Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ಅಲರ್ಜಿ ಕೆಮ್ಮು: ಕಾರಣ, ಚಿಕಿತ್ಸೆ, ತಡೆಗಟ್ಟುವುದು ಹೇಗೆ?
ಕೆಮ್ಮು ಯಾರಿಗೆ ಯಾವಾಗ ಬೇಕಾದರೂ ಬರಬಹುದು. ಕೆಲವರಿಗೆ ಶೀತದ ವಾತಾವರಣದಿಂದ ಬಂದ್ರೆ ಇನ್ನು ಕೆಲವರಿಗೆ ಅಲರ್ಜಿ, ಇಲ್ಲದಿದ್ದರೆ ಸೋಂಕು ತಗುಲಿ ಕೂಡ ಬರಬಹುದು. ಆದರೆ ಶೀತ, ಸೋಂಕಿನಿಂದ ಕೆಮ್ಮು ಬಂದ್ರೆ ಅದಕ್ಕೆ ಸೂಕ್ತ ಔಷಧಿ ತೆಗೆದುಕೊಂಡರೆ ಬೇಗನೆ ಕಡಿಮೆಯಾಗುವುದು.
ಅದೇ ಅಲರ್ಜಿ ಕೆಮ್ಮು ಇದ್ದರೆ ಮಾತ್ರ ತುಂಬಾನೇ ತೊಂದರೆ ಅನುಭವಿಸಬೇಕಾಗುವುದು. ಯಾವ ಕಾರಣಕ್ಕೆ ಅಲರ್ಜಿ ಉಂಟಾಗಿದೆ ಎಂದು ತಿಳಿದು ಅದಕ್ಕೆ ಸೂಕ್ತ ಪರಿಹಾರ ಕಂಡು ಹಿಡಿಯುವಷ್ಟರಲ್ಲಿ ಸಾಕೋ ಸಾಕಾಗಿರುತ್ತದೆ. ಕೆಲವರಿಗೆ ಸಾಕು ಪ್ರಾಣಿಗಳ ರೋಮದ ಕಾರಣದಿಂದ ಅಲರ್ಜಿ ಉಂಟಾದರೆ ಮತ್ತೆ ಕೆಲವರಿಗೆ ದೂಳು ಅಲರ್ಜಿ, ಇನ್ನು ಕೆಲವೊಂದು ಹೂಗಳು ಕೂಡ ಅಲರ್ಜಿ ಸಮಸ್ಯೆ ತರಬಹುದು.
ಈ ರೀತಿ ಅಲರ್ಜಿ ಕೆಮ್ಮು ಉಂಟಾಗಲು ಕಾರಣವೇನು, ಇದಕ್ಕೆ ಚಿಕಿತ್ಸೆ, ತಡೆಗಟ್ಟುವುದು ಹೇಗೆ ಎಂಬ ಮಾಹಿತಿ ನೀಡಲಾಗಿದೆ ನೋಡಿ:

ಯಾವೆಲ್ಲಾ ಕಾರಣಗಳಿಂದ ಅಲರ್ಜಿ ಕೆಮ್ಮು ಉಂಟಾಗುತ್ತದೆ?
ಅನೇಕ ಕಾರಣಗಳಿಂದ ಅಲರ್ಜಿ ಕೆಮ್ಮು ಉಂಟಾಗುತ್ತದೆ. ಒಂದು ವೇಳೆ ನಿಮಗೆ ಅಲರ್ಜಿ ಕೆಮ್ಮು ಸಮಸ್ಯೆ ಇದ್ದರೆ ಈ ಕಾರಣಗಳಿಂದ ಇರಬಹುದು ನೋಡಿ:
* ಮನೆಯಲ್ಲಿರುವ ದೂಳು
* ಕಟ್ಟಡ ಕಟ್ಟುವಾಗ ಅದರ ದೂಳು
* ಕೆಲವೊಂದು ಆಹಾರಗಳು, ಅದರಲ್ಲೂ ಹುಳಿಯಾದ ಆಹಾರ
* ಮಾಲಿನ್ಯ

ಅಲರ್ಜಿ ಕೆಮ್ಮಿನ ಲಕ್ಷಣಗಳು
ಒಣ ಕೆಮ್ಮು
ಕಫ ರಹಿತ ಕೆಮ್ಮು

ಚಿಕಿತ್ಸೆ
ಹೆಚ್ಚಿನವರು ಕೆಮ್ಮು ಬಂದಾಗ ಮನೆಮದ್ದು ಮಾಡುತ್ತಾರೆಯೇ ಹೊರತು ವೈದ್ಯರ ಬಳಿ ಹೋಗಿ ಚಿಕಿತ್ಸೆ ಒಡೆಯುಉದಿಲ್ಲ. ಇದರಿಂದಾಗಿ ಬ್ರಾಂಚೈಟಿಸ್, ಅಸ್ತಮಾ, ಉಸಿರಾಟದ ತೊಂದರೆ ಮುಂತಾದ ಸಮಸ್ಯೆಗಳು ಉಂಟಾಗಬಹುದು.
ಅಲರ್ಜಿ ಕೆಮ್ಮು ಉಂಟಾದಾಗ ವೈದ್ಯರನ್ನು ಕಂಡು ಔಷಧ ಪಡೆದುಕೊಳ್ಳುವುದು ಸೂಕ್ತ.

ತಡೆಗಟ್ಟುವುದು ಹೇಗೆ?
ಅಲರ್ಜಿ ಉಂಟಾದಾಗ ಮೂಗು, ಗಂಟಲಿನಲ್ಲಿ ತುರಿಕೆ, ಶಬ್ದದಲ್ಲಿ ವ್ಯತ್ಯಾಸ ಮುಂತಾದ ತೊಂದರೆ ಕಾಣಿಸಿಕೊಳ್ಳುವುದು. ಈ ಕೆಳಗಿನ ಸಲಹೆ ಪಾಲಿಸಿದರೆ ಅಲರ್ಜಿ ಕೆಮ್ಮು ತಡೆಗಟ್ಟಬಹುದು:
* ಮನೆಯಲ್ಲಿಯೇ ತಯಾರಿಸಿದ ಆಹಾರ ಸೇವನೆ
* ಶುದ್ಧವಾದ ನೀರನ್ನು ಕುಡಿಯಿರಿ
* ಹುಳಿ ಪದಾರ್ಥಗಳು ಹಾಗೂ ಹುಳಿಯಾದ ಹಣ್ಣುಗಳನ್ನು ತಿನ್ನಬೇಡಿ
* ಮನೆಯನ್ನು ಸ್ವಚ್ಛವಾಗಿಡಿ.
* ಏರ್ ಕಂಡೀಷರ್, ಏರ್ ಫ್ರೆಷರ್ ಇವುಗಳನ್ನು ಸ್ವಚ್ಛವಾಗಿರಿಸಿ.
* ದೂಳಿನಲ್ಲಿ ಓಡಾಡುವಾಗ ಮಾಸ್ಕ್ ಧರಿಸಿ.
* ದಪ್ಪವಾದ ಕರ್ಟನ್ ಬದಲಿಗೆ ತೆಳುವಾದ ಕರ್ಟನ್ ಬಳಸಿ.
* ದಿಂಬು, ಹಾಸಿಗೆ ಇವೆಲ್ಲಾ ಸ್ವಚ್ಛವಾಗಿರಲಿ.

ಕೆಮ್ಮು ಶಮನ ಮಾಡುವ ಮನೆಮದ್ದುಗಳು
1. ಜೇನು
ದಿನದಲ್ಲಿ 2-3 ಬಾರಿ ಒಂದೊಂದು ಚಮಚ ಜೇನನ್ನು ಬಿಸಿ ನೀರಿನಲ್ಲಿ ಹಾಕಿ ಕುಡಿಯುವುದು ಒಳ್ಳೆಯದು.
2. ಕೆಂಪು ಈರುಳ್ಳಿ
ಈರುಳ್ಳಿಯನ್ನು ಚಿಕ್ಕದಾಗಿ ಕತ್ತರಿಸಿ, ಅದಕ್ಕೆ ಕುದಿಸಿ ಆರಿಸಿದ ಒಂದು ಲೋಟ ನೀರು ಹಾಕಿ 10-12 ಗಂಟೆ ಇಟ್ಟು ಆ ಸಿರಪ್ ದಿನದಲ್ಲಿ ಮೂರು ಹೊತ್ತು ತೆಗೆದುಕೊಂಡರೆ ಕೆಮ್ಮು ಕಡಿಮೆಯಾಗುವುದು. ಇನ್ನು ಈರುಳ್ಳಿಯನ್ನು ಕತ್ತರಿಸಿ ಜೇನಿನಲ್ಲಿ ಹಾಕಿಟ್ಟು 6 ಗಂಟೆ ಬಿಟ್ಟು ಒಂದೊಂದು ಚಮಚದಂತೆ ದಿನದಲ್ಲಿ 3 ಬಾರಿ ತೆಗೆದುಕೊಂಡರೆ ಕೆಮ್ಮು ಕಡಿಮೆಯಾಗುವುದು.
3. ಶುಂಠಿ
ಒಂದು ಚಮಚ ಶುಂಠಿ ರಸಕ್ಕೆ ಸ್ವಲ್ಪ ಜೇನು, ನಿಂಬೆರಸ, ಕಾಳು ಮೆಣಸಿನ ಪುಡಿ ಮಿಶ್ರ ತಿಂದ್ರೆ ಗಂಟಲು ಕೆರೆತ ಕಡಿಮೆಯಾಗುವುದು.
4. ಪೈನಾಪಲ್: ಪೈನಾಪಲ್ ಜ್ಯೂಸ್ ಕುಡಿಯುವುದರಿಂದ ಕೂಡ ಗಂಟಲು ಕೆರೆತ ಕಡಿಮೆಯಾಗುವುದು.
ಸೂಚನೆ: ಈ ಮನೆಮದ್ದು ಕೆಮ್ಮು ಕಡಿಮೆಯಾಗುವಲ್ಲಿ ಕಡಿಮೆ ಮಾಡುತ್ತದೆ, ಆದ್ರೆ ಕೆಮ್ಮು ಬಂದಾಗ ಈ ಮನೆಮದ್ದುಗಳಿಂದ ಒಂದೆರಡು ದಿನದಲ್ಲಿ ಕಮ್ಮಿಯಾಗದಿದ್ದರೆ ವೈದ್ಯರಿಗೆ ತೋರಿಸಲು ಹಿಂದೇಟು ಹಾಕಬೇಡಿ.



Click it and Unblock the Notifications











