Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಬ್ಲ್ಯಾಕ್ ಸಾಲ್ಟ್ ಹೇಗೆ ತಯಾರಿಸುತ್ತಾರೆ ಗೊತ್ತಾ?: ಆಕರ್ಷಕ ವೈರಲ್ ವೀಡಿಯೋ
ಬ್ಲ್ಯಾಕ್ ಸಾಲ್ಟ್ (ಕರಿ ಉಪ್ಪು) ಅನ್ನು ಹೆಚ್ಚಿನವರು ಅಡುಗೆಯಲ್ಲಿ ಬಳಸುತ್ತಾರೆ, ಅಡುಗೆಗೆ ರುಚಿ ನೀಡುವುದು ಮಾತ್ರವಲ್ಲ, ಸುವಾಸನೆಯನ್ನೂ ನೀಡುತ್ತದೆ, ಅಲ್ಲದೆ ಅನೇಕ ಔಷಧಗಳಲ್ಲಿ ಕೂಡ ಇದನ್ನು ಬಳಸಲಾಗುವುದು. ಬೀದಿ ಬದಿಯ ಆಹಾರಗಳು ತಿನ್ನಲು ತುಂಬಾನೇ ರುಚಿಯಾಗಿರುತ್ತದೆ, ಆ ರುಚಿಯ ಹಿಂದಿನ ಸೀಕ್ರೆಟ್ ಈ ಬ್ಯಾಕ್ಟ್ ಸಾಲ್ಟ್ ಕೂಡ ಆಗಿದೆ.
ಈ ಬ್ಲ್ಯಾಕ್‌ಸಾಲ್ಟ್ ಹಿಮಾಲಯ ಭಾಗದಿಂದ ದೊರೆಯುವುದು. ಈ ಬ್ಲ್ಯಾಕ್ ಸಾಲ್ಟ್ ತಯಾರಿಸುವ ವಿಧಾನದ ಬಗ್ಗೆ ಫುಡ್ ಬ್ಲಾಗರ್ ಹಂಚಿಕೊಂಡ ವೀಡಿಯೋ ವೈರಲ್ ಆಗಿದೆ.

ಉತ್ತರ ಪ್ರದೇಶದಲ್ಲಿ ತೆಗೆದ ವೀಡಿಯೋ ಅದಾಗಿದೆ, ಬ್ಲ್ಯಾಕ್ ಸಾಲ್ಟ್ ತಯಾರಿಸುವುದು ಅಷ್ಟು ಸುಲಭ, ಅದರ ಹಿಂದೆ ಅಷ್ಟೊಂದು ಶ್ರಮವಿದೆ. ಬ್ಲ್ಯಾಕ್ ಸಾಲ್ಟ್ ಅನ್ನು ಒಣಗಿಸುವ ವಿಧಾನದ ವೀಡಿಯೋ ತುಂಬಾನೇ ಆಕರ್ಷಕವಾಗಿದೆ. ಬಿಸಿಲಿನಲ್ಲಿ ಒಣಗಿಸಿದ ಉಪ್ಪನ್ನು ಮಡಿಕೆಯಲ್ಲಿ ಹಾಕಿ ಮುಚ್ಚಿ ದೊಡ್ಡ ಕುಂಡದಲ್ಲಿ ಕೆಂಡವನ್ನು ಹಾಕಿ ಬೇಯಿಸಿ, ನಂತರ ಆ ಮಣ್ಣಿನ ಮಡಿಕೆ ಒಡೆದು ಬ್ಲ್ಯಾಕ್‌ಸಾಲ್ಟ್ ತೆಗೆಯುವ ವೀಡಿಯೋ ಇದೀಗ ವೈರಲ್ ಆಗಿದೆ.
ಈ ಬ್ಲ್ಯಾಕ್ ಸಾಲ್ಟ್‌ನ ಪ್ರಯೋಜನಗಳೇನು, ಅಡ್ಡಪರಿಣಾಮಗಳೇನು ಎಂದು ನೋಡುವುದಾದರೆ:
* ಕೊಬ್ಬು ಕರಗಿಸಲು ಸಹಕಾರಿ
* ಮಧುಮೇಹ ನಿಯಂತ್ರಣದಲ್ಲಿಡುತ್ತೆ
ಕೂದಲು ಉದುರುವುದನ್ನು ತಡೆಗಟ್ಟಲು ಸಹಕಾರಿ
* ರಕ್ತ ನಾಳಗಳಿಗೆ ಒಳ್ಳೆಯದು
* ಜೀರ್ಣಕ್ರಿಯೆಗೆ ಒಳ್ಳೆಯದು
ಬ್ಲ್ಯಾಕ್ ಸಾಲ್ಟ್ ಅನ್ನು ಮಕ್ಕಳಿಗೂ ನೀಡಲಾಗುವುದು
* ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ ಎಂದು ಹೇಳಲಾಗುವುದು
* ಗ್ಯಾಸ್ ಸಮಸ್ಯೆ, ಅಜೀರ್ಣ ಸಮಸ್ಯೆ ತಡೆಗಟ್ಟಲು ಸಹಕಾರಿಯಾಗಿದೆ. ಒಂದು ವರ್ಷಕ್ಕಿಂತ ದೊಡ್ಡ ಮಕ್ಕಳಿಗೆ ನೀಡಲಾಗುವುದು, ಇದನ್ನು ನಿಮ್ಮ ಮಕ್ಕಳ ಆಹಾರದಲ್ಲಿ ಬಳಸುವ ಮುನ್ನ ಮಕ್ಕಳ ತಜ್ಞರ ಸಲಹೆ ಪಡೆಯಿರಿ.
ಮಲಬದ್ಧತೆ ಸಮಸ್ಯೆ ತಡೆಗಟ್ಟುತ್ತದೆ
ಈ ಬ್ಲ್ಯಾಕ್ ಸಾಲ್ಟ್ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ ಅಲ್ಲದೆ ಮಲ ಬದ್ಧತೆ ಸಮಸ್ಯೆ ತಡೆಗಟ್ಟಲು ಕೂಡ ಸಹಕಾರಿ. ಇದರ ಕುರಿತು ಇನ್ನಷ್ಟು ಅಧ್ಯಯನಗಳು ನಡೆಯಬೇಕಾಗಿದೆ.
ಮಧುಮೇಹಿಗಳಿಗೂ ಒಳ್ಳೆಯದು
ಬ್ಲ್ಯಾಕ್ ಸಾಲ್ಟ್ ಬಳಸುವುದು ಮಧುಮೇಹಿಗಳಿಗೂ ಒಳ್ಳೆಯದು, ಇದು ದೇಹಕ್ಕೆ ಅಗ್ಯತವಿರುವ ಇನ್ಸುಲಿನ್ ಉತ್ಪತ್ತಿ ಮಾಡುತ್ತದೆ, ಇದರಲ್ಲಿ ಸೋಡಿಯಂ ಅಧಿಕವಿರುವುದರಿಂದ ಇನ್ಸುಲಿನ್ ಉತ್ಪತ್ತಿ ಮಾಡಿ ರಕ್ತದಲ್ಲಿ ಸಕ್ಕರೆಯಂಶ ನಿಯಂತ್ರಣದಲ್ಲಿಡುತ್ತದೆ.
ಸ್ನಾಯ ಸೆಳೆತ ಸಮಸ್ಯೆ ತಡೆಗಟ್ಟುತ್ತದೆ
ಇದರಲ್ಲಿ ಅತ್ಯಧಿಕ ಪೊಟಾಷ್ಯಿಯಂ ಇರುವುದರಿಂದ ಸ್ನಾಯುಗಳನ್ನು ಬಲಗೊಳಿಸುತ್ತದೆ, ಇದರಿಂದ ಸ್ನಾಯು ಸೆಳೆತ ಸಮಸ್ಯೆ ತಡೆಗಟ್ಟಬಹುದು.
ಬ್ಲ್ಯಾಕ್ ಸಾಲ್ಟ್ ಹೇಗೆ ಬಳಸಲಾಗುವುದು?
* ಅಡುಗೆಯಲ್ಲಿ ಬಳಸಲಾಗುವುದು
* ಚೂರ್ಣದಲ್ಲಿ ಬಳಸಲಾಗುವುದು
ಮಜ್ಜಿಗೆಯಲ್ಲಿ ಬಳಸಲಾಗುವುದು
ಅಡ್ಡಪರಿಣಾಮಗಳೇನು?
* ಇದರಲ್ಲಿ ಸೋಡಿಯಂ ಅಧಿಕವಿರುವುದರಿಂದ ಅತಿಯಾಗಿ ಸೇವಿಸುವುದು ಒಳ್ಳೆಯದಲ್ಲ.
* ಅಧಿಕ ರಕ್ತದೊತ್ತಡ ಇರುವವರಿಗೆ ಇದು ಒಳ್ಳೆಯದಲ್ಲ
* ಸ್ನಾನ ಮಾಡುವ ನೀರಿಗೆ ಇದನ್ನು ತುಂಬಾ ಹೊತ್ತು ಹಾಕಿಟ್ಟು ಬಳಸಬೇಡಿ, ಇಲ್ಲದಿದ್ದರೆ ತ್ವಚೆ ಡ್ರೈಯಾಗುವುದು.
* ಕಿಡ್ನಿ ಸ್ಟೋನ್ ಆಗುವುದು.
ಆದ್ದರಿಂದ ಬ್ಲ್ಯಾಕ್ ಸಾಲ್ಟ್ ಮಿತಿಯಲ್ಲಿ ಬಳಸಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
