Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಸ್ತನ ಕ್ಯಾನ್ಸರ್ ತಡೆಗಟ್ಟಲು 8 ಟಿಪ್ಸ್
ವಿಜ್ಞಾನ ಎಷ್ಟೇ ಮುಂದುವರೆದಿದ್ದರೂ ಆರೋಗ್ಯ ಸೇವೆಗಳಲ್ಲಿ ಎಷ್ಟೇ ಪ್ರಗತಿ ಕಂಡಿದ್ದರು ಇಂದಿಗೂ ಹಲವಾರು ರೋಗಗಳು ಭಯವನ್ನು ಹುಟ್ಟಿಸುತ್ತವೆ. ಅಂತಹ ಒಂದು ರೋಗದ ಹೆಸರು ಕ್ಯಾನ್ಸರ್. ಹಲವಾರು ಮಂದಿ ಕ್ಯಾನ್ಸರ್ ಬಂದು ಕೂಡ ಗುಣಮುಖರಾಗಿ ಸಾಮಾನ್ಯ ಜೀವನ ಸಾಗಿಸುತ್ತಿದ್ದರೂ ಕ್ಯಾನ್ಸರ್ ಎಂದಾಕ್ಷಣ ಒಂದು ಬಾರಿ ಎಲ್ಲರಲ್ಲೂ ಭಯ ಮೂಡುವುದು ಸಾಮಾನ್ಯ.

ಚರ್ಮದ ಕ್ಯಾನ್ಸರ್ ನಂತರ ಸಾಮಾನ್ಯವಾಗಿ ಕಂಡುಬರುವ ಇನ್ನೊಂದು ಕ್ಯಾನ್ಸರ್ ಎಂದರೆ ಸ್ತನ ಕ್ಯಾನ್ಸರ್. ಸ್ತನ ಕ್ಯಾನ್ಸರ್ ಎಂದ ಕೂಡಲೇ ಇದು ಮಹಿಳೆಯರಲ್ಲೇ ಬರಬೇಕು ಅಥವಾ ವಯಸ್ಸಾದ ಮಹಿಳೆಯರಲ್ಲೇ ಇದು ಕಂಡು ಬರಬೇಕು ಎಂಬುದೇನು ಇಲ್ಲ. ಯುವತಿಯರಲ್ಲಿ ಮತ್ತು ಪುರುಷರಲ್ಲೂ ಸ್ತನ ಕ್ಯಾನ್ಸರ್ ಬಂದಿರುವ ಸಾಕಷ್ಟು ಉದಾಹರಣೆಗಳಿವೆ.
ಸ್ತನ ಎನ್ನುವುದು ಮೂರು ಅಂಗಗಳು. ಇದರಲ್ಲಿ ಲೊಬ್ಯೂಲ್ಸ್, ಡಕ್ಟ್ಸ್ ಮತ್ತು ಕನೆಕ್ಟಿವ್ ಟಿಶ್ಯೂಸ್ ಇರುತ್ತವೆ. ಲೊಬ್ಯೂಲ್ಸ್, ಹಾಲಿನ ಉತ್ಪಾದನೆಗೆ ಕಾರಣವಾದರೆ ಡಕ್ಟ್ಸ್ ಅದನ್ನು ಮೊಲೆತೊಟ್ಟುಗಳಿಗೆ ಸಾಗಿಸುತ್ತದೆ. ಕನೆಕ್ಟಿವ್ ಟಿಶ್ಯೂಸ್ ಈ ಎರಡು ಅಂಗಗಳನ್ನು ಒಟ್ಟಿಗೆ ಇಟ್ಟಿರುತ್ತದೆ. ಈ ಮೂರು ಅಂಗಗಳಲ್ಲಿ ಯಾವುದೇ ಒಂದು ಅಂಗದಲ್ಲಿ ಆಗುವ ಹೆಚ್ಚಿನ ಜೀವಕೋಶಗಳ ಉತ್ಪಾದನೆಯನ್ನು ಸ್ತನ ಕ್ಯಾನ್ಸರ್ ಎಂದು ಕರೆಯುತ್ತಾರೆ. ಈ ಮೂರು ಅಂಗಗಳಲ್ಲಿ ಯಾವ ಅಂಗದಲ್ಲಿ ಹೆಚ್ಚಿನ ಜೀವಕೋಶಗಳ ವೃದ್ಧಿಯಾಗಿದೆ ಎನ್ನುವುದರ ಮೇಲೆ ಇದು ಯಾವ ಬಗೆಯ ಕ್ಯಾನ್ಸರ್ ಎಂದು ಗುರುತಿಸಲಾಗುತ್ತದೆ.
ಹಿಂದಿನ ಕಾಲಕ್ಕೆ ಹೋಲಿಕೆ ಮಾಡಿದರೆ ಇಂದು ಕ್ಯಾನ್ಸರ್ ಗೂ ಕೂಡ ಹಲವಾರು ಬಗೆಯ ಚಿಕಿತ್ಸೆಗಳು ಲಭ್ಯ ಇವೆ. ಕ್ಯಾನ್ಸರ್ ಬಂದ ಕೂಡಲೇ ಎಲ್ಲವೂ ಮುಗಿಯಿತು ಎನ್ನುವ ಹೆದರಿಕೆ ಇವತ್ತು ಬೇಡ. ಹಾಗೆಂದ ಮಾತ್ರಕ್ಕೆ ಕ್ಯಾನ್ಸರ್ ಬಂದರೂ ನಿರ್ಲಕ್ಷ ಮಾಡಿ ಇರಬಾರದು.
ಚಿಕಿತ್ಸೆಗಿಂತ ಮುನ್ನೆಚ್ಚರಿಕೆ ಉತ್ತಮ ಕ್ರಮ ಎನ್ನುವುದು ಎಲ್ಲಾ ಸನ್ನಿವೇಶಗಳನ್ನು ನಿಜ. ಇದು ಕ್ಯಾನ್ಸರ್ ಗೂ ಅನ್ವಯಿಸುತ್ತದೆ. ನಮ್ಮ ದೈನಂದಿನ ಜೀವನ ಕ್ರಮದಲ್ಲಿ ಮತ್ತು ನಮ್ಮ ಅಭ್ಯಾಸಗಳಲ್ಲಿ ಮಾಡಿಕೊಳ್ಳುವ ಕೆಲವು ಬದಲಾವಣೆಗಳು ನಮ್ಮ ಆರೋಗ್ಯವನ್ನು ಚೆನ್ನಾಗಿ ಇಡುತ್ತದೆ ಎಂದಾದರೆ ಯಾಕೆ ನಾವು ಮುನ್ನೆಚ್ಚರಿಕೆಯನ್ನು ತೆಗೆದುಕೊಳ್ಳಬಾರದು? ಕ್ಯಾನ್ಸರ್ ಅದರಲ್ಲೂ ಮುಖ್ಯವಾಗಿ ಸ್ತನ ಕ್ಯಾನ್ಸರ್ ಬಾರದಂತೆ ಈ ಕೆಳಗಿನ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬಹುದು.
ದೇಹದ ತೂಕ ನಿಯಂತ್ರಣ: ಹೆಚ್ಚಿನ ದೇಹದ ತೂಕ ನಮ್ಮ ದೇಹದ ಹಲವು ಕಾಯಿಲೆಗಳಿಗೆ ಕಾರಣವಾಗಿದೆ. ಇದು ಸ್ತನ ಕ್ಯಾನ್ಸರ್ ಗೆ ಕೂಡ ಕಾರಣವಾಗಿದೆ. ಋತುಚಕ್ರ ನಿಂತ ಮೇಲೆ ದೇಹದ ತೂಕ ಹೆಚ್ಚಾಗಿದ್ದರೆ ಸ್ತನ ಕ್ಯಾನ್ಸರ್ ನ ಸಾಧ್ಯತೆಗಳು ಹೆಚ್ಚಾಗಿರುತ್ತದೆ. ಹೀಗಾಗಿ ನಮ್ಮ ದೇಹದ ತೂಕವನ್ನು ಸಾಧ್ಯವಾದಷ್ಟು ನಿಯಂತ್ರಣದಲ್ಲಿ ಇಡುವುದು ಬಹಳ ಅಗತ್ಯ.
ದೈಹಿಕವಾಗಿ ಆಕ್ಟಿವ್ ಆಗಿರಬೇಕು: ಸ್ತನ ಕ್ಯಾನ್ಸರ್ ನ ಬಗ್ಗೆ ಮಾಡಲಾದ ಹಲವು ರಿಸರ್ಚ್ ಗಳ ಪ್ರಕಾರ ದೈಹಿಕವಾಗಿ ಆಕ್ಟಿವ್ ಆಗಿರುವ ಜನರಲ್ಲಿ ಸ್ತನ ಕ್ಯಾನ್ಸರ್ ನ ಸಾಧ್ಯತೆಗಳು ಕಡಿಮೆ ಇರುತ್ತವೆ. ಪ್ರತಿನಿತ್ಯ ಕನಿಷ್ಠ 30 ನಿಮಿಷಗಳ ಕಾಲ ಯಾವುದಾದರೂ ಒಂದು ವ್ಯಾಯಾಮದಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳುವುದು ಸ್ತನ ಕ್ಯಾನ್ಸರ್ ನ ಭಯವನ್ನು ಕಡಿಮೆ ಮಾಡುತ್ತದೆ.
ಹಣ್ಣುಗಳು ಮತ್ತು ತರಕಾರಿಗಳ ಸೇವನೆ ಜೊತೆಗೆ ಮದ್ಯಪಾನ ನಿಯಂತ್ರಣ: ನಮ್ಮ ಆಹಾರದಲ್ಲಿ ಹೆಚ್ಚಿನ ಪ್ರಮಾಣದ ತರಕಾರಿಗಳನ್ನು ಸೇವಿಸುವುದು, ಜೊತೆಗೆ ಹಣ್ಣುಗಳನ್ನು ಹೆಚ್ಚಾಗಿ ಸೇವಿಸುವುದು ನಮ್ಮ ಒಟ್ಟಾರೆ ಆರೋಗ್ಯದ ಜೊತೆಗೆ ಸ್ತನ ಕ್ಯಾನ್ಸರ್ ನಿಯಂತ್ರಣ ಮಾಡುವುದರಲ್ಲೂ ಸಹಾಯ ಮಾಡುತ್ತದೆ. ಅದೇ ರೀತಿ ಮದ್ಯಪಾನವನ್ನು ಕಡಿಮೆ ಮಾಡುವುದು ಅಥವಾ ಸಾಧ್ಯವಾದರೆ ಸಂಪೂರ್ಣವಾಗಿ ಬಿಟ್ಟುಬಿಡುವುದು ಕೂಡ ಸ್ತನ ಕ್ಯಾನ್ಸರ್ ನ ಅಪಾಯವನ್ನು ಕಡಿಮೆ ಮಾಡುತ್ತದೆ.
ಧೂಮಪಾನ ನಿಲ್ಲಿಸಿ: ಕೇವಲ ಸ್ತನ ಕ್ಯಾನ್ಸರ್ ಅಲ್ಲದೆ 15 ತರಹದ ಕ್ಯಾನ್ಸರ್ ಗಳಿಗೆ ಧೂಮಪಾನ ಕಾರಣವಾಗಬಹುದು ಎಂದು ವರದಿಗಳು ಹೇಳುತ್ತವೆ. ನೀವು ಧೂಮಪಾನ ಮಾಡದೇ ಇದ್ದರೆ ಅದನ್ನು ಖಂಡಿತವಾಗಿ ಆರಂಭಿಸಬೇಡಿ. ಈಗಾಗಲೇ ಧೂಮಪಾನಿಗಳಾಗಿದ್ದರೆ ಕೂಡಲೇ ನಿಲ್ಲಿಸಿ ಬಿಡುವುದು ಒಟ್ಟಾರೆ ಆರೋಗ್ಯ ಮತ್ತು ಸ್ತನ ಕ್ಯಾನ್ಸರ್ ನ ಭಯವನ್ನು ಕಡಿಮೆ ಮಾಡಲು ಬಹಳ ಅಗತ್ಯ ಕ್ರಮವಾಗಿದೆ.
ಸಾಧ್ಯವಾದಷ್ಟು ಹೆಚ್ಚು ಸ್ತನಪಾನ ಮಾಡಿಸಿ: ಮಗು ಹುಟ್ಟಿದ ಕೂಡಲೇ ಆರಂಭಿಸಿದ ಸ್ತನಪಾನವನ್ನು ಸಾಧ್ಯವಾದಷ್ಟು ಹೆಚ್ಚಿನ ದಿನಗಳ ಕಾಲ ಮುಂದುವರಿಸಿವುದು ಸ್ತನ ಕ್ಯಾನ್ಸರ್ ನ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ. ಒಂದು ವರ್ಷಕ್ಕಿಂತಲೂ ಹೆಚ್ಚು ಅವಧಿಯವರೆಗೆ ಸ್ತನಪಾನ ಮಾಡಿದ ತಾಯಂದಿರಲ್ಲಿ ಸ್ತನ ಕ್ಯಾನ್ಸರ್ ನ ಸಾಧ್ಯತೆಗಳು ಬಹಳ ಕಡಿಮೆ ಎಂದು ವರದಿಗಳು ಹೇಳುತ್ತವೆ.
ಗರ್ಭ ನಿಯಂತ್ರಣ ಮಾತ್ರೆಗಳನ್ನು ಕಡಿಮೆ ಸೇವಿಸಿ: ನೀವು 35 ವರ್ಷ ಮೇಲ್ಪಟ್ಟ ಮಹಿಳೆಯರಾಗಿದ್ದು ಗರ್ಭ ನಿಯಂತ್ರಣಕ್ಕೆ ಮಾತ್ರೆಯನ್ನು ಸೇವಿಸುತ್ತಿದ್ದರೆ ಕೂಡಲೇ ಅದನ್ನು ನಿಲ್ಲಿಸಿ. ಅದೇ ರೀತಿ 35 ವರ್ಷದ ಒಳಗಿನ ಮಹಿಳೆಯರು ಧೂಮಪಾನ ಮಾಡುತ್ತಿದ್ದರೆ ಗರ್ಭ ನಿಯಂತ್ರಣಕ್ಕಾಗಿ ಮಾತ್ರೆಗಳನ್ನು ತೆಗೆದುಕೊಳ್ಳುವುದು ಸ್ತನ ಕ್ಯಾನ್ಸರ್ ನ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಹೀಗಾಗಿ ಜನನ ನಿಯಂತ್ರಣಕ್ಕೆ ಮಾತ್ರೆಗಳನ್ನು ಸೇವಿಸದೆ ಬೇರೆ ಮಾರ್ಗಗಳನ್ನು ಅನುಸರಿಸುವುದರ ಮೂಲಕ ಸ್ಥಾನ ಕ್ಯಾನ್ಸರ್ ನ ಸಾಧ್ಯತೆಯನ್ನು ತಪ್ಪಿಸಬಹುದು.
ಇದರ ಜೊತೆಗೆ ನಿಮ್ಮ ವಂಶಾವಳಿಯಲ್ಲಿ ಈಗಾಗಲೇ ಸ್ತನ ಕ್ಯಾನ್ಸರ್ ನ ಉದಾಹರಣೆಗಳು ಇದ್ದಲ್ಲಿ ನೀವು ಇನ್ನೂ ಹೆಚ್ಚಿನ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ. ಈ ತರಹ ವಂಶಾವಳಿಯಲ್ಲಿ ಸ್ತನ ಕ್ಯಾನ್ಸರ್ ನ ಉದಾಹರಣೆಗಳು ಇದ್ದ ಮಹಿಳೆಯರು ಕ್ಯಾನ್ಸರ್ ಸ್ಪೆಶಲಿಸ್ಟ್ ಗಳನ್ನು ಭೇಟಿ ಮಾಡಿ ಇನ್ನೂ ಹೆಚ್ಚಿನ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬಹುದು.
ಸ್ತನ ಕ್ಯಾನ್ಸರ್ ನ ಗುರುತಿಸುವಿಕೆಯಲ್ಲಿ ಮೆಮೊಗ್ರ್ಯಾಮ್ ಗಳು ಬಹಳ ಮುಖ್ಯ ಪಾತ್ರ ವಹಿಸುತ್ತದೆ. 35 ಅಥವಾ 40 ವರ್ಷದ ನಂತರ ವರ್ಷಕ್ಕೆ ಒಮ್ಮೆ ಮೆಮೋ ಗ್ರಾಂಗಳನ್ನು ಮಾಡಿಸುವುದು ಸ್ತನ ಕ್ಯಾನ್ಸರ್ ನ ಗುರುತಿಸುವಿಕೆಗೆ ಸಹಕಾರಿ. ಇದರಿಂದಾಗಿ ಸ್ತನ ಕ್ಯಾನ್ಸರ್ ನ ಚಿಕಿತ್ಸೆ ಕೂಡ ಬಹಳ ಬೇಗನೆ ಆರಂಭವಾಗಿ ಬಹಳ ಪರಿಣಾಮಕಾರಿಯಾಗಿ ಇದನ್ನು ಗುಣ ಮಾಡಬಹುದಾಗಿದೆ.
ನಿಯಮಿತವಾಗಿ ಸ್ತನಗಳ ಸ್ವಯಂ ಅಧ್ಯಯನವನ್ನು ಮಾಡುವುದು ಕೂಡ ಸ್ತನ ಕ್ಯಾನ್ಸರ್ ನ ಗುರುತಿಸುವಿಕೆಯನ್ನು ಸುಲಭ ಮಾಡುತ್ತದೆ. ಹೀಗೆ ನಿಯಮಿತವಾಗಿ ಸ್ತನಗಳ ಸ್ವಯಂ ಅಧ್ಯಯನ ಮಾಡುತ್ತಿರುವವರು ಯಾವುದೇ ಚಿಕ್ಕ ಬದಲಾವಣೆ ಕಂಡರು ವೈದ್ಯರ ಬಳಿ ತೆರಳಿ ಹೆಚ್ಚಿನ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications









