Latest Updates
-
ಪರಿಸರ ಸ್ನೇಹಿ ಡೇಟಿಂಗ್: ₹300 ರೊಳಗೆ ನಿಮ್ಮ ಪ್ರೀತಿಯನ್ನು ಹಸಿರಾಗಿಸುವ 12 ಅದ್ಭುತ ಐಡಿಯಾಗಳು! -
ಬೆಂಗಳೂರು ಮಳೆ: ಮನೆಯಲ್ಲಿ ನೀರು ನುಗ್ಗಿದೆಯೇ? ತೇವ ಮತ್ತು ದುರ್ವಾಸನೆ ಹೋಗಲಾಡಿಸಲು ಇಲ್ಲಿವೆ ಸರಳ ಟಿಪ್ಸ್! -
ಡೆಂಗ್ಯೂ ಆತಂಕ: ಮಧುಮೇಹಿಗಳು ಆರೋಗ್ಯ ಕಾಪಾಡಿಕೊಳ್ಳಲು ಇಲ್ಲಿದೆ ವಿಶೇಷ ಆಹಾರ ಪ್ಲಾನ್ -
iPhone 18 ಸೇಲ್: ನಿಮ್ಮ ಹೊಸ ಫೋನ್ ಪಡೆಯಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ದೆಹಲಿ-ಎನ್ಸಿಆರ್ ಮಳೆ ಎಚ್ಚರಿಕೆ: ಹೊರಗೆ ಹೋಗುವ ಬದಲು ಮನೆಯಲ್ಲೇ ಮಾಡಿ 12 ನಿಮಿಷದ ವರ್ಕೌಟ್! -
ಸೆಪ್ಟೆಂಬರ್ 15ರ ಲವ್ ರಾಶಿಫಲ: ನಿಮ್ಮ ಸಂಗಾತಿಯ ಮನ ಗೆಲ್ಲಲು ಈ 2 ನಿಮಿಷದ ಸೂತ್ರ ಬಳಸಿ! -
ಮಳೆಗಾಲದ ಎಚ್ಚರಿಕೆ: ಮುಂಬೈ-ಪುಣೆಯಲ್ಲಿ ಮನೆ ಸೋರಿಕೆ ತಡೆಯಲು 30 ನಿಮಿಷದ ಸಿಂಪಲ್ ಟಿಪ್ಸ್ -
ಅಡುಗೆಮನೆ ಬಜೆಟ್ ಏರಿಕೆ: ₹30 ಕ್ಕಿಂತ ಕಡಿಮೆ ವೆಚ್ಚದಲ್ಲಿ ಆರೋಗ್ಯಕರ ಪ್ರೋಟೀನ್ ಆಹಾರ ಪಡೆಯುವುದು ಹೇಗೆ? -
iOS 27 ಅಪ್ಡೇಟ್ ನಂತರ ಫೋನ್ ಬ್ಯಾಟರಿ ಬೇಗ ಖಾಲಿಯಾಗುತ್ತಿದೆಯೇ? ಗಾಬರಿಯಾಗಬೇಡಿ, ಈ ಟಿಪ್ಸ್ ಫಾಲೋ ಮಾಡಿ! -
ಗಣೇಶ ವಿಸರ್ಜನೆ: ಮೂರ್ತಿ ಹೊರುವಾಗ ಬೆನ್ನು ನೋವು ಕಾಡದಿರಲು ಈ ಸರಳ ಟಿಪ್ಸ್ ಪಾಲಿಸಿ
ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಎದೆನೋವು ಉಂಟಾಗಿದ್ದರೆ ಈ ಮನೆಮದ್ದು ಟ್ರೈ ಮಾಡಿ
ಎದೆನೋವು ಬಂದಾಗ ಕೆಲವರು ಅದು ಗ್ಯಾಸ್ಟ್ರಿಕ್ ಹೊಟ್ಟೆನೋವು ಇರಬಹುದು ಎಂದು ಸುಮ್ಮನೆಯಾಗುತ್ತಾರೆ, ಆದರೆ ಆ ನಿರ್ಲಕ್ಷ್ಯವೇ ಪ್ರಾಣಕ್ಕೆ ಅಪಾಯ ತರಬಹುದು. ಏಕೆಂದರೆ ಆ ಎದೆನೊವು ಹಾರ್ಟ್‌ಅಟ್ಯಾಕ್ ಲಕ್ಷಣವಾಗಿದ್ದಿರಬಹುದು, ಆದ್ದರಿಂದ ಯಾವತ್ತೂ ಎದೆನೋವು ಕಾಣಿಸಿದಾಗ ನಿರ್ಲಕ್ಷ್ಯ ಮಾಡಬೇಡಿ.
ಗ್ಯಾಸ್ಟ್ರಿಕ್‌ನಿಂದ ಎದೆನೋವು ಕಾಣಿಸಿದ್ದೇ ಆದರೆ ಎದೆನೋವು ಜೊತೆಗೆ ಹೊಟ್ಟೆ ಉಬ್ಬಿದಂತೆ ಅನಿಸುವುದು, ಅಸಿಡಿಟಿ, ತುಂಬಾ ತೇಗು ಈ ರೀತಿಯ ಲಕ್ಷಣಗಳು ಕಂಡು ಬರುತ್ತಿದೆ.
ಗ್ಯಾಸ್ಟ್ರಿಕ್‌ನಿಂದ ಹೊಟ್ಟೆನೋವು ಉಂಟಾಗಿದ್ದರೆ ಈ ಮನೆಮದ್ದು ಟ್ರೈ ಮಾಡಿ:

ಗ್ಯಾಸ್ಟ್ರಿಕ್ ಸಮಸ್ಯೆ ಉಂಟಾಗಲು ಕಾರಣವೇನು?
ಲ್ಯಾಕ್ಟೋಸ್ ಅಸಮತೋಲನ, ಗ್ಲುಟೇನ್ ಸೆನ್ಸಿಟಿವಿಟಿ, ಅನಾರೋಗ್ಯಕರ ಆಹಾರಶೈಲಿ, ಕಾರ್ಬೋನೇಟಡ್ ಪಾನೀಯಗಳನ್ನು ಕುಡಿಯುವುದು, ಸೋಡಾ ಕುಡಿಯುವುದು, ತುಂಬಾ ನಾರಿನ ಪದಾರ್ಥಗಳನ್ನು ತಿನ್ನುವುದು, ಅಜೀರ್ಣ ಈ ಎಲ್ಲಾ ಕಾರಣಗಳಿಂದ ಗ್ಯಾಸ್ಟ್ರಿಕ್ ಸಮಸ್ಯೆಯಾಗುವುದು.
ಗಾಲಾಸ್ಟೋನ್ ನೋವು ಮತ್ತು ಗಾಲಾಬ್ಲೇಡರ್ ಉರಿಯೂತ ಉಂಟಾದಾಗ ಕೂಡ ಈ ರೀತಿಯ ಲಕ್ಷಣಗಳು ಕಂಡು ಬರುತ್ತದೆ.
ಆದ್ದರಿಂದ ಎದೆಯಲ್ಲಿ ನೋವು ಉಂಟಾದಾಗ ಅದು ಹಾರ್ಟ್ ಅಟ್ಯಾಕ್ ಆಗಿರಬಹುದೆಂದು ಭಯಪಡಬೇಡಿ, ನಿಮಗೆ ಗ್ಯಾಸ್ಟ್ರಿಕ್‌ನಿಂದ ಎದೆ ನೋವು ಉಂಟಾಗಿದ್ದರೆ ಈ ಮನೆಮದ್ದು ಟ್ರೈ ಮಾಡಿ:

1. ಬಿಸಿ ಬಿಸಿ ಪಾನೀಯ ಅಥವಾ ಹರ್ಬಲ್ ಟೀ ಕುಡಿಯಿರಿ
ಆಗಾಗ ನೀರು ಕುಡಿಯಿರಿ. ಇದರಿಂದ ಅನೇಕ ಸಮಸ್ಯೆಗಳನ್ನು ತಡೆಗಟ್ಟಬಹುದು, ಸಾಕಷ್ಟು ನೀರು ಕುಡಿಯುವುದರಿಂದ ಗ್ಯಾಸ್ಟ್ರಿಕ್ ಸಮಸ್ಯೆ ಕೂಡ ದೂರಾಗುವುದು. ಹರ್ಬಲ್ ಟೀ ಕುಡಿಯಿರಿ. ಸೌತೆಕಾಯಿ ಜ್ಯೂಸ್, ಎಳನೀರು, ಅಜ್ವೈನ್ ನೀರು, ಸೋಂಪು, ಜೀರಿಗೆ ನೀರು ಕುಡಿಯಿರಿ.

2. ಶುಂಠಿ ತಿನ್ನಿ
ಗ್ಯಾಸ್ಟ್ರಿಕ್ ಸಮಸ್ಯೆ ಕಡಿಮೆ ಮಾಡುವಲ್ಲಿ ಶುಂಠಿ ಪರಿಣಾಮಕಾರಿಯಾದ ಮನೆಮದ್ದಾಗಿದೆ. ಗ್ಯಾಸ್ಟ್ರಿಕ್ ಸಮಸ್ಯೆಯಿದ್ದರೆ ಶುಂಠಿ ಟೀ ಮಾಡಿ ಕುಡಿಯಿರಿ.

3. ಗ್ಲುಟೇನ್ ಮತ್ತು ಹಾಲಿನ ಉತ್ಪನ್ನಗಳು
ಗ್ಯಾಸ್ಟ್ರಿಕ್ ಸಮಸ್ಯೆಯಿದ್ದರೆ ಗ್ಲುಟೇನ್ ಹಾಗೂ ಹಾಲಿನ ಉತ್ಪನ್ನಗಳನ್ನು ಸೇವಿಸಬೇಡಿ.

4. ಪ್ರತಿದಿನ ವ್ಯಾಯಾಮ ಮಾಡಿ
ನಿಮ್ಮ ಜೀರ್ಣಕ್ರಿಯೆ ಚೆನ್ನಾಗಿದ್ದರೆ ಗ್ಯಾಸ್ಟ್ರಿಕ್ ಸಮಸ್ಯೆ ಬರಲ್ಲ. ಪ್ರತಿದಿನ ವಾಕಿಂಗ್, ವ್ಯಾಯಾಮ ಮಾಡಿ. ಇದು ಗ್ಯಾಸ್ಟ್ರಿಕ್ ಸಮಸ್ಯೆ ತಡೆಗಟ್ಟಲು ಸಹಾಯ ಮಾಡುತ್ತೆ.

5. ಮಸಾಲೆ ಪದಾರ್ಥಗಳಿಂದ ದೂರವಿರಿ
ನಿಮಗೆ ಗ್ಯಾಸ್ಟ್ರಿಕ್ ಸಮಸ್ಯೆಯಿದ್ದರೆ ಎಣ್ಣೆ ಪದಾರ್ಥ, ಮಸಾಲೆ ಪದಾರ್ಥಗಳಿಂದ ದೂರವಿರಿ. ಓಟ್ಸ್, ಕಿಚಡಿ, ಹಸಿರು ಸೊಪ್ಪು ತರಕಾರಿಗಳು, ವಿಟಮಿನ್ ಸಿ ಆಹಾರಗಳು, ನಟ್ಸ್, ಸೀಡ್ಸ್, ಮೊಟ್ಟೆಯ ಬಿಳಿ ಇವುಗಳನ್ನು ನಿಮ್ಮ ಆಹಾರಕ್ರಮದಲ್ಲಿ ಸೇರಿಸಿ.



Click it and Unblock the Notifications
