Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ವಯಾಗ್ರ ಸೇವಿಸುವ ಪುರುಷರಿಗೆ ಹೃದಯಾಘಾತ ಹಾಗೂ ಈ ಆರೋಗ್ಯ ಸಮಸ್ಯೆಗಳಿರಲ್ಲ!
ಪುರುಷರು ವಯಾಗ್ರ ತೆಗೆದುಕೊಳ್ಳುವುದರಿಂದ ಬೆಡ್‌ನಲ್ಲಿ ತೃಪ್ತಿ ಮಾತ್ರವಲ್ಲ ಇದರಿಂದ ಅನೇಕ ಆರೋಗ್ಯಕರ ಪ್ರಯೋಜನಗಳಿವೆ ಎಂಬುವುದು ಗೊತ್ತೇ? ಅನೇಕ ಪುರುಷರು ತಮ್ಮ ಲೈಂಗಿಕ ಸಾಮರ್ಥ್ಯ ಹೆಚ್ಚಿಸಲು ವಯಾಗ್ರ ತೆಗೆದುಕೊಳ್ಳುತ್ತಾರೆ.

ಕೆಲವರಿಗೆ ಶೀಘ್ರ ಸ್ಖಲನ ಸಮಸ್ಯೆ ಇರುತ್ತದೆ ಅಂಥವರು ವಯಾಗ್ರ ತೆಗೆದುಕೊಂಡು ಲೈಂಗಿಕ ಸುಖ ಪಡೆಯಲು ಬಯಸುತ್ತಾರೆ. ವಯಾಗ್ರ ಹೆಚ್ಚಾಗಿ ತೆಗೆದುಕೊಂಡು ಅದರಿಂದ ಅಡ್ಡಪರಿಣಾಮ ಉಂಟಾಗಿರುವ ಅನೇಕ ವರದಿಗಳಿವೆ. ಆದರೆ ವಯಾಗ್ರ ತೆಗೆದುಕೊಳ್ಳುವುದರಿಂದ ದೊರೆಯುವ ಆರೋಗ್ಯಕರ ಪ್ರಯೋಜನಗಳ ಬಗ್ಗೆ ಹೆಚ್ಚಿನವರಿಗೆ ಗೊತ್ತಿಲ್ಲ.
ವಯಾಗ್ರ ಪುರುಷರ ಆರೋಗ್ಯ ಹೆಚ್ಚಿಸುತ್ತೆ ಎಂದು ACC (American College of Cardiology) ಜರ್ನಲ್ ವರದಿ ಮಾಡಿದೆ.
ಹೃದಯಾಘಾತ ಅಪಾಯ ಕಡಿಮೆ ಮಾಡುವುದರ ಜೊತೆಗೆ ಯಾವೆಲ್ಲಾ ಪ್ರಯೋಜನಗಳಿವೆ ಎಂದು ಅಧ್ಯಯನ ವರದಿ ಹೇಳಿದೆ ನೋಡಿ:

ವಯಾಗ್ರ ಹೃದಯಾಘಾತದ ಅಪಾಯ ಕಡಿಮೆ ಮಾಡುತ್ತೆ
ಅಪಧಮನಿಗಳಲ್ಲಿ ಬ್ಲಾಕ್ (ತಡೆ) ಉಂಟಾದಾಗ ಹೃದಯಕ್ಕೆ ರಕ್ತ ಪೂರೈಕೆಯಾಗಲು ಕಷ್ಟವಾಗುವುದು. ಇದರಿಂದಾಗ ಹೃದಯ ಬಡಿತ ಹೆಚ್ಚಾಗುವುದು, ಎದೆಯಲ್ಲಿ ನೋವು ಕಾಣಿಸಿಕೊಳ್ಳುವುದು, ಮೈ ತುಂಬಾ ಬೆವರುವುದು, ಉಸಿರಾಟದ ತೊಂದರೆ ಮುಂತಾದ ಸಮಸ್ಯೆಗಳು ಇದ್ದಕ್ಕಿದ್ದಂತೆ ಕಾಣಿಸಿಕೊಂಡು ಹೃದಯಾಘಾತ ಉಂಟಾಗುವುದು.
ಅದೇ ವಯಾಗ್ರ ತೆಗೆದುಕೊಳ್ಳುವ ಪುರುಷರಲ್ಲಿ ಹೃದಯಾಘಾತ ಸಾಧ್ಯತೆ ಕಡಿಮೆಯಾಗುವುದಾಗಿ ವರದಿ ಹೇಳಿದೆ. ಸ್ವೀಡಿಷ್‌ನಲ್ಲಿ ನಡೆಸಿದ ಅಧ್ಯಯನದಲ್ಲಿ 16,548 ಪುರುಷರು ಭಾಗವಹಿಸಿದ್ದರು. ಆಗ ವಯಾಗ್ರ ತೆಗೆದುಕೊಳ್ಳುತ್ತಿರುವ ಪುರುಷರಿಗೆ ಯಾವುದೇ ಹೃದಯ ಸಂಬಂಧಿ ಸಮಸ್ಯೆ ಕಾಣಿಸಿಕೊಳ್ಳುವುದಿಲ್ಲ ಎಂಬ ಅಂಶ ತಿಳಿದು ಬಂದಿದೆ.
ಇದರ ಜೊತೆಗೆ ವಯಾಗ್ರ ತೆಗೆದುಕೊಳ್ಳುವುದರಿಂದ ಆರೋಗ್ಯಕ್ಕೆ ಈ ಪ್ರಯೋಜನಗಳೂ ಇವೆ:

ಪಾರ್ಶ್ವವಾಯು ಅಪಾಯ ಕಡಿಮೆ ಮಾಡುವುದು
ವಯಾಗ್ರವನ್ನು ಮಿತಿಯಲ್ಲಿ ತೆಗೆದುಕೊಳ್ಳುವುದರಿಂದ ಹೃದಯ ಸಂಬಂಧಿ ಹಾಗೂ ಪಾರ್ಶ್ವವಾಯು ಸಮಸ್ಯೆ ತಡೆಗಟ್ಟಬಹುದು.

ಸ್ಟಾಮಿನಾ ಹೆಚ್ಚಿಸುತ್ತೆ
ಈ ವಯಾಗ್ರ ಮಾತ್ರೆಯನ್ನು ಮಿತಿಯಲ್ಲಿ ತೆಗೆದುಕೊಳ್ಳುವುದುರಿಂದ ಸ್ಟಾಮಿನಾ ಹೆಚ್ಚುವುದು. ಇದರಿಂದ ಗುಡ್ಡ, ಪರ್ವತ ಏರುವವರಿಗೆ ಅನುಕೂಲವಾಗುವುದು, ಶ್ವಾಸಕೋಶ ಸಮಸ್ಯೆ ಕಡಿಮೆ ಮಾಡುತ್ತೆ.

ಮಧುಮೇಹವನ್ನು ನಿಯಂತ್ರಣದಲ್ಲಿಡುತ್ತೆ
ಮಧುಮೇಹವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತೆ. ಅಲ್ಲದೆ ಹೊಟ್ಟೆ ಖಾಲಿಯಿದ್ದರೆ ಗ್ಯಾಸ್ಟ್ರಿಕ್ ಸಮಸ್ಯೆ ಉಂಟಾಗುವುದು, ಅದನ್ನು ನಿಯಂತ್ರಿಸಲು ಸಹಕಾರಿ.
ವಯಾಗ್ರದಿಂದ ನೀವು ಊಹಿಸಿರುವುದಕ್ಕಿಂತಲೂ ಹೆಚ್ಚಿನ ಪ್ರಯೋಜನವಿದೆ ಎಂದು ಮಿತಿಮೀರಿ ಸೇವಿಸಬೇಡಿ. ಮಿತಿಯಲ್ಲಿ ಸೇವಿಸಿದರೆ ಮಾತ್ರ ಆರೋಗ್ಯ.



Click it and Unblock the Notifications
