Latest Updates
-
ಹೊಸ ಮನೆ, ವಾಹನ ಖರೀದಿಸುವ ಯೋಗ! ಜೀವನದಲ್ಲಿ ಹೆಚ್ಚಲಿದೆ ಸಂತಸ -
March 10 Horoscope: ಆದಾಯ ಗಳಿಕೆಯ ಆಸೆಯಿಂದ ಹಣ ಕಳೆದುಕೊಳ್ಳಬೇಡಿ -
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ?
ಈ ಔಷಧ ಸೇವಿಸಿದರೆ ಎಂಥ ಕ್ಯಾನ್ಸರ್ ಆದರೂ ಗುಣಪಡಿಸಬಹುದು: ಅಧ್ಯಯನ ವರದಿ
ಕ್ಯಾನ್ಸರ್ ಮಾರಾಣಾಂತಿಕ ಕಾಯಿಲೆಗಳಲ್ಲಿ ಒಂದು. ಕ್ಯಾನ್ಸರ್ ಗುಣಪಡಿಸಬಹುದಾದರು ಇದರಿಂದ ಸಂಪೂರ್ಣ ಗುಣಮುಖರಾಗುವವರು ಕೆಲವೇ ಕೆಲವರಷ್ಟೇ. ಕ್ಯಾನ್ಸರ್ ಪ್ರಾರಂಭದ ಹಂತದಲ್ಲಿಯೇ ಪತ್ತೆಯಾದರೆ ಗುಣಪಡಿಸಬಹುದು, ಅದೇ ಲಾಸ್ಟ್ ಸ್ಟೇಜ್‌ನಲ್ಲಿ ಗೊತ್ತಾದರೆ ಚಿಕಿತ್ಸೆ ಪಲಕಾರಿಯಾಗುವ ಸಾಧ್ಯತೆ ಕಡಿಮೆ. ಇನ್ನು ಕ್ಯಾನ್ಸರ್ ಚಿಕಿತ್ಸೆ ದೀರ್ಘಾವಧಿಯಾಗಿದ್ದು ಕೀಮೋ, ಔಷಧಿ ಎಂದು ತುಂಬಾ ಹಣ ಖರ್ಚಾಗುವುದರಿಂದ ಬಡವರಿಗೆ, ಮಧ್ಯಮ ವರ್ಗದವರಿಗೆ ಈ ಕಾಯಿಲೆ ಬಂದರೆ ರೋಗಿ, ಮನೆಯವರು ಸಂಪೂರ್ಣ ನಲುಗಿ ಹೋಗುತ್ತಾರೆ. ಎಷ್ಟೋ ಸಂದರ್ಭದಲ್ಲಿ ಸಾಕಷ್ಟು ಹಣ ಖರ್ಚು ಮಾಡಿದರೂ ರೋಗಿ ಬದುಕಿಳಿಯಲ್ಲ. ಆದರೆ ಈಗ ಈ ಮಾರಾಣಾಂತಿಕ ಕ್ಯಾನ್ಸರ್ ಸಂಪೂರ್ಣ ಗುಣಪಡಿಸಬಹುದಾದ ಔಷಧಿ ಈಗ ಲಭ್ಯವಿದೆ. ಅದು ಯಾವುದೇ ಬಗೆಯ ಕ್ಯಾನ್ಸರ್ ಆಗಿರಲಿ ಅದರಿಂದ ಸಂಪೂರ್ಣ ಗುಣಮುಖವಾಗಲು ಈ ಔಷಧಿಯಿಂದ ಸಾಧ್ಯವಿದೆ.
ಆ ಔಷಧಿ ಯಾವುದು? ಡ್ರಗ್ ಟ್ರಯಲ್‌ನಲ್ಲಿ ತಿಳಿದು ಬಂದ ಅಂಶಗಳೇನು ಎಂಬ ಮಾಹಿತಿ ಈ ಲೇಖನದಲ್ಲಿದೆ ನೋಡಿ:

ಕ್ಯಾನ್ಸರ್ ಶೇ. 100ರಷ್ಟು ಗುಣಪಡಿಸುವ ಔಷಧಿ
ಈ ವಿಶ್ವ ಸದ್ಯದಲ್ಲಿಯೇ ಕ್ಯಾನ್ಸರ್ ಎಂಬ ಮಹಾಮಾರಿಯ ಹಿಡಿತದಿಂದ ಪಾರಾಗಲಿದೆ. ಯುಎಸ್‌ನ
ಮ್ಯಾನ್ಹ್ಯಾಟನ್‌ನಲ್ಲಿರುವ ಮೆಮೋರಿಯಲ್ ಸ್ಲೋನ್ ಕೆಟರಿಂಗ್ ಕ್ಯಾನ್ಸರ್ ಸೆಂಟರ್ ( Memorial Sloan Kettering Cancer Center)ನಲ್ಲಿ ನಡೆಸಿರುವ ಟ್ರಯಲ್‌ನಿಂದ ಕ್ಯಾನ್ಸರ್ ಸಂಪೂರ್ಣವಾಗಿ ಗುಣಪಡಿಸಬಹುದು ಎಂದು ತಿಳಿದು ಬಂದಿದೆ.

ಕೀಮೋಥೆರಪಿ ಅಥವಾ ಸರ್ಜರಿಯಿಲ್ಲದೆಯೇ ಕ್ಯಾನ್ಸರ್ ಗುಣಪಡಿಸಬಹುದು
ನ್ಯೂಯಾರ್ಕ್ ಟೈಮ್ಸ್ ಪ್ರಕಾರ dostarlimab(ದೋಸ್ಟಾರ್ಲಿಮಾಬ್) ಎಂಬ ಔಷಧಿಯನ್ನು 18 ರೆಕ್ಟಲ್ ಕ್ಯಾನ್ಸರ್ ರೋಗಿಗಳಿಗೆ ನೀಡಲಾಗಿತ್ತು, ಅವರಿಗೆಲ್ಲಾ ಈ ಔಷಧಿ ಸೇವನೆ ಬಳಿಕ ಕ್ಯಾನ್ಸರ್ ಸಂಪೂರ್ಣ ನಶಿಸಿದೆ. ಈ ಔಷಧಿಯನ್ನು ನೀಡಿದರೆ ಕ್ಯಾನ್ಸರ್ ಗುಣಪಡಿಸಲು ಯಾವುದೇ ನೋವಿನ ಕೀಮೋಥೆರಪಿ ಅಥವಾ ಸರ್ಜರಿ ಬೇಕಾಗಿಲ್ಲ ಎಂಬುವುದು ಟ್ರಯಲ್‌ನಿಂದ ಸಾಬೀತಾಗಿದೆ.

dostarlimab ಅಧ್ಯಯನ ವರದಿ
ಯಾರಿಗೆ ಈ ಔಷಧಿಯನ್ನು ನೀಡಲಾಗಿತ್ತೋ ಅವರಿಗೆ ಈ ಮೊದಲು ಕೀಮೋಥೆರಪಿ, ರೇಡಿಯೇಷನ್ ಥೆರಪಿ ಎಲ್ಲಾ ನೀಡಲಾಗಿತ್ತು, ಆದರೆ ಅದ್ಯಾವುದೂ ಪ್ರಯೋಜನವಾಗಿರಲಿಲ್ಲ, ಆ ರೋಗಿಗಳ ಬಗ್ಗೆ ಎಲ್ಲಾ ನಿರೀಕ್ಷೆ ಸಂಪೂರ್ಣ ದೂರವಾಗಿತ್ತು, ಕೆಲವರಿಗೆ ಲೈಫ್ ಆಲ್ಟ್ರಿಂಗ್ ಸರ್ಜರಿ ಕೂಡ ಮಾಡಲಾಗತ್ತು ಅದರ ಪರಿಣಾಮ ಮಲ ಸಮಸ್ಯೆ, ಮೂತ್ರ ಸಮಸ್ಯೆ, ಮುಂತಾದ ತೊಂದರೆಗಳು ಕಂಡು ಬಂದಿತ್ತು. ಕೆಲವರಿಗೆ ಕೊಲೊಸ್ಟೊಮಿ ಬ್ಯಾಗ್ ಕೂಡ ಅವಶ್ಯಕವಾಗಿತ್ತು.
ಕ್ಯಾನ್ಸರ್‌ನ ಯಾವುದೇ ಚಿಕಿತ್ಸೆ ಫಲಕಾರಿಯಾಗಿರಲಿಲ್ಲ, ಇನ್ನೇನು ಬದುಕಲು ಸಾಧ್ಯವೇ ಇಲ್ಲ ಎಂಬ ಸತ್ಯಾಂಶ ಅವರಿಗೆ ತಿಳಿದಿತ್ತು, ಆಗ ಅವರು dostarlimab ಔಷಧ ಪರೀಕ್ಷಿಸಲು ಒಪ್ಪಿಗೆ ಸೂಚಿಸಿದ್ದರು. ಅಚ್ಚರಿಯೆಂದರೆ ಈ ಔಷಧಿ ಪಡೆದ ಅಷ್ಟೂ ಜನರಲ್ಲಿ ಕ್ಯಾನ್ಸರ್ ಸಂಪೂರ್ಣ ನಾಶವಾಗಿದೆ, 25 ತಿಂಗಳು ನಡೆಸಿದ ಈ ಟ್ರಯಲ್‌ನಲ್ಲಿ ಸಂಪೂರ್ಣ ಗುಣಮುಖರಾಗಿದ್ದಾರೆ. ಈ ಔಷಧಿಯನ್ನು GlaxoSmithKline ಔಷಧ ಕಂಪನಿ ತಯಾರಿಸಿದೆ.

ಈ ಔಷಧ ಹೇಗೆ ಕೆಲಸ ಮಾಡುತ್ತೆ?
ಈ ಔಷಧಿಯನ್ನು ನೀಡಿದ ರೋಗಿಯನ್ನು 6 ತಿಂಗಳವರೆಗೆ ಪ್ರತೀ ಮೂರು ವಾರಕ್ಕೊಮ್ಮೆ ಪರಿಶೀಲಿಸಲಾಗಿತ್ತು. ಈ ಔಷಧಿ ದೇಹದಲ್ಲಿರುವ ಕ್ಯಾನ್ಸರ್ ಕಣಗಳನ್ನು ಪತ್ತೆ ಮಾಡಿ ಅದನ್ನು ಸಂಪೂರ್ಣವಾಗಿ ನಾಶ ಮಾಡುತ್ತದೆ.

ಈ ಔಷಧಿಯಿಂದ ಅಡ್ಡಪರಿಣಾಮವಿದೆಯೇ?
ಸಾಮಾನ್ಯವಾಗಿ ಯಾವುದೇ ಔಷಧಿ ಬಳಸಿದರು ಸ್ವಲ್ಪ ಅಡ್ಡಪರಿಣಾಮವಿರುತ್ತದೆ. ಈ ಔಷಧಿ ಬಳಸಿದ ಶೇ. 20ರಷ್ಟು ರೋಗಿಗಳಲ್ಲಿ ಸಣ್ಣ-ಪುಟ್ಟ ಅಡ್ಡಪರಿಣಾಮಗಳು ಕಂಡು ಬಂದಿತ್ತು, ಆದರೆ ಯಾವುದೇ ಕೆಟ್ಟ ಪರಿಣಾಮವೇನೂ ಬೀರಿಲ್ಲ ಎಂದು ಅಧ್ಯಯನ ವರದಿ ಹೇಳಿದೆ.

ಈ ಔಷಧಿಗೆ ಎಷ್ಟು ಖರ್ಚಾಗುವುದು?
ಈ ಔಷಧಿಗೆ ಅನುಮತಿ ಸಿಕ್ಕರೆ ಇದು ಬೆಲೆಬಾಳುವ ಔಷಧಿಯೇ ಆಗಲಿದೆ. ಟ್ರಯಲ್ ಡೋಸ್‌ಗೆ ವರ್ಷಕ್ಕೆ $11,000 ಅಂರೆ 8.55 ಲಕ್ಷ ಬೇಕಾಗುವುದು.
ಇರ ಬಗ್ಗೆ ಇನ್ನಷ್ಟು ಅಧ್ಯಯನಗಳು ನಡೆಯಲಿದ್ದು ಈ ಔಷಧಿಗೆ ಅನುಮತಿ ಸಿಕ್ಕರೆ ಎಷ್ಟೋ ಜನರ ಜೀವ ಉಳಿಯಲಿದೆ ಎಂಬುವುದರಲ್ಲಿ ಸಂಶಯವಿದೆ. ಇದು ದುಬಾರಿ ಔಷಧಿ ಅನಿಸಿದರೂ ಕೀಮೋ, ರೇಸರ್‌ಈ ಬಗೆಯ ಚಿಕಿತ್ಸೆಗೂ ಹೆಚ್ಚು ಹಣ ಬೇಕು, ಹಾಗೇ ನೋಡಿದರೆ ಇದರಲ್ಲಿ ಈ ಔಷಧಿ ಸೇವನೆಯಿಂದ ಕೋಮೋ, ಸರ್ಜರಿ ನೋವು ಅನುಭವಿಸಬೇಕಾಗಿಲ್ಲ.
Reference: Cancer in all patients vanishes for the first time during US drug trial (India Today)



Click it and Unblock the Notifications











