Latest Updates
-
ಐಟಿಆರ್ ಸಲ್ಲಿಕೆ ಗಡುವು ಹತ್ತಿರ: ದಂಪತಿಗಳು ಒಟ್ಟಾಗಿ ಕುಳಿತು ಈ ಕೆಲಸ ಮಾಡಿದರೆ ಟೆನ್ಷನ್ ಫ್ರೀ! -
ಬೆಂಗಳೂರಿಗರೇ ಗಮನಿಸಿ: ಇಂದು 6 ಗಂಟೆ ಪವರ್ ಕಟ್, ಈ ಮುನ್ನೆಚ್ಚರಿಕೆ ಮರೆಯದಿರಿ! -
ಶ್ರಾವಣ ಉಪವಾಸದಲ್ಲಿ ದಿನವಿಡೀ ಎನರ್ಜಿಯಿಂದ ಇರಬೇಕೆ? ಈ ಹೈ-ಪ್ರೋಟೀನ್ ಸಾತ್ವಿಕ ಆಹಾರ ಪದ್ಧತಿ ಫಾಲೋ ಮಾಡಿ! -
ಗುರು ಪೂರ್ಣಿಮೆ 2026: ಸರಳ ಪೂಜಾ ವಿಧಿ ಮತ್ತು ಕಡಿಮೆ ಬಜೆಟ್ನಲ್ಲಿ ಗುರುಗಳಿಗೆ ನೀಡಬಹುದಾದ ಬೆಸ್ಟ್ ಗಿಫ್ಟ್ ಐಡಿಯಾಗಳು! -
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ! -
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್! -
ವಿಶ್ವ ಹೆಪಟೈಟಿಸ್ ದಿನ: ಲಿವರ್ ಆರೋಗ್ಯ ಹೆಚ್ಚಿಸಲು ಈ 10 ನಿಮಿಷದ ಬೆಳಗಿನ ದಿನಚರಿ ಪಾಲಿಸಿ!
ಡೆಂಗ್ಯೂ ಹಾಗೂ ಮಲೇರಿಯಾದ ಲಕ್ಷಣವೇನು? ದಿಢೀರ್ ಹೆಚ್ಚಳಕ್ಕೆ ಕಾರಣವೇನು?
ದೇಶದಲ್ಲಿ ವೈರಸ್‌ನಿಂದ ಹರಡುವ ರೋಗಗಳ ಸಂಖ್ಯೆ ಹೆಚ್ಚಾಗುತ್ತಿದೆ. ಈಗ ನಿಫಾ, ಮಂಕಿಪಾಕ್ಸ್‌ನ ಆತಂಕ ಎಲ್ಲೆಡೆ ಹೆಚ್ಚಾಗಿದೆ. ಭಾರತದಲ್ಲಿ ಮೂರನೇ ಮಂಕಿಪಾಕ್ಸ್ ಪ್ರಕರಣ ದೃಢವಾಗಿರುವುದು ಆತಂಕ ಹೆಚ್ಚಾಗಲು ಕಾರಣವಾಗಿದೆ. ಆದರೆ ಈಗ ದೇಶದಲ್ಲಿ ಡೆಂಗ್ಯು ಹಾಗೂ ಮಲೇರಿಯಾ ಪ್ರಕರಣಗಳು ದಿಢೀರ್ ಏರಿಕೆ ಕಾಣುತ್ತಿದೆ.
ಎಲ್ಲಿ ನೋಡಿದರು ಜ್ವರದ ಪ್ರಕರಣಗಳು ಹೆಚ್ಚುತ್ತಿದ್ದು, ಡೆಂಗ್ಯು ಹಾಗೂ ಮಲೇರಿಯಾ ಭೀತಿ ಅಧಿಕವಾಗಿದೆ. ಅದರಲ್ಲಿ ಬೃಹತ್ ನಗರಗಳಲ್ಲಿ ಈ ಪ್ರಕರಣಗಳ ಸಂಖ್ಯೆ ದಿಢೀರ್ ಏರಿಕೆಯಾಗಿದೆ. ದೆಹಲಿ, ಮುಂಬೈ, ಬೆಂಗಳೂರು, ಹೈದರಾಬಾದ್, ಲಕ್ನೋದಲ್ಲಿ ಪ್ರಕರಣಗಳು ಏರಿಕೆಯಾಗಿವೆ. ಎರಡೂ ಕಾಯಿಲೆಗಳು ಒಂದೇ ರೀತಿಯ ಲಕ್ಷಣಗಳ ಹೊಂದಿವೆ. ಎರಡೂ ಕೂಡ ಸೊಳ್ಳೆಗಳ ಕಡಿತದಿಂದ ಹರಡುವ ಕಾಯಿಲೆಯಾಗಿದೆ.

ಈಡಿಸ್ ಎಂಬ ಸೊಳ್ಳೆ ಕಚ್ಚಿದಾಗ ಈ ಡೆಂಗ್ಯೂ ಹರಡುತ್ತದ ಎಂಬುದನ್ನು ನಾವು ತಿಳಿದಿದ್ದೇವೆ. ನೀರಿನಲ್ಲಿ ಮೊಟ್ಟೆ ಇಡುವ ಈ ಸೊಳ್ಳೆ ಸಂತಾನೋತ್ಪತ್ತಿಯ ದೃಷ್ಟಿಯಿಂದ ರಕ್ತದ ಅವಶ್ಯಕತೆ ಉಂಟಾಗಿರುತ್ತದೆ, ಹೀಗಾಗಿ ಅದು ಮನುಷ್ಯರನ್ನು ಹುಡುಕಿಕೊಂಡು ಬಂದು ಕಚ್ಚಲು ಮುಂದಾಗುತ್ತದೆ. ಇದು ಡೆಂಗ್ಯೂ ಉಂಟಾಗಲು ಕಾರಣವಾಗುತ್ತದೆ.
ಆದ್ರೆ ನಮಗೆ ಡೆಂಗ್ಯೂ ಹಾಗೂ ಮಲೇರಿಯಾ ನಡುವಿನ ವ್ಯತ್ಯಾಸ ತಿಳಿಯದೆ ಸಮಸ್ಯೆಗೆ ಒಳಗಾಗುತ್ತಿದ್ದೇವೆ. ಈ ಎರಡು ಕಾಯಿಲೆಯಲ್ಲಿ ಸಾಮಾನ್ಯ ಲಕ್ಷಣವೆಂದರೆ ಜ್ವರ. ಇದರ ಹೊರತಾಗಿಯೂ ಎರಡರ ನಡುವೆ ಹಲವು ವ್ಯತ್ಯಾಸಗಳಿವೆ. ಹಾಗಾದ್ರೆ ಎರಡದಲ್ಲಿ ಏನೆಲ್ಲಾ ವ್ಯತ್ಯಾಸವಿದೆ. ಲಕ್ಷಣಗಳೇನು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಡೆಂಗ್ಯೂ ಲಕ್ಷಣಗಳು
ಜ್ವರ: ಡೆಂಗ್ಯೂ ಸಾಮಾನ್ಯವಾಗಿ ಹಠಾತ್ ಜ್ವರದಿಂದ ಪ್ರಾರಂಭವಾಗುತ್ತದೆ. ಈ ಜ್ವರವು 2 ರಿಂದ 7 ದಿನಗಳವರೆಗೆ ಇರುತ್ತದೆ. ಜ್ವರ ಏಕಾಏಕಿ ಹೆಚ್ಚಾಗುವುದು, ರಾತ್ರಿ ಸಮಯದಲ್ಲಿ ಮತ್ತಷ್ಟು ಏರಿಕೆಯಾಗುವುದು ನೋಡಬಹುದು.
ತೀವ್ರ ತಲೆನೋವು: ಡೆಂಗ್ಯೂ ಪ್ರಕರಣಗಳಲ್ಲಿ ಸಾಮಾನ್ಯವಾಗಿ ಕಣ್ಣುಗಳ ಹಿಂದೆ ವಿವರಿಸಲಾದ ತೀವ್ರವಾದ ತಲೆನೋವು ಕಾಣಿಸಿಕೊಳ್ಳುತ್ತದೆ. ವಿಪರೀತ ನೋವನ್ನು ಸಹಿಸಲಾಗದು. ಇದಕ್ಕೆ ನೀವು ಯಾವುದೇ ಔಷಧಿ ಮಾಡಿದರು ಪರಿಣಾಮ ಬೀರದಂತಹ ಮಟ್ಟಕ್ಕೆ ಹೆಚ್ಚಳವಾಗುವುದು.
ಸ್ನಾಯು ಮತ್ತು ಕೀಲು ನೋವು: ಡೆಂಗ್ಯೂ ಜ್ವರ ಕಾಣಿಸಿಕೊಂಡಾಗ ಎದ್ದು ಓಡಾಡಲು ಸಹ ಕಷ್ಟವಾಗುವಂತಹ ರೀತಿಯಲ್ಲಿ ನೋವುಗಳು ಕಾಣಿಸಿಕೊಳ್ಳುತ್ತದೆ. ಕಾಲು, ಮೈ ಕೈ ತುಂಬೆಲ್ಲಾ ಸಹಿಸಲಾಗದ ನೋವು ಕಾಣಿಸಿಕೊಳ್ಳುತ್ತದೆ.
ವಾಕರಿಕೆ ಮತ್ತು ವಾಂತಿ: ಡೆಂಗ್ಯೂ ಬಂದಾಗ ಊಟ ಸೇರುವುದಿಲ್ಲ. ಊಟ ಮಾಡಿದರೂ ವಾಕರಿಕೆ ಬರುವುದು ಆಗಾಗ ವಾಂತಿಯಾಗುವುದು ಸಂಭವಿಸುತ್ತದೆ.
ಡೆಂಗ್ಯೂ ಬಂದಾಗ ಏನು ಮಾಡಬೇಕು?
ಡಂಗ್ಯೂ ಇದ್ದಾಗ ವೈದ್ಯರ ಭೇಟಿ ಜೊತೆಗೆ ಒಂದಿಷ್ಟು ಮುನ್ನೆಚ್ಚರಿಕೆ ತೆಗೆದುಕೊಳ್ಳಿ. ನೀರು ಹೆಚ್ಚಾಗಿ ಸೇವಿಸುವುದು, ಹಣ್ಣುಗಳನ್ನು ಹೆಚ್ಚಾಗಿ ಸೇವಿಸಿ, ರೋಗ ನಿರೋಧಕ ಶಕ್ತಿ ಹೆಚ್ಚಿಸುವಂತಹ ಆಹಾರ ಸೇವನೆಗೆ ಒತ್ತು ನೀಡಿ.
ಮಲೇರಿಯಾದ ಲಕ್ಷಣಗಳೇನು?
ಜ್ವರ: ಡೆಂಗ್ಯೂವಿನಂತೆಯೇ ಮಲೇರಿಯಾ ಉಂಟಾದಾಗಲು ಕೂಡ ತೀವ್ರ ಜ್ವರ ಕಾಣಿಸಿಕೊಳ್ಳುತ್ತದೆ. ಆದರೆ ಈ ವೇಳೆ ಶೀತ, ತಲೆ ನೋವು ಸಹ ಜೊತೆಯಲ್ಲಿ ಕಾಣಿಸುವುದು ಸಾಮಾನ್ಯ. ಕನಿಷ್ಠ ದೈಹಿಕ ಪರಿಶ್ರಮದ ನಂತರವೂ ಮಲೇರಿಯಾ ತೀವ್ರ ಆಯಾಸ ಮತ್ತು ದೌರ್ಬಲ್ಯವನ್ನು ಉಂಟುಮಾಡಬಹುದು. ಉಳಿದಂತೆ ಎಲ್ಲಾ ಲಕ್ಷಣಗಳು ಡೆಂಗ್ಯೂವಿನಂತೆಯೇ ಕಾಣಿಸಿಕೊಳ್ಳಲಿದೆ. ಇದರಲ್ಲಿ ಕಿಬ್ಬೊಟ್ಟೆ ನೋವು ಕಾಣಿಸಿಕೊಳ್ಳುತ್ತದೆ. ಅತಿಸಾರ, ಕಾಮಾಲೆಯೂ ಬರಬಹುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications