For Quick Alerts
ALLOW NOTIFICATIONS  
For Daily Alerts

ಶ್ವಾಸಕೋಶದ ಆರೋಗ್ಯಕ್ಕಾಗಿ ಉಸಿರಾಟದ ವ್ಯಾಯಾಮ ಹೇಗೆ ಮಾಡಬೇಕು?

|

ಈ ಕೊರೊನಾ ಸಾಂಕ್ರಾಮಿಕದ ಸಮಯದಲ್ಲಿ ಎಲ್ಲರೂ ರೋಗ ನಿರೋಧಕ ಶಕ್ತಿ ಹೆಚ್ಚಿಸುವುದು ಹೇಗೆ, ಶ್ವಾಸಕೋಶದ ಆರೋಗ್ಯ ಹೆಚ್ಚಿಸುವುದು ಹೇಗೆ ಎಂದು ತಿಳಿಯಲು ಬಯಸುತ್ತಿದ್ದಾರೆ.

ಕೊರೊನಾ ರೋಗ ಮುಖ್ಯವಾಗಿ ಶ್ವಾಸಕೋಶಕ್ಕೆ ಹಾನಿಯುಂಟು ಮಾಡುವುದರಿಂದ ಹೆಚ್ಚಿನ ಜನರಿಗೆ ಉಸಿರಾಟದಲ್ಲಿ ತೊಂದರೆ, ದೇಹಕ್ಕೆ ಸರಿಯಾದ ಆಮ್ಲಜನಕ ಪೂರೈಕೆಯಾಗದೆ ಆಮ್ಲಜನಕದ ಕೊರತೆ ಮುಂತಾದ ಸಮಸ್ಯೆ ಕಂಡು ಬರುವುದನ್ನು ನೋಡಿದ್ದೇವೆ.

ಈ ಸಮಯದಲ್ಲಿ ಶ್ವಾಸಕೋಶದ ಆರೋಗ್ಯಕ್ಕಾಗಿ ಕೆಲವೊಂದು ಉಸಿರಾಟದ ವ್ಯಾಯಾಮ ಮಾಡುವುದು ಒಳ್ಳೆಯದು. ಕೋವಿಡ್‌ ಸೋಂಕಿನಿಂದ ಚೇತರಿಸಿಕೊಳ್ಳುತ್ತಿರುವವರಿಗೂ ಕೂಡ ವೈದ್ಯರು ಕೆಲವೊಂದು ಉಸಿರಾಟದ ವ್ಯಾಯಾಮ ಮಾಡಲು ಹೇಳುತ್ತಾರೆ. ಉಸಿರಾಟದ ವ್ಯಾಯಾಮ ಮಾಡುವುದರಿಂದ ಬೇಗನೆ ಚೇತರಿಸಿಕೊಳ್ಳಲು ಸಹಕಾರಿಯಾಗುವುದು ಎಂದು ಡಾ, ಅರವಿಂದ್ ಕುಮಾರ್ (ಇನ್ಸಿಟ್ಯೂಟ್‌ ಆಫ್‌ ಚೆಸ್ಟ್ ಸರ್ಜರಿ, ಮೇಧಾಂತ ಫೌಂಡರ್ ಅಂಡ್ ಮ್ಯಾನೇಜಿಂಗ್‌ ಟ್ರಸ್ಟೀ) ಹೇಳಿದ್ದಾರೆ.

ಉಸಿರಾಟದ ವ್ಯಾಯಾಮದಿಂದ ನಮ್ಮ ಆರೋಗ್ಯ ಸ್ಥಿತಿ ತಿಳಿಯಬಹುದು

ಉಸಿರಾಟದ ವ್ಯಾಯಾಮದಿಂದ ನಮ್ಮ ಆರೋಗ್ಯ ಸ್ಥಿತಿ ತಿಳಿಯಬಹುದು

ಕೋವಿಡ್ 19 ಸೋಂಕಿತರು ಉಸಿರಾಟದ ವ್ಯಾಯಾಮ ಮಾಡುವುದರಿಂದ ಅವರ ದೇಹದಲ್ಲಿ ಆಕ್ಸಿಜನ್ ಪ್ರಮಾಣ ಅಧಿಕವಾಗುವುದು. ಸೋಂಕಿತರು ಉಸಿರನ್ನು ನಿಧಾನಕ್ಕೆ ಎಳೆದು ಸ್ವಲ್ಪ ಹೊತ್ತು ತಡೆ ಹಿಡಿದು ನಿಧಾನಕ್ಕೆ ಬಿಡಬೇಕು. ರೋಗಿಗಳಿಗೆ ಉಸಿರನ್ನು ತಡೆ ಹಿಡಿಯಲು ಸಾಧ್ಯವಾಗಿಲ್ಲ ಅಂದ್ರೆ ವೈದ್ಯರ ಸಲಹೆ ಪಡೆಯಬೇಕು. ಉಸಿರನ್ನು ತೆಗೆದು ಸ್ವಲ್ಪ ಹೊತ್ತು ತಡೆ ಹಿಡಿದು ನಂತರ ಬಿಡಲು ಸಾಧ್ಯವಾದರೆ ಇದು ಒಳ್ಳೆಯ ಲಕ್ಷಣವಾಗಿದೆ.

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರು, ಡಿಸ್ಚಾರ್ಜ್ ಆಗಿ ಮನೆಗೆ ಬಂದವರು ಈ ಉಸಿರಾಟದ ವ್ಯಾಯಾಮ ಅಭ್ಯಾಸ ಮಾಡುವುದು ತುಂಬಾನೇ ಒಳ್ಳೆಯದು.

ಇನ್ನು ಆರೋಗ್ಯಕರವಾಗಿರುವ ವ್ಯಕ್ತಿ ಕೂಡ ದಿನಾ ಉಸಿರಾಟದ ವ್ಯಾಯಾಮ ಅಭ್ಯಾಸ ಮಾಡುವುದು ತುಂಬಾನೇ ಒಳ್ಳೆಯದು. ಇದರಿಂ ಶ್ವಾಸಕೋಶದ ಆರೋಗ್ಯ ವೃದ್ಧಿಯಾಗುವುದು.

ಉಸಿರಾಟದ ವ್ಯಾಯಾಮ ಮಾಡುವುದು ಹೇಗೆ?

ಉಸಿರಾಟದ ವ್ಯಾಯಾಮ ಮಾಡುವುದು ಹೇಗೆ?

* ಬೆನ್ನು ನೇರ ಮಾಡಿ ಸುಖಾಸನದಲ್ಲಿ ಕುಳಿತುಕೊಳ್ಳಿ. ಕೈಗಳು ಜ್ಞಾನ ಮುದ್ರೆಯ ರೀತಿಯಲ್ಲಿ ತೊಡೆಯ ಮೇಲಿರಲಿ.

* ಉಸಿರನ್ನು ಮೂಗಿನ ಮೂಲಕ ನಿಧಾನಕ್ಕೆ ಎಳೆದು ಸ್ವಲ್ಪ ಹೊತ್ತು ತಡೆ ಹಿಡಿದು ನಂತರ ಬಾಯಿಯ ಮುಖಾಂತರ ಬಿಡಿ.

ಈ ರೀತಿ ಒಂದು 5 ಬಾರಿ ಮಾಡಿ.

* ನಂತರ ಬಾಯಿಯ ಮೂಲಕ ಉಸಿರನ್ನು ತೆಗೆದುಕೊಳ್ಳಿ, ಬಾಯನ್ನು ಮುಚ್ಚಿ , ಉಸಿರನ್ನು ಸ್ವಲ್ಪ ಹೊತ್ತು ತಡೆ ಹಿಡಿದು ನಿಧಾನಕ್ಕೆ ಮೂಗಿನ ಮುಖಾಂತರ ಬಿಡಿ.

ವ್ಯಾಯಾಮ ಮಾಡುತ್ತಿದ್ದರೆ ನಿಧಾನಕ್ಕೆ ಉಸಿರನ್ನು ಬಿಗಿ ಹಿಡಿಯುವ ಸಾಮರ್ಥ್ಯ ಹೆಚ್ಚಾಗುವುದು. ನಿಮಗೆ 25 ಸೆಕೆಂಡ್‌ಗಿಂತಲೂ ಅಧಿಕ ಸಮಯ ಉಸಿರನ್ನು ಬಿಗಿ ಹಿಡಿಯಲು ಸಾಧ್ಯವಾದರೆ ನೀವು ಸೇಫ್‌.

ಉಸಿರಾಟದ ವ್ಯಾಯಾಮ ಸೋಂಕನ್ನು ಆರಂಭದಲ್ಲಿಯೇ ಗುರುತಿಸಲು ಸಹಕಾರಿ

ಉಸಿರಾಟದ ವ್ಯಾಯಾಮ ಸೋಂಕನ್ನು ಆರಂಭದಲ್ಲಿಯೇ ಗುರುತಿಸಲು ಸಹಕಾರಿ

ಪ್ರತಿದಿನ ಉಸಿರಾಟದ ವ್ಯಾಯಾಮ ಮಾಡುತ್ತಿದ್ದರೆ ಕೋವಿಡ್‌ 19 ಆದವರಿಗೆ ಉಸಿರನ್ನು ತಡೆ ಹಿಡಿಯಲು ಸಾಧ್ಯವಾಗುವುದಿಲ್ಲ. ಇದು ಆರಂಭದ ಲಕ್ಷಣವಾಗಿರುತ್ತದೆ. ಕೆಮ್ಮು, ಜ್ವರ, ಉಸಿರಾಟದ ತೊಂದರೆ ಮುಂತಾದ ಲಕ್ಷಣಗಳು ಶ್ವಾಸಕೋಶಕ್ಕೆ ಹಾನಿಯುಂಟಾದಾಗ ಉಂಟಾಗುವುದು. ಎಷ್ಟೋ ಕೋವಿಡ್ 19 ಪ್ರಕರಣಗಳು ಗಂಭೀರವಾಗಲು ಕಾರಣ ಪ್ರಾರಂಭದಲ್ಲಿ ತೋರಿದ ನಿರ್ಲಕ್ಷ್ಯ ಆಗಿರುತ್ತದೆ. ಆರಂಭದಲ್ಲಿಯೇ ಅಂದ್ರೆ ಶ್ವಾಸಕೋಶಕ್ಕೆ ಹಾನಿಯುಂಟಾಗುವ ಮೊದಲೇ ಕೋವಿಡ್ 19 ಪತ್ತೆಯಾದರೆ ಬೇಗನೆ ಚೇತರಿಸಿಕೊಳ್ಳಬಹುದು.

ಆರೋಗ್ಯವಂತರು ದಿನ ವ್ಯಾಯಾಮ ಮಾಡಿ

ಆರೋಗ್ಯವಂತರು ದಿನ ವ್ಯಾಯಾಮ ಮಾಡಿ

ದೈಹಿಕ ವ್ಯಾಯಾಮ ಹಾಗೂ ಉಸಿರಾಟದ ವ್ಯಾಯಾಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಸಹಕಾರಿಯಾಗಿದೆ.

ದಿನಾ ಅರ್ಧ ಗಂಟೆ ವ್ಯಾಯಾಮಕ್ಕಾಗಿ ನಿಮ್ಮ ಸಮಯವನ್ನು ಮೀಸಲಿಡಿ.

English summary

Does Breath Holding Exercise Make Your Lungs Healthier?

Does breath holding exercise make your lungs Healthier?, read on...
Story first published: Wednesday, May 19, 2021, 18:13 [IST]
X
Desktop Bottom Promotion