Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಬೇಸಿಗೆಯಲ್ಲಿ ಕೂದಲು ಉದುರುವುದನ್ನು ತಡೆಯೋದು ಹೇಗೆ.? ಯಾವ ಎಣ್ಣೆ ಬಳಸಬೇಕು.?
ಬೇಸಿಗೆಯಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದು ಬಹಳ ದೊಡ್ಡ ಸವಾಲಾಗಿರುತ್ತದೆ. ಅದರಲ್ಲೂ ಕೂದಲಿನ ರಕ್ಷಣೆ ಬಹಳ ಕಷ್ಟ. ಏಕೆಂದರೆ ಬಿಸಿಲಿಗೆ ಬಂದರೆ ತಲೆ ಮೇಲೆ ಸುಡುವ ಸೂರ್ಯ ನೆತ್ತಿ ಸುಡುತ್ತಾನೆ. ಹೀಗಾದಾದ ಕೂದಲು ಬಹುಬೇಗ ಉದುರಲು ಆರಂಭಗಾಗುತ್ತದೆ.
ಇದರ ಜೊತೆ ತಲೆಯಲ್ಲಿ ಬೆವರು ಹೆಚ್ಚಾಗುವ ಕಾರಣದಿಂದಾಗಿ ತಲೆ ಹೊಟ್ಟು ಹೆಚ್ಚಾಗುತ್ತದೆ. ತಲೆ ಹೊಟ್ಟು ಹೆಚ್ಚಾಗುವುದು ತಲೆ ಕೂದಲು ಉದುರಲು ನೇರವಾಗಿ ಕಾರಣವಾಗಲಿದೆ. ಹೀಗಾಗಿ ಬೇಸಿಗೆಯಲ್ಲಿ ಕೂದಲು ಉದುರುವುದು ಹೆಚ್ಚಾಗುತ್ತದೆ.

ಹಾಗಾದರೆ ಬೇಸಿಗೆಯಲ್ಲಿ ಕೂದಲಿನ ರಕ್ಷಣೆ ಮಾಡುವುದು ಹೇಗೆ? ಯಾವ ಎಣ್ಣೆ ಬಳಸುವುದರಿಂದ ಕೂದಲು ಉದುರುವುದನ್ನು ಕಡಿಮೆ ಮಾಡಬಹುದು. ಈ ಎಲ್ಲಾ ನಿಮ್ಮ ಪ್ರಶ್ನೆಗೆ ಇಲ್ಲಿ ಉತ್ತರ ನೀಡುವ ಪ್ರಯತ್ನ ಮಾಡಲಾಗಿದೆ.
ಬಾದಾಮಿ ಎಣ್ಣೆ
ಬಾದಾಮಿ ಬೀಜದಲ್ಲಿ ಅತ್ಯುತ್ತಮ ಪೋಷಕಾಂಶಗಳು ಹಾಗೂ ವಿಟಮಿನ್‌ಗಳು ತುಂಬಿವೆ. ಇದು ಕೂದಲು ಆರೋಗ್ಯಕ್ಕೆ ಅತ್ಯುತ್ತಮ ಆರೈಕೆ ನೀಡಬಲ್ಲವು. ಬೇಸಿಗೆಯಲ್ಲಿ ಬಾದಾಮಿ ಎಣ್ಣೆಯನ್ನು ಕೂದಲಿಗೆ ಹಚ್ಚುವುದನ್ನು ಎಲ್ಲಾ ವೈದ್ಯರು ಸಲಹೆ ನೀಡುತ್ತಾರೆ. ಇದು ವಿಟಮಿನ್ ಇ ಅನ್ನು ಹೊಂದಿರುತ್ತದೆ. ಬಾದಾಮಿಯು ಧೂಳಿನ ಕಣಗಳು ಅಥವಾ ಮಾಲಿನ್ಯಕಾರಕಗಳನ್ನು ಒಂದೇ ತೊಳೆಯುವಲ್ಲಿ ತೊಡೆದುಹಾಕುವ ಮೂಲಕ ಕ್ಲೆನ್ಸಿಂಗ್ ಏಜೆಂಟ್ ಆಗಿ ಕಾರ್ಯನಿರ್ವಹಿಸುತ್ತದೆ!
ಜೊಜೊಬಾ ಎಣ್ಣೆ
ಜೊಜೊಬಾ ಎಂದರೆ ಅಮೆರಿಕಾದ ಪಶ್ಚಿಮ ಭಾಗಗಳಲ್ಲಿ ಬೆಳೆಯುವಂತಹ ಒಂದು ರೀತಿಯ ಸಸ್ಯವಾಗಿದೆ. ಇದರಿಂದ ತಯಾರಿಸಲ್ಪಟ್ಟ ಎಣ್ಣೆಯನ್ನು ಜೊಜೊಬಾ ಎಣ್ಣೆ ಎಂದು ಕರೆಯುವರು. ಇದನ್ನು ಸೌಂದರ್ಯವರ್ಧಕಗಳಲ್ಲಿ ಹೆಚ್ಚಾಗಿ ಬಳಸುವರು. ಇದನ್ನು ಚರ್ಮ ಹಾಗೂ ಕೂದಲಿನ ಆರೈಕೆಯಲ್ಲಿ ಪ್ರಮುಖವಾಗಿ ಬಳಸಲಾಗುತ್ತದೆ. ಕಾಸ್ಮೆಟಿಕ್ ಕಂಪೆನಿಗಳು ಈ ಎಣ್ಣೆಯನ್ನು ತಮ್ಮ ಹೆಚ್ಚಿನ ಉತ್ಪನ್ನಗಳಲ್ಲಿ ಬಳಸಿಕೊಂಡು ಅದರ ಲಾಭವನ್ನು ಪಡೆಯುತ್ತಲಿದೆ. ಇದರಲ್ಲಿ ಇರುವಂತಹ ಉರಿಯೂತ ಶಮನಕಾರಿ ಗುಣವು ತಲೆಬುರುಡೆಯ ಉರಿಯೂತ ನಿವಾರಣೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುವುದು. ಇದರಲ್ಲಿ ಇರುವಂತಹ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ತಲೆಬುರುಡೆಯ ಸೋಂಕನ್ನು ದೂರವಿಡುವುದು ಮತ್ತು ಆರೋಗ್ಯಕಾರಿ ತಲೆಬುರುಡೆಗೆ ನೆರವಾಗುತ್ತದೆ.
ತೆಂಗಿನ ಎಣ್ಣೆ
ತೆಂಗಿನ ಎಣ್ಣೆಯು ಬಹುಪಯೋಗಿ ಉತ್ಪನ್ನವಾಗಿದ್ದು, ಇದನ್ನು ಎಲ್ಲಾ ರೀತಿಯ ಜನರು ತಮ್ಮ ಕೂದಲಿನ ಸಮಸ್ಯೆಗಳನ್ನು ಬಗೆಹರಿಸಲು ಬಳಸುತ್ತಾರೆ. ಕೂದಲು ಬೆಳವಣಿಗೆಯನ್ನು ಹೆಚ್ಚಿಸುವುದು, ತಲೆಹೊಟ್ಟು ಮತ್ತು ಒಣ ನೆತ್ತಿಯನ್ನು ತಡೆಗಟ್ಟುವುದು. ಹೀಗಾಗಿ ಬೇಸಿಗೆಯಲ್ಲಿ ನಿಮಗೆ ತಂಪಿನ ಅನುಭವ ನೀಡಲು ಈ ತೆಂಗಿನ ಎಣ್ಣೆ ಸಹಕಾರಿಯಾಗಿದೆ.
ಆಲಿವ್ ಎಣ್ಣೆ
ಅತ್ಯಂತ ಸೂಕ್ಷ್ಮ ಕೂದಲು ಹೊಂದಿರುವವರು ಈ ಆಲಿವ್ ಎಣ್ಣೆ ಬಳಸುವುದು ಉತ್ತಮ. ನೆತ್ತಿಯ ಉರಿ ಇಲ್ಲವೆ ಹೀಟ್ ಆಗಿದ್ದರೆ ಈ ಎಣ್ಣೆ ಬಳಸುವುದು ಉತ್ತಮ. ಇದು ಕೂದಲನ್ನು ಮತ್ತಷ್ಟು ಗಟ್ಟಿಯಾಗಿಸಿ, ಹೊಳಪು ನೀಡುತ್ತದೆ.
ಆವಕಾಡೊ ಎಣ್ಣೆ
ಆವಕಾಡೊ ಎಣ್ಣೆಯು ನಿಮ್ಮ ಕೂದಲಿಗೆ ಬೇಸಿಗೆಯ ಅಂತಿಮ ಆಯ್ಕೆಯಾಗಿದೆ. ಇದು ವಿಟಮಿನ್ ಎ, ಬಿ, ಡಿ ಮತ್ತು ಇ ನಂತಹ ಅನೇಕ ಪೋಷಕಾಂಶಗಳನ್ನು ಹೊಂದಿದೆ. ಜೊತೆಗೆ ತಲೆ ಹೊಟ್ಟು, ಕೂದಲಿನ ಬುಡವನ್ನು ಮತ್ತಷ್ಟು ಬಲಪಡಿಸುತ್ತದೆ.
ಕೂದಲಿಗೆ ಎಣ್ಣೆ ಹಚ್ಚುವುದರಿಂದ ಆಗುವ ಪ್ರಯೋಜನಗಳೇನು
- ಕೂದಲಿನ ಬೇರುಗಳು ಗಟ್ಟಿಯಾಗುತ್ತವೆ. ಇದರಿಂದ ಕೂದಲು ಉದುರುವುದು ಕಡಿಮೆಯಾಗುತ್ತದೆ.
- ಒಣ ನೆತ್ತಿ ಸಮಸ್ಯೆ ಅಂದರೆ ತಲೆ ಒಣಗಿ ಹೊಟ್ಟು ನಿರ್ಮಾಣವಾಗುವುದು ಕಡಿಮೆಯಾಗುತ್ತದೆ.
- ತಲೆ ಯಾವಾಗಲೂ ತಂಪಾಗಿರಲು ಎಣ್ಣೆಯು ಸಹಾಯ ಮಾಡಲಿದೆ.
- ದೃಷ್ಟಿ, ಕಣ್ಣು ಉರಿ, ತಲೆನೋವು ಇದ್ದರೆ ನೆತ್ತಿಗೆ ಎಣ್ಣೆ ಹಾಕಲು ಸಲಹೆ ನೀಡಲಾಗುತ್ತದೆ.
- ಹೇರ್ ಆಯಿಲಿಂಗ್ ನೆತ್ತಿಯ ರಕ್ತ ಪರಿಚಲನೆಯನ್ನು ಉತ್ತೇಜಿಸುತ್ತದೆ ಎಂದು ತಿಳಿದಿದೆ, ಇದು ನೆತ್ತಿಗೆ ಪೋಷಕಾಂಶಗಳನ್ನು ನೀಡಲು ಸಹಾಯ ಮಾಡುತ್ತದೆ. ಇದರ ಪರಿಣಾಮವಾಗಿ, ನಿಮ್ಮ ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸಬಹುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
