Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಕೋವಿಡ್ 19: ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಆಯುರ್ವೇದ ಟಿಪ್ಸ್
ಇದೀಗ ಕೊರೊನಾ ಎರಡನೇ ಅಲೆಯ ಆತಂಕ ಶುರುವಾಗಿದೆ. ಮೊದಲನೇಯ ಅಲೆಯೇ ಸಾಕಷ್ಟು ಜನರನ್ನು ಬಲಿ ತೆಗೆದುಕೊಂಡಿತ್ತು. ಇದೀಗ ಮತ್ತೊಮ್ಮೆ ಕೊರೊನಾ ಹೆಚ್ಚಾಗುತ್ತಿರುವುದರಿಂದ ಜನರು ಈ ಸಂದರ್ಭದಲ್ಲಿ ಸಾಕಷ್ಟು ಎಚ್ಚರಿಕೆವಹಿಸಬೇಕು. ಒಂದು ಚಿಕ್ಕ ನಿರ್ಲಕ್ಷ್ಯ ದೊಡ್ಡ ಆಪತ್ತು ತರಬಹುದು.

ಇನ್ನು ಇದರ ಜೊತೆಗೆ ನಾವು ಈ ಸಮಯದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಕಡೆಯೂ ಗಮನ ನೀಡಬೇಕು. ರೋಗ ನಿರೋಧಕ ಶಕ್ತಿ ಹೆಚ್ಚಾದರೆ ಕೋವಿಡ್ 19 ತಗುಲುವ ಅಪಾಯ ಕಡಿಮೆ ಎಂದು ಸಂಶೋಧನೆಗಳು ಹೇಳಿವೆ.
ರೋಗ ನಿರೋಧಕ ಶಕ್ತಿ ಹೆಚ್ಚಿಸುವಲ್ಲಿ ಆಯುರ್ವೇದ ಪ್ರಮುಖ ಪಾತ್ರವಹಿಸುತ್ತದೆ. ಗಿಡ ಮೂಲಿಕೆಯ ಔಷಧಿಗಳು ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿ, ವ್ಯಕ್ತಿ ಆರೋಗ್ಯಕರವಾಗಿರುವಂತೆ ಮಾಡುತ್ತದೆ.
ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಆಯುಷ್ ಇಲಾಖೆ ಕೂಡ ಕೆಲವೊಂದು ಮಾರ್ಗದರ್ಶನ ನೀಡಿದೆ. ಅವುಗಳೇನು ಎಂದು ನೋಡೋಣ:

ಸಾಮಾನ್ಯವಾಗಿ ನೀವು ಮಾಡಬೇಕಾಗಿರುವುದು
* ಬಿಸಿ ಬಿಸಿಯಾದ ನೀರು ಕುಡಿಯಿರಿ.
* ದಿನಾ 30 ನಿಮಿಷ ಯೋಗಾಸನ, ಪ್ರಾಣಯಾಮ, ಧ್ಯಾನ ಮಾಡಿ.
* ಆಹಾರದಲ್ಲಿ ಅರಿಶಿಣ, ಜೀರಿಗೆ, ಕೊತ್ತಂಬರಿ ಬೀಜ ಮತ್ತು ಬೆಳ್ಳುಳ್ಳಿ ಬಳಸಿ.

ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆಯುರ್ವೇದ ಔಷಧಗಳು
* ದಿನಾ ಬೆಳಗ್ಗೆ 1 ಚಮಚ ಚವ್ಯನಪ್ರಾಶ ತೆಗೆದುಕೊಳ್ಳಿ. ಮಧುಮೇಹ ಇರುವವರು ಶುಗರ್‌ಲೆಸ್ ಚವ್ಯನಪ್ರಾಶ ತೆಗೆದುಕೊಳ್ಳಿ.
* ಹರ್ಬಲ್ ಟೀ ಕುಡಿಯಿರಿ,
* ಕಷಾಯ ಮಾಡಿ ಕುಡಿಯಿರಿ.
* ನಿಂಬೆ ಪಾನೀಯ ಮಾಡಿ ಕುಡಿಯಿರಿ.

ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಆಯುರ್ವೇದ ವಿಧಾನಗಳು
* ಮೂಗಿಗೆ ಎಳ್ಳೆಣ್ಣೆ ಅಥವಾ ತುಪ್ಪವನ್ನು ಬೆಳಗ್ಗೆ ಹಾಗೂ ಸಂಜೆ ಸವರಿ.
* ಆಯಿಲ್ ಪುಲ್ಲಿಂಗ್ ಅಂದ್ರೆ 1 ಚಮಚ ಎಣ್ಣೆ ಹಾಕಿ ಬಾಯಿ ಮುಕ್ಕಳಿಸಿ. ಇದರಿಂದ ಬಾರಿಯಲ್ಲಿರುವ ಕೀಟಾಣುಗಳನ್ನು ಕೊಲ್ಲಬಹುದು. ಇದರಲ್ಲಿ ಒಂದು ಚಮಚ ಎಣ್ಣೆ ಬಾಯಿಗೆ ಹಾಕಿ ಬಾಯಿ ಮುಕ್ಕಳಿಸಬೇಕು, ಆದ್ರೆ ನುಂಗಬಾರದು. 2-3 ನಿಮಿಷ ಬಾಯಿ ಮುಕ್ಕಳಿಸಿ. ನಂತರ ಬಾಯಿಗೆ ನೀರು ಹಾಕಿ, ಬಾಯಿ ಮುಕ್ಕಳಿಸಿ. ಈ ರೀತಿ ದಿನದಲ್ಲಿ ಒಂದು ಬಾರಿ ಮಾಡಿ.
* ಕುದಿಯುವ ನೀರಿಗೆ ಪುದೀನಾ ಎಲೆ ಅಥವಾ ಅಜ್ವೈನ್ ಹಾಕಿ ಹಬೆ ತೆಗೆದುಕೊಳ್ಳಿ, ಈ ರೀತಿ ದಿನದಲ್ಲಿ ಒಮ್ಮೆ ಮಾಡಿ.
* ಒಣಕೆಮ್ಮು, ಗಂಟಲು ಕೆರೆತ ಇದ್ರೆ ಲವಂಗ ಪುಡಿಯನ್ನುಒಂದು ಚಮಚ ಜೇನಿನಲ್ಲಿ ಮಿಶ್ರ ಮಾಡಿ ದಿನದಲ್ಲಿ ಒಮ್ಮೆ ತೆಗೆದುಕೊಳ್ಳಿ.

ಕಷಾಯ ಮಾಡುವುದು ಹೇಗೆ?
ಒಂದು ಲೀಟರ್ ಜೀರಿಗೆ, ಚಕ್ಕೆ, ಲವಂಗ, ಒಣ ಶುಂಠಿ, ಒಣ ದ್ರಾಕ್ಷಿ, ಬೆಲ್ಲ ಹಾಕಿ ಅದು ಅರ್ಧ ಲೀಟರ್ ಆಗುವಷ್ಟು ಕುದಿಸಿ, ಅದಕ್ಕೆ ಸ್ವಲ್ಪ ನೀಂಬೆ ರಸ ಸೇರಿಸಿ ಮನೆಯವರು ಒಂದೊಮದು ಲೋಟ ಕುಡಿಯರಿ.
ಸೂಚನೆ: ಇವುಗಳು ಕೊರೊನಾಗೆ ಔಷಧಿಯಲ್ಲ, ಇವುಗಳಿಂದ ರೋಗ ನಿರೋಧಕ ಶಕ್ತಿ ಹೆಚ್ಚಿಸಬಹುದು ಅಷ್ಟೇ.



Click it and Unblock the Notifications
