Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಸೈಡ್ ಫ್ಯಾಟ್ ಕರಗಿಸೋದು ಹೇಗೆ.! ಈ ರೀತಿ ಒಂದು ವಾರ ಮಾಡಿ ಸಾಕು..!!
ಇತ್ತೀಚಿಗೆ ಅದರಲ್ಲೂ ಭಾರತೀಯರಲ್ಲಿ ತೂಕ ಹೆಚ್ಚಳ ಎಂಬುದು ಬಹುದೊಡ್ಡ ಸಮಸ್ಯೆಯಾಗಿದೆ. ವಯಸ್ಸಿಗಿಂತ ಹೆಚ್ಚು ತೂಕ, ಹೊಟ್ಟೆಯ ಕೊಬ್ಬು ಹೀಗೆ ಒಂದಲ್ಲ ಒಂದು ಸಮಸ್ಯೆ. ತೂಕ ಹೆಚ್ಚಳವಾದರೆ ಇಳಿಸೋದು ಬಹಳ ಕಷ್ಟ. ಕಠಿಣ ಅಭ್ಯಾಸಗಳು, ಜಿಮ್, ವ್ಯಾಯಾಮ, ಡಯೆಟ್ ಹೀಗೆ ಹತ್ತಾರು ಕಸರತ್ತು ಮಾಡಬೇಕಾಗುತ್ತದೆ.
ಅದ್ರಲ್ಲೂ ಹೊಟ್ಟೆ ಕರಗಿಸೋದು ಅಂದ್ರೆ ತಪಸ್ಸು ಮಾಡಿದಂತೆ, ನಮ್ಮ ಇಂದಿನ ಜೀವನ ಶೈಲಿಯಲ್ಲಿ ನಾವು ಸೇವಿಸುವ ಆಹಾರ ನಮ್ಮ ತೂಕ ಹೆಚ್ಚಳ ಹಾಗೂ ಹೊಟ್ಟೆ ಕಾಣಿಸಿಕೊಳ್ಳಲು ಕಾರಣವಾಗುತ್ತಿದೆ. ವ್ಯಾಯಾಮ ಮಾಡದಿರುವುದು, ನಮ್ಮ ಜೀನ ಶೈಲಿಯ ಕಾರಣಗಳಿಂದಾಗಿ ಈ ರೀತಿಯ ಸಮಸ್ಯೆ ಎದುರಿಸಬೇಕಾಗಿದೆ.
ಇನ್ನು ಹೊಟ್ಟೆ ಕರಗಿಸುವ ಜೊತೆಗೆ ಸೈಟ್ ಫ್ಯಾಟ್ ಕರಗಿಸುವುದು ಸಹ ಒಂದು ಸವಾಲು, ಕೆಲವರಿಗೆ ಸೊಂಟದ ಸುತ್ತಲೂ ಕೊಬ್ಬು ಶೇಖರಣೆಯಾಗಿ ಇಡೀ ಸೊಂಟ ದೊಡ್ಡದಾಗಿ ಕಾಣುತ್ತದೆ. ಇದಕ್ಕೆ ಸೈಟ್ ಫ್ಯಾಟ್ ಎನ್ನಲಾಗುತ್ತದೆ. ಸೈಟ್ ಫ್ಯಾಟ್ ಸಾಮಾನ್ಯವಾಗಿ ವ್ಯಾಯಾಮ ಕಡಿಮೆಯಾದರೆ ಈ ಸಮಸ್ಯೆ ಹೆಚ್ಚಾಗಬಹುದು.

ಸಂಸ್ಕರಿತ ಆಹಾರಗಳು, ಉದಾಹರಣೆಗೆ ಬಿಳಿ ಬ್ರೆಡ್, ಕುರುಕು ತಿಂಡಿಗಳು, ಚಿಪ್ಸ್, ಬುರುಗು ಬರುವ ಮತ್ತು ಅತಿ ಹೆಚ್ಚಿನ ಸಕ್ಕರೆ ಇರುವ ಪಾನೀಯಗಳು, ಸಿಹಿತಿಂಡಿ ಮೊದಲಾದವುವಳಲ್ಲಿ ಅತಿ ಹೆಚ್ಚಿನ ಪ್ರಮಾಣದ ಸಕ್ಕರೆ ಹಾಗೂ ಸಂತುಲಿತ ಕೊಬ್ಬು ಇರುತ್ತವೆ.ಬೆಣ್ಣೆಹಣ್ಣು, ಆಲಿವ್ ಎಣ್ಣೆ ಮೊದಲಾದವುಗಳಲ್ಲಿರುವ ಏಕ ಅಪರ್ಯಾಪ್ತ ಕೊಬ್ಬು (monounsaturated fat) ಹಾಗೂ ಸೂರ್ಯಕಾಂತಿ ಬೀಜ, ಅಕ್ರೋಟು ಹಾಗೂ ಮೀನಿನಲ್ಲಿರುವ ಬಹುಪರ್ಯಾಪ್ತ ಕೊಬ್ಬು (polyunsaturated fat) ಗಳಲ್ಲಿ ಉರಿಯೂತ ನಿವಾರಕ ಗುಣಗಳಿವೆ ಈ ಎಲ್ಲಾ ಕಾರಣದಿಂದಾಗಿ ಬೆಲ್ಲಿ ಫ್ಯಾಟ್ ಹೆಚ್ಚಾಗುತ್ತದೆ.
ಸಾಮಾನ್ಯವಾದುವೆಂದರೆ ಚರ್ಮದ ಅಡಿಭಾಗದಲ್ಲಿ ಸಂಗ್ರಹಗೊಳ್ಳುವ ಕೊಬ್ಬು (subcutaneous fat)-ಇದು ಕೊಬ್ಬಿನ ಅಂಗಾಂಶದಿಂದ ನಿರ್ಮಿಸಲ್ಪಟ್ಟಿರುತ್ತದೆ. ಹೊಟ್ಟೆಯ ಭಾಗದಲ್ಲಿರುವ ಪ್ರಮುಖ ಅಂಗಗಳನ್ನು ಸುತ್ತುವರೆದಿರುವ ಕೊಬ್ಬು (visceral fat),ಇದು ಸಾಮಾನ್ಯವಾಗಿ ದೇಹ ಹೆಚ್ಚುವರಿ ಆಹಾರವನ್ನು ಕೊಬ್ಬಿನ ರೂಪದಲ್ಲಿ ಸಂಗ್ರಹಿಸಿಟ್ಟುಕೊಳ್ಳುವ ವ್ಯವಸ್ಥೆಯಾಗಿದೆ. ಇಸ್ಟೋಜನ್ ನಂತಹ ಹಾರ್ಮೋನ್ ಹೊಟ್ಟೆಯ ಕೊಬ್ಬಿಗೆ ಕಾರಣ. ಮುಟ್ಟು ನಿಂತ ಮಹಿಳೆಯರಲ್ಲಿ ಇದು ಸಾಮಾನ್ಯವಾಗಿದೆ.
ಸೊಂಟದ ಕೊಬ್ಬು ಹೆಚ್ಚಿದಷ್ಟೂ ಇದು ಹೃದಯ ಸಂಬಂಧಿ ಕಾಯಿಲೆ, ಟೈಪ್ 2 ಮಧುಮೇಹ ಸೇರಿ ಹಲವು ಸಮಸ್ಯೆಗಳು ಎದುರಾಗುತ್ತದೆ. ಆದ್ರೆ ಇತ್ತೀಚಿಗೆ ಈ ಫ್ಯಾಟ್ ಕರಗಿಸಲು ವ್ಯಾಯಾ ಮಾಡುವ ಅಗತ್ಯವೇ ಇಲ್ಲ ಎಂದು ಹಲವು ರೀತಿಯ ಔಷಧಿಗಳು ಮಾರುಕಟ್ಟೆಯಲ್ಲಿ ಸಿಗುತ್ತವೆ. ಕೆಲವರು ಈ ಔಷಧಿಗಳ ಸೇವಿಸಿ ಫಲಿತಾಂಶ ಪಡೆದಿದ್ದರೂ ಮತ್ತೆ ಕೆಲವರು ಇದರಿಂದ ಸಮಸ್ಯೆಗೂ ಒಳಗಾಗಿತ್ತಾರೆ.ಇನ್ನೊಂದು ಪ್ರಮುಖ ಕಾರಣವೆಂದರೆ ಅದು ವಯಸ್ಸು. ವಯಸ್ಸಾಗುತ್ತಿದ್ದಂತೆ ಕೆಲವರ ಹೊಟ್ಟೆಯಲ್ಲಿ ಕೊಬ್ಬು ಕಾಣಿಸಿಕೊಳ್ಳುವುದು.
ಆದರೆ ಸುಲಭವಾಗಿ ನಾವು ಈ ಸೈಟ್ ಫ್ಯಾಟ್ ಕರಗಿಸುವುದು ಹೇಗೆ ಎಂಬುದನ್ನು ತಿಳಿಸುತ್ತೇವೆ. ಇದೊಂದು ಬಹಳ ಸುಲಭವಾದ ವಿಧಾನವಾಗಿದ್ದು ಸುಲಭವಾಗಿ ಸೈಡ್ ಫ್ಯಾಟ್ ಕರಗಿಸಬಹುದು. ಹೌದು ಸರಳ ವ್ಯಾಯಾಮ ಮಾಡುವುದರಿಂದ ಸೈಡ್ ಫ್ಯಾಟ್ ಕರಗಿಸಬಹುದು.
ಮೊದಲು ಕೈಯಲ್ಲಿ ತಲೆಯ ಹಿಂದೆ ಕಟ್ಟಿಕೊಂಡು ಕಾಲನ್ನು ಮೊಣಕೈಗೆ ಮುಟ್ಟಿಸುವಂತೆ ಎತ್ತುವುದು ಎರಡೂ ಕಾಲುಗಳಿಗೂ ಒಂದಾದ ಬಳಿಕ ಒಂದರಂತೆ ಸುಮಾರು 20 ಬಾರಿ ಮಾಡಿದರೆ ದೇಹದಲ್ಲಿ ಅದರಲ್ಲೂ ಸೊಂಟದ ಸುತ್ತಲು ಶೇಖರಣೆಯಾಗಿರುವ ಫ್ಯಾಟ್ ಕರಗಿಸಲು ನೆರವಾಗುತ್ತದೆ.
ಈ ರೀತಿಯ ಹಲವು ವ್ಯಾಯಾಮಗಳು ನಿಮ್ಮ ಬೆಲ್ಲಿ ಫ್ಯಾಟ್ ಕರಗಿಸಲು ನೆರವಾಗುತ್ತವೆ. ಈ ಕುರಿತ ವಿಡಿಯೋವೊಂದು ಸಹ ವೈರಲ್ ಆಗುತ್ತಿದ್ದು, ಜನರ ಈ ವಿಡಿಯೋ ಮೂಲಕ ಫ್ಯಾಟ್ ಕರಗಿಸೋದು ಸುಲಭವಾಗಲಿದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications