Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮಕ್ಕಳ ಬುದ್ಧಿಶಕ್ತಿ ಅಳೆಯುವುದು ಹೇಗೆ? ಈ ಮಾಪನ ಏಕೆ ಮುಖ್ಯ? ತಜ್ಞರು ಹೇಳೋದೇನು?
ಮಗುವಿನ ದೈಹಿಕ ಬೆಳವಣಿಗೆಯ ಜೊತೆಗೆ ಮಾನಸಿಕ ಹಾಗೂ ಬುದ್ಧಿಶಕ್ತಿಯ ಅಭಿವೃದ್ಧಿಯೂ ಕೂಡ ಸಮಾನ ಪಾತ್ರ ಹೊಂದಿದೆ. ಮಗುವಿನ ಸ್ಮರಣ ಶಕ್ತಿ, ಏಕಾಗ್ರತೆ ಮತ್ತು ಮೆದುಳಿನ ಕಾರ್ಯವನ್ನು ಸುಧಾರಿಸಲು ಪೋಷಕಾಂಶಯುಕ್ತ ಆಹಾರವು ನಿಮಗೆ ಸಹಾಯ ಮಾಡುತ್ತದೆ. ಆದ್ರೆ ಈಗಂತು ಮಕ್ಕಳಿಗೆ ಯಾವ ರೀತಿಯ ಆಹಾರ ನೀಡಬೇಕು. ಯಾವ ಆಹಾರ ನೀಡಿದರೆ ಅವರ ಬುದ್ಧಶಕ್ತಿಯನ್ನ ನಾವು ಹೆಚ್ಚು ಮಾಡಬಹುದು ಎಂಬುದು ಹಲವು ಗೊಂದಲಕ್ಕೆ ಕಾರಣವಾಗಿತ್ತೆ.
ಆದ್ರೆ ಮಕ್ಕಳ ಬುದ್ದಿಶಕ್ತಿಯನ್ನ ಪರೀಕ್ಷಿಸೋದು ಹೇಗೆ? ನಿಮ್ಮ ಮಗು ಸರಿಯಾದ ವಯಸ್ಸಿನಲ್ಲಿ ಸರಿಯಾದ ಮಟ್ಟದ ಬುದ್ಧಿ ಶಕ್ತಿ ಹೊಂದಿದೆಯೇ? ಅಥವಾ ಏನಾದರು ನ್ಯೂನತೆ ಇದೆಯೇ ಎಂದು ಕಂಡುಕೊಳ್ಳುವುದಾದರು ಹೇಗೆ? ಈ ರೀತಿಯ ಪ್ರಶ್ನೆಗಳು ನಿಮ್ಮಲ್ಲೂ ಸಹ ಕಾಡಿರಬಹುದು. ಆದ್ರೆ ಮಕ್ಕಳ ಬುದ್ದಿಶಕ್ತಿಯನ್ನ ಮಾಪನ ಮಾಡಲು ಅದರದ್ದೆ ಆದ ಕೆಲವು ನಿಯಮವಿದೆ.

ಮಕ್ಕಳ ಬುದ್ದಿಶಕ್ತಿ ಹೇಗೆ ಪರೀಕ್ಷಿಸಬೇಕು ಎಂಬುದನ್ನು ಕ್ಲೀನಿಕಲ್ ಸೈಕಾಲಜಿಸ್ಟ್ ಆಗಿರುವ ಅರುಣ್ ಎನ್.ಆರ್ ತಿಳಿಸಿದ್ದಾರೆ. ಅವರ ಪ್ರಕಾರ ಮಕ್ಕಳ ಬುದ್ದಿಶಕ್ತಿಯನ್ನ ನಿಖರವಾಗಿ ಮಾಪನ ಮಾಡಬಹುದಂತೆ. ಹಾಗಾದ್ರೆ ಮಕ್ಕಳ ಬುದ್ದಿ ಶಕ್ತಿಯನ್ನ ಅಳೆಯುವುದು ಹೇಗೆ ಎಂಬುದನ್ನು ಅವರು ವಿವರಿಸಿದ್ದು ಹೇಗೆ ನೋಡಿ.
ಬುದ್ದಿ ಶಕ್ತಿ ಎಂದರೇನು?
ಮಕ್ಕಳ ಬೆಳವಣಿಗೆಯ ನಡುವೆಯೇ ಬುದ್ದಿಶಕ್ತಿಯೂ ಬೆಳವಣಿಗೆಯಾಗುತ್ತೆ. ಬುದ್ದಿ ಬೆಳವಣಿಗೆ ಆಗದಿದ್ದರೆ ಅವರ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಸಾಮಾನ್ಯವಾಗಿ ಬುದ್ಧಿ ಶಕ್ತಿ ಎಂದರೆ ತಮ್ಮ ಸಮಸ್ಯೆಯನ್ನು ತಾವೇ ಬಗೆಹರಿಸಿಕೊಳ್ಳಲು ಇರುವ ಸಾಮರ್ಥ್ಯವಾಗಿರುತ್ತೆ. ಈಗ ತಾನೆ ಹುಟ್ಟಿದ ಮಗು ಸಹ ತಾಯಿಯ ಮಡಿಲು ಸೇರಿದಾಗ ಅದಕ್ಕೆ ನೆಮ್ಮದಿ ಎನಿಸುವುದು ಬುದ್ಧಿಶಕ್ತಿ ಆಗುವುದಿಲ್ಲ ಆದರೆ ಅದೊಂದು ಕ್ರಿಯಾತ್ಮಕ ಬೆಳವಣಿಗೆ. ಮುಂದೆ ಐದಾರು ತಿಂಗಳಿನಲ್ಲಿ ಮಗು ತನ್ನ ತಾಯಿ ಅಪ್ಪುಗೆ ಗುರುತಿಸುವಷ್ಟು ಬುದ್ಧಿಮಟ್ಟ ಬೆಳೆಸಿಕೊಳ್ಳುತ್ತದೆ. ಇದು ತನ್ನ ಸಮಸ್ಯೆಯನ್ನ ತಾನೇ ಬಗೆ ಹರಿಸಿಕೊಳ್ಳುವ ಸಾಮರ್ಥ್ಯವಾಗಿ ಬದಲಾಗುತ್ತದೆ ಎನ್ನುತ್ತಾರೆ ಅರುಣ್ ಎನ್.ಆರ್
ಇತರರೊಂದಿಗೆ ಅಥವಾ ಹೊಸ ವಾತಾವರಣದೊಂದಿಗೆ ಹೊಂದಿಕೊಳ್ಳುವುದು ಮತ್ತು ಅನುಭವಗಳಿಂದ ತಿಳಿದುಕೊಳ್ಳುವುದು. ಗ್ರಹಿಸುವ, ತೀರ್ಮಾನಿಸುವ ಮತ್ತು ಯೋಚನಾ ಸಾಮರ್ಥ್ಯ, ವ್ಯಕ್ತಿಗಳನ್ನು ಅರ್ಥೈಸಿಕೊಳ್ಳುವುದು, ವ್ಯವಹರಿಸುವುದು, ವಸ್ತುಗಳ ನೋಡುವ ಹಾಗೂ ಬಳಸಿಕೊಳ್ಳುವ ಸಾಮರ್ಥ್ಯ, ಯೋಚನಾ ಸಾಮರ್ಥ್ಯ ಇದೆಲ್ಲಾ ಬುದ್ಧಿಶಕ್ತಿಯ ರೂಪಕವಾಗಿದೆ.
ಬುದ್ಧಿ ಶಕ್ತಿ ಮಾಪನ ಎಂದರೇನು?
ಬುದ್ಧಿ ಸಾಮರ್ಥ್ಯ ಮಾಪನ ಎಂದರೆ ವ್ಯಕ್ತಿಯ ಬುದ್ದಿಶಕ್ತಿಯನ್ನು ಅಳೆಯಲು ಅಥವಾ ತಿಳಿಯಲು ಉಪಯೋಗಿಸುವ ಒಂದು ಮೌಲ್ಯಮಾಪನ ವಿಧಾನ. ಇದು ಮನಃಶಾಸ್ತ್ರದ ಒಂದು ಉಪವಿಭಾಗವಾಗಿದ್ದು, ಮನಃಶಾಸ್ತ್ರಜ್ಞರು ಸೂಕ್ತ ಮೌಲ್ಯಮಾಪನ ಪರೀಕ್ಷೆಗಳ ಮೂಲಕ ಬುದ್ದಿ ಸಾಮರ್ಥ್ಯವನ್ನು ನಿರ್ಧರಿಸುತ್ತಾರೆ.
ಬುದ್ಧಿ ಶಕ್ತಿ ಅಳೆಯುವುದರಿಂದ ಲಾಭವೇನು?
ಈ ಮಾಪನದ ಮೂಲಕ ಮಕ್ಕಳ ಬುದ್ಧಿ ಶಕ್ತಿಯ ಮಟ್ಟ ತಿಳಿಯುವುದರ ಜೊತೆಗೆ ಶಾಲಾ ಕಲಿಕೆಯಲ್ಲಿ ಹಿಂದುಳಿದಿರುವಿಕೆಗೆ ಕಾರಣ ಮತ್ತು ಪರಿಹಾರ ಕಂಡು ಹಿಡಿಯಲು ಸಹಾಯಕವಾಗಲಿದೆ ಮತ್ತು ವ್ಯಕ್ತಿಯ ಮಾನಸಿಕ ಸಾಮರ್ಥ್ಯ ಮತ್ತು ದೌರ್ಬಲ್ಯತೆಯನ್ನು ತಿಳಿಯಲು ಸಹಾಯಕವಾಗಿದೆ. ಮಾಪನದ ಮೂಲಕ ಬುದ್ದಿ ಮಾಂದ್ಯತೆ ಮತ್ತು ಇತರೆ ಬೆಳವಣಿಗೆಯ ದೋಷವನ್ನು ತಿಳಿಯಲು ಸಹಕಾರಿ. ಮುಂದಿನ ದಿನಗಳಲ್ಲಿ ಮಗುವಿಗೆ ವಿಶೇಷ ಶಿಕ್ಷಣದ ಅವಶ್ಯವಿದ್ದಲ್ಲಿ ಗುರುತಿಸಲು ಇಂತಹ ಮಾಪನಗಳು ಸಹಕಾರಿಯಾಗಿವೆ. ಪೋಷಕರು ತಮ್ಮ ಮಗುವಿನ ಬುದ್ಧಿಯ ಮಟ್ಟವನ್ನು ತಿಳಿಯುವುದರಿಂದ ಮಗುವಿನ ಮೇಲೆ ವೃಥಾ ಒತ್ತಡ ಹೇರುವುದನ್ನು ತಡೆಯಬಹುದು. ಔದ್ಯೋಗಿಕ ಸಮಾಲೋಚನೆಗೆ ಸಹಕಾರಿಯಾಗಿರುತ್ತದೆ ಎಂದು ಅವರು ಹೇಳುತ್ತಾರೆ.
ಯಾವ ಮಕ್ಕಳಿಗೆ ಬುದ್ಧಿ ಶಕ್ತಿ ಮಾಪನದ ಅವಶ್ಯಕತೆ ಇರುತ್ತದೆ ?
ಬುದ್ಧಿ ಸಾಮರ್ಥ್ಯ ಮೌಲ್ಯಮಾಪನವು ಎಲ್ಲಾ ಮಕ್ಕಳಿಗೆ ಮತ್ತು ವಿದ್ಯಾರ್ಥಿಗಳಿಗೆ ಅತ್ಯಂತ ಅವಶ್ಯವಾಗಿರುತ್ತದೆ. ಅದರಲ್ಲೂ ಶಾಲಾ ಕಲಿಕೆಯಲ್ಲಿ ಹಿಂದುಳಿದಿರುವ ಮಗುವಿಗೆ, ಕಲಿಕಾ ದೋಷವಿರುವ ಮಗುವಿಗೆ, ಬುದ್ಧಿಮಾಂದ್ಯ, ಇತರೆ ಬೆಳವಣಿಗೆ ಹಾಗೂ ನಡವಳಿಕಾ ದೋಷವಿರುವ ಮಗುವಿಗೆ ಈ ರೀತಿಯ ಮೌಲ್ಯಮಾಪನದ ಅವಶ್ಯಕವಾಗಿರುತ್ತದೆ.
ಬುದ್ಧಿಶಕ್ತಿ ಅಳೆಯುವುದು ಹೇಗೆ?
ಈಗಲೂ ಸಹ ಐಕ್ಯೂ ಕಂಡು ಹಿಡಿಯಲು ಆಲ್ಫ್ರೆಡ್ ಬಿನೆಟ್ ಅವರ ಸೂತ್ರವನ್ನೇ ಬಳಸುತ್ತೇವೆ. ವ್ಯಕ್ತಿಯ ಐಕ್ಯೂ ಸ್ಕೋರ್ ಅನ್ನು ಲೆಕ್ಕಾಚಾರ ಮಾಡಲು ಅವರ ಮಾನಸಿಕ ವಯಸ್ಸು / ಕಾಲಾನುಕ್ರಮದ ವಯಸ್ಸು x 100 ಅನ್ನು ಹಾಕಿ ಲೆಕ್ಕಚಾರ ಮಾಡಲಾಗುತ್ತದೆ. ಮಾನಸಿಕ ವಯಸ್ಸು ಎಷ್ಟು ಎಂದು ಕಂಡುಹಿಡಿಯಲು ಸಹ ಮಾಪನವಿದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
