Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಜಪಾನ್‌ನಲ್ಲಿ 1000 ಜನರಲ್ಲಿ ರಕ್ತ-ಮಾಂಸ ಹೀರಿ ಕೊಲ್ಲುವ ಬ್ಯಾಕ್ಟಿರಿಯಾ ಪತ್ತೆ, ಅಂಗಾಂಗ ವೈಫಲ್ಯ ತಡೆಗಟ್ಟುವುದು ಹೇಗೆ?
ಕೊರೊನಾ ನಂತರ ಬಂದಿದೆ ಭೀಕರ ಫ್ಲಷ್ ಈಟಿಂಗ್ ಬ್ಯಾಕ್ಟಿರಿಯಾ. ಜಪಾನ್‌ನಲ್ಲಿ 1000 ಜನರಿಗೆ ಈ ಸೋಂಕು ತಗುಲಿದ್ದು ಭಯ ಹುಟ್ಟಿಸಿದೆ. ಈ ಸೋಂಕಿನ ಭೀಕರತೆ ಎಂದರೆ ಇದು ತಗುಲಿದ ಕೆಲವೇ ಗಂಟೆಗಳಲ್ಲಿ ವ್ಯಕ್ತಿ ಸಾವನ್ನಪ್ಪುತ್ತಿದ್ದಾರೆ. ಜೂನ್ 2ಕ್ಕೆ 977 ಕೇಸ್ ದಾಖಲಾಗಿತ್ತು, ಇದೀಗ ಅದರ ಸಂಖ್ಯೆ 941ಕ್ಕೆ ಏರಿಕೆಯಾಗಿದೆ ಎಂದು ನ್ಯಾಷನಲ್ ಇನ್ಸಿಟ್ಯೂಟ್ ಆಫ್ ಇನ್‌ಫೆಕ್ಷಯಸ್ ಡಿಸೇಜ್ ಹೇಳಿದೆ.

ಸ್ಟ್ರೆಪ್ಟೋಕೊಕಲ್ ಟಾಕ್ಸಿಕ್ ಶಾಕ್ ಸಿಂಡ್ರೋಮ್ (STSS )
STSS ಎಂಬುವುದು ಅಪರೂಪದ ಬ್ಯಾಕ್ಟಿರಿಯಾ ಸೋಂಕು ಆಗಿದೆ. ಇದು ರಕ್ತನಾಳದ ಒಳಗಡೆ ಹೊಕ್ಕಿ ದೇಹದಲ್ಲಿ ವಿಷಾಂಶ ಹಚ್ಚಿಸಿ ದೇಹಕ್ಕೆ ಅಪಾಯವನ್ನುಂಟು ಮಾಡುತ್ತದೆ. ಈ ಸೋಂಕು ಒಬ್ಬರಿಂದ ಮತ್ತೊಬ್ಬರಿಗೆ ಸುಲಭವಾಗಿ ಹರಡುತ್ತದೆ, ಇದಕ್ಕೆ ಸೂಕ್ತ ಚಿಕಿತ್ಸೆ ಪಡೆಯದಿದ್ದರೆ ತುಂಬಾನೇ ಕಷ್ಟವಾಗುವುದು.
STSS ಕಾಯಿಲೆಯ ಲಕ್ಷಣಗಳು
ಚಳಿ ಜ್ವರ, ಮೈಕೈ ನೋವು, ವಾಂತಿ ಈ ಬಗೆಯ ಲಕ್ಷಣಗಳು 24-48 ಗಂಟೆಯ ಒಳಗಡೆ ಉಂಟಾಗುವುದು. ವಯಸ್ಸಾದವರಿಗೆ ಊತ, ಜ್ವರ ಕಡಿಮೆ ರಕ್ತದೊತ್ತಡ, ಅಂಗಾಂಗಗಳ ವೈಫಲ್ಯ, ಅತ್ಯಧಿಕ ಹೃದಯ ಬಡಿತ, ತೀವ್ರ ಉಸಿರಾಟ ಈ ಬಗೆಯ ಲಕ್ಷಣಗಳು ಕಂಡು ಬರುವುದು.
ಮಕ್ಕಳಲ್ಲಿ ಗಂಟಲು ಕೆರೆತ ನೋವು ಕಂಡು ಬಂದರೆ, ದೊಡ್ಡವರಲ್ಲಿ ಸ್ನಾಯುಗಳಲ್ಲಿ ನೋವು, ಊತ, ಜ್ವರ, ಕಡಿಮೆ ರಕ್ತದೊತ್ತಡ ಈ ಬಗೆಯ ಲಕ್ಷಣಗಳು ಕಂಡು ಬರುವುದು. ಇದರಿಂದಾಗಿ ಉಸಿರಾಟದಲ್ಲಿ ತೊಂದರೆ , ಅಂಗಾಂಗಗಳ ವೈಫಲ್ಯ ಉಂಟಾಗುವುದು. 50 ವರ್ಷ ಮೇಲ್ಪಟ್ಟವರಲ್ಲಿ ಸಾವು ಕೂಡ ಸಂಭವಿಸಲಿದೆ.ಈ ಕಾಯಿಲೆ ಬಂದ ತಕ್ಷಣ ಕೂಡಲೇ ಚಿಕಿತ್ಸೆ ಪಡೆದರೆ ಸಾವಿನ ಸಂಖ್ಯೆ ಕಡಿಮೆಯಾಗುವುದು.
ಈ ಸೋಂಕು ತಡೆಗಟ್ಟುವುದು ಹೇಗೆ?
ಶುಚಿತ್ವ ಕಡೆಗೆ ತುಂಬಾನೇ ಗಮನಹರಿಸಬೇಕು. ಸೋಪು ಹಚ್ಚಿ ಚೆನ್ನಾಗಿ ಕೈ ತೊಳೆಯಿರಿ. ಕೆಮ್ಮುವಾಗ, ಸೀನುವಾಗ ಕರ್ಚೀಫ್ ಅಡ್ಡಹಿಡಿಯಿರಿ.
ಪತ್ತೆಹಚ್ಚುವುದು ಹೇಗೆ?
STSS ಬಗ್ಗೆ ಅನೇಕ ರೀತಿಯಲ್ಲಿ ಪರೀಕ್ಷೆ ಮಾಡಬೇಕು. ರಕ್ತ ಪರೀಕ್ಷೆ ಮಾಡಲಾಗುವುದು. ಈ ಸೋಂಕು ತಗುಲಿದರೆ ಕಿಡ್ನಿ, ಲಿವರ್ ಈ ಬಗೆಯ ಅಂಗಾಂಗಗಳ ವೈಫಲ್ಯ ಉಂಟಾಗಿರುತ್ತದೆ.
ಚಿಕಿತ್ಸೆಯೇನು?
ಬ್ಯಾಕ್ಟಿರಿಯಾ ಕೊಲ್ಲಲು antibiotics ಅನ್ನು ಐವಿ ಮೂಲಕ ನೀಡಲಾಗುವುದು, ರೋಗಿಯ ದೇಹದಲ್ಲಿ ರಕ್ತದೊತ್ತಡ ಸರಿಯಾಗಿದ್ದರೆ ಅಂಗಾಂಗಗಳು ಚೆನ್ನಾಗಿ ಕಾರ್ಯ ನಿರ್ವಹಿಸುತ್ತದೆ. ಇನ್ನು ಕೆಲವು ಕೇಸ್‌ಗಳಲ್ಲಿ ಸರ್ಜರಿ ಕೂಡ ಬೇಕಾಗುವುದು. ಇದರಿಂದಾಗಿ ಈ ಸೋಂಕಿನಿಂದ ಸಾವು ಸಂಭವಿಸುವುದನ್ನು ತಡೆಗಟ್ಟಬಹುದು.
FAQ:
ಇದು ವ್ಯಕ್ತಿಗೆ ಹೇಗೆ ಹರಡುತ್ತದೆ?
ತ್ವಚೆಗೆ ಗಾಯವದಾಗ, ಕಫ, ಸರ್ಜರಿ ಮಾಡುವಾಗ ಕೂಡ ಹರಡುವ ಸಾಧ್ಯತೆ, ಆರೋಗ್ಯವಂತ ವ್ಯಕ್ತಿಗೂ ಈ ಸೋಂಕು ಹರಡುವುದು.
ಯಾವುದು ತುಂಬಾ ಅಪಾಯಕಾರಿ?
ಈ ಸೋಂಕು ತಗುಲಿದಾಗ ಅಂಗಾಂಗಗಳು ವೈಫಲ್ಯ ಉಂಟಾಗುವುದು, ರಕ್ತದೊತ್ತಡ ತುಂಬಾನೇ ಕಡಿಮೆಯಾಗುವುದು.
ಇದನ್ನು ಸಂಪೂರ್ಣವಾಗಿ ಗುಣಪಡಿಸುವುದೇ?
ಈ ಸೋಂಕು ತಗುಲಿದರೆ ಸಾವು ಸಂಭವಿಸುವ ಸಾಧ್ಯತೆ ಹೆಚ್ಚು. ಆದರೆ ಇದು ಬಂದರೆ ಸಾವು ಸಂಭವಿಸುತ್ತದೆ ಎಂದು ಆತಂಕ ಬೇಡ, ಸೂಕ್ತ ಚಿಕಿತ್ಸೆ ಪ್ರಾರಂಭದಲ್ಲಿ ಸಿಕ್ಕರೆ ಬದುಕುಳಿಯುವ ಸಾಧ್ಯತೆ ಹೆಚ್ಚಿದೆ. ರೋಗ ಲಕ್ಷಣಗಳು ಕಂಡು ಬಂದ ತಕ್ಷಣ ಸೂಕ್ತ ಚಿಕಿತ್ಸೆ ಪಡೆಯಬೇಕು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
