Latest Updates
-
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ!
ಬೇಸಿಗೆಯಲ್ಲಿ ಹೆಚ್ಚಾಗಿ ಕಾಡುವ 5 ಕಾಯಿಲೆಗಳಿವು, ತಡೆಗಟ್ಟುವುದು ಹೇಗೆ?
ಸೆಕೆ... ಸೆಕೆ.... ಮಾರ್ಚ್ ಶುರುವಾಗಿದೆಯಷ್ಟೇ ತುಂಬನೇ ಸೆಕೆ ಪ್ರಾರಂಭವಾಗಿದೆ. ಈ ಸೆಕೆಗಾಲದಲ್ಲಿ ಕೆಲವೊಂದು ಆರೋಗ್ಯ ಸಮಸ್ಯೆಗಳೂ ಕಾಡುವುದು.

ಬೇಸಿಗೆಯಲ್ಲಿ ನೀವು ಕೆಲವೊಂದು ಕಾಯಿಲೆಗಳ ಬಗ್ಗೆ ತುಂಬಾನೇ ಎಚ್ಚರಿಕೆವಹಿಸಬೇಕಾಗಿದೆ. ಬೇಸಿಗೆಯಲ್ಲಿ ಈ 5 ಬಗೆಯ ಕಾಯಿಲೆಗಳು ಹೆಚ್ಚಾಗಿ ಕಂಡು ಬರುವುದರಿಂದ ಇವುಗಳ ಬಗ್ಗೆ ಎಚ್ಚರವಹಿಸಿ:

1.ಚಿಕನ್ ಪಾಕ್ಸ್:
ಚಿಕನ್ ಪಾಕ್ಸ್ ಬೇಸಿಗೆಯಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಅದರಲ್ಲೂ ಶಾಲಾ ಮಕ್ಕಳಲ್ಲಿ ಚಿಕನ್ ಪಾಕ್ಸ್ ಹೆಚ್ಚಾಗಿ ಕಂಡು ಬರುವುದು. ಮೈ ಮೇಲೆ ಚಿಕ್ಕ -ಚಿಕ್ಕ ಗುಳ್ಳೆಗಳು ಕಂಡು ಬರುವುದು. ಮುಖದ ಮೇಲೆ ಮೊದಲಿಗೆ ಕಂಡು ಬರುವುದು ನಂತರ ಮೈ ತುಂಬಾ ಬರುವುದು.
ಚಿಕನ್ ಪಾಕ್ಸ್ ಬಂದ ವ್ಯಕ್ತಿಯಿಂದ ಮತ್ತೊಬ್ಬರಿಗೆ ರೋಗ 5-6 ದಿನಗಳ ಒಳಗೆ ಹರಡುವುದು. ರೋಗಿ ಕೆಮ್ಮಿದಾಗ, ಸೀನಿದಾಗ ಒಬ್ಬರಿಂದ ಮತ್ತೊಬ್ಬರಿಗೆ ಹರಡುವುದು. ಮಕ್ಕಳಿಗೆ ರುಬೆಲ್ಲಾ ಲಸಿಕೆ ನೀಡದಿದ್ದರೆ ಚಿಕನ್ ಬಾಕ್ಸ್ ಬರುವ ಸಾಧ್ಯತೆ ಹೆಚ್ಚು.
ಈಗಂತೂ ತುಂಬಾ ಮಕ್ಕಳಲ್ಲಿ ಚಿಕನ್ ಪಾಕ್ಸ್ ಕಂಡು ಬರುವುದು. ಶಾಲೆಗೆ ಹೋಗುವ ಮಕ್ಕಳಾದರೆ ಒಬ್ಬರಿಂದ ಮತ್ತೊಬ್ಬರಿಗೆ ಹರಡುವುದು. ಆದ್ದರಿಂದ ಮಕ್ಕಳಲ್ಲಿ ಚಿಕನ್ ಪಾಕ್ಸ್ ಲಕ್ಷಣಗಳು ಕಂಡು ಬಂದರೆ ಶಾಲೆಗೆ ಕಳುಹಿಸಬೇಡಿ.
ಚಿಕನ್ ಪಾಕ್ಸ್ ಬಂದವರು ತ್ವಚೆ ನೈರ್ಮಲ್ಯ ಕಾಪಾಡಬೇಕು. ಗುಳ್ಳೆಗಳನ್ನು ಉಗುರಿನಿಂದ ಚಿವುಟಿದರೆ ಕಲೆ ಬೀಳುವುದು, ಆದ್ದರಿಂದ ಚಿವುಟಬಾರದು. ಈ ಸಮಯದಲ್ಲಿ ಮಾಂಸಾಹಾರ, ಅಧಿಕ ಖಾರ ಪದಾರ್ಥ, ಎಣ್ಣೆಯಲ್ಲಿ ಕರಿದ ಪದಾರ್ಥಗಳನ್ನು ತಿನ್ನಬಾರದು.
ಚಿಕನ್ ಪಾಕ್ಸ್ ಲಕ್ಷಣಗಳು
* ತಲೆನೋವು'
* ಜ್ವರ
* ಗಂಟಲು ನೋವು
* ಮುಖದ ಮೇಲೆ ಹಾಗೂ ಮೈ ಮೇಲೆಗಳು ಗುಳ್ಳೆಗಳು ಕಂಡು ಬರುವುದು.
* ಆ ಗುಳ್ಳೆಗಳು ಒಡೆದು ಎರಡು ದಿನದ ಬಳಿಕ ಹೊರಗಡೆ ಓಡಾಡಬಹುದು, ಅದುವರೆಗೆ ಐಸೋಲೇಷನ್‌ನಲ್ಲಿರುವುದು ಒಳ್ಳೆಯದು, ಇಲ್ಲದಿದ್ದರೆ ಬೇರೆಯವರಿಗೆ ಹರಡುವುದು.

2. ಮೀಸೆಲ್ಸ್ ಅಥವಾ ರುಬೆಲ್ಲಾ
ಬೇಸಿಗೆಯಲ್ಲಿ ಕಂಡು ಬರುವ ಸಾಮಾನ್ಯ ಸಮಸ್ಯೆಗಳಲ್ಲಿ ಮೀಸೆಲ್ಸ್ ಅಥವಾ ರುಬೆಲ್ಲಾ ಕೂಡ ಆಗಿದೆ. ಇದು ಕೂಡ paramyxo ಎಂಬ ವೈರಸ್‌ನಿಂದಾಗಿ ಚಿಕನ್ ಪಾಕ್ಸ್ ಹರಡಿದಂತೆ ಹರಡುವುದು.
ರುಬೆಲ್ಲಾ ತಡೆಗಟ್ಟಲು ಲಸಿಕೆಯನ್ನು ನೀಡಲಾಗುತ್ತಿದೆ, ಮಕ್ಕಳಿಗೆ ಕೊಡಿಸಿ. ಮೀಸೆಲ್ಸ್ ಲಕ್ಷಣಗಳು:
* ಜ್ವರ
* ಜ್ವರ, ಕೆಮ್ಮು
* ಬಾಯಿಯೊಳಗೆ ಬಿಳಿ- ಬಿಳಿ ಚುಕ್ಕಿ
* ಮೈ ಮೇಲೆ ಗುಳ್ಳೆಗಳು ಕಂಡು ಬರುವುದು.
ಮೀಸೆಲ್ಸ್ ಬಂದ 5 ದಿನಗಳ ಒಳಗೆ ಬೇರೆಯವರಿಗೆ ಹರಡುವ ಸಾಧ್ಯತೆ ಹೆಚ್ಚು.
ಮೀಸೆಲ್ಸ್‌ಗೆ ಇದೀಗ ಸರ್ಕಾರಿ ಆಸ್ಪತ್ರೆಗಳಲ್ಲಿ ಲಸಿಕೆ ಬಂದಿದ್ದು 5 ವರ್ಷದೊಳಗಿನ ಮಕ್ಕಳಿಗೆ ಈ ಲಸಿಕೆ ಕೊಡಿಸಿ.

3. ಮಂಪ್ಸ್
ಈ ಕಾಯಿಲೆ ಮಕ್ಕಳಿಗೆ ಬೇಸಿಗೆಯಲ್ಲಿ ಕಂಡು ಬರುವ ಸಾಧ್ಯತೆ ಹೆಚ್ಚು. ಈ ಸೋಂಕು ತಗುಲಿದ ವ್ಯಕ್ತಿ ಕೆಮ್ಮಿದಾಗ ಅಥವಾ ಸೀನಿದಾಗ ಅದು ಮತ್ತೊಬ್ಬರಿಗೆ ಹರಡುವುದು.
ಈ ರೋಗದ ಲಕ್ಷಣಗಳೇನು:
* ಕುತ್ತಿಗೆ ಭಾಗದಲ್ಲಿ ಊತ ಕಂಡು ಬರುವುದು ಇದರ ಜೊತೆಗೆ ಈ ಲಕ್ಷಣಗಳೂ ಕಂಡು ಬರುವುದು
* ಜ್ವರ
* ಸುಸ್ತು
* ಬೇಧಿ
*ಮೈಕೈ ನೋವು
* ತಲೆನೋವು
MMR ಲಸಿಕೆ ಪಡೆಯುವುದರಿಂದ ಮಂಪ್ಸ್, ಮೀಸೆಲ್ಸ್, ರುಬೆಲ್ಲಾ ಈ ಕಾಯಿಲೆಗಳನ್ನು ತಡೆಗಟ್ಟಬಹುದು.

4. ಕಾಮಲೆ ರೋಗ
ಇದು ನೀರಿನಿಂದ ಹರಡುವ ರೋಗವಾಗಿದೆ. ಹೆಪಟೈಟಿಸ್ ಎ ಎಂಬ ವೈರಸ್‌ನಿಂದ ಈ ಕಾಯಿಲೆ ಹರಡುವುದು. ಕಲುಷಿತ ನೀರಿನಲ್ಲಿ ತಯಾರಿಸಿದ ಆಹಾರ ಸೇವಿಸಿದರೆ ಕಾಮಲೆ ರೋಗ ಬರುವುದು. ಈ ವೈರಸ್ ನಮ್ಮ ಲಿವರ್ ಮೇಲೆ ಪ್ರಭಾವ ಬೀರುವುದು.
ಲಕ್ಷಣಗಳು
ತ್ವಚೆಯ ಬಣ್ಣ ಬದಲಾಗುವುದು
* ಕಣ್ಣು ಹಳದಿಯಾಗುವುದು
* ಮೂತ್ರ ಹಳದಿ ಬಣ್ಣದಲ್ಲಿರುತ್ತದೆ.
* ತ್ವಚೆಯಲ್ಲಿ ತುರಿಕೆ ಕಂಡು ಬರುವುದು.
ಬೇಸಿಗೆಯಲ್ಲಿ ಯಾವಾಗಲೂ ಕುದಿಸಿ ಆರಿಸಿದ ನೀರನ್ನಷ್ಟೇ ಕುಡಿಯಿರಿ.

5. ಟೈಫಾಯ್ಡ್
ಇದು ಕೂಡ ನೀರಿನಿಂದ ಉಂಟಾಗುವ ಸಮಸ್ಯೆಯಾಗಿದೆ. ಕಲುಷಿತ ನೀರಿನಲ್ಲಿರುವ ಬ್ಯಾಕ್ಟಿರಿಯಾದಿಂದಾಗಿ ಟೈಫಾಯ್ಡ್ ಸಮಸ್ಯೆ ಬರುವುದು.
ಲಕ್ಷಣಗಳು
* ಅತ್ಯಧಿಕ ಜ್ವರ
* ಸುಸ್ತು
* ಕಿಬ್ಬೊಟ್ಟೆಯಲ್ಲಿ ನೋವು
* ತಲೆನೋವು
* ಬೇಧಿ
* ಕೆಲವೊಮ್ಮೆ ಮೈ ಮೇಲೆ ಗುಳ್ಳೆಗಳು ಬರುವುದು ಈ ಬಗೆಯ ಸಮಸ್ಯೆಗಳು ಕಂಡು ಬರುವುದು.

ಬೇಸಿಗೆಯಲ್ಲಿ ಕಾಯಿಲೆ ತಡೆಗಟ್ಟುವುದು ಹೇಗೆ?
* ಚಟುವಟಿಕೆಯಿಂದ ಇರಿ: ಬೇಸಿಗೆಯಲ್ಲಿ ಆರೋಗ್ಯಕರ ಜೀವಶೈಲಿ ಕಡೆಗೆ ಗಮನ ಹರಿಸುವುದು ತುಂಬಾನೇ ಮುಖ್ಯ. ಬೆಳಗ್ಗೆ ಮತ್ತು ಸಂಜೆ ವ್ಯಾಯಾಮ ಮಾಡಿ. ಬಿಸಿಲಿನಲ್ಲಿ ಕೆಲಸ ಮಾಡಬೇಡಿ.
* ಸಾಕಷ್ಟು ನೀರು ಕುಡಿಯಿರಿ, ಕುದಿಸಿ ಆರಿಸಿದ ನೀರು ಕುಡಿಯಿರಿ.
* ಬೇಸಿಗೆ ಸೂಕ್ತವಾದ ಆಹಾರಕ್ರಮ ಪಾಲಿಸಿ
* ವೈಯಕ್ತಿಕ ಶುಚಿತ್ವ ಕಾಪಾಡಿ
* ಕೈಗಳನ್ನು ಆಗಾಗ ತೊಳೆಯಿರಿ.



Click it and Unblock the Notifications
