Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಮುಖದ ಅಂದ ಹೆಚ್ಚಿಸಲು ವ್ಯಾಯಾಮ ಮಾಡುವುದು ಹೇಗೆ?
ಸುಂದರವಾಗಿರುವ ತ್ವಚೆ ತನ್ನ ಸೌಂದರ್ಯವನ್ನು ಕಳೆದುಕೊಳ್ಳಲು ಮುಖದಲ್ಲಿನ ಒಂದು ಕಲೆ ಸಾಕು.ಕಪ್ಪು ಕಲೆಗಳು, ಮೊಡವೆಗಳು ಮುಖವನ್ನು ವಿಕಾರಗೊಳಿಸುತ್ತವೆ. ಅದೆಷ್ಟೋ ಬಾರಿ ನಮ್ಮ ಮುಖವನ್ನು ನಾವೇ ನೋಡಿಕೊಳ್ಳುವುದಕ್ಕೂ ಇಷ್ಟವಾಗದಷ್ಟು ತ್ವಚೆ ಕಳೆಗುಂದಿರುತ್ತದೆ.
ವಾತಾವರಣಗಳು ಬದಲಾದ ಹಾಗೆ ಆಯಾ ಕಾಲಕ್ಕೆ ಹೊಂದಿಕೊಳ್ಳಲಾಗದೆ ತ್ವಚೆ ಕಾಂತಿ ರಹಿತವಾಗಿಬಿಡುತ್ತದೆ. ಆದರೆ ಇಂತಹ ಬದಲಾವಣೆಗಳಿಗೆ ತಕ್ಕ ಹಾಗೆ ಮುಖದಲ್ಲಿನ ಕಲೆಗಳನ್ನು ತೆಗೆಯಲು ಬಳಸುವ ಬೂಟೆಕ್ಸ್ ಚಿಕಿತ್ಸೆಗಳು ಹೆಚ್ಚು ದುಬಾರಿಯಾಗಿರುತ್ತವೆ. ಅದನ್ನು ಸಾಮಾನ್ಯವಾಗಿ ಎಲ್ಲರೂ ಅನುಸರಿಸಲು ಸಾಧ್ಯವೇ ಇಲ್ಲ. ಹಾಗೆಂದ ಮಾತ್ರಕ್ಕೆ ನೀವು ತ್ವಚೆಯನ್ನು ರಕ್ಷಿಸಲು ಸಾಧ್ಯವಿಲ್ಲವೆಂದಲ್ಲ. ಮನೆಯಲ್ಲಿಯೇ ಕುಳಿತು ಮಾಡುವಂತಹ ಕೆಲವು ಮಸಾಜ್ ಗಳನ್ನು ನಿಮ್ಮ ತ್ವಚೆಗೆ ನೀಡಬಹುದು. ಎಲ್ಲಕ್ಕಿಂತ ಹೆಚ್ಚಾಗಿ ಮುಖದ ವ್ಯಾಯಾಮ ಮಾಡುವುದರಿಂದ ಕ್ರಮೇಣ ನಿಮ್ಮ ತ್ವಚೆ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು!

ಹಣೆಯ ಭಾಗ ಸುಕ್ಕುಗಟ್ಟುವುದನ್ನು (Wrinkles) ತಡೆಯುವುದಕ್ಕೆ ವ್ಯಾಯಾಮ:
ಹುಬ್ಬುಗಳನ್ನು ಎತ್ತರಿಸುವಾಗ ಅಲ್ಲಿ ಸುಕ್ಕುಗಟ್ಟಿದ್ದರೆ ಅದು ನೋಡಲು ಚೆನ್ನಾಗಿರುವುದಿಲ್ಲ. ಅದರಲ್ಲೂ ಆಳವಾದ ನೆರಿಗೆಗಳು ಬಿದ್ದಿದ್ದರೆ ಅದು ನಿಮಗೆ ಮುಜುಗರವನ್ನು ತರಬಹುದು. ಆದ್ದರಿಂದ ಇದಕ್ಕೆ ವ್ಯಾಯಾಮವನ್ನು ಮಾಡುವುದು ಒಳ್ಳೆಯದು.
ನಿಮ್ಮ ತೋರುಬೆರಳು ಹಾಗೂ ಹೆಬ್ಬೆರಳುಗಳಿಂದ ಹಣೆಯ ಮೇಲೆ ಅಂದರೆ ಹುಬ್ಬಿನ ಮೇಲ್ಭಾಗದಲ್ಲಿ ಕಣ್ಣಿಸ ಕೆಳಭಾಗಕ್ಕೆ ಚರ್ಮ ತಳ್ಳುವಂತೆ ಉಜ್ಜಿ. ಜೊತೆಗೆ ಹೀಗೆ ಮಾಡುವಾಗ ನಿಮ್ಮ ಹುಬ್ಬುಗಳನ್ನು ಕನಿಷ್ಠ 10 ಬಾರಿಯಾದರೂ ಮೇಲೆ ಕೆಳಗೆ ಮಾಡಿ. ಇದರಿಂದ ನಿಮ್ಮ ಸುಕ್ಕು ಗಟ್ಟಿರುವ ಚರ್ಮ ಸರಿಯಾಗುವುದಲ್ಲದೆ ಹೊಸ ನೆರಿಗೆಗಳು ಬರುವುದನ್ನೂ ತಡೆಗಟ್ಟುತ್ತದೆ. ದಿನಕ್ಕೆ ಒಮ್ಮೆಯಾದರೂ ಈ ವ್ಯಾಯಾಮವನ್ನು ಮಾಡುವುದು ಉತ್ತಮ.
ಕಣ್ಣಿನ / ಗೆ ವ್ಯಾಯಾಮ:
ಕಣ್ಣಿನ ಮೇಲ್ಭಾಗದಲ್ಲಿ ಅಂದರೆ ರೆಪ್ಪೆಯ ಮೇಲ್ಗಡೆ ನೆರಿಗೆಗಳು ಬೀಳದಂತೆ ತಡೆಗಟ್ಟಲು, ನಿಮ್ಮ ಕಣ್ಣುಗಳನ್ನು ಗಟ್ಟಿಯಾಗಿ ಮುಚ್ಚಿ. ನಂತರ ಹುಬ್ಬುಗಳನ್ನು ಮೇಲಕ್ಕೇರಿಸಿ. ಹೀಗೆ 10 ಬಾರಿ ದಿನವೂ ಮಾಡಿದರೆ ಕಣ್ಣಿನ ಮೇಲ್ಭಾಗದಲ್ಲಿಯೂ ಯಾವುದೇ ನೆರಿಗೆಗಳಿಲ್ಲದೆ ಕಣ್ಣು ಆಕರ್ಷಕವಾಗಿ ಕಾಣಿಸುವುದು.
ಗಲ್ಲ ಮತ್ತು ಕುತ್ತಿಗೆ ವ್ಯಾಯಾಮ:
ಈ ವ್ಯಾಯಾಮನನ್ನು ನೀವು ನಿಂತುಕೊಂಡೆ ಮಾಡಬಹುದು. ನಿಂತುಕೊಂಡು ನಿಮ್ಮ ಕುತ್ತಿಗೆಯನ್ನು ಹಿಂದಕ್ಕೆ ಬಾಗಿಸಿ. ಮೇಲ್ಮುಖ ಮಾಡಿ ನಿಂತುಕೊಳ್ಳಿ. ತದ ನಂತರ ತುಟಿಯನ್ನು ಮುಂದಕ್ಕೆ ಮಾಡಿ (ಮುತ್ತು ಕೊಡುವ ಸ್ಥಿತಿಯಲ್ಲಿ ನಿಲ್ಲಿ)
5 ಸೆಕೆಂಡ್ ನಿಂತು ನಂತರ ಸಹಜ ಸ್ಥಿತಿಗೆ ಮರಳಿ. ಈ ವ್ಯಾಯಾಮನನ್ನು 5 ನಿಮಿಷಗಳ ಕಾಲ ಮತ್ತೆ ಮತ್ತೆ ಮಾಡಿ. ಇದರಿಂದ ಗಲ್ಲವೂ ಸುಕ್ಕುಗಟ್ಟದೇ ಚೆನ್ನಾಗಿ ಕಾಣಿಸುತ್ತದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
