Latest Updates
-
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ!
ಉರಿ ಬಿಸಿಲಿನಲ್ಲಿ ಹಾರ್ಟ್‌ಸ್ಟ್ರೋಕ್‌ನ ಅಪಾಯ ಹೆಚ್ಚು, ಈ ಲಕ್ಷಣಗಳನನ್ನು ನಿರ್ಲಕ್ಷ್ಯ ಮಾಡಲೇಬೇಡಿ!
ಭಾರತದಲ್ಲಿ ಇದೀಗ ಬೇಸಿಗೆ ಕಾಲ... ಹಗಲು ಹೊತ್ತಿನಲ್ಲಿ ಹೊರಗಡೆ ಕಾಲಿಟ್ಟರೆ ನೆತ್ತಿ ಸುಟ್ಟು ಹೋಗುವಂಥ ಉರಿ ಬಿಸಿಲು... ಕೆಲವೊಂದು ಕಡೆಯಂತೂ ಸೂರ್ಯನ ಶಾಖ ಅಧಿಕವಿರುವುದರಿಂದ ಬಿಸಿಲಿನಲ್ಲಿ ಹೊರಗಡೆ ಸುತ್ತಾಡುವುದು ತುಂಬಾನೇ ಪ್ರಯಾಸವಾಗುತ್ತೆ.
ಉರಿ ಬಿಸಿಲಿನಲ್ಲಿ ಹೆಚ್ಚು ಓಡಾಡುವವರಿಗೆ, ಕೆಲಸ ಮಾಡುವವರಿಗೆ ಅನೇಕ ತೊಂದರೆಗಳು ಉಂಟು ಮಾಡುತ್ತದೆ. ಅದರಲ್ಲೂ ವಲಸೆ ಕಾರ್ಮಿಕರಿಗೆ, ಕಟ್ಟಡ ಕಾರ್ಮಿಕರಿಗೆ ಇದು ತುಂಬಾ ಕಠಿಣ ಸಮಯಾಗಿದೆ, ಅವರು ಉರಿ ಬಿಸಿಲಿನಲ್ಲಿ ನಿಂತು ಕೆಲಸ ಮಾಡುವವರಿಗೆ ತುಂಬಾನೇ ಆರೋಗ್ಯ ಸಮಸ್ಯೆ ಉಂಟಾಗುತ್ತದೆ, ಹೀಟ್ ಸ್ಟ್ರೋಕ್ ಕೂಡ ಉಂಟಾಗಬಹುದು.
ಹೀಟ್‌ಸ್ಟ್ರೋಕ್‌ನ ಲಕ್ಷಣಗಳು ಕಂಡು ಬಂದ ತಕ್ಷಣವೇ ಕೂಡಲೇ ಚಿಕಿತ್ಸೆ ಕೊಡಿಸಿದರೆ ಪರಿಸ್ಥಿತಿ ಗಂಭೀರವಾಗುವುದಿಲ್ಲ. ಆದ್ದರಿಂದ ಈ ಲಕ್ಷಣಗಳನ್ನು ನಿರ್ಲಕ್ಷ್ಯ ಮಾಡಲೇಬೇಡಿ....

ಹಾರ್ಟ್‌ಸ್ಟ್ರೋಕ್ ಲಕ್ಷಣಗಳು
* ವಾಂತಿ
* ತಲೆಸುತ್ತುವುದು
*ಸುಸ್ತು
* ಒಂಥರಾ ಕಿರಿಕಿರಿ
* ಒಂದು ರೀತಿಯ ಗೊಂದಲ
* ಮೈಕೈ ನೋವು
* ತಲೆನೋವು

ಹೀಟ್‌ಸ್ಟ್ರೋಕ್ ಉಂಟಾದಾಗ ಏನು ಮಾಡಬೇಕು?
* ಹೀಟ್‌ಸ್ಟ್ರೋಕ್ ಉಂಟಾದಾಗ ರೋಗಿಯ ಸ್ಥಿತಿ ಗಂಭೀರವಿರಬಹುದು, ಇಲಲದೆಯೂ ಇರಬಹುದು. ಆದರೆ ಆಸ್ಪತ್ರೆಗೆ ದಾಖಲಿಸಲೇಬೇಕು, ಪರಿಸ್ಥಿತಿ ಗಂಭೀರವಾಗಿದ್ದರೆ ICUನಲ್ಲಿ ಇಟ್ಟು ಚಿಕಿತ್ಸೆ ನೀಡಬೇಕಾಗುವುದು.

ಹೀಟ್ ಸ್ಟ್ರೋಕ್ ತಡೆಗಟ್ಟಲು ಏನು ಮಾಡಬೇಕು?
* ತುಂಬಾ ಬಿಸಿಲು ಇರುವಾಗ ಅಂದರೆ ಮಧ್ಯಾಹ್ನ ಹೊತ್ತಿಗೆ ಹೊರಗಡೆ ಕೆಲಸ ಮಾಡಬೇಡಿ. ಅದೇ ಕೆಲಸವನ್ನು ಮುಂಜಾನೆ ಹಾಗೂ ಸಂಜೆ ಮಾಡಿ ಮುಗಿಸಿ.
* ತುಂಬಾ ನೀರು ಕುಡಿಯಿರಿ, ಜೊತೆಗೆ ಮಜ್ಜಿಗೆ , ನಿಂಬು ಪಾನೀಯ, ಲಸ್ಸಿ, ಜ್ಯೂಸ್ ಇವುಗಳನ್ನು ಕುಡಿಯಿರಿ.
* ತುಂಬಾ ಬಿಗಿಯಾದ ಉಡುಪು ಧರಿಸಬೇಡಿ.
* ಸಡಿಲವಾದ ಕಾಟನ್ ಬಟ್ಟೆ ಧರಿಸಿ
* ತುಂಬಾ ಭಾರ ಎತ್ತುವ ವ್ಯಾಯಾಮ ಮಾಡಬೇಡಿ.
* ವ್ಯಾಯಾಮವನ್ನು ಬೆಳಗ್ಗೆ 6 ಗಂಟೆಯ ಒಳಗೆ ಮಾಡಿ, ಬಿಸಿಲು ಬಿದ್ದ ಮೇಲೆ ವ್ಯಾಯಾಮ ಮಾಡಬೇಡಿ.
* ಮಕ್ಕಳು ಹಾಗೂ ಸಾಕು ಪ್ರಾಣಿಯನ್ನು ಬಿಸಿಲಿನಲ್ಲಿ ತುಂಬಾ ಹೊತ್ತು ಆಡಲು ಬಿಡಬೇಡಿ.
* ಬೇಸಿಗೆಯಲ್ಲಿ ಕರಿದ ಪದಾರ್ಥಗಳು, ಚಾಟ್ಸ್, ಕಾಫಿ ಇವುಗಳೆನ್ನೆಲ್ಲಾ ಹೆಚ್ಚು ಸೇವಿಸಬೇಡಿ, ಮದ್ಯಪಾನ ಮಾಡಬೇಡಿ.



Click it and Unblock the Notifications
