Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಧೂಮಪಾನ ಚಟದಿಂದ ಹೊರಬರಬೇಕೆ? ಈ ಆಹಾರ ತಿನ್ನಿ
ಧೂಮಪಾನ ಚಟ ಬೆಳೆಸಿಕೊಂಡರೆ ಅದನ್ನು ಬಿಡುವುದು ಅಷ್ಟು ಸುಲಭವಾಗಿ ಸಾಧ್ಯವಾಗುವುದಿಲ್ಲ. ಕೆಲವರು ಧೂಮಪಾನದಿಂದ ಆರೋಗ್ಯ ಸಮಸ್ಯೆಗಳು ಎದುರಾದಾಗ ಬಿಡಬೇಕೆಂದು ಪ್ರಯತ್ನ ಮಾಡುತ್ತಾರೆ. ಆದರೆ ಬಿಡಲು ಸಾಧ್ಯವಾಗದೆ ಮತ್ತೆ ಚಟ ಮುಂದುವರೆಸುತ್ತಾರೆ, ಇದರಿಂದ ಆರೋಗ್ಯ ಸ್ಥಿತಿ ಗಂಭೀರವಾಗುವುದು, ಯಾವುದೇ ಚಿಕಿತ್ಸೆಗಳು ಫಲ ನೀಡುವುದಿಲ್ಲ.

ಧೂಮಪಾನ ಮಾಡುವುದು ಸಾವನ್ನು ಬೇಗ ಸ್ವಾಗತಿಸಿದಂತೆ, ಈ ಚಟ ಇರುವವರು ಮಾತ್ರ ತೊಂದರೆ ಅನುಭವಿಸುವುದಿಲ್ಲ, ಅವರು ಕುಟುಂಬದವರೂ ತೊಂದರೆಗೆ ಸಿಲುಕುತ್ತಾರೆ, ಧೂಮಪಾನಿಗಳ ಆರೋಗ್ಯ ಸಮಸ್ಯೆಯಿಂದಾಗಿ ಆರ್ಥಿಕ ತೊಂದರೆ ಕೂಡ ಅನುಭವಿಸಬೇಕಾಗುತ್ತದೆ.
ಅದೇ ಧೂಮಪಾನ ಬಿಡುವುದರಿಂದ ನಿಮ್ಮ ಆರೋಗ್ಯ ಸುಧಾರಿಸುವುದು, ಕುಟುಂಬದವರ ಮುಖದಲ್ಲೂ ನಗು ಮೂಡುವುದು. ಇಲ್ಲಿ ನಾವು ಧೂಮಪಾನ ಬಿಡಬೇಕೆಂದು ಪ್ರಯತ್ನಿಸುವವರಿಗೆ ಯಾವ ಆಹಾರ ತಿನ್ನಬೇಕು, ಯಾವ ಆಹಾರ ತಿನ್ನಬಾರದು ಎಂಬ ಟಿಪ್ಸ್ ನೀಡಿದ್ದೇವೆ ನೋಡಿ:

1. ಹಣ್ಣುಗಳು
ಸೇಬು, ಬಾಳೆಹಣ್ಣು, ಪಿಯರ್ಸ್, ದ್ರಾಕ್ಷಿ, ಕಿತ್ತಳೆ ಈ ಹಣ್ಣುಗಳು ನಿಮ್ಮ ನಾಲಗೆಗೆ ರುಚಿ ನೀಡುತ್ತದೆ. ಧೂಮಪಾನ ಮಾಡಬೇಕೆಂದು ಅನಿಸಿದಾಗ ಈ ಹಣ್ಣುಗಳನ್ನು ತಿಂದರೆ ಸಾಕು, ಧೂಮಪಾನದ ಬಯಕೆ ಕಡಿಮೆಯಾಗುವುದು. ಅಲ್ಲದೆ ಈ ಹಣ್ಣುಗಳಲ್ಲಿರುವ ಪೋಷಕಾಂಶಗಳು ದೇಹದ ಆರೋಗ್ಯವನ್ನು ಕೂಡ ವೃದ್ಧಿಸುತ್ತದೆ.

2. ತರಕಾರಿಗಳು
ಕ್ಯಾರೆಟ್, ಸೆಲರಿ, ಬ್ರೊಕೋಲಿ ಮಾಡಿಟ್ಟು ಅದನ್ನು ಆಗಾಗ ಬಾಯಿಗೆ ಹಾಕಿ. ಈ ತರಕಾರಿಗಳನ್ನು ಆಗಾಗ ಬಾಯಿಗೆ ಹಾಕುತ್ತಿದ್ದರೆ ಧೂಮಪಾನ ಮಾಡಬೇಕೆಂದು ಅನಿಸುವುದಿಲ್ಲ, ಅಲ್ಲದೆ ಈ ತರಕಾರಿಗಳು ಬಾಯಿಗೂ ರುಚಿ, ಆರೋಗ್ಯಕ್ಕೂ ತುಂಬಾ ಒಳ್ಳೆಯದು. ಧೂಮಪಾನದಿಂದ ನಿಮ್ಮ ದೇಹಕ್ಕೆ ಉಂಟಾದ ಹಾನಿಯನ್ನು ಸರಿಪಡಿಸುವಲ್ಲಿ ಈ ತರಕಾರಿಗಳು ಸಹಕಾರಿ.

3. ಹಾಲು
ಹಾಲು ಕುಡಿಯುವುದು , ಹಾಲಿನ ಉತ್ಪನ್ನಗಳನ್ನು ತಿನ್ನುವುದರಿಂದ ಸಿಗರೇಟ್ ರುಚಿ ಹಾಳು ಮಾಡುತ್ತದೆ. ಸಿಗರೇಟ್ ಎಳೆಯಬೇಕೆಂದು ಅನಿಸಿದಾಗ ಹಾಲು ಕುಡಿದು ಅಥವಾ ಹಾಲಿನ ಉತ್ಪನ್ನಗಳನ್ನು ತಿಂದು ಸಿಗರೇಟ್ ಎಳೆದರೆ ಸಿಗರೇಟ್ ರುಚಿ ನಿಮಗೆ ಅಸಹ್ಯ ಮೂಡಿಸುವುದು. ಇದರಿಂದಾಗಿ ಸಿಗರೇಟ್ ದೂರಮಾಡಬೇಕು ಅನಿಸುವುದು. ಈ ವಿಧಾನ ಟ್ರೈ ಮಾಡಿ, ಖಂಡಿತ ಸಿಗರೇಟ್ ಬಿಡುವಿರಿ.

4. ಜಿನ್ಸೆಂಗ್ ಟೀ
ಧೂಮಪಾನ ಚಟ ಬಿಡಲು ಬಯಸುವವರು ಜಿನ್ಸಂಗ್ ಟೀಯನ್ನು ಆಹಾರದಲ್ಲಿ ಸೇರಿಸುವುದು ಒಳ್ಳೆಯದು. ಇದು ದೇಹದಲ್ಲಿರುವ ನಿಕೋಟಿನ್ ಅಂಶ ಕಡಿಮೆ ಮಾಡಲು ಸಹಕಾರಿ. ದೇಹದಲ್ಲಿ ನಿಕೋಟಿನ್ ಅಂಶವಿದ್ದರೆ ಧೂಮಪಾನ ಮಾಡಬೇಕೆಂಬ ಬಯಕೆ ಹೆಚ್ಚಾಗುತ್ತದೆ.

5. ಪಾಪ್‌ಕಾರ್ನ್
ಸಿಗರೇಟ್ ಎಳೆಯಬೇಕೆಂಬ ಬಯಕೆಯನ್ನು ಹತ್ತಿಕ್ಕಲು ಸಾಧ್ಯವಿಲ್ಲ ಎಂದು ಅನಿಸಿದಾಗ ಪಾಪ್‌ಕಾರ್ನ್ ತೆಗೆದು ಬಾಯಲ್ಲಿ ಹಾಕಿ. ಇದನ್ನು ಜಗಿಯುತ್ತಿದ್ದರೆ ಸಿಗರೇಟ್ ಬಯಕೆ ಕಡಿಮೆಯಾಗುವುದು.

ಧೂಮಪಾನ ಚಟದಿಂದ ಹೊರಬರಲು ಪ್ರಯತ್ನಿಸುವಾಗ ತಿನ್ನಬಾರದ ಆಹಾರಗಳು
ಧೂಮಪಾನ ಚಟದಿಂದ ಬರುವಾಗ ಅದರ ಬದಲಿಗೆ ಕಾಫಿ ಕುಡಿಯುವುದು, ಮದ್ಯ ಕುಡಿಯುವುದು ಮುಂತಾದ ಅಭ್ಯಾಸ ಕೆಲವರು ಬೆಳೆಸಿಕೊಳ್ಳುತ್ತಾರೆ. ಇಲ್ಲಿ ನಾವು ಧೂಮಪಾನ ತಡೆಗಟ್ಟಲು ತಿನ್ನಬಾರದ ಆಹಾರಗಳ ಪಟ್ಟಿ ನೀಡಿದ್ದೇವೆ.

1. ಕಾಫಿ
ಕೆಲವರು ಸಿಗರೇಟ್ ಬದಲಿಗೆ ಕಾಫಿ ಕುಡಿಯಲು ಪ್ರಾರಂಭಿಸುತ್ತಾರೆ. ಸಿಗರೇಟ್ ಬಿಡಲು ಪ್ರಯತ್ನಿಸುವವರು ಕಾಫಿ ಕುಡಿಯಲೇ ಬಾರದು. ಏಕೆಂದರೆ ಇದರಲ್ಲಿರುವ ಕೆಫೀನ್ ಅಂಶ ಸಿಗರೇಟ್ ಬಯಕೆಯನ್ನು ಮತ್ತಷ್ಟು ಹೆಚ್ಚು ಮಾಡುವುದು. ಅದರ ಬದಲಿಗೆ ಫ್ರೂಟ್ಸ್ ಜ್ಯೂಸ್, ನಿಂಬೆ ಪಾನೀಯ ಕುಡಿಯಿರಿ.

2. ಆಲ್ಕೋಹಾಲ್
ಒಂದು ಚಟ ಬಿಡಲು ಮತ್ತೊಂದು ರೂಢಿಸಿಕೊಳ್ಳುವುದು ಆರೋಗ್ಯಕರವಲ್ಲ. ಧೂಮಪಾನದಿಂದ ಮೊದಲೇ ದೇಹ ಹಾಳಾಗಿರುತ್ತದೆ, ಇದರ ಜೊತೆಗೆ ಮದ್ಯಪಾನ ಕೂಡ ಮಾಡಿದಾಗ ಶರೀರಕ್ಕೆ ಮತ್ತಷ್ಟು ಹಾನಿಯುಂಟಾಗುವುದು. ಮದ್ಯಪಾನ ಹಾಗೂ ಧೂಮಪಾನ ಎರಡೂ ಶರೀರಕ್ಕೆ ಹಾನಿಕಾರಕ.

3. ಕರಿದ ಪದಾರ್ಥಗಳು
ಕರಿದ ಪದಾರ್ಥಗಳಲ್ಲಿ ಕೊಬ್ಬಿನಂಶ ಅಧಿಕವಿರುತ್ತದೆ, ಆದರೆ ಪೋಷಕಾಂಶಗಳು ಇರುವುದಿಲ್ಲ. ಧೂಮಪಾನದಿಂದ ದೇಹದ ನರಗಳಿಗೆ, ಶ್ವಾಸಕೋಶಕ್ಕೆ, ಹೃದಯಕ್ಕೆ ಹಾನಿಯುಂಟಾಗಿರುತ್ತದೆ. ಕರಿದ ಪದಾರ್ಥಗಳು ದೇಹದಲ್ಲಿ ಕೊಬ್ಬಿನಂಶ ಮತ್ತಷ್ಟು ಹೆಚ್ಚಿಸುವುದು. ಧೂಮಪಾನ ಬಿಡುವಾಗ ಆರೋಗ್ಯಕರ ಆಹಾರಗಳನ್ನು ಹೆಚ್ಚಾಗಿ ತಿನ್ನಬೇಕು.
ಧೂಮಪಾನ ಬಿಡುವುದು ಕಷ್ಟ ಅನಿಸಿದರೂ ಮುಂದೆ ಮತ್ತಷ್ಟು ಕಷ್ಟ ಅನುಭವಿಸದಿರಲು ಈ ಚಟ ಬಿಡುವುದು ಒಳ್ಳೆಯದು. ಧೂಮಪಾನ ಚಟ ಬಿಡಬೇಕೆಂಬ ಮನಸ್ಸು ನಿಮಗಿದ್ದರೆ ಇಲ್ಲಿ ನೀಡಿರುವ ಸಲಹೆಗಳು ನಿಮಗೆ ಸಹಾಯಕ್ಕೆ ಬರುತ್ತದೆ.



Click it and Unblock the Notifications
