Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ನ್ಯೂಟ್ರಿಷಿಯನಿಸ್ಟ್ ಪ್ರಕಾರ ಥೈರಾಯ್ಡ್ ಸಮಸ್ಯೆಯಿಂದ ಕೂದಲು ಉದುರುವುದನ್ನು ತಡೆಗಟ್ಟುವುದು ಹೇಗೆ?
ಹೈಪೋಥೈರಾಯ್ಡ್ ಮತ್ತು ಹೈಪರ್‌ಥೈರಾಯ್ಡ್‌ಸಂ ಇದ್ದರೆ ಅದು ದೇಹದ ಮೇಲೆ ಪ್ರಭಾವ ಬೀರುತ್ತದೆ, ಇದು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತದೆ, ಏಕೆಂದರೆ ಥೈರಾಯ್ಡ್ ಗಂಭೀರತೆ ಎಷ್ಟಿದೆ ಎಂಬುವುದರ ಮೇಲೆ ಭಿನ್ನವಾಗಿರುತ್ತದೆ.
ಥೈರಾಯ್ಡ್ ಸಮಸ್ಯೆಯಾದರೆ ಪ್ರಮುಖ ತೊಮದರೆಯಾಗುವುದು ಕೂದಲಿನ ಮೇಲೆ. ಥೈರಾಯ್ಡ್ ಎಂಬುವುದು ಗಂಟಲಿನ ಬಳಿ ಇರುವ ಚಿಕ್ಕ ಚಿಟ್ಟೆಯಾಕಾರದ ಗ್ರಂಥಿ, ಅದು ಬಿಡುಗಡೆ ಮಾಡುವ ಥೈರಾಯ್ಡ್ ಹಾರ್ಮೋನ್‌ಗಳ ದೇಹದ ಇತರ ಅಂಗಾಂಗಗಳ ಕಾರ್ಯ ವೈಖರಿ ಮೇಲೆ ಪರಿಣಾಮ ಬೀರುತ್ತದೆ. ಈ ಹಾರ್ಮೋನ್ ಬಿಡುಗಡೆಯಲ್ಲಿ ಅಸಮತೋಲ ಉಂಟಾದಾಗ ಅದರ ಪರಿಣಾಮ ಶರೀರದ ಮೇಲೆ ಕಂಡು ಬರುವುದು.

ಹೈಪರ್ ಥೈರಾಯ್ಡ್: ದೇಹದಲ್ಲಿ ಥೈರಾಯ್ಡ್ ಹಾರ್ಮೋನ್‌ಗಳ ಉತ್ಪತ್ತಿ ಹೆಚ್ಚಾದರೆ ಹೈಪರ್ ಥೈರಾಯ್ಡ್ ಉಂಟಾಗುವುದು. ಹೈಪರ್ ಥೈರಾಯ್ಡ್ ಉಂಟಾದರೆ ಮೈ ತೂಕ ತುಂಬಾನೇ ಕಡಿಮೆಯಾಗುವುದು.
ನ್ಯೂಟ್ರಿಷಿಯನಿಸ್ಟ್ ಆಗಿರುವ ಗರಿಮಾ ಅವರು ನೀವು ತುಂಬಾನೇ ಸಪ್ಲೆಮೆಂಟ್ ತೆಗೆದುಕೊಳ್ಳುವ ಬದಲಿಗೆ ಪೋಷಕಾಂಶವಿರುವ ಆಹಾರ ತೆಗೆದುಕೊಳ್ಳುವ ಮೂಲಕ ಕೂದಲು ಉದುರುವುದನ್ನು ತಡೆಗಟ್ಟಬಹುದು.
ಕೂದಲು ಉದುರುವುದನ್ನು ತಡೆಗಟ್ಟುವುದು ಹೇಗೆ?
ಮೊದಲಿನದಾಗಿ ಕಬ್ಬಿಣದಂಶ
ಥೈರಾಯ್ಡ್ ಹಾರ್ಮೋನ್‌ಗಳ ವ್ಯತ್ಯಾಸದಿಂದಾಗಿ ದೇಹದಲ್ಲಿ ಕಬ್ಬಿಣದಂಶದಲ್ಲಿ ವ್ಯತ್ಯಾಸ ಉಂಟಾಗುವುದು. ನೀವು ಸೊಪ್ಪು ಹಾಗೂ ತರಕಾರಿಗಳನ್ನು ನಿಮ್ಮ ಆಹಾರದಲ್ಲಿ ಹೆಚ್ಚಾಗಿ ಸೇವಿಸಿ. ದ್ರಾಕ್ಷಿ, ಧ್ಯಾನ್ಯಗಳು, ನವಣೆ ಇವುಗಳನ್ನು ನಿಮ್ಮ ಆಹಾರಕ್ರಮದಲ್ಲಿ ಸೇರಿಸಬೇಕು. ವಿಟಮಿನ್ ಸಿ ಆಹಾರಗಳಾದ ನೆಲ್ಲಿಕಾತಿ, ನಿಂಬೆರಸ, ಕರಿಬೇವಿನ ಎಲೆ ಇವುಗಲನ್ನು ನಿಮ್ಮ ಆಹಾರಕ್ರಮದಲ್ಲಿ ಸೇರಿಸಿ.ಇವುಗಳು ದೇಹದಲ್ಲಿ ಕಬ್ಬಿಣದಂಶ ಕಾಪಾಡಲು ಸಹಕಾರಿ.
ಎರಡನೇ ಪ್ರಮುಖ ಪೋಷಕಾಂಶ ಎಂದರೆ ಬಯೋಟಿನ್:
ಎಕ್ಸ್‌ಪರ್ಟ್ ಪ್ರಕಾರ ಸಾಮಾನ್ಯವಾಗಿ ದೇಹದಲ್ಲಿ ಬಯೋಟಿನ್ ಕೊರತೆ ಉಂಟಾಗುವುದಿಲ್ಲ, ಆದರೆ ಥೈರಾಯ್ಡ್ ಹಾರ್ಮೋನ್‌ಗಳ ಕೊರತೆ ಉಂಟಾದರೆ ಬಯೋಟಿನ್ ಕೊರತೆ ಉಂಟಾಗುವುದು. ಮೊಟ್ಟೆಯ ಹಳದಿ, ಸಿಹಿ ಗೆಣಸು, ನಟ್ಸ್, ಬೀಜಗಳಲ್ಲಿ ಬಯೋಟಿನ್ ಇರುತ್ತದೆ.
3ನೇ ಪ್ರಮುಖ ಅಂಶವೆಂದರೆ ಪ್ರೊಟೀನ್
ಪ್ರೊಟೀನ್‌ಗಳು ಕೂದಲು ಉದುರುವುದನ್ನು ತಡೆಗಟ್ಟಲು ಸಹಕಾರಿ. ಪ್ರೊಟೀನ್ ಕೊರತೆ ಉಂಟಾದರೆ ಪ್ರೊಟೀನ್ ಅಧಿಕವಿರುವ ಆಹಾರ ಸೇವಿಸಿ, ಸಪ್ಲಿಮೆಂಟ್ ಕೂಡ ತೆಗೆದುಕೊಳ್ಳಬಹುದು.
ಕೂದಲು ಉದುರುವುದನ್ನು ತಡೆಗಟ್ಟಲು ಈ ಬಗ್ಗೆ ಗಮನಹರಿಸಿ
ಔಷಧಿಯನ್ನು ನಿಯಮಿತವಾಗಿ ಸೇವಿಸಿ
ಪೋಷಕಾಂಶವಿರುವ ಆಹಾರ ಸೇವಿಸಿ
ನಿಮ್ಮ ಕೂದಲಿಗೆ ಸೂಟ್ ಆಗುವ ಹೇರ್ ಕೇರ್ ರುಟಿನ್ ಪಾಲಿಸಿ.
ಥೈರಾಯ್ಡ್ ಸಮಸ್ಯೆಯ ಲಕ್ಷಣಗಳು
- ತುಂಬಾನೇ ತಲೆಸುತ್ತು
- ಮರೆತುಹೋಗುವುದು
- ಎಲ್ಲಾ ಸಮಯದಲ್ಲಿ ಚಳಿಯ ಅನುಭವ
- ಆಗಾಗ ಮಲಬದ್ಧತೆ
- ತ್ವಚೆ ಡ್ರೈಯಾಗುವುದು
- ಹೊಟ್ಟೆ ಉಬ್ಬುವುದು ಅಥವಾ ದೇಹದಲ್ಲಿ ನೀರಿನಂಶ ಹೆಚ್ಚಾಗುವುದು
- ಅನಿಯಮಿತ ಮುಟ್ಟು
- ಖಿನ್ನತೆ ಥೈರಾಯ್ಡ್ ಸಮಸ್ಯೆ ಇರುವವರು ಈ ಬಗೆಯ ಆಹಾರ ಸೇವಿಸುವುದು ಒಳ್ಳೆಯದು:
ಮೀನಿನ ಆಹಾರ ಒಳ್ಳೆಯದು
ಮೀನಿನಲ್ಲಿ ಅಯೋಡಿಯನ್ ಅಂಶ ತುಂಬಾ ಚೆನ್ನಾಗಿರುತ್ತದೆ, ಮೀನಿನ ಆಹಾರ ಸೇವನೆ ಒಳ್ಳೆಯದು. ಸೀಗಡಿ ಮೀನು ಕೂಡ ಥೈರಾಯ್ಡ್ ಸಮಸ್ಯೆ ಇರುವವರಿಗೆ ಅತ್ಯುತ್ತಮವಾದ ಆಹಾರವಾಗಿದೆ. ಇದರಲ್ಲಿ ಸೆಲೆನಿಯಮ್, ರಂಜಕ ಮತ್ತು ವಿಟಮಿನ್ ಬಿ 12 ಪೋಷಕಾಂಶಗಳಿವೆ.
ಹಾಲಿನ ಉತ್ಪನ್ನಗಳು
ನೀವು ಹಾಲಿನ ಉತ್ಪನ್ನ ಸೇವನೆ ಮಾಡಿದರೆ ಒಳ್ಳೆಯದು, ಮೊದರು, ಹಾಲು ಈ ಬಗೆಯ ಆಹಾರ ಸೇವಿಸಿ.
ಮೊಟ್ಟೆ
ಪ್ರತಿದಿನ ಒಂದು ಮೊಟ್ಟೆ ಸೇವಿಸಿ, ಮೊಟ್ಟೆಯನ್ನು ಹಳದಿ ಸಹಿತ ಸೇವಿಸಿ.
ಮಾಂಸಾಹಾರದಲ್ಲಿ ಲಿವರ್ ಒಳ್ಳೆಯದು
ಥೈರಾಯ್ಡ್ ಸಮಸ್ಯೆ ಇರುವವರು ಲಿವರ್ ಸೇವನೆ ಮಾಡುವುದು ಒಳ್ಳೆಯದು. ಮಾಂಸದಲ್ಲಿ ಇರುವುದಕ್ಕಿಂತ ಅಧಿಕ ಪೋಷಕಾಂಶ ಲಿವರ್‌ನಲ್ಲಿರುತ್ತದೆ. ಲಿವರ್‌ನಲ್ಲಿ ವಿಟಮಿನ್ ಬಿ, ಬಿ12, ಫೋಲೆಟ್, ಖನಿಜಾಂಶಗಳು, ಕಬ್ಬಿಣದಂಶ,ಸತು ಇವುಗಳು ಅಧಿಕವಿರುತ್ತದೆ ಥೈರಾಯ್ಡ್ ಹಾರ್ಮೋನ್ ಸಮತೋಲದಲ್ಲಿಡಲು ಸಹಕಾರಿ
ಯಾವ ಆಹಾರಗಳು ಒಳ್ಳೆಯದಲ್ಲ
ಸಂಸ್ಕರಿಸಿದ ಆಹಾರ ಪದಾರ್ಥಗಳು ಒಳ್ಳೆಯದಲ್ಲ
ಸೋಯಾ ಗೋಧಿ
ಸಕ್ಕರೆಯಂಶ ಇರುವ ಆಹಾರ
ಕ್ಯಾಬೇಜ್ ಈ ಬಗೆಯ ಆಹಾರಸೇವಿಸಬೇಡಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
