Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಲಸಿಕೆ ಸಿಕ್ಕಿದರೂ ಕೊರೊನಾವೈರಸ್ ಕಾಟ ತಪ್ಪಲ್ಲ, ಏಕೆ?
ದಿನದಿಂದ ದಿನಕ್ಕೆ ಕೋವಿಡ್ 19 ಕೇಸ್ ಹೆಚ್ಚಾಗುತ್ತಿದ್ದು ಈ ಸಮಸ್ಯೆಗೆ ಪರಿಹಾರ ಸಿಗಬೇಕೆಂದರೆ ಆದಷ್ಟು ಬೇಗ ಲಸಿಕೆ ಎಲ್ಲರಿಗೆ ದೊರೆಯುವಂತಾಗಬೇಕಾಗಿದೆ. ಇತ್ತೀಚೆಗೆ ರಷ್ಯಾದ ಸಂಶೋಧಕರು ಕೊರೊನಾ ಔಷಧಿಗೆ ಲಸಿಕೆ ಕಂಡು ಹಿಡಿಯುವ ಮೂಲಕ ವಿಶ್ವದ ಗಮನ ಸೆಳೆದಿದ್ದಾರೆ. ಇನ್ನು 5 ದೇಶಗಳು ನಮ್ಮಲ್ಲಿಯೂ ಲಸಿಕೆ ಸಿದ್ಧವಾಗಿದ್ದು, ಮನುಷ್ಯರ ಮೇಲೆ ಪ್ರಯೋಗ ಮಾಡಲಷ್ಟೇ ಬಾಕಿ ಇದೆ ಎಂದು ಹೇಳಿವೆ.

ರಷ್ಯಾದ ಲಸಿಕೆ ಮನುಷ್ಯರ ಮೇಲೆ ಮಾಡಿದ ಪ್ರಯೋಗದಲ್ಲಿಯೋ ಯಶಸ್ವಿಯಾಗಿದೆ. ಆದರೆ ಈ ಔಷಧಿ ಸದ್ಯಕ್ಕಂತೂ ಎಲ್ಲಾ ದೇಶಗಳಿಗೆ ಸಿಗುವುದು ಅಸಾಧ್ಯ. ಕೊರೊನಾಗೆ ಲಸಿಕೆ ಎಲ್ಲರಿಗೆ ದೊರೆಯುವಂತಾಗಲೂ ಇನ್ನೂ ಕೆಲವು ತಿಂಗಳಾದರೂ ಬೇಕಾಗಬಹುದು, ಭಾರತದಲ್ಲಿಯೂ ಕೂಡ ಕೊರೊನಾ ಮಣಿಸುವುದು ಹೇಗೆ ಎಂದು ಅನೇಕ ಪ್ರಯೋಗಗಳು ನಡೆಯುತ್ತಿದ್ದು, ಆಯುರ್ವೇದ ಕೂಡ ಹಲವಾರು ಸಂಶೋಧನೆಗಳನ್ನು ಮಾಡುತ್ತಿವೆ.

ಕೊರೊನಾಗೆ ಲಸಿಕೆ ಸಿಕ್ಕರೂ ಶಾಶ್ವತ ಪರಿಹಾರವಲ್ಲ
ಕೊರೊನಾಗೆ ಲಸಿಕೆ ಸಿಕ್ಕಿದ ತಕ್ಷಣ ಕೊರೊನಾ ಈ ವಿಶ್ವದಿಂದಲೇ ಇಲ್ಲವಾಗುವುದೇ ಎಂದು ನೋಡುವುದಾದರೆ ಇಲ್ಲ ಎಂತಿದ್ದಾರೆ ವಿಜ್ಞಾನಿಗಳು. ಲಂಡನ್ ಮೂಲದ ಸಂಸ್ಥೆಯೊಂದು ಈ ಕುರಿತು ಅಧ್ಯಯನ ಮಾಡಿದ್ದು ಕೊರೊನಾಗೆ ಲಸಿಕೆ ಸಿಕ್ಕರೂ ಅದರ ಪ್ರಭಾವ ಕೇವಲ ತಾತ್ಕಾಲಿಕವಾಗಿರುತ್ತದೆ ಎಂದು ಹೇಳಿದೆ.
ಈಗಾಗಲೇ 5 ಲಸಿಕೆ ಕಂಪನಿಗಳು ತಮ್ಮಲ್ಲಿ ಕೊರೊನಾಗೆ ಔಷಧಿ ಸಿದ್ಧವಾಗಿದೆ, ಈ ನವೆಂಬರ್-ಡಿಸೆಂಬರ್ ತಿಂಗಳಿನಲ್ಲಿ ಮಾರುಕಟ್ಟೆಗೆ ಬರಲಿವೆ ಎಂದು ಹೇಳುತ್ತಿವೆ. ಇವುಗಳನ್ನು ಕೇಳುವಾಗ ಲಸಿಕೆ ಸಿಕ್ಕಿದರೆ ಈ ಕೊರೊನಾ ಮಹಾಮಾರಿ ಇಲ್ಲವಾಗುತ್ತದೆ ಎಂದು ನಮಗೆ ಅನಿಸಿದರೂ ಲಂಡನ್ ಮೂಲದ ಕಿಂಗ್ಸ್ ಕಾಲೇಜಿನ ವಿಜ್ಞಾನಿಗಳು, ಕೋವಿಡ್ 19ನಿಂದ ಚೇತರಿಸಿಕೊಂಡ ರೋಗಿಗಳು ಕೆಲವು ತಿಂಗಳುಗಳಲ್ಲಿ ಮತ್ತೆ ರೋಗ ನಿರೋಧಕ ಶಕ್ತಿ ಕಳೆದುಕೊಳ್ಳುತ್ತಾರೆ. ಇದರಿಂದಾಗಿ ಕೊರೊನಾ ಮತ್ತೆ ಮರುಕಳಿಸುವ ಸಾಧ್ಯತೆ ಇದೆ ಎಂದಿದೆ.

ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುವುದು
ಕೋವಿಡ್ 19ನಿಂದ ಚೇತರಿಸಿದ 3 ತಿಂಗಳ ಬಳಿಕ ದೇಹದಲ್ಲಿ ಆ್ಯಂಟಿಬಾಡಿ ಸಾಮಾರ್ಥ್ಯ ಕಡಿಮೆಯಾಗುವುದು. ಇದರಿಂದಾಗಿ ದೇಹದಲ್ಲಿ ರೋಗ ನಿರೋಧಕ ಸಾಮಾರ್ಥ್ಯ ಕಡಿಮೆಯಾದಂತೆ ಜನರಿಗೆ ಇದು ಪ್ರತಿವರ್ಷವೂ ಕಾಡುವ ಸಾಧ್ಯತೆ ಇದೆ.

ಅಧ್ಯಯನದಲ್ಲಿ ತಿಳಿದು ಬಂದ ಸಂಗತಿ
ಲಂಡನ್ ಸಮಸ್ಥೆಯು 90 ಆರೋಗ್ಯ ಕಾರ್ಯಕರ್ತರನ್ನು ಅಧ್ಯಯನಕ್ಕೆ ಒಳಪಡಿಸಿತ್ತು. ಕೋವಿಡ್ 19ನಿಂದ ಚೇತರಿಸಿಕೊಂಡ ಬಳಿಕ ಮೂರು ವಾರಗಳವರೆಗೆ ದೇಹದಲ್ಲಿ ರೋಗ ನಿರೋಧಕ ಶಕ್ತಿ ಅಧಿಕವಿರುತ್ತದೆ, ನಂತರ ನಿಧಾನಕ್ಕೆ ಇಲ್ಲವಾಗುವುದು. ಈ ಸಮೀಕ್ಷೆಯಲ್ಲಿ ಶೇ. 60ರಷ್ಟು ಜನರ ದೇಹದಲ್ಲಿ ಮೊದಲಿದ್ದ ರೋಗ ನಿರೋಧಕ ಶಕ್ತಿ ನಂತರದ ದಿನಗಳಲ್ಲಿ ಕಂಡು ಬರುತ್ತಿರಲಿಲ್ಲ, ಶೇ. 17ರಷ್ಟು ಜನರಲ್ಲಿ ಮಾತ್ರ ಕೊರೊನಾದಿಂದ ಚೇತರಿಸಿಕೊಂಡು ತಿಂಗಳಾದ ಬಳಿಕವೂ ದೇಹದಲ್ಲಿ ಅಧಿಕ ರೋಗ ನಿರೋಧಕ ಶಕ್ತಿ ಉತ್ತಮವಾಗಿತ್ತು.

ಆ್ಯಂಟಿ ಬಾಡಿ ನಮ್ಮನ್ನು ಹೇಗೆ ರಕ್ಷಣೆ ಮಾಡುತ್ತದೆ
ದೇಹಕ್ಕೆ ಹೊರಗಿನಿಂದ ಯಾವುದಾದರೂ ವೈರಸ್ ದಾಳಿ ಮಾಡಿದಾಗ ಆ ವೈರಸ್ ಅನ್ನು ದಾಳಿ ಮಾಡುವ ಕಾರ್ಯವನ್ನು ಆ್ಯಂಟಿ ಬಾಡಿ ಮಾಡುತ್ತವೆ. ಆದರೆ ಕೋವಿಡ್ 19ಗೆ ಲಸಿಕೆ ಬಂದು ಅದನ್ನು ತೆಗೆದುಕೊಂಡರೂ ಕೆಲವು ತಿಂಗಳುಗಳಲ್ಲಿ ದೇಹದಲ್ಲಿ ರೋಗ ನಿರೋಧಕ ಕಡಿಮೆಯಾಗುತ್ತದೆ ಆಗ ಕೊರೊನಾ ಮತ್ತೆ ಬರಬಹುದು.
ಇನ್ನು ಯುಕೆಯಲ್ಲಿ ನಡೆಸಿದ ಸಂಶೋಧನೆಯೂ ಕೂಡ ಕಾಲ ಬದಲಾದಂತೆ ಬರುವ ಕೆಮ್ಮು-ಶೀತದಂತೆ ಕೊರೊನಾ ಕೂಡ ಬಂದು ಹೋಗ್ತಾ ಇರುತ್ತದೆ.

ಸ್ಟ್ರಾಂಗ್ ಲಸಿಕೆ ವೈರಸ್ ವಿರುದ್ಧ ಹೋರಾಡುವುದೇ?
ಆಕ್ಸ್‌ಫರ್ಡ್ ಯೂನಿವರ್ಸಿಟಿ AstraZeneca ಲಸಿಕೆಯೂ ಕೂಡ ಸಿದ್ಧವಾಗಿದ್ದು ಇದರ ಪರಿಣಾಮಗಳ ಬಗ್ಗೆ ಪ್ರಯೋಗಗಳು ನಡೆಯುತ್ತಿವೆ. ಈ ಲಸಿಕೆ ಒಮ್ಮೆ ಹಾಕಿದರೆ ದೇಹದಲ್ಲಿ ಕನಿಷ್ಟ ಒಂದು ವರ್ಷದವರೆಗೆ ಆ್ಯಂಟಿಬಾಡಿ ಇರುತ್ತದೆ.



Click it and Unblock the Notifications
