Latest Updates
-
ಗಣೇಶೋತ್ಸವ 2026: ಮಳೆಯ ನಡುವೆಯೂ ಪರಿಸರ ಸ್ನೇಹಿ ಹಬ್ಬ ಆಚರಣೆಗೆ ಇಲ್ಲಿದೆ ಸರಳ ಟಿಪ್ಸ್! -
ಪ್ಯಾಕ್ ಮಾಡಿದ ಆಹಾರದಲ್ಲಿ ಸಕ್ಕರೆ, ಉಪ್ಪು ಹೆಚ್ಚಿದ್ದರೆ ಕೆಂಪು ಲೇಬಲ್: ಸುಪ್ರೀಂ ಕೋರ್ಟ್ ಪ್ರಶ್ನೆ, ಗ್ರಾಹಕರಿಗೆ ಸಿಗುತ್ತಾ ಪರಿಹಾರ? -
ಝೊಮ್ಯಾಟೋದಲ್ಲಿ 'ಪೇ ಆನ್ ಡೆಲಿವರಿ' ಶುಲ್ಕದ ಶಾಕ್: ನಿಮ್ಮ ಬಿಲ್ ಹೆಚ್ಚಾಗುತ್ತಿದೆಯೇ? ಬಚಾವ್ ಆಗೋದು ಹೇಗೆ? -
ಗಣೇಶೋತ್ಸವದ ಮಳೆ ಮತ್ತು ದರ್ಶನದ ಕ್ಯೂ: ಆಯಾಸವಿಲ್ಲದೆ ಬಪ್ಪನ ದರ್ಶನ ಪಡೆಯಲು ಇಲ್ಲಿದೆ ಬೆಸ್ಟ್ ಟಿಪ್ಸ್! -
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು?
ಪಾರ್ಸೆಲ್ ಆಹಾರದ ಮೂಲಕ ಕೊರೊನಾವೈರಸ್ ಹರಡುವುದೇ?
ಕೋವಿಡ್ 19 ಲಾಕ್‌ಡೌನ್‌ನಿಂದಾಗಿ ಜನರಿಗೆ ಒಂಥರಾ ಅಜ್ಞಾತವಾಸದಂಥ ಅನುಭವವಾಗಿದೆ. ಮಹಾಮಾರಿ ಕೊರೊನಾವೈರಸ್‌ಗೆ ಹೆದರಿ ಮನೆಯಿಂದ ಹೊರಗಡೆ ಹೋಗುವಂತೆ ಇಲ್ಲ, ಒಂದು ಸಲ ಲಾಕ್‌ಡೌನ್ ಓಪನ್ ಆದರೆ ತಮ್ಮ ಮೆಚ್ಚಿನ ರೆಸ್ಟೋರೆಂಟ್‌ಗೆ ಹೋಗಿ ಇಷ್ಟದ ಆಹಾರವನ್ನು ಸವಿಯಬೇಕೆಂದು ಸಾಕಷ್ಟು ಜನರು ಅಂದುಕೊಂಡಿರುತ್ತಾರೆ.

ಆದರೆ ರೆಸ್ಟೋರೆಂಟ್ ಆಹಾರ ಮೂಲಕ ಎಲ್ಲಾದರೂ ರೋಗ ಹರಡುವ ಸಾಧ್ಯತೆ ಇದೆಯೇ ಎಂಬ ಭಯ ಜನರ ಮನಸ್ಸಿನಲ್ಲಿ ಇದ್ದೇ ಇದೆ. ಇತ್ತೀಚೆಗೆ ದೆಹಲಿಯಲ್ಲಿ ಪಿಜ್ಜಾ ಡೆಲಿವರಿ ಬಾಯ್‌ನಲ್ಲಿ ಸೋಂಕು ಪತ್ತೆಯಾದ ಬಳಿಕ ಜನರ ಮನಸ್ಸಿನಲ್ಲಿದ್ದ ಭಯ ಇನ್ನು ಸ್ವಲ್ಪ ಹೆಚ್ಚಾಗಿದೆ.
ಕರ್ನಾಟಕದಲ್ಲಿ ಇಂದಿನಿಂದ ಲಾಕ್‌ಡೌನ್‌ನಲ್ಲಿ ಸ್ವಲ್ಪ ಸಡಲಿಕೆ ಮಾಡಲಾಗಿದೆ. ಹೋಟೆಲ್ ಊಟ ಸಿಗುವುದಾದರೂ ಅಲ್ಲೇ ತಿನ್ನುವಂತಿಲ್ಲ, ಪಾರ್ಸಲ್ ತಂದು ತಿನ್ನಬಹುದು. ಈ ಸೌಲಭ್ಯ ಎಷ್ಟೋ ಬ್ಯಾಚುಲರ್‌ಗಳಿಗೆ ವರದಾನವಾಗಿದೆ. ಆದರೆ ಆಹಾರದ ಮೂಲಕ ಕೊರೊನಾವೈರಸ್ ಹರಡಬಹುದೇ, ಹೊರಗಿನಿಂದ ಆಹಾರ ತರುವುದಾದರೆ ಏನಲ್ಲಾ ಮುನ್ನೆಚ್ಚರಿಕೆವಹಿಸಬೇಕು ಎಂಬುವುದರ ಬಗ್ಗೆ ಮಾಹಿತಿ ನೀಡಿದ್ದೇವೆ ನೋಡಿ:

ವಿಶ್ವ ಆರೋಗ್ಯ ಸಂಸ್ಥೆ ಏನು ಹೇಳಿದೆ?
ವಿಶ್ವ ಆರೊಗ್ಯ ಸಂಸ್ಥೆಯ ಪ್ರಕಾರ ಆಹಾರ ಮೂಲಕ ಕೊರೊನಾವೈರಸ್ ಹರಡುವ ಸಾಧ್ಯತೆ ತುಂಬಾ ಕಡಿಮೆ. ಆದರೆ ಕೆಲವೊಮ್ಮೆ ಆಹಾರದ ತಂದ ಪಾರ್ಸೆಲ್ ಕವರ್ ಮೂಲಕ ಹರಡುವ ಸಾಧ್ಯತೆ ಇದೆ, ಅಂದರೆ ಕೋವಿಡ್ 19 ಇರುವ ವ್ಯಕ್ತಿ ಆ ಕವರ್ ಮುಟ್ಟಿದ್ದರೆ, ಇತರರು ಅದನ್ನು ಮುಟ್ಟಿ ನಂತರ ಕಣ್ಣು ಬಾಯಿ ಮುಟ್ಟುವುದು ಮಾಡಿದರೆ ಹರಡುವ ಸಾಧ್ಯತೆ ಇದೆ.
ಆರೋಗ್ಯ ಸಂಸ್ಥೆ, ಆಹಾರ ಉತ್ಪಾದನಾ ಸಂಸ್ಥೆ ಕೊರೊನಾವೈರಸ್ ತಡೆಗಟ್ಟಲು ಸಾಕಷ್ಟು ಮುನ್ನೆಚ್ಚರಿಕೆಕ್ರಮಗಳನ್ನು ವಹಿಸುತ್ತಿವೆ. ಅಲ್ಲಿ ಕೆಲಸ ಮಾಡುವವರ ಆರೋಗ್ಯ ತಪಾಸನೆ ಮಾಡಿ ನಂತರವಷ್ಟೇ ಆಹಾರ ತಯಾರಿಸಲು ಅನುಮತಿ ನೀಡಲಾಗುವುದು. ಅಲ್ಲದೆ ಅಲ್ಲಿ ಕೆಲಸ ಮಾಡುವ ಉದ್ಯೋಗಿಗಳು ಕೂಡ ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಿದ್ದಾರೆ. ಅಲ್ಲಿಗೆ ಬರುವ ಗ್ರಾಹಕರು ಕೂಡ ಮಾಸ್ಕ್ ಧರಿಸಬೇಕು ಹಾಗೂ ಬಾಗಿಲಿನಿಂದ ಒಳಗೆ ಬರುವ ಮುನ್ನ ಸ್ಯಾನಿಟೈಸರ್ ನೀಡಲಾಗುವುದು.

ಪ್ಲಾಸ್ಟಿಕ್, ಸ್ಟೈನ್‌ಲೆಸ್ ಸ್ಟೀಲ್‌ನಲ್ಲಿ 72 ಗಂಟೆ ಬದುಕಿರುವ ಕೊರೊನಾವೈರಸ್
ಆಹಾರ ಉತ್ಪಾದನಾ ಕೈಗಾರಿಕೆಗಳು, ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು ಇದೀಗ ತುಂಬಾ ಮುನ್ನೆಚ್ಚರಿಕೆಯಿಂದ ಕಾರ್ಯನಿರ್ವಹಿಸುತ್ತಿವೆ. ಅಧ್ಯಯನದ ಪ್ರಕಾರ ಪ್ಲಾಸ್ಟಿಕ್ ಹಾಗೂ ಸ್ಟೈನ್‌ಲೆಸ್ ಸ್ಟೀಲ್ ಪಾತ್ರೆಗಳಲ್ಲಿ 72 ಗಂಟೆ ಹಾಗೂ ಕಾರ್ಡ್‌ಬೋರ್ಡ್‌ಗಳಲ್ಲಿ 24 ಗಂಟೆ ಕೊರೊನಾವೈರಸ್ ಜೀವಿಸಿರುತ್ತದೆ. ಆದ್ದರಿಂದಲೇ ಅಲ್ಲಿ ತಯಾರಿಸುವ ಪಾತ್ರೆಹಯಿಂದ ಹಿಡಿದು, ಪ್ಯಾಕ್ ಮಾಡುವ ಪಾರ್ಸೆಲ್ ಕಾರ್ಡ್‌ಬೋರ್ಡ್ ಡಬ್ಬದವರೆಗೂ ತುಂಬಾ ಮುನ್ನೆಚ್ಚರಿಕೆವಹಿಸಲಾಗುತ್ತಿದೆ.

ಆಹಾರದ ಮೂಲಕ ಹರಡುವ ಸಾಧ್ಯತೆ ಕಡಿಮೆ ಏಕೆ?
ಮೊದಲನೆಯದಾಗಿ ಆಹಾರದ ಬಗ್ಗೆ ಈಗಾಗಲೇ ಸಾಕಷ್ಟು ಮುನ್ನೆಚ್ಚರಿಕೆವಹಿಸಲಾಗಿದೆ. ಇನ್ನು ಆಹಾರ ವಸ್ತುಗಳನ್ನು ತಯಾರಿಸುವ ಕಂಪನಿಗಳು ತಮ್ಮ ಆಹಾರ ಯಾವುದೇ ವೈರಾಣುವಿಲ್ಲದೆ ಜನರನ್ನು ಸೇರಲು ತುಂಬಾ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸುತ್ತಿದೆ. ಅಲ್ಲದೆ ವೈರಸ್ ಆಹಾರದಲ್ಲಿ ಬ್ಯಾಕ್ಟಿರಿಯಾಗಳಂತೆ ತುಂಬಾ ಸಮಯ ಬದುಕಿರಲು ಸಾಧ್ಯವಿಲ್ಲ. ಒಂದು ವೇಳೆ ಕೊರೊನಾವೈರಸ್ ಇರುವ ಆಹಾರ ತಿಂದರೂ ಅದು ನೇರವಾಗಿ ಹೊಟ್ಟೆಯನ್ನು ಸೇರಿದಾಗ ಹೊಟ್ಟೆಯಲ್ಲಿರುವ ಆಮ್ಲ ಆ ವೈರಸ್ ಕೊಂದು ಹಾಕುತ್ತದೆ. ಇವುಗಳ ಆಧಾರದ ಮೇಲೆ ಆಹಾರದ ಮೂಲಕ ಹರಡುವುದಿಲ್ಲ ಎಂದು ಹೇಳಬಹುದು. ಆದರೂ ಇದರ ಬಗ್ಗೆ ಇನ್ನೂ ಹೆಚ್ಚಿನ ಸಾಕ್ಷ್ಯಗಳಿಗಾಗಿ ಸಂಶೋಧನೆಗಳು ನಡೆಯುತ್ತಲೇ ಇವೆ.

ಆಹಾರದ ಬಗ್ಗೆ ನೀವು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳು
- ನಿಮ್ಮ ಆಹಾರವನ್ನು ನೀವೇ ತಯಾರಿಸಿ ತಿನ್ನುವುದು ತುಂಬಾ ಒಳ್ಳೆಯದು.
- ಹಸಿ ಆಹಾರ ಸೇವನೆ ಮಾಡಬೇಡಿ, ಅದರಲ್ಲೂ ಮಾಂಸಾಹಾರವನ್ನು ಚೆನ್ನಾಗಿ ಬೇಯಿಸಿ ತಿನ್ನಬೇಕು.
- ಹೊರಗಿನಿಂದ ಪಾರ್ಸೆಲ್ ತರಿಸುವುದಾದರೆ ಅವುಗಳನ್ನು ಆಗಷ್ಟೇ ತಯಾರಿಸಿರಬೇಕು, ಇಲ್ಲಾಂದರೆ ತಂದ ಮೇಲೆ ಮತ್ತೊಮ್ಮೆ ಬಿಸಿ ಮಾಡಿ ತಿನ್ನಿ.
- ಆಹಾರವನ್ನು ಡಬ್ಬದಲ್ಲಿ ಹಾಕುವ ಮುನ್ನ ತೊಳೆದು ನಂತರ ತುಂಬಿ.
- ಹಣ್ಣು ಮತ್ತು ತರಕಾರಿಗಳನ್ನು ಹರಿಯುವ ನೀರಿನಲ್ಲಿ ತೊಳೆದು, ಒರೆಸಿ ಇಡಿ,
- ಆಹಾರ ತಂದ ಬ್ಯಾಗ್ ಆಗಲೇ ತೊಳೆದು ಹಾಕಿ, ಇಲ್ಲಾಂದರೆ ಹೊರಗಡೆಯೇ ಇಡಿ.
- ದಿನಸಿ ತಂದ ಬಳಿಕ ನಿಮ್ಮ ಬಟ್ಟೆ ಬದಲಾಯಿಸಿ.
- ಪ್ಯಾಕ್ ಆಗಿರುವ ವಸ್ತುಗಳ ಮೇಲ್ಭಾಗ ಒರೆಸಿ, ನಂತರ ಒಳಗಿಡಿ (ಅಕ್ಕಿ ಚೀಲ, ಗೋಧಿ ಚೀಲ ಮುಂತಾದವು).




Click it and Unblock the Notifications
