Latest Updates
-
ಬಿಸಿಗಾಳಿಯ ಎಚ್ಚರಿಕೆ: ಮಧ್ಯಾಹ್ನ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪು ನಿಮ್ಮ ಆರೋಗ್ಯಕ್ಕೆ ಕುತ್ತು ತರಬಹುದು! -
ಬಿಸಿಗಾಳಿಯ ನಡುವೆ ಮದುವೆ ಸಂಭ್ರಮ: ಅತಿಥಿಗಳ ಸುರಕ್ಷತೆಗಾಗಿ ನೀವು ಮಾಡಲೇಬೇಕಾದ ಬದಲಾವಣೆಗಳಿವು! -
ಬಿಸಿಗಾಳಿಯ ಅಬ್ಬರ ಶುರು: ನಿಮ್ಮ ಮನೆ ತಂಪಾಗಿರಲು ಮತ್ತು ಗಿಡಗಳನ್ನು ಉಳಿಸಲು ಈ ಸೀಕ್ರೆಟ್ ಟಿಪ್ಸ್ ಮಿಸ್ ಮಾಡ್ಬೇಡಿ! -
ಸುಡುವ ಬಿಸಿಲಿಗೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರ ಕ್ರಮ ಪಾಲಿಸಿ! -
ಮದರ್ಸ್ ಡೇ 2026: ಅಮ್ಮನಿಗೆ ಸರ್ಪ್ರೈಸ್ ನೀಡಲು ಈ ವೈರಲ್ ಟ್ರೆಂಡ್ಸ್ ಫಾಲೋ ಮಾಡಿ, ಮಿಸ್ ಮಾಡ್ಬೇಡಿ! -
ಅಮ್ಮನಿಗೆ ಈ ಬಾರಿ ವಿಶೇಷ ಉಡುಗೊರೆ: ತಾಯಂದಿರ ದಿನದಂದು 20 ನಿಮಿಷದ ಯೋಗದ ಮ್ಯಾಜಿಕ್! -
ದೆಹಲಿ ಮಳೆಯಲ್ಲಿ ಮದುವೆ ಸಂಭ್ರಮಕ್ಕೆ ಅಡ್ಡಿಯೇ? ಈ ಸಣ್ಣ ಬದಲಾವಣೆಗಳು ನಿಮ್ಮ ಮದುವೆಯನ್ನು ಉಳಿಸುತ್ತವೆ! -
ಬಿರುಗಾಳಿ ಅಬ್ಬರಕ್ಕೆ ಬಾಲ್ಕನಿ ಗಾರ್ಡನ್ ಹಾಳಾಗುತ್ತಾ? ನಿಮ್ಮ ಮನೆ ಮತ್ತು ಗಿಡಗಳನ್ನು ರಕ್ಷಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲಿನ ಬೇಗೆಗೆ ಸುಸ್ತಾಗಿದ್ದೀರಾ? ದೆಹಲಿ ಸರ್ಕಾರದ ಈ 'ರಿಲೀಫ್ ವ್ಯಾನ್' ನಿಮ್ಮ ಜೀವ ರಕ್ಷಕವಾಗಬಹುದು! -
ಮೆಟ್ ಗಾಲಾ 2026: ದುಬಾರಿ ಫ್ಯಾಷನ್ ಅನ್ನು ನಮ್ಮೂರಿನ ಕ್ರಿಯೇಟರ್ಗಳು ದೇಸಿ ಶೈಲಿಯಲ್ಲಿ ಮರುಸೃಷ್ಟಿಸಿದ್ದು ಹೇಗೆ? ಅಚ್ಚರಿ ಪಡಬೇಡಿ!
ಬಾಯಿಯಲ್ಲಿ ಬಿಳಿ ಲೇಪನವಿದ್ರೆ ತೊಲಗಿಸೋದು ಹೇಗೆ? ಇಲ್ಲಿದೆ ಆಯುರ್ವೇದ ಪರಿಹಾರ!
ಹೆಚ್ಚಿನ ಸಂದರ್ಭಗಳಲ್ಲಿ ಬಿಳಿಯ ಲೇಪನ ನಮ್ಮ ನಾಲಿಗೆಯ ಮೇಲೆ ಸಂಗ್ರಹಗೊಳ್ಳೋದನ್ನು ನಾವೆಲ್ಲಾ ಗಮನಿಸಿ ಇರಬಹುದು. ಇದರ ಬಗ್ಗೆ ಹೆಚ್ಚಿನವರು ಹೆಚ್ಚಾಗಿ ಗಮನ ನೀಡೋದಿಲ್ಲ. ಆದರೆ ಇದು ಗಂಭೀರ ಸಮಸ್ಯೆಗೆ ಕಾರಣವಾಗುತ್ತದೆ.

ನಮ್ಮ ಬಾಯಿಯಲ್ಲಿ ಸಂಗ್ರಹವಾದ ಬಿಳಿ ಕೊಳಕು ಬ್ಯಾಕ್ಟೀರಿಯಾ ಬಾಯಿಗೆ ಸಂಬಂಧಿಸಿದ ಅನೇಕ ಗಂಭೀರ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಅಷ್ಟಕ್ಕೂ ನಾಲಗೆಯಲ್ಲಿ ಬಿಳಿ ಲೇಪನ ಉಂಟಾಗೋದಕ್ಕೆ ಕಾರಣವೇನು? ಇದಕ್ಕೆ ಆಯರ್ವೇದದಲ್ಲಿ ಯಾವ ರೀತಿ ಪರಿಹಾರ ಕಂಡುಕೊಳ್ಳಬಹುದು ಅನ್ನೋದನ್ನು ತಿಳಿಯೋಣ.
ಕೆಟ್ಟ ಆಹಾರ ಪದ್ಧತಿಯಿಂದ ನಮ್ಮ ನಾಲಿಗೆಯ ಮೇಲೆ ಬಿಳಿ ಲೇಪನ ಉಂಟಾಗೋದಕ್ಕೆ ಕಾರಣವಾಗುತ್ತದೆ. ಇದು ನಿಸ್ಸಂಶಯವಾಗಿ ನಾಲಿಗೆಯಲ್ಲಿ ಕೊಳಕು ಮಾಡುತ್ತದೆ. ಅಷ್ಟೇ ಅಲ್ಲದೇ, ಉಸಿರಾಡುವಾಗ ಬಾಯಿಂದ ದುರ್ವಾಸನೆ ಬರಬಹುದು. ನಾಲಿಗೆಯಲ್ಲಿ ಸಂಗ್ರಹವಾದ ಈ ಬಿಳಿ ಕೊಳಕು ಬ್ಯಾಕ್ಟೀರಿಯಾ ಇದು ಬಾಯಿಗೆ ಸಂಬಂಧಿಸಿದ ಅನೇಕ ಗಂಭೀರ ಸಮಸ್ಯೆಗಳನ್ನು ಉಂಟುಮಾಡುತ್ತದೆ.
ನಾಲಿಗೆಯಲ್ಲಿ ಬಿಳಿ ಲೇಪನ ಸಂಗ್ರಹವಾಗೋದಕ್ಕೆ ಕಾರಣವೇನು?
ನಾಲಿಗೆಯ ಮೇಲೆ ಬಿಳಿ ಲೇಪನ ಸಂಗ್ರಹವಾಗೋದಕ್ಕೆ ಅನೇಕ ಕಾರಣಗಳು ಇರಬಹುದು. ಇವುಗಳಲ್ಲಿ ಮುಖ್ಯವಾಗಿ ಮೌಖಿಕ ನೈರ್ಮಲ್ಯದ ಬಗ್ಗೆ ಕಾಳಜಿ ವಹಿಸದಿರುವುದು, ಬಾಯಿಯಲ್ಲಿ ಶುಷ್ಕತೆ, ಸಾಕಷ್ಟು ನೀರು ಕುಡಿಯದಿರುವುದು, ಧೂಮಪಾನ, ಮದ್ಯ ಸೇವನೆ, ಮೃದುವಾದ ಅಥವಾ ಹಿಸುಕಿದ ಆಹಾರವನ್ನು ತಿನ್ನುವುದು ಮತ್ತು ಜ್ವರ ಬಂದಾಗಲೂ ಈ ರೀತಿ ಆಗುತ್ತದೆ. ಕೆಲವೊಮ್ಮೆ ಈ ಸಮಸ್ಯೆಯು ಕೆಲವು ಗಂಭೀರ ಆಂತರಿಕ ಕಾಯಿಲೆಗಳ ಸಂಕೇತವಾಗಿರಬಹುದು. ಇದರಲ್ಲಿ ಶೀತ ಹುಣ್ಣುಗಳು, ಲ್ಯುಕೋಪ್ಲಾಕಿಯಾ, ಬಾಯಿಯ ಕ್ಯಾನ್ಸರ್, ನಾಲಿಗೆ ಕ್ಯಾನ್ಸರ್ ಕೂಡ ಉಂಟಾಗುವ ಸಾಧ್ಯತೆಯಿದೆ.
ಹಲ್ಲುಜ್ಜುವಾಗ ನಾಲಗೆಯನ್ನು ಸ್ವಚ್ಛಗೊಳಿಸಿ!
ಬೆಳಗ್ಗೆ ಎದ್ದು ಹಲ್ಲುಜ್ಜುವಾಗ ಅದರ ಜೊತೆಗೆ ನಿಮ್ಮ ನಾಲಿಗೆಯನ್ನು ಸ್ವಚ್ಛಗೊಳಿಸಬೇಕು. ಇದಕ್ಕಾಗಿ ನೀವು ನಾಲಿಗೆಯ ಕ್ಲೀನರ್ ಅನ್ನು ಬಳಕೆ ಮಾಡಬಹುದು. ಈ ರೀತಿ ನಿಯಮಿತವಾಗಿ ಸ್ವಚ್ಛ ಮಾಡುತ್ತಿದ್ದರೆ ಯಾವ ರೀತಿ ಸಮಸ್ಯೆಯೂ ಕಾಣಿಸಿಕೊಳ್ಳೋದಿಲ್ಲ.
ನಾಲಿಗೆಯ ಬಿಳಿ ಪದರ ಹೋಗಲಾಡಿಸಲು ಆಯುರ್ವೇದಿಕ್ ಪರಿಹಾರಗಳೇನು?
ತ್ರಿಫಲ ನೀರು
ನಾಲಿಗೆ ಮತ್ತು ಬಾಯಿಯನ್ನು ಸ್ವಚ್ಛಗೊಳಿಸಲು ನೀವು ತ್ರಿಫಲ ಪುಡಿಯನ್ನು ಬಳಸಬೇಕು. ತ್ರಿಫಲ ಪುಡಿಯು ನಂಜುನಿರೋಧಕ ಮತ್ತು ಉರಿಯೂತ ನಿವಾರಕ ಗುಣಗಳನ್ನು ಹೊಂದಿದ್ದು ಬಾಯಿಯನ್ನು ಆರೋಗ್ಯವಾಗಿಡಲು ಮತ್ತು ಬ್ಯಾಕ್ಟೀರಿಯಾವನ್ನು ಕೊಲ್ಲಲು ಸಹಾಯ ಮಾಡುತ್ತದೆ.
ಬಿಸಿ ನೀರು ಕುಡಿಯಿರಿ
ನಾಲಿಗೆ ಮತ್ತು ಬಾಯಿಯ ಎಲ್ಲಾ ಭಾಗಗಳನ್ನು ಸ್ವಚ್ಛವಾಗಿ ಮತ್ತು ಆರೋಗ್ಯಕರವಾಗಿಡಲು ನೀವು ದಿನವಿಡೀ ಬೆಚ್ಚಗಿನ ನೀರನ್ನು ಕುಡಿಯಬೇಕು. ಇದು ಕರುಳಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಮತ್ತು ತ್ಯಾಜ್ಯವನ್ನು ಹೊರಹಾಕಲು ಸಹಾಯ ಮಾಡುತ್ತದೆ.
ಸಿಹಿ ತಿಂಡಿಯನ್ನು ಹೆಚ್ಚಾಗಿ ಸೇವಿಸಬೇಡಿ!
ನಾಲಿಗೆ, ಹಲ್ಲು ಮತ್ತು ಒಸಡುಗಳನ್ನು ಸ್ವಚ್ಛವಾಗಿ ಮತ್ತು ಆರೋಗ್ಯಕರವಾಗಿಡಲು ನೀವು ರಾತ್ರಿಯ ಸಮಯದಲ್ಲಿ ಸಿಹಿ ಪದಾರ್ಥಗಳನ್ನು ಸೇವಿಸಬಾರದು. ಬಾಯಿಯಲ್ಲಿ ಬ್ಯಾಕ್ಟೀರಿಯಾ ಉಳಿಯುವುದರಿಂದ ಅವುಗಳನ್ನು ಜೀರ್ಣಿಸಿಕೊಳ್ಳಲು ಕಷ್ಟವಾಗುತ್ತದೆ.
ಸೋಂಪು ಕಾಳುಗಳು
ಊಟದ ನಂತರ ನೀವು ಯಾವಾಗಲೂ ಒಂದು ಟೀ ಚಮಚ ಸೋಂಪು ಕಾಳುಗಳನ್ನು ಸೇವಿಸಬೇಕು. ಏಕೆಂದರೆ ಸೋಂಪು ಕಾಳುಗಳು ಆರೊಮ್ಯಾಟಿಕ್ ಎಣ್ಣೆಯ ಅಂಶವನ್ನು ಹೊಂದಿದ್ದು, ಅದು ಬಾಯಿಯ ದುರ್ವಾಸನೆ ಹೋಗಲಾಡಿಸಲು ಸಹಾಯ ಮಾಡುತ್ತದೆ. ಅಷ್ಟೇ ಅಲ್ಲದೇ, ಹಲ್ಲು ಮತ್ತು ನಾಲಿಗೆಯನ್ನು ಸ್ವಚ್ಛಗೊಳಿಸಲು ಸಹ ಕೆಲಸ ಮಾಡುತ್ತದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications