಿರುವ ಅಡ್ಡ ಪರಿಣಾಮಗಳು ಹಾಗೂ ಇದರಿಂದ ಸಾವಿನ ಸಂಖ್ಯೆ ಹೆಚ್ಚಾಗುತ್ತದೆ ಎಂಬುವುದರ ಬಗ್ಗೆ ಅರಿವು ಮೂಡಿಸುವ ಸಲುವಾಗಿ ವಿಶ್ವ ಆರೋಗ್ಯ ಸಂಸ್ಥೆಯು ಈ ದಿನದ ಆಚರಣೆಯನ್ನು ಜಾರಿಗೆ ತರಲಾಗಿದೆ.

ತಂಬಾಕು ಸೇವನೆಯಿಂದ ಪ್ರತೀವರ್ಷ 8 ಮಿಲಿಯನ್ ಜನರು ಸಾವನ್ನಪ್ಪುತ್ತಿದ್ದಾರೆ. ಇದೀಗ ಇಡೀ ವಿಶ್ವವೇ ಕೊರೊನಾ ಎಂಬ ಮಹಾಮಾರಿ ವಿರುದ್ಧ ಹೋರಾಡುತ್ತಿದೆ.
ಕೊರೊನಾ ಸೋಂಕಿಗೆ ಬಲಿಯಾಗುತ್ತಿರುವವರಲ್ಲಿ ತಂಬಾಕು ಕೊಡುಗೆಯೂ ಇದೆ. ಹೌದು ತಂಬಾಕು ಸೇವನೆಯಿಂದ ಶ್ವಾಸಕೋಶದ ಆರೋಗ್ಯ ಹಾಳಾಗುವುದು, ಇಂಥವರಿಗೆ ಕೊರೊನಾ ಸೋಂಕು ತಗುಲಿದರೆ ಪರಿಸ್ಥಿತಿ ಗಂಭೀರವಾಗುವುದು.

ಯುಕರನ್ನು ಸೆಳೆಯಲು ಯತ್ನಿಸುತ್ತಿರುವ ತಂಬಾಕು ಕಂಪನಿಗಳು
ತಂಬಾಕು ಉತ್ಪಾದನೆ ಮಾಡುವ ಕಂಪನಿಗಳು ಹದಿ ಹರೆಯದವರ ಆರೋಗ್ಯ ಹಾಳು ಮಾಡುವುದರಲ್ಲಿ ಮಹತ್ವದ ಪಾತ್ರವಹಿಸುತ್ತಿದೆ. ಸಹವಾಸದೋಷ ಹಾಗೂ ತಂಬಾಕು ಕಂಪನಿಗಳು ನೀಡುತ್ತಿರುವ ಕಲರ್‌ಫುಲ್ ಜಾಹೀರಾತಿಗೆ ಮರುಳಾಗಿ ಚಟಕ್ಕೆ ಬಿದ್ದು ತಮ್ಮ ಮಾನಸಿಕ ಹಾಗೂ ದೈಹಿಕ ಆರೋಗ್ಯ ಹಾಳು ಮಾಡುತ್ತಿದ್ದಾರೆ.
ಈಗಾಗಲೇ 40 ಮಿಲಿಯನ್ ಯುವ ಜನಾಂಗ ಅಂದರೆ 13-15 ವಯಸ್ಸಿನ ಒಳಗಿನವರು ಈ ಚಟ ಬೆಳೆಸಿಕೊಂಡಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಯುವ ಜನರಿಗೆ 18 ವರ್ಷದೊಳಗಿನವರಿಗೆ ತಂಬಾಕು ಹಾಗೂ ನಿಕೋಟಿನ್ ಚಟದಿಂದ ಉಂಟಾಗುವ ಅಪಾಯದ ಬಗ್ಗೆ ಜಾಗ್ರತೆ ಮೂಡಿಸಿದರೆ ಅವರು ಈ ಚಟದಿಂದ ಹೊರಬರುವ ಸಾಧ್ಯತೆ ಇದೆ.

ತಂಬಾಕು ಮಾರ್ಕೆಟಿಂಗ್
ಇಲ್ಲಿ ನಾವು ತಂಬಾಕು ಉತ್ಪಾದನಾ ಕಂಪನಿಗಳು ಹೇಗೆಲ್ಲಾ ತನ್ನ ಗ್ರಾಹಕರನ್ನು ಸೆಳೆಯುತ್ತದೆ ಎಂಬುವುದರ ಬಗ್ಗೆ ಹೇಳಿದ್ದೇವೆ, ನಿಮ್ಮ ಮಕ್ಕಳು ಈ ಆಕರ್ಷಣೆಗೆ ಬಲಿಯಾಗದಿರಲು ಎಚ್ಚರವಹಿಸಿ:
ತಂಬಾಕು ಕಂಪನಿಗಳು ಪ್ರಚಾರಕ್ಕಾಗಿ ಪ್ರತಿದಿನ ಸುಮಾರು 23 ಮಿಲಿಯನ್ ಡಾಲರ್ ಖರ್ಚು ಮಾಡುತ್ತಿದೆ.
*ವಿವಿಧ ಸುವಾಸನೆಯ ತಂಬಾಕು ತಯಾರಿ
ತಂಬಾಕಿನಲ್ಲಿಯೇ ವಿವಿಧ ರುಚಿಯ ಹಾಗೂ ಸುವಾಸನೆಯ ತಂಬಾಕುಗಳನ್ನು ತಯಾರಿಸಿ ಮಾರುಕಟ್ಟೆಯ ಬಿಡುವ ಮೂಲಕ ಯುವ ಜನಾಂಗವನ್ನು ಆಕರ್ಷಿಸಲು ಪ್ರಯತ್ನಿಸುತ್ತಿದೆ.
* ಆಕರ್ಷಕ ವಿನ್ಯಾಸದ ಪ್ಯಾಕೆಟ್‌ಗಳು
ಇನ್ನು ತಂಬಾಕು ಹಾಗೂ ನಿಕೋಟಿನ್ ಕವರ್ ಅಥವಾ ಪ್ಯಾಕೆಟ್‌ಗಳನ್ನು ಆಕರ್ಷಕವಾಗಿ ತಯಾರಿಸುವುದು, ಅದನ್ನು ಗ್ರಾಹಕರು ಸುಲಭವಾಗಿ ಪಾಕೆಟ್‌ನಲ್ಲಿ ಹಾಕಿಕೊಂಡು ಹೋಗುವಂತೆ ವಿನ್ಯಾಸದೊಂದಿಗೆ ಮಾರುಕಟ್ಟೆಗೆ ಬಿಡುತ್ತಿದೆ.

ಇತರ ಮಾರ್ಗಗಳ ಮೂಲಕ ಪ್ರಮೋಷನ್
ಹೌದು ತಂಬಾಕು ಉತ್ಪನ್ನಗಳನ್ನು ಮಾರಲು ಇತರ ಹಾನಿಕಾರಕವಲ್ಲದ ವಸ್ತುಗಳ ಮೂಲಕ ಪ್ರಮೋಷನ್ ಮಾಡುತ್ತಿದೆ. ಉದಾಹರಣೆಗೆ ಲಾಕ್‌ಡೌನ್ ಸಮಯದಲ್ಲಿ ಕೆಲವೊಂದು ತಂಬಾಕು ಕಂಪನಿಗಳು ತನ್ನ ಗ್ರಾಹಕರಿಗೆ ಉಚಿತ ಮಾಸ್ಕ್ ವಿತರಣೆ ಮಾಡಿದ್ದರು.
* ಸೆಲೆಬ್ರಿಟಿಗಳನ್ನು ಬಳಸಿಕೊಳ್ಳುವುದು
ಇನ್‌ಸ್ಟಾಗ್ರಾಮ್‌ನಲ್ಲಿ ಮುಂತಾದಸಾಮಾಜಿಕ ತಾಣಗಳಲ್ಲಿ ಅಧಿಕ ಫಾಲೋವರ್ ಇರುವ ವ್ಯಕ್ತಿಗಳನ್ನು, ಸೆಲೆಬ್ರಿಟಿಗಳನ್ನು ಬಳಸಿಕೊಂಡು ತಮ್ಮ ವಸ್ತುಗಳ ಪ್ರಮೋಷನ್ ಮಾಡುತ್ತಾರೆ.
* ಅಂಗಡಿಗಳಲ್ಲಿ ತಮ್ಮ ವಸ್ತುಗಳ ದೊಡ್ಡ ಪ್ರಚಾರ ಬೋರ್ಡ್‌ಗಳನ್ನು ಹಾಕುವುದು
ಅಂಗಡಿಗಳಲ್ಲಿ ಆಕರ್ಷಕ ವಿನ್ಯಾಸದ ದೊಡ್ಡ-ದೊಡ್ಡ ಬೋರ್ಡ್‌ಗಳನ್ನು ಹಾಕುವ ಮೂಲಕ ಹೊಸ ಗ್ರಾಹಕರನ್ನು ಸೆಲೆಯುವ ಪ್ರಯತ್ನ ಮಾಡುವುದನ್ನು ನಾವು ಕಾಣಬಹುದು. ಇನ್ನು ಶಾಲೆಯ ಸಮೀಪ ನಿಕೋಟಿನ್ ಅಥವಾ ತಂಬಾಕು ಅಂಗಡಿಗಳಿರುವುದು. ಶಾಲೆಯ 100 ಅಡಿ ಅಂತರದಲ್ಲಿ ತಂಬಾಕು ಮಾರಬಾರದು ಎಂಬ ಕಾನೂನು ಇದೆ, ಆದರೆ 100 ಅಡಿ ದಾಟುತ್ತಿದ್ದಂತೆ ತಂಬಾಕು ಅಂಗಡಿ ಸಿಗುತ್ತದೆ.
* ಪರೋಕ್ಷವಾಗಿ ಪ್ರಚಾರ ಮಾಡುವುದು
ಸಿನಿಮಾಗಳಲ್ಲಿ, ಟಿವಿ ಶೋಗಳಲ್ಲಿ, ಆನ್‌ಲೈನ್ ಸ್ಟ್ರೀಮಿಂಗ್‌ಗಳಲ್ಲಿ ಪರೋಕ್ಷವಾಗಿ ಪ್ರಚಾರ ಮಾಡುತ್ತಾರೆ. ಈ ಮೂಲಕ ಯುವ ಸಮುದಾಯವನ್ನು ನಿಕೋಟಿನ್ ಹಾಗೂ ತಂಬಾಕುಗಳು ಸೆಳೆಯುವ ಪ್ರಯತ್ನ ಮಾಡುತ್ತಿವೆ.

ಅರಿವು ಮೂಡಿಸಿ
ಯುವ ಸಮುದಾಯ ತಂಬಾಕು ಉತ್ಪನ್ನ ಮಾಡುವ ಕಂಪನಿಗಳ ಕುತಂತ್ರಕ್ಕೆ ಬಲಿಯಾಗುವುದನ್ನು ತಪ್ಪಿಸಲು ಇದರಿಂದ ಉಂಟಾಗುವ ಅಪಾಯಗಳ ಬಗ್ಗೆ ಅರಿವು ಮೂಡಿಸಬೇಕು. ಹದಿ ಹರೆಯದ ವಯಸ್ಸಿನಲ್ಲಿ ಹೆಚ್ಚಾಗಿ ತಮ್ಮ ಸ್ನೇಹಿತರ ಮೂಲಕ ಈ ಚಟಕ್ಕೆ ಬೀಳುತ್ತಾರೆ. ಸ್ಟೈಲ್, ಶೋಕಿಗಾಗಿ ಪ್ರಾರಂಭಿಸುವ ಈ ಚಟ ಮುಂದೆ ಯಾವ ರೀತಿ ಬದುಕನ್ನು ಬದಲಾಯಿಸುತ್ತದೆ, ಇದರಿಂದ ಉಂಟಾಗುವ ಸಾವು ಎಷ್ಟು ಭಯಾನಕವಾಗಿರುತ್ತದೆ ಎಂಬುವುದರ ಬಗ್ಗೆ ಅರಿವು ಹದಿಹರೆಯದ ಮಕ್ಕಳಲ್ಲಿ ಉಂಟಾದರೆ ಅವರು ಈ ತಂಬಾಕು, ನಿಕೋಟಿನ್‌ಗಳಿಂದ ದೂರ ಸರಿಯುತ್ತಾರೆ.



Click it and Unblock the Notifications
