ವೇಗವಾಗಿ ತೂಕ ಇಳಿಸೋದು ಹೇಗೆ ಗೊತ್ತಾ..? ಮನೆಯಲ್ಲೇ ಇದೆ ಮದ್ದು..!

ಇತ್ತೀಚಿನ ದಿನಗಲ್ಲಿ ತೂಕ ಹೆಚ್ಚಾಗುವುದು ಕೂಡ ಒಂದು ಸಮಸ್ಯೆಯಾಗಿದೆ. ಆಧುನಿಕ ಜೀವನಶೈಲಿ, ಊಟದಿಂದಾಗಿ ವಯಸ್ಸಿನ ಮಿತಿಯೂ ಮೀರಿ ತೂಕ ಹೆಚ್ಚಾಗಿರುತ್ತದೆ. ಹಲವರು ತೂಕ ಹೆಚ್ಚಳವಾಗಿರುವುದನ್ನು ತುಂಬಾನೆ ಸೀರಿಯಸ್ ಆಗಿ ತೆಗೆದುಕೊಂಡಿರುತ್ತಾರೆ. ಮತ್ತೆ ಕೆಲವರು ಆಸ್ಪತ್ರೆ, ವೈದ್ಯರು ಎಂದು ತೂಕ ಇಳಿಸಲು ಹಲವಾರು ಮಾರ್ಗಗಳ ಮೊರೆ ಹೋಗುತ್ತಾರೆ.

ಆದರೆ ತೂಕ ಹೆಚ್ಚಳವಾಗುವುದರಿಂದ ಹತ್ತಾರು ಆರೋಗ್ಯ ಸಮಸ್ಯೆ ಎದುರಾಗುತ್ತದೆ. ಭವಿಷ್ಯದಲ್ಲಿ ಒಂದಲ್ಲಾ ಒಂದು ಸಮಸ್ಯೆ ಕಟ್ಟಿಟ್ಟಬುತ್ತಿ. ಆದರೆ ತೂಕ ಇಳಿಸಲೆಂದು ಹಲವರು ಸಾವಿರಾರು ರೂಪಾಯಿ ಖರ್ಚು ಮಾಡುತ್ತಾರೆ. ಮಾರುಕಟ್ಟೆಯಲ್ಲಿ ಸಿಗುವ ಹಲವು ಔಷಧಿ ಸೇವಿಸುತ್ತಾರೆ. ಅಲ್ಲದೆ ಜಿಮ್, ವರ್ಕ್‌ಔಟ್ ಎಂಬೆಲ್ಲಾ ಸಾಹಸ ಮಾಡಿದರು ಪ್ರಯೋಜನವಾಗುವುದಿಲ್ಲ.

How To Lose Weight Fast At Home In Kannada

ಹಾಗಾದರೆ ಮನೆಯಲ್ಲಿ ಸುರಕ್ಷಿತ ರೀತಿಯಲ್ಲಿ ಸುಲಭವಾಗಿ ತೂಕ ಇಳಿಸುವುದು ಹೇಗೆ? ಆರೋಗ್ಯಕರ ಆಹಾರ ಸೇವಿಸಿ ತೂಕವನ್ನು ವೇಗವಾಗಿ ಇಳಿಸುವುದು ಹೇಗೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.


ಫೈಬರ್ ಯುಕ್ತ ಆಹಾರ ಸೇವನೆ ಹೆಚ್ಚಿಸಿ

ನಮ್ಮಲ್ಲಿ ಸುಮಾರು ಶೇ.95ರಷ್ಟು ಮಂದಿ ಸರಿಯಾದ ಪ್ರಮಾಣದ ಫೈಬರ್ ಅನ್ನು ಸೇವಿಸುತ್ತಿಲ್ಲ ಎಂದು ವರದಿಯೊಂದು ಬಹಿರಂಗಪಡಿಸಿದೆ. ಫೈಬರ್‌ಯುಕ್ತ ಆಹಾರ ಸೇವನೆ ನಮ್ಮ ದೇಹಕ್ಕೆ ಅತ್ಯಗತ್ಯವಾಗಿದೆ. ಏಕೆಂದರೆ ಫೈಬರ್ ನಿಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಸುಲಭವಾಗಿಸುತ್ತದೆ. ನಿಮಗೆ ಕಡಿಮೆ ಹಸಿವಿನ ಭಾವನೆಯನ್ನು ನೀಡುತ್ತದೆ. "ಹೈ-ಫೈಬರ್ ಆಹಾರಗಳು ಜೀರ್ಣಿಸಿಕೊಳ್ಳಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಹೀಗಾಗಿ ಬೇಯಿಸಿದ ತರಕಾರಿಗಳು, ಹಣ್ಣುಗಳ ಸೇವನೆ ಮಾಡಬೇಕು. ಅಲ್ಲದೆ ಫೈಬರ್ ಅಂಶವು ನಮ್ಮ ರಕ್ತದಲ್ಲಿರುವ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ.

ಓಟ್ ಮೀಲ್, ಬೀನ್ಸ್ ಮತ್ತು ಇತರ ಕಾಳುಗಳು ಮತ್ತು ಬೀಜಗಳು ಮತ್ತು ಹಣ್ಣುಗಳಂತಹ ಹೆಚ್ಚಿನ ಫೈಬರ್ ಆಹಾರಗಳು ಸೇವಿಸಿದರೆ ಉತ್ತಮ ದಿನವೊಂದಕ್ಕೆ 25 ಗ್ರಾಂ ಫೈಬರ್ ಸೇವಿಸುವುದು ಉತ್ತಮ. ಪುರುಷರಾದರೆ 38 ಗ್ರಾಂನಷ್ಟು ಫೈಬರ್‌ ದೇಹಕ್ಕೆ ಅಗತ್ಯವಾಗಿರುತ್ತದೆ.


ತೂಕ ಇಳಿಸುವ ತರಬೇತಿ ಆರಂಭಿಸಿ

ನಿತ್ಯವು ಸಾಮಾನ್ಯ ಹಂತದ ವ್ಯಾಯಾಮ ಮಾಡುವುದು ದೀರ್ಘಕಾಲದ ಫಲಿತಾಂಶ ನೀಡಲಿದೆ. ಅಂದರೆ ನೀವು ನಿತ್ಯವೂ ವ್ಯಾಯಾಮ ಮಾಡುತ್ತಿದ್ದರೆ ನಿಮ್ಮ ದೇಹದ ತೂಕ ಇಳಿಸುವುದು ಸುಲಭವಾಗಲಿದೆ. ನಿಮ್ಮ ಹೊಟ್ಟೆ ಹಾಗೂ ತೊಡೆಯ ಭಾಗದಲ್ಲಿರುವ ಕೊಬ್ಬು ಕರಗಿಸಲು ವ್ಯಾಯಾಮದ ಅಗತ್ಯ ಹೆಚ್ಚಾಗಿರುತ್ತದೆ. ಇದರಿಂದ ತೂಕ ಇಳಿಸುವುದು ಸುಲಭವಾಗುತ್ತದೆ. ನಿತ್ಯ ಈ ವ್ಯಾಯಾಮದ ಸಮಯವನ್ನು ಹೆಚ್ಚಿಸುತ್ತಾ ಹೋದಂತೆ ನೀವಾಗಿಯೆ ಅದರ ಫಲಿತಾಂಶ ನೋಡಬಹುದಾಗಿದೆ.


ಹೆಚ್ಚು ತರಕಾರಿಗಳನ್ನು ಸೇವಿಸಿ

ವಿಭಿನ್ನ ಆಹಾರಗಳು ಒಟ್ಟಾರೆ ಆರೋಗ್ಯ ಮತ್ತು ತೂಕ ನಿರ್ವಹಣೆಯನ್ನು ಉತ್ತೇಜಿಸುತ್ತದೆ. ನಿಮ್ಮ ಆಹಾರದಲ್ಲಿ ಹಸಿತರಕಾರಿ ಇಲ್ಲವೆ ಬೇಯಿಸಿದ ತರಕಾರಿಗಳನ್ನು ಬಳಸುವುದನ್ನು ಅಭ್ಯಾಸ ಮಾಡಿಕೊಳ್ಳಿ. ಅದರಲ್ಲೂ ಹೆಚ್ಚು ಫೈಬರ್ ಇರುವಂತಹ ತರಕಾರಿಗಳ ಆಯ್ಕೆ ಮಾಡಿಕೊಳ್ಳಿ. ಜೊತೆಗ ಕಡಿಮೆ ಕ್ಯಾಲೋರಿ ಹೊಂದಿರುವ ಆಹಾರ ಯಾವುದು ಎಂಬುದನ್ನು ತಿಳಿದುಕೊಳ್ಳಿ.


ಸಕ್ಕರೆಯುಕ್ತ ಪದಾರ್ಥ ಇಲ್ಲವೆ ಪಾನೀಯ ಬಿಟ್ಟುಬಿಡಿ

ಸಕ್ಕರೆ ನಿಜವಾದ ಶ್ರತ್ರುವಾಗಿದೆ. ತೂಕ ಹೆಚ್ಚಾಗಲು ಸಕ್ಕರೆ ಪ್ರಮಾಣ ಹೆಚ್ಚಳವಾಗುವುದು ಪ್ರಮುಖ ಕಾರಣವಾಗಿದೆ. ಅದರಲ್ಲೂ ಹಲವು ರೀತಿಯ ತಂಪು ಪಾನೀಯ ಕುಡಿಯುವ ಅಭ್ಯಾಸ ಇಟ್ಟುಕೊಂಡಿರುವವರ ತೂಕ ಹೆಚ್ಚಳವಾಗುವುದನ್ನು ನಾವು ಗಮನಿಸಬಹುದು. ಏಕೆಂದರೆ ಸಕ್ಕರೆಯಲ್ಲಿ ಅತ್ಯಧಿಕ ಕ್ಯಾಲೋರಿ ಕಂಡುಬರುತ್ತದೆ. ಇದು ದೇಹದಲ್ಲಿ ಕೊಬ್ಬಿನ ರಚನೆಗೆ ಹಾಗೂ ತೂಕ ಹೆಚ್ಚಳಕ್ಕೆ ಕಾರಣವಾಗುತ್ತದೆ. ಹೀಗಾಗಿ ನೀವು ಕಾಫಿ, ಟೀ ಬದಲು ಗ್ರೀನ್ ಟೀ ಅಭ್ಯಾಸ ಮಾಡಿ. ಸಕ್ಕರೆ ಹಾಕಿದ ಜ್ಯೂಸ್, ಪಾನೀಯ ಬಿಡುವುದರಿಂದ ಸುಲಭವಾಗಿ ತೂಕ ಇಳಿಸಬಹುದು.


ನಿತ್ಯ ವಾಕಿಂಗ್ ಮಾಡಿ

ಕೆಲವರು ತೂಕ ಇಳಿಸಲು ಹತ್ತು ಹಲವು ರೀತಿಯ ಸಾಹಸ ಮಾಡುತ್ತಾರೆ. ಆದರೆ ನಡೆದಾಡುವುದನ್ನೇ ಬಟ್ಟಿರುತ್ತಾರೆ. ನಡೆದಾಡುವುದರಿಂದ ನಿಮ್ಮ ದೇಹದ ಪ್ರತಿ ಭಾಗಕ್ಕೂ ವ್ಯಾಯಾಮವಾದಂತೆ ಆಗುತ್ತದೆ. ಹೀಗಾಗಿ ನಿತ್ಯವೂ ವಾಕಿಂಗ್ ಮಾಡುವುದರಿಂದ ಅತ್ಯಂತ ವೇಗವಾಗಿ ನೀವು ತೂಕ ಇಳಿಸಬಹುದು. ದಿನಕ್ಕೊಬ್ಬ ಸರಾಸರಿ 8,200 ಹೆಜ್ಜೆ ನಡೆದರೆ ಸಾಕು ಆತ ಹೆಚ್ಚುವರಿ ಕೊಬ್ಬನ್ನು ಕೆಲವೇ ದಿನದಲ್ಲಿ ಕರಗಿಸಬಹುದು.


ಬೇಗ ಮಲಗುವುದು

ಕಡಿಮೆ ನಿದ್ದೆ ಮಾಡುವ ಜನರಲ್ಲಿ ತೂಕ ಹೆಚ್ಚಾಗುವ ಸಂಭವಿದೆ. ಹೀಗಾಗಿ ಹಲವು ಸಂಶೋಧನೆಯಲ್ಲಿ ಬೇಗ ಮಲಗುವುದರಿಂದ ತೂಕ ಇಳಿಸಬಹುದು ಎಂಬುದು ಸಾಬೀತಾಗಿದೆ. ಏಕೆಂದರೆ ತಡವಾಗಿ ಮಲಗುವುದರಿಂದ ಚಯಾಪಚಯ ಕ್ರಿಯೆ ನಿಧಾನವಾಗುತ್ತದೆ. ಇದು ತೂಕ ಹಚ್ಚಳಕ್ಕೆ ಕಾರಣವಾಗುತ್ತದೆ. ಬೇಗ ಮಲಗಿ ಬೇಗ ಏಳುವುದು ಉತ್ತಮ ಆರೋಗ್ಯದ ಮಾರ್ಗವಾಗಿದೆ.

ವಾರಕ್ಕೊಮ್ಮೆ ಉಪವಾಸ ಮಾಡಿದರೆ ಒಳ್ಳೆಯದು

ಇನ್ನು ತೂಕ ಇಳಿಸುವು ಎಂದರೆ ಊಟ ಬಿಡುವುದು ಎಂದು ತಪ್ಪಾಗ ಅರ್ಥೈಸಿರುತ್ತಾರೆ. ಊಟ ಬಿಡುವುದರಿಂದ ತೂಕ ಇಳಿಕೆಯಾಗುವುದಿಲ್ಲ. ಬದಲಿಗೆ ಮತ್ತಷ್ಟು ಅನಾರೋಗ್ಯ ಸಮಸ್ಯೆಗಳು ಎದುರಾಗುತ್ತವೆ. ಆದರೆ ವಾರಕ್ಕೆ ಒಮ್ಮೆ ಒಂದು ಹೊತ್ತಿನ ಊಟ ಬಿಡುವುದರಿಂದ ನಿಮ್ಮ ಆರೋಗ್ಯಕ್ಕೆ ತುಂಬಾನೆ ಸಹಕಾರಿಯಾಗಲಿದೆ. ಕರುಳಿನ ಆರೋಗ್ಯದ ಜೊತೆ ಹೆಚ್ಚುವರಿಯಾಗಿ ಸಂಗ್ರಹವಾಗಿರುವ ಕೊಬ್ಬನ್ನು ದೇಹ ಎನರ್ಜಿಗಾಗಿ ಬಳಸಿಕೊಳ್ಳುತ್ತದೆ. ಇದರಿಂದ ತೂಕ ಇಳಿಸುವುದು ಸುಲಭವಾಗಲಿದೆ.

Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.

English summary

How To Lose Weight Fast At Home In Kannada

How to lose weight easily and safely at home? Let us know how to lose weight fast by eating healthy food.
Story first published: Wednesday, March 6, 2024, 16:40 [IST]
X
Desktop Bottom Promotion