Latest Updates
-
ಅಸ್ಸಾಂನಲ್ಲಿ ಲಿವ್-ಇನ್ ಸಂಬಂಧದಲ್ಲಿದ್ದೀರಾ? ಹೊಸ ಕಾನೂನಿನ ಪ್ರಕಾರ ನೋಂದಣಿ ಮಾಡದಿದ್ದರೆ ಜೈಲು ಶಿಕ್ಷೆ ಕಟ್ಟಿಟ್ಟ ಬುತ್ತಿ! -
ಬಿಸಿಲಿಗೆ ಗಿಡಗಳು ಬಾಡುತ್ತಿವೆಯೇ? ಈ ಮ್ಯಾಜಿಕ್ ಟಿಪ್ಸ್ ಬಳಸಿ ನಿಮ್ಮ ಬಾಲ್ಕನಿ ಗಾರ್ಡನ್ ಅನ್ನು ಹಸಿರಾಗಿಡಿ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಹೀಟ್ಸ್ಟ್ರೋಕ್ನಿಂದ ಪಾರಾಗಲು ಈ ತಂಪು ಪದಾರ್ಥಗಳು ನಿಮ್ಮ ಆಹಾರದಲ್ಲಿರಲಿ, ಇಂದೇ ಟ್ರೈ ಮಾಡಿ! -
ಬಕ್ರೀದ್ 2026: ಈ ಬಾರಿಯ ಹಬ್ಬದ ಸಂಭ್ರಮದಲ್ಲಿ ಮಿಂಚಲು ನೀವು ಮಿಸ್ ಮಾಡಲೇಬಾರದ ಫ್ಯಾಷನ್ ಟ್ರೆಂಡ್ಸ್ ಮತ್ತು ಸ್ಟೈಲಿಂಗ್ ಟಿಪ್ಸ್! -
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ! -
ಬಿಸಿಲಿನ ಬೇಗೆಗೆ ದಂಪತಿಗಳ ನಡುವೆ ಜಗಳವೇ? ಈ ಸಣ್ಣ ಬದಲಾವಣೆಗಳು ನಿಮ್ಮ ಸಂಬಂಧವನ್ನು ಬಿರುಕಿನಿಂದ ಕಾಪಾಡುತ್ತವೆ! -
ಉತ್ತರ ಭಾರತದಲ್ಲಿ ಸುಡುವ ಬಿಸಿಲು: ಮನೆಯನ್ನು ತಂಪಾಗಿಡಲು ಮತ್ತು ಗಿಡಗಳನ್ನು ಬಚಾವ್ ಮಾಡಲು ಈ ಟಿಪ್ಸ್ ಫಾಲೋ ಮಾಡಿ! -
ಬಿಸಿಲ ಬೇಗೆಯಿಂದ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರಗಳೇ ನಿಮಗೆ ರಾಮಬಾಣ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಈ ಸಿಂಪಲ್ ಟಿಪ್ಸ್ ಪಾಲಿಸಿದ್ರೆ ಬೇಸಿಗೆಯಲ್ಲೂ ನೀವು ಕೂಲ್ ಆಗಿರಬಹುದು! -
ಬಿಸಿಲ ಬೇಗೆಯಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ನಿಮ್ಮ ಹೃದಯದ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ, ಎಚ್ಚರ!
ಒಣಕೆಮ್ಮಿಗೆ ಕಾರಣವೇನು? ಯಾವ ಮನೆಮದ್ದು ಒಳ್ಳೆಯದು?
ಒಣಕೆಮ್ಮಿನ ಸಮಸ್ಯೆ ಬಂದರೆ ಬೇಗನೆ ಕಡಿಮೆಯಾಗಲ್ಲ, ಅಪ್ಪರ್ ರೆಸ್ಪ್ರೇಟರಿ ಇನ್‌ಫೆಂಕ್ಷನ್‌ನಿಂದಾಗಿ ಒಣ ಕೆಮ್ಮಿನ ಸಮಸ್ಯೆ ಉಂಟಾಗುವುದು. ಅಸ್ತಮಾ, ವೈರಲ್ ಸೋಂಕು, ಧೂಮಪಾನ ಈ ಕಾರಣದಿಂದಾಗಿ ಒಣ ಕೆಮ್ಮಿನ ಸಮಸ್ಯೆ ಹೆಚ್ಚಾಗುವುದು.

ಒಣ ಕೆಮ್ಮಿನ ಸಾಮಾನ್ಯ ಲಕ್ಷಣಗಳೆಂದರೆ
* ಗಂಟಲಿನಲ್ಲಿ ಕೆರೆತ
* ಕಫ ಇರಲ್ಲ
* ಕೆಮ್ಮುವಾಗ ಜೋರಾದ ಶಬ್ದ
* ನಿದ್ದೆಗೆ ಅಡೆತಡೆ ಉಂಟಾಗುವುದು
ಒಣ ಕೆಮ್ಮಿಗೆ ಕಾರಣಗಳು
ಸೋಂಕಿನ ಕಾರಣಗಳು
* ಅಪ್ಪರ್ ರೆಸ್ಪ್ರೇಟರಿ ಇನ್‌ಫೆಂಕ್ಷನ್: ಸೋಂಕು ತಗುಲಿದಾಗ ಒಣ ಕೆಮ್ಮು ಉಂಟಾಗುವುದು
* ಬ್ರಾಂಕೈಟಿಸ್: ಬ್ರಾಂಕೈಟಿಸ್‌ನಲ್ಲಿ ಮೊದಲಿಗೆ ಒಣಕೆಮ್ಮು ಉಂಟಾಗುವುದು, ನಂತರ ಕಫ ಕಡಿಮೆಯಾಗುವುದು
ಈ ಅಭ್ಯಾಸಗಳಿಂದ ಕೆಮ್ಮು ಉಂಟಾಗುವುದು
* ಧೂಮಪಾನ
* ಅಭ್ಯಾಸ: ಕೆಲವರು ಕಾರಣವೇ ಇಲ್ಲದೆ ಕೆಮ್ಮುತ್ತಾರೆ
ಈ ಬಗೆಯ ಸಮಸ್ಯೆ ಇದ್ದರೆ
ಅಸ್ತಮಾ: ಅಸ್ತಮಾ ಇರುವವರೆಗೆ ಎಲ್ಲರಿಗೆ ಒಣ ಕೆಮ್ಮು ಉಂಟಾಗುವುದಿಲ್ಲ. ಕೆಲವು ಅಸ್ತಮಾ ರೋಗಿಗಳಿಗೆ ಉಸಿರಾಟದ ತೊಂದರೆ ಕಾಣಿಸುವುದಿಲ್ಲ ಅದರ ಬದಲಾಗಿ ಈ ರೀತಿ ಒಣಕೆಮ್ಮಿನ ಸಮಸ್ಯೆ ಉಂಟಾಗುವುದು.
ಹೃದಯದ ಸಮಸ್ಯೆ: ಹೃದಯದ ಸಮಸ್ಯೆ ಇರುವವರಲ್ಲಿ ಒಣಕೆಮ್ಮಿನ ಸಮಸ್ಯೆ ಉಂಟಾಗುವುದು.
ಶ್ವಾಸಕೋಶದ ಸಮಸ್ಯೆ
* ಶ್ವಾಸಕೋಶದಲ್ಲಿ ರಕ್ತ ಹೆಪ್ಪುಗಟ್ಟಿದ್ದರೆ ಎದೆ ನೋವು, ಉಸಿರಾಟದಲ್ಲಿ ತೊಂದರೆ, ಒಣ ಕೆಮ್ಮು ಈ ಬಗೆಯ ಸಮಸ್ಯೆ ಕಂಡು ಬರುವುದು.
ಒಣ ಕೆಮ್ಮಿಗೆ 8 ಪ್ರಮುಖ ಕಾರಣಗಳೆಂದರೆ
* ವೈರಲ್ ಸೋಂಕು : ಇದು ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತದೆ. ಈ ರೀತಿಯಾದಾಗ ಜ್ವರ, ಟಾನ್ಸಿಲ್ ಊದುಕೊಳ್ಳುವುದು, ಮೈ ಕೈ ನೋವು, ಶೀತ, ಸೀನು ಈ ಬಗೆಯ ಸಮಸ್ಯೆಗಳು ಕೂಡ ಕಂಡು ಬರುವುದುದು.
ಮಕ್ಕಳಿಗೆ ವೈರಲ್ ಸೋಂಕು ಆದಾಗ ಆಸ್ಪಿರಿನ್ ನೀಡಬೇಡಿ, ಅವರಿಗೆ ಆ್ಯಂಟಿಬಯೋಟಿಕ್ ಔಷಧ ಪ್ರಾರಂಭಿಸಿದರೆ ಮಾತ್ರ ಕೆಮ್ಮು ಕಡಿಮೆಯಾಗುವುದು.
* ವೈರಲ್ ನ್ಯೂಮೋನಿಯಾ
ವೈರಲ್ ನ್ಯೂಮೋನಿಯಾ ಇದು ವ್ಯಕ್ತಿ ಕೆಮ್ಮಿದಾಗ, ಸೀನಿದಾಗ ಮತ್ತೊಬ್ಬರಿಗೆ ಹರಡುವುದು. ಇದರಲ್ಲಿ ಆರಂಭದಲ್ಲಿ ಲಕ್ಷಣಗಳು ಅಷ್ಟಾಗಿ ಗಂಭೀರ ಪರಿಣಾಮ ಬೀರುವುದಿಲ್ಲ, ನಂತರ ಉಸಿರಾಟದಲ್ಲಿ ತೊಂದರೆ, ತಲೆಸುತ್ತು. ಎದೆನೋವು, ಕೆಮ್ಮು ಈ ಬಗೆಯ ಸಮಸ್ಯೆ ಕಂಡು ಬರುವುದು.
ಈ ರೀತಿ ಉಂಟಾದಾಗ ಆ್ಯಂಟಿಬಯೋಟಿಕ್ ನೀಡಿದರೆ ಏನೂ ಪ್ರಯೋಜನವಿಲ್ಲ ಬದಲಿಗೆ ಆ್ಯಂಟಿವೈರಲ್ ಡ್ರಗ್ಸ್, ಕಾರ್ಟಿಕೋಸ್ಟಿರಾಯ್ಡ್, ಆಕ್ಸಿಜನ್, ಜ್ವರ ಕಡಿಮೆ ಮಾಡಲು ibuprofen ನೀಡಬೇಕಾಗುತ್ತದೆ.
ಲಕ್ಷಣಗಳು: ತಲೆಸುತ್ತು, ತಲೆನೋವು, ಉಸಿರಾಟದಲ್ಲಿ ತೊಂದರೆ, ಹೊಟ್ಟೆ ಹಾಳಾಗುವುದು ಈ ಬಗೆಯ ಸಮಸ್ಯೆ ಕಂಡು ಬರುವುದು.
ಪೋಸ್ಟ್ ಇನ್‌ಫೆಕ್ಷನ್ ಕೆಮ್ಮು
ಲಕ್ಷಣಗಳು: ಕೆಮ್ಮು, ಮೂಗು ಕಟ್ಟುವುದು, ಶೀತ, ಧ್ವನಿ ಹಾಳಾಗುವುದು
ಶೀತ
ಸಾಮಾನ್ಯ ಶೀತ ಉಂಟಾದಾಗ ಕೂಡ ಒಣ ಕೆಮ್ಮು ಉಂಟಾಗುವುದು, ಈ ರೀತಿಯಾದಾಗ 7-10 ದಿನಗಳಲ್ಲಿ ಕಡಿಮೆಯಾಗುವುದು.
COPD (Chronic obstructive pulmonary disease)
ಈ ರೀತಿಯಾದಾಗ ಉಸಿರಾಡಲು ತೊಂದರೆ ಉಂಟಾಗುವುದು. ಇದು ಇದ್ದಕ್ಕಿದ್ದಂತೆ ಉಂಟಾಗುವುದು, ನಿಧಾನಕ್ಕೆ ಉಂಟಾಗುವುದು. ಈ ರೀತಿಯಾದಾಗ ರಕ್ತ ಪರೀಕ್ಷೆ, ಎಕ್ಸ್ ರೇ CT ಸ್ಕ್ಯಾನ್ ಮಾಡಿಸಬೇಕಾಗುತ್ತದೆ.
ಲಕ್ಷಣಗಳು: ತಲೆಸುತ್ತು, ಕೆಮ್ಮು, ಉಸಿರಾಟದಲ್ಲಿ ತೊಂದರೆ, ನಿದ್ದೆ ಮಾಡಲು ಸಾಧ್ಯವಾಗದಿರುವುದು ಈ ಬಗೆಯ ಸಮಸ್ಯೆ ಕಂಡು ಬರುವುದು.
ಬ್ರಾಂಕೈಟಿಸ್
ಶೀತ, ಜ್ವರಕ್ಕೆ ಕಾರಣವಾದ ವೈರಸ್ ಈ ಬ್ರಾಂಕೈಟಿಸ್ ಸಮಸ್ಯೆ ಉಂಟು ಮಾಡುವುದು. ಬ್ರಾಂಕೈಟಿಸ್‌ನಲ್ಲಿ ಕಫ ಹಳದಿ ಅಥವಾ ಹಸಿರು ಬಣ್ಣದಲ್ಲಿರುತ್ತದೆ. ಈ ರೀತಿಯಾದಾಗ ಒಳ್ಳೆಯ ರೆಸ್ಟ್ ಬೇಕಾಗುತ್ತದೆ, ಆ್ಯಂಟಿಬಯೋಟಿಕ್ ಪ್ರಯೋಜನವಾಗಲ್ಲ, ನೀವು ಜೀವನಶೈಲಿಯಲ್ಲಿ ಬದಲಾವಣೆ ಮಾಡಬೇಕಾಗುತ್ತದೆ.
ಬ್ಯಾಕ್ಟಿರಿಯಾ ನ್ಯೋಮೋನಿಯಾ
ಬ್ಯಾಕ್ಟಿರಿಯಾ ನ್ಯೂಮೋನಿಯಾ ಉಂಟಾದಾಗ ತಲೆಸುತ್ತು, ಜ್ವರ, ಮೈಕೈ ನೋವು, ಉಸಿರಾಟದಲ್ಲಿ ತೊಂದರೆ, ಕೆಮ್ಮುವಾಗ ಕಫ ಈ ಬಗೆಯ ಸಮಸ್ಯೆ ಕಂಡು ಬರುವುದು. ಇದನ್ನು ನಿರ್ಲಕ್ಷ್ಯ ಮಾಡಬಾರದು, ಇದರಿಂದ ಅಂಗಾಂಗ ವೈಫಲ್ಯ ಕೂಡ ಉಂಟಾಗಬಹುದು.
ಯಾವಾಗ ತುರ್ತು ಚಿಕಿತ್ಸೆ ಪಡೆಯಬೇಕು
ಕೆಮ್ಮುವಾಗ ರಕ್ತ ಬಂದರೆ
* ಎದೆನೋವು, ಜ್ವರ ಕಾಣಿಸಿಕೊಂಡರೆ
* ತುಂಬಾ ತಲೆನೋವು ಅಥವಾ ಕಿವಿನೋವು
* ತುಂಬಾನೇ ಕೆಮ್ಮು
ಮನೆಮದ್ದು
* ಬಿಸಿನೀರಿಗೆ ಜೇನು ಮತ್ತು ನಿಂಬೆರಸ ಸೇರಿಸಿ ಕುಡಿಯಿರಿ
* ಕೆಮ್ಮಿಗೆ ಸಿರಪ್ ತೆಗೆದುಕೊಳ್ಳಿ, ಕಷಾಯ ಮಾಡಿ ಕುಡಿಯಿರಿ
* ಉಪ್ಪು ನೀರಿನಿಂದ ಬಾಯಿ ಮುಕ್ಕಳಿಸಿ
* ಕೆಮ್ಮು ಅಧಿಕ ಮಾಡುವ ತಣ್ಣನೆಯ ಆಹಾರ ಪದಾರ್ಥಗಳನ್ನು ಸೇವಿಸಬೇಡಿ
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications

