Latest Updates
-
ಸೋಶಿಯಲ್ ಮೀಡಿಯಾದಲ್ಲಿ ನಿಮ್ಮ ಸಂಬಂಧವನ್ನು ರಹಸ್ಯವಾಗಿಡಬೇಕಾ? ನೆಮ್ಮದಿಯ ಬದುಕಿಗೆ ಈ ಡಿಜಿಟಲ್ ಬೌಂಡರಿಗಳು ಮಸ್ಟ್! -
ದೆಹಲಿ-ಎನ್ಸಿಆರ್ನಲ್ಲಿ ಬಿರುಗಾಳಿ ಅಬ್ಬರ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಮುನ್ನೆಚ್ಚರಿಕೆ ಮರೆಯದಿರಿ! -
ಅಡುಗೆಮನೆಯಲ್ಲಿ ಕಡಲೆ ಹಿಟ್ಟು ಬಳಸುವ ಮುನ್ನ ಎಚ್ಚರ: FSSAI ಜಾರಿಗೆ ತಂದಿದೆ ಹೊಸ ಕಠಿಣ ನಿಯಮಗಳು! -
ಫ್ಲಿಪ್ಕಾರ್ಟ್ GRWM ಸೇಲ್: ಟ್ರೆಂಡಿ ಲುಕ್ ಪಡೆಯಲು ಇನ್ಫ್ಲುಯೆನ್ಸರ್ ಸಜೆಸ್ಟ್ ಮಾಡಿದ ಬೆಸ್ಟ್ ಡೀಲ್ಗಳು ಇಲ್ಲಿವೆ! -
ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಹೀಟ್ಸ್ಟ್ರೋಕ್ ಕಟ್ಟಿಟ್ಟ ಬುತ್ತಿ, ಎಚ್ಚರವಿರಲಿ! -
ಅಸ್ಸಾಂನಲ್ಲಿ ಲಿವ್-ಇನ್ ಸಂಬಂಧದಲ್ಲಿದ್ದೀರಾ? ಹೊಸ ಕಾನೂನಿನ ಪ್ರಕಾರ ನೋಂದಣಿ ಮಾಡದಿದ್ದರೆ ಜೈಲು ಶಿಕ್ಷೆ ಕಟ್ಟಿಟ್ಟ ಬುತ್ತಿ! -
ಬಿಸಿಲಿಗೆ ಗಿಡಗಳು ಬಾಡುತ್ತಿವೆಯೇ? ಈ ಮ್ಯಾಜಿಕ್ ಟಿಪ್ಸ್ ಬಳಸಿ ನಿಮ್ಮ ಬಾಲ್ಕನಿ ಗಾರ್ಡನ್ ಅನ್ನು ಹಸಿರಾಗಿಡಿ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಹೀಟ್ಸ್ಟ್ರೋಕ್ನಿಂದ ಪಾರಾಗಲು ಈ ತಂಪು ಪದಾರ್ಥಗಳು ನಿಮ್ಮ ಆಹಾರದಲ್ಲಿರಲಿ, ಇಂದೇ ಟ್ರೈ ಮಾಡಿ! -
ಬಕ್ರೀದ್ 2026: ಈ ಬಾರಿಯ ಹಬ್ಬದ ಸಂಭ್ರಮದಲ್ಲಿ ಮಿಂಚಲು ನೀವು ಮಿಸ್ ಮಾಡಲೇಬಾರದ ಫ್ಯಾಷನ್ ಟ್ರೆಂಡ್ಸ್ ಮತ್ತು ಸ್ಟೈಲಿಂಗ್ ಟಿಪ್ಸ್! -
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ!
ಮಾವಿನ ಹಣ್ಣಿನ ಬಣ್ಣ ನೋಡಿ ಖರೀದಿಸಬೇಡಿ, ಕೆಮಿಕಲ್ ಹಾಕಿದ್ದಾರಾ ಅಂತ ತಿಳಿಯುವುದು ಹೇಗೆ?
ಹಣ್ಣುಗಳ ರಾಜ ಮಾವಿನಹಣ್ಣು ಮಾರುಕಟ್ಟೆಯಲ್ಲಿ ಸಿಗಲಾರಂಭಿಸಿದೆ, ಆದರೆ ಮಾವಿನಹಣ್ಣು ಖರೀದಿ ಮಾಡುವಾಗ ತುಂಬಾನೇ ಜಾಗ್ರತೆ ಮಾಡಬೇಕು, ಏಕೆಂದರೆ ಎಲ್ಲಾ ಹಣ್ಣುಗಳು ನೈಸರ್ಗಿಕವಾಗಿ ಹಣ್ಣಾದ ಮಾವಿನ ಹಣ್ಣುಗಳಲ್ಲ, ಕಾರ್ಬೈಡ್ ಹಾಕಿ ಹಣ್ಣು ಮಾಡಿ ತರಲಾಗುತ್ತಿದೆ. ನೋಡಿದರೆ ಹಣ್ಣು ಹಣ್ಣಾಗಿರುತ್ತದೆ, ಆದರೆ ಕತ್ತರಿಸಿದರೆ ಸಿಹಿ ಬದಲಿಗೆ ಹುಳಿ, ಮಾವಿನಕಾಯಿ ತಂದು ಅದಕ್ಕೆ ಕೆಮಿಕಲ್ ಹಾಕಿ ಹಣ್ಣು ಮಾಡಿ ಮಾರುಕಟ್ಟೆಗೆ ಬಿಡಲಾಗುತ್ತಿದೆ, ಇಂಥ ಮಾವಿನ ಹಣ್ಣು ಸೇವಿಸಿದರೆ ವಾಂತಿ-ಬೇಧಿ ಸಮಸ್ಯೆ ಉಂಟಾಗುವುದು, ಕ್ಯಾನ್ಸರ್‌ನಂಥ ಮಾರಕ ರೋಗಕ್ಕೆ ಆಹ್ವಾನ ನೀಡಿದಂತಾಗುವುದು.

ಸೀಸನ್ ಅಲ್ಲದ ಸಮಯದಲ್ಲಿ ಮಾವಿನಹಣ್ಣು ಹೇಗೆ ಹಣ್ಣು ಮಾಡಲಾಗುವುದು
ಕರ್ನಾಟಕದಲ್ಲಿ ಮಾವಿನಹಣ್ಣು ಆಗುವ ಸಮಯವಾಗಿಲ್ಲ, ಕೆಲವು ಕಡೆ ಮಿಡಿ ಬಿಟ್ಟಿದೆ, ಇನ್ನು ಕೆಲವು ಕಡೆ ಕಾಯಿಗಳಾಗಿವೆ. ಮಾವಿನ ಹಣ್ಣು ನೈಸರ್ಗಿಕವಾಗಿ ಹಣ್ಣಾಗಲು ಏಪ್ರಿಲ್ ತಿಂಗಳು ಕಳೆಯಬೇಕು. ಹೊರ ರಾಜ್ಯದ ಮಾವಿನಹಣ್ಣುಗಳು ಕೂಡ ಮಾರುಕಟ್ಟೆಗೆ ಬರಲಾರಂಭಿಸಿದೆ. ನೀವು ಮಾವಿನಹಣ್ಣು ತಿನ್ನುವ ಮೊದಲಿಗೆ ಅದು ನೈಸರ್ಗಿಕವಾಗಿ ಹಣ್ಣಾಗಿದೆ ಎಂದು ಖಾತರಿಪಡಿಸಿದ ಬಳಿಕವಷ್ಟೇ ತಿಂದರೆ ನಿಮ್ಮ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು.
ಕ್ಯಾಲ್ಸಿಯಂ, ಕಾರ್ಬೈಡ್ ರಾಸಾಯನಿಕ ಬಳಸಿ ಮಾವಿನಕಾಯಿ ಹಣ್ಣು ಮಾಡಲಾಗುವುದು ಎಂದು FSSAI ಹೇಳಿದೆ. ಇಂಥ ಮಾವಿನಹಣ್ಣು ತಿನ್ನುವುದರಿಂದ ವಾಂತಿ, ಬೇಧಿ, ಸುಸ್ತು, ಹೊಟ್ಟೆ ನೋವು, ಕಣ್ಣುಗಳಿಗೆ ಹಾನಿ, ಉಸಿರಾಟದಲ್ಲಿ ತೊಂದರೆ ಹೀಗೆ ಅನೇಕ ಬಗೆಯ ಸಮಸ್ಯೆ ಉಂಟಾಗುವುದು.
ಮಾವಿನಕಾಯಿ ಕೆಮಿಕಲ್ ಹಾಕಿ ಹಣ್ಣು ಮಾಡಲಾಗಿದೆ ಎಂದು ತಿಳಿಯುವುದು ಹೇಗೆ?
ಅದರ ಸಿಪ್ಪೆ ಗಮನಿಸಿ: ನೈಸರ್ಗಿಕವಾಗಿ ಹಣ್ಣಾಗುವ ಮಾವಿನಹಣ್ಣಿನ ಬಣ್ಣದ ಒಂದೇ ರೀತಿ ಇರಲ್ಲ, ಆದರೆ ರಾಸಾಯನಿಕ ಬಳಸಿ ಹಣ್ಣು ಮಾಡಲಾಗಿದ್ದರೆ ಮಾವಿನ ಸಿಪ್ಪೆ ಎಲ್ಲಾ ಕಡೆ ಒಂದೇ ಬಣ್ಣದಲ್ಲಿರುತ್ತದೆ, ಅಲ್ಲದೆ ಈ ರೀತಿ ಹಣ್ಣು ಮಾಡಿದ ಮಾವಿನಹಣ್ಣುಗಳ ಬಣ್ಣ ಕೂಡ ಹೆಚ್ಚು ಆಕರ್ಷಕವಾಗಿರುತ್ತದೆ.
ತೊಟ್ಟು ಗಮನಿಸಿ
ತೊಟ್ಟು ಭಾಗ ಹಸಿಯಾಗಿರುತ್ತದೆ, ತೊಟ್ಟು ಭಾಗದಲ್ಲಿ ಹಸಿರು ಬಣ್ಣ ಕಾಣುವುದು, ಇದನ್ನು ನೋಡಿ ಕೂಡ ನೀವು ಇದು ರಾಸಾಯನಿಕ ಹಾಕಿದ ಮಾವಿನಹಣ್ಣೇ, ಅಲ್ವೇ ಎಂದು ತಿಳಿಯಬಹುದು.
ಮಾವಿನಹಣ್ಣು ಮೂಸಿ ನೋಡಿ
ನೀವು ಮಾವಿನಹಣ್ಣನ್ನು ಮೂಗಿನ ಬಳಿ ಹಿಡಿದಾಗ ನೈಸರ್ಗಿಕವಾಗಿ ಹಣ್ಣಾಗಿದ್ದರೆ ಅದರ ಸುವಾಸನೆ ತುಂಬಾನೇ ಚೆನ್ನಾಗಿರುತ್ತದೆ. ಅದೇ ಕೃತಕವಾಗಿ ಹಣ್ಣಾಗಿದ್ದರೆ ಕೆಮಿಕಲ್ ವಾಸನೆ ಇರುತ್ತದೆ.
ಮಾವಿನಹಣ್ಣು ಮುಟ್ಟಿ ನೋಡಿ
ರಾಸಾಯನಿಕ ಹಾಕಿ ಹಣ್ಣು ಮಾಡಿದ ಮಾವಿನಹಣ್ಣು ತುಂಬಾನೇ ಮೃದುವಾಗಿರುತ್ತದೆ, ಅದೇ ನೈಸರ್ಗಿಕವಾಗಿ ಹಣ್ಣಾದ ಮಾವಿನಹಣ್ಣು ಆ ರೀತಿ ಇರಲ್ಲ, ರಾಸಾಯನಿಕ ಹಾಕಿದಾಗ ಮಾವಿನಹಣ್ಣಿನ ತಿರುಳು ತುಂಬಾನೇ ಮೃದುವಾಗುವುದು.
ಬಕೆಟ್ ನೀರಿನಲ್ಲಿ ಹಾಕಿ ಪರಿಶೀಲಿಸಿ
ನೀವು ಮಾವಿನಹಣ್ಣನ್ನು ಬಕೆಟ್ ನೀರಿನಲ್ಲಿ ಹಾಕಿದಾಗ ಮಾವಿನಹಣ್ಣು ಮುಳುಗಿದರೆ ನೈಸರ್ಗಿಕವಾಗಿ ಹಣ್ಣಾಗಿದೆ ಎಂದರ್ಥ, ಅದೇ ತೇಲಿದರೆ ಅದನ್ನು ಕೆಮಿಕಲ್ ಹಾಕಿ ಮಾಡಿದ ಮಾವಿನಹಣ್ಣು ಎಂದು ಹೇಳಬಹುದು.
ಬೇಕಿಂಗ್ ಸೋಡಾ ಪರೀಕ್ಷೆ
ನೀವು ಸ್ವಲ್ಪ ನೀರಿಗೆ ಅಡುಗೆ ಸೋಡಾ ಹಾಕಿ ನೆನೆ ಹಾಕಿ, ನಂತರ ಅದರಲ್ಲಿ ಮಾವಿನಹಣ್ಣನ್ನು 20 ನಿಮಿಷ ಹಾಕಿಡಿ, ನಂತರ ಮಾವಿನಹಣ್ಣು ತೆಗೆದು ತೊಳೆಯಿರಿ, ಮಾವಿನಹಣ್ಣಿನ ಬಣ್ಣದಲ್ಲಿ ವ್ಯತ್ಯಾಸ ಬಂದರೆ ಅಂಥ ಮಾವಿನಹಣ್ಣು ನೈಸರ್ಗಿಕವಾಗಿ ಹಣ್ಣಾದ ಮಾವಿನ ಹಣ್ಣಲ್ಲ, ನೀವು ಮಕ್ಕಳಿಗೆ, ಗರ್ಭಿಣಿಯರಿಗೆ ಮಾವಿನಹಣ್ಣು ಕೊಡುವಾಗ ಈ ಪರೀಕ್ಷೆ ಮಾಡಿಸಿಕೊಡುವುದು ಒಳ್ಳೆಯದು.
ಮಾವಿನಹಣ್ಣು ಖರೀದಿಗೆ ಮುನ್ನ ಈ ರೀತಿ ಪರೀಕ್ಷೆ ಮಾಡಿಕೊಂಡು ನಿಂತರ ಅಂಗಡಿಯವ ನಿಮಗೆ ಬೇಕಿದ್ದರೆ ತಗೋಳಿ ಅಂತ ಹೇಳಬಹುದು, ಹಾಗಾಗಿ ನೀವು ಮಾವಿನ ಹಣ್ಣು ಖರೀದಿಸುವಾಗ ಈ ಅಂಶಗಳ ಬಗ್ಗೆ ಮೊದಲು ಗಮನಹರಿಸಿ, ನಂತರ ಖರೀದಿಸಿ ಮೇಲೂ ಡೌಟು ಬಂದರೆ ಮೇಲೆ ಹೇಳಿದಂತೆ ಪರೀಕ್ಷೆ ಮಾಡಿದ ಬಳಿಕವಷ್ಟೇ ಸೇವಿಸಿ.
ಎಲ್ಲಾ ಮಾವಿನಹಣ್ಣು ಒಂದೇ ಬಣ್ಣದಲ್ಲಿ ಕಾಣುತ್ತಿದ್ದರೆ ಖರೀದಿಸಬೇಡಿ
ಅಧಿಕ ಹೊಳಪಿನಿಂದ ಕೂಡಿದ ಮಾವಿನಹಣ್ಣು ಖರೀದಿಸಬೇಡಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications