Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಡೆಂಗ್ಯೂ ಸೊಳ್ಳೆ ಯಾವುದು ಎಂದು ಕಂಡುಹಿಡಿಯುವುದು ಹೇಗೆ? ಅದರ ರಚನೆ ಹೇಗಿರುತ್ತೆ?
ಝಿಕಾ ವೈರಸ್ ಮತ್ತೊಮ್ಮೆ ಭಾರತದಲ್ಲಿ ಸುದ್ದಿ ಮಾಡುತ್ತಿದೆ. ಕೆಲ ವರ್ಷದ ಹಿಂದೆ ಕೇರಳ, ಕರ್ನಾಟಕ ಭಾಗದಲ್ಲಿ ಭಾರೀ ಆತಂಕಕ್ಕೆ ಕಾರಣವಾಗಿದ್ದ ವೈರಸ್ ಈಗ ಮತ್ತೆ ಹರಡಲು ಆರಂಭಿಸಿದೆ. ಇದರ ಪರಿಣಾಮವಾಗಿ ರಾಜ್ಯದಲ್ಲಿ ಮೊದಲ ಸಾವು ಸಹ ಸಂಭವಿಸಿದೆ. ಶಿವಮೊಗ್ಗದಲ್ಲಿ 73 ವರ್ಷದ ವೃದ್ಧರೊಬ್ಬರು ಮೃತಪಟ್ಟಿರುವುದು ದೃಢವಾಗಿದೆ.
ಆದ್ರೆ ಇದರ ಜೊತೆಗೆ ಈ ಡೆಂಗ್ಯೂ ವಿಪರೀತ ದಾಳಿ ಮಾಡುತ್ತಿದೆ, ಬೆಂಗಳೂರಿನಂತಹ ಮಹಾನಗರದಲ್ಲಿ ಡೆಂಗ್ಯೂ ಕಾಯಿಲೆಗೆ ಒಳಗಾಗುತ್ತಿರುವವರ ಸಂಖ್ಯೆ ಹೆಚ್ಚಾಗಿತ್ತಿದೆ. ಮಳೆಗಾಲದಲ್ಲಿ ಸಣ್ಣ ಮಳೆಯಿಂದಾಗಿ ಎಲ್ಲೆಂದರಲ್ಲಿ ನೀರು ನಿಲ್ಲುವ ಕಾರಣಕ್ಕೆ ಸೊಳ್ಳೆಗಳಿಗೆ ಸಂತಾನೋತ್ಪತ್ತಿಗಾಗಿ ಸಹಕಾರಿಯಾಗುತ್ತಿದೆ. ಇದರಿಂದ ಕಾಯಿಲೆಗಳು ಹರಡುತ್ತಿದೆ.

ಈ ಡೆಂಗ್ಯೂ ಏಕಾಏಕಿ ಹರಡುತ್ತಿದೆ. ಈ ಡೆಂಗ್ಯೂ ಹರಡಲು ಈಡಿಸ್ ಈಜಿಪ್ಟಿ ಎಂಬ ಸೊಳ್ಳೆಯಿಂದ ಹರಡುತ್ತದೆ ಎಂಬುದು ನಮಗೆ ಗೊತ್ತು. ಹೀಗಾಗಿ ಸೊಳ್ಳೆಗಳು ಹರಡದಂತೆ ಹಾಗೂ ಸೊಳ್ಳೆಗಳು ಕಚ್ಚದಂತೆ ಎಚ್ಚರಿಕೆ ವಹಿಸಲು ಮುಂದಾಗುತ್ತೇವೆ. ಆದ್ರೆ ನೀವು ಡೆಂಗ್ಯೂ ಹರಡುವ ಸೊಳ್ಳೆ ಹಾಗೂ ಸಾಮಾನ್ಯವಾಗಿ ಕಚ್ಚುವ ಸೊಳ್ಳೆಗಳ ಮೇಲ್ನೋಟಕ್ಕೆ ಕಂಡುಹಿಡಿಯಬಹುದೆ?
ನೀವು ರೂಮಿನಲ್ಲಿ ಕುಳಿತಿದ್ದೀರಿ ಎಂದುಕೊಳ್ಳಿ. ಆದ್ರೆ ಸೊಳ್ಳೆಯೊಂದು ನಿಮ್ಮನ್ನು ಕಚ್ಚುತ್ತಿರುವಾಗ ಅದು ಡೆಂಗ್ಯೂ ಸೊಳ್ಳೆಯೇ ಅಥವಾ ಬೇರೆ ಸಾಮಾನ್ಯ ಸೊಳ್ಳೆಯೇ ಎಂಬುದನ್ನು ಕಂಡುಹಿಡಿಯಬಹುದು. ಸಾಮಾನ್ಯ ಸೊಳ್ಳೆಗಳಿಗಿಂತ ಇವು ಸ್ವಲ್ಪ ಬೆರೆಯದ್ದೆ ರಚನೆಗಳ ಹೊಂದಿರುತ್ತದೆ ಎಂದು ತಿಳಿದುಬರುತ್ತದೆ.
ಏಕಾಏಕಿ ನಿಯಂತ್ರಿಸಲು, ಸಂಶೋಧಕರು ಈ ಸೊಳ್ಳೆಗಳ ಮೊಟ್ಟೆಗಳನ್ನು ಗುರುತಿಸುವ ಕೆಲಸ ಮಾಡುತ್ತಿದ್ದಾರೆ, ಆದರೂ ಇದು ಅಧಿಕಾರಿಗಳಿಗೆ ಸವಾಲಾಗಿ ಉಳಿದಿದೆ. ಈ ಸೊಳ್ಳೆಗಳು ತಮ್ಮ ಮೊಟ್ಟೆಗಳನ್ನು ಕೃತಕ ಮತ್ತು ನೈಸರ್ಗಿಕ ನೀರಿನ ಮೂಲಗಳಲ್ಲಿ ಇಡುತ್ತವೆ. ಮೊಟ್ಟೆಗಳು ಹೊರಬಂದ ನಂತರ, ಲಾರ್ವಾಗಳು ತಾಪಮಾನವನ್ನು ಅವಲಂಬಿಸಿ ದಿನಗಳು ಅಥವಾ ವಾರಗಳಲ್ಲಿ ಬೆಳೆಯುತ್ತವೆ.
ಹೆಣ್ಣು ಈಡಿಸ್ ಸೊಳ್ಳೆ ರಕ್ತವನ್ನು ಸೇವಿಸಿದ ನಂತರ 100-200 ಮೊಟ್ಟೆಗಳನ್ನು ಇಡುತ್ತದೆ. ಅವರು ನೀರಿನ ಬಳಿ ತೇವಾಂಶವುಳ್ಳ ಮೇಲ್ಮೈಗಳಲ್ಲಿ ತಮ್ಮ ಮೊಟ್ಟೆಗಳನ್ನು ಇಡುತ್ತವೆ. ಈ ಈಡಿಸ್ ಸೊಳ್ಳೆಯ ಎದೆಯ ಮೇಲೆ ಹಗೂ ತಲೆಯಿಂದ ಕೆಳಗಿನ ವರೆಗೆ ಎರಡು ಬಿಳಿ ಬಣ್ಣದ ಗೆರೆ ಇರುತ್ತದೆ. ಹಾಗೆ ಒಂದು ಬಿಳಿ ಅಡ್ಡಲಾಗಿ ಎಳೆಯಲಾದ ಬಿಳಿಯ ಗೆರೆಯೂ ಕಾಣಬಹುದು. ಇವು ಸಾಮಾನ್ಯವಾಗಿ 4-7 ಮಿ.ಮೀ ಉದ್ದವಿರುತ್ತವೆ. ಆದ್ರೆ ಹೆಣ್ಣು ಸೊಳ್ಳೆಗಳು ಗಂಡು ಸೊಳ್ಳೆಗಳಿಗಿಂತ ಸ್ವಲ್ಪ ದೊಡ್ಡದಾಗಿ ಕಾಣಿಸುತ್ತವೆ.
ಹೆಣ್ಣು ಸೊಳ್ಳೆಗಳು ತಮ್ಮ ಕಾಲುಗಳ ಮೇಲೆ ಬಿಳಿ ಪಟ್ಟಿಗಳನ್ನು ಹೊಂದಿರುತ್ತವೆ ಮತ್ತು ಅವುಗಳ ದೇಹದ ಮೇಲೆ ಲೈರ್‌ನಂತೆ ಕಾಣುವ ಬಿಳಿ ಗೆರೆಗಳ ಹೊಂದಿರುತ್ತದೆ. ಡೆಂಗ್ಯೂ ಸೊಳ್ಳೆಗಳು ಸಾಮಾನ್ಯವಾಗಿ ನಗರ ಪ್ರದೇಶದಲ್ಲಿ ಹೆಚ್ಚಾಗಿ ನೋಡಬಹುದು. ಅಲ್ಲದೆ ಬಿಸಿಲು ಹೆಚ್ಚಿರುವ ಕಡೆಗಳಲ್ಲಿ ಇವು ಶಕ್ತಿಶಾಲಿಯಾಗಿ ಕಂಡುಬರುತ್ತವೆ. ಇವು ಹಗಲಿನಲ್ಲಿ ಹೆಚ್ಚಾಗಿ ಕಚ್ಚುತ್ತವೆ.
ಡೆಂಗ್ಯೂ ರೋಗದ ಲಕ್ಷಣಗಳು
ಸೋಂಕಿರುವ ಸೊಳ್ಳೆ ಕಚ್ಚಿದ 2-7 ದಿನಗಳಲ್ಲಿ ಡೆಂಗ್ಯೂ ಲಕ್ಷಣಗಳು ಕಂಡು ಬರುತ್ತದೆ. ಸಾಮಾನ್ಯವಾಗಿ ಕಂಡು ಬರುವ ಲಕ್ಷಣಗಳೆಂದರೆ
ವಿಪರೀತ ಜ್ವರ ಬರುವುದು ಒಂದು ವಾರದಲ್ಲಿ ಜ್ವರ ಹೆಚ್ಚಾಗಿತ್ತದೆ. ಅತೀವ ತಲೆನೋವು ಕಾಣಿಸಿಕೊಳ್ಳುತ್ತದೆ. ತಡೆಯಲಾಗದಂತಹ ವಿಪರೀತ ತಲೆನೋವು ಕಾಣಿಸಿಕೊಳ್ಳುತ್ತದೆ. ಈ ವೇಳೆ ತಲೆ ನೋವು ಮಾತ್ರೆ ಸೇವಿಸುವುದರಿಂದ ಈ ನೋವು ಕಡಿಮೆಯಾಗುವುದಿಲ್ಲ. ಕಣ್ಣುಗಳೂ ನೋವು ಕಾಣಿಸಿಕೊಳ್ಳುವುದು. ಮೈ,ಕೈ ನೋವು, ವಾಂತಿ, ಬೇಧಿ, ಗ್ರಂಥಿಗಳು ಊದಿಕೊಳ್ಳುವುದು, ಕಾಲು ಗಂಟು ನೋವು, ಸುಸ್ತು ಕಾಣಿಸಿಕೊಳ್ಳುವುದು. ಈ ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯರ ಭೇಟಿಯಾಗುವುದು ಉತ್ತಮ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
