Latest Updates
-
ಅಕ್ಷಯ ತೃತೀಯ: ಮದುವೆ ಮತ್ತು ಚಿನ್ನದ ಖರೀದಿಗೆ ಹೀಗೆ ಪ್ಲಾನ್ ಮಾಡಿ -
ಮನೆಯನ್ನು ತಂಪಾಗಿಡಲು ಹೀಟ್ವೇವ್ ಸಮಯದಲ್ಲಿ ಈ ಟ್ರಿಕ್ಸ್ ಫಾಲೋ ಮಾಡಿ -
ಮಾವಿನ ಹಣ್ಣು ಖರೀದಿಸುವ ಮುನ್ನ ಈ ತಪ್ಪು ಮಾಡಬೇಡಿ! -
ಅಕ್ಷಯ ತೃತೀಯ ಚಿನ್ನದ ಖರೀದಿ: ಈ ಆಫರ್ ಮಿಸ್ ಮಾಡ್ಬೇಡಿ! -
ಬಿಸಿಲ ಧಗೆಯಲ್ಲೂ ಫಿಟ್ ಆಗಿರಲು ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಷಯ ತೃತೀಯ: ಸಾಲದ ಸುಳಿಯಿಲ್ಲದೆ ಚಿನ್ನ ಖರೀದಿಸುವುದು ಹೇಗೆ? -
ಬಿಸಿಲಿನ ತಾಪ: ನಿಮ್ಮ ಮನೆಯನ್ನು ತಂಪಾಗಿಡಲು ಅದ್ಭುತ ಟಿಪ್ಸ್ -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ತಂಪು ಆಹಾರಗಳೇ ಮದ್ದು -
ಹಬ್ಬದ ಸೀರೆ ಫ್ಯಾಷನ್: ಈ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಬಿಸಿಗಾಳಿ ಎಚ್ಚರಿಕೆ: ಸುಡುವ ಬಿಸಿಲಿನಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ
ನವಜಾತ ಶಿಶುಗಳಲ್ಲಿ ಶ್ರವಣ ದೋಷ ಪತ್ತೆ ಮಾಡುವುದು ಹೇಗೆ? ಚಿಕಿತ್ಸೆ ಕುರಿತ ಸಂಪೂರ್ಣ ಮಾಹಿತಿ..!
ಚಿಕ್ಕ ಮಕ್ಕಳಲ್ಲಿ ನಾವು ಹಲವು ರೀತಿಯ ಸಮಸ್ಯೆಗಳ ನೋಡಬಹುದು. ಅದ್ರಲ್ಲೂ ನವಜಾತ ಶಿಶುಗಳಲ್ಲಿ ಸಮಸ್ಯೆಗಳ ಪತ್ತೆ ಮಾಡುವುದು ದೊಡ್ಡ ಸವಾಲಿನ ಕೆಲಸವಾಗಿರುತ್ತದೆ. ಅದರಲ್ಲೂ ಹುಟ್ಟುವಾಗಲೇ ಮಕ್ಕಳು ಜಾಂಡೀಸ್ ಹೊಂದಿರುವುದು, ಶ್ರವಣ ಹಾಗೂ ದೃಷ್ಟಿ ಸಮಸ್ಯೆಗೆ ಒಳಗಾಗುವುದು ಸಾಮಾನ್ಯ ಸಂಗತಿ ಎಂಬಂತಾಗಿದೆ. ಇದಕ್ಕೂ ಹಲವು ರೀತಿಯ ಬಾಹ್ಯ ಹಾಗೂ ಆಂತರಿಕ ಕಾರಣಗಳಿರುತ್ತವೆ.
ಇನ್ನು ನವಜಾತ ಮಕ್ಕಳಲ್ಲಿ ಶ್ರವಣ ದೋಷವನ್ನು ಹುಟ್ಟಿದ ವಾರದಲ್ಲೇ ಪತ್ತೆ ಮಾಡಬಹುದು. ಆದರೆ ಎಷ್ಟು ತೀವ್ರತೆಯಲ್ಲಿದೆ ಎಂಬುದನ್ನು ಕೂಡ ನವಜಾತ ಶಿಶುಗಳಲ್ಲಿ ಪತ್ತೆ ಮಾಡಬಹುದಾಗಿದೆ. ಆದ್ರೆ ಮಕ್ಕಳಲ್ಲಿ ಈ ದೋಷವನ್ನು ನಾವುಗಳು ಪತ್ತೆ ಮಾಡುವುದಾದರು ಹೇಗೆ? ಅವರ ಯಾವ ರೀತಿಯ ವರ್ತನೆ ಅವರಲ್ಲಿ ಶ್ರವಣ ದೋಷವಿದೆ ಎಂಬುದರ ಸೂಚಕವಾಗಿರಲಿದೆ?

ಇಂತಹ ಹಲವು ರೀತಿಯ ಪ್ರಶ್ನೆಗಳು ನಿಮ್ಮಲ್ಲೂ ಮೂಡಿರಬಹುದು. ಅದ್ರೆ ನಾವಿಂದು ಈ ಕುರಿತ ಉತ್ತರಗಳನ್ನು ಆಡಿಯೋಲೊಗಿಸ್ಟ್ ಮತ್ತು ಸ್ಪೀಚ್ ಪ್ಯಾಥೋಲೊಜಿಸ್ಟ್ ಆಗಿರುವ ಅರುಣ್ ಕುಮಾರ್ ಅವರ ಬಳಿ ತಿಳಿದುಕೊಳ್ಳೋಣ. ಪ್ರತಿ 1,000 ಶಿಶುಗಳಲ್ಲಿ 1 ರಿಂದ 2 ಶಿಶುಗಳು 1 ಅಥವಾ ಎರಡೂ ಕಿವಿಗಳಲ್ಲಿ ಶಾಶ್ವತ ಶ್ರವಣ ದೋಷದೊಂದಿಗೆ ಜನಿಸುತ್ತವೆ. ಶ್ರವಣ ದೋಷದ ಇತಿಹಾಸವೇ ಇಲ್ಲದಂತಹ ಕುಟುಂಬದಲ್ಲೂ ಈ ರೀತಿ ಸಮಸ್ಯೆ ಹೊಂದಿರುವ ಮಕ್ಕಳು ಜನಿಸಬಹುದು.
ನೀವು ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿದರೆ, ನೀವು ಮೊದಲು ನಿಮ್ಮ ಮಗುವಿಗೆ ನವಜಾತ ಶ್ರವಣ ಪರೀಕ್ಷೆ ಮಾಡಿಸಬಹುದು. ಈ ಪರೀಕ್ಷೆಯ ಬಳಿಕವೇ ಡಿಸ್ಚಾರ್ಜ್ ಮಾಡಲಾಗುತ್ತದೆ. ಇದನ್ನು 4ರಿಂದ 5 ವಾರದ ಮೊದಲು ಸಹ ಮಾಡಬಹುದು ಎಂದು ಅರುಣ್ ಕುಮಾರ್ ಹೇಳಿದ್ದಾರೆ.
ನವಜಾತ ಶಿಶುವಲ್ಲಿ ಶ್ರವಣ ದೋಷ ಇದ್ದರೆ ಹೇಗೆ ತಿಳಿಯುತ್ತೆ?
ಮಕ್ಕಳಿನ ಕಿವಿಯೂ ಅತ್ಯಂತ ಸೂಕ್ಷ್ಮವಾಗಿರುತ್ತೆ, ಆದ್ರೆ ಹುಟ್ಟಿದಾಗ ಮಕ್ಕಳಿಗೆ ಶ್ರವಣ ಸಮಸ್ಯೆ ಇದೆ ಎಂದು ಕಂಡುಹಿಡಿಯಲು ನಾವು ಕೆಲವೊಂದು ಪರೀಕ್ಷೆ ನಡೆಸಬೇಕಾಗುತ್ತದೆ. ಈ ಪರೀಕ್ಷೆಯನ್ನು ಸ್ವಯಂಚಾಲಿತ ಓಟೋಕೌಸ್ಟಿಕ್ ಎಮಿಷನ್ ಟೆಸ್ಟ್ ಎನ್ನಲಾಗುತ್ತದೆ. ಇದರಲ್ಲಿ ಮೊದಲು ಮಗುವಿನ ಕಿವಿಯಲ್ಲಿ ಸಣ್ಣದಾದ ಒಂದು ಇಯರ್ ಪೀಸ್ ಇಡಲಾಗುತ್ತದೆ. ಇದು ಕ್ಲಿಕ್ ಕ್ಲಿಕ್ ಎಂಬ ಶಬ್ದ ಮಾಡುತ್ತಿರುತ್ತದೆ. ಈ ಶಬ್ದ ಮಾಡಿದಾಗ ಮಗು ಪ್ರತಿಕ್ರಿಯೆಯನ್ನು ಗಮನಿಸಲಾಗುತ್ತದೆ.
ಆದರೆ ಒಂದೇ ಬಾರಿಗೆ ಮದು ಈ ಶಬ್ದಕ್ಕೆ ಪ್ರತಿಕ್ರಿಯಿಸದಿದ್ದರೆ ಮಗುವಿಗೆ ಶ್ರವಣ ದೋಷವಿದೆ ಎಂಬ ನಿರ್ಧಾರಕ್ಕೆ ಬರಲು ಸಾಧ್ಯವಿಲ್ಲ. ಹೀಗಾಗಿ ಮತ್ತೊಂದು ಹಂತದ ಪರೀಕ್ಷೆ ಮಾಡಲಾಗುತ್ತದೆ, ಇದಕ್ಕೆ ಸ್ವಯಂಚಾಲಿತ ಶ್ರವಣೇಂದ್ರಿಯ ಮೆದುಳಿನ ಪ್ರತಿಕ್ರಿಯೆ ಪರೀಕ್ಷೆ ಎನ್ನಲಾಗುತ್ತದೆ. ಇದರಲ್ಲಿ ಚಿಕ್ಕದಾದ ಒಂದು ಯಂತ್ರವನ್ನು ಮಗುವಿನ ಕುತ್ತಿಗೆಯ ಭಾಗ ಹಾಗೂ ಹೆಡ್‌ಫೋನ್‌ನಂತನ ರಚನೆಯ ಒಂದು ಯಂತ್ರವನ್ನು ಕಿವಿಗೆ ಹಾಕಲಾಗುತ್ತದೆ. ಇದು ಕೂಡ ಕ್ಲಿಕ್ ಶಬ್ದ ಮಾಡುತ್ತದೆ. ಈ ಪರೀಕ್ಷೆಯು 5ರಿಂದ 15 ನಿಮಿಷಗಳ ಕಾಲ ಮಾಡಲಾಗುತ್ತದೆ. ಈ ಪರೀಕ್ಷೆಯಲ್ಲಿ ಮಗು ಪ್ರತಿಕ್ರಿಯಿಸದೆ ಇದ್ದರೆ ಶ್ರವಣ ದೋಷವಿದೆ ಎಂಬ ನಿರ್ಧಾರಕ್ಕೆ ಬರಲಾಗುತ್ತದೆ.
ಯಾರು ಈ ಶ್ರವಣ ದೋಷ ಪರೀಕ್ಷೆ ಮಾಡಿಸಬಹುದು?
ಹೆಚ್ಚಿನದಾಗಿ ನವಜಾತ ಮಕ್ಕಳಿಗೆ ಈ ಪರೀಕ್ಷೆ ಮಾಡಲಾಗುತ್ತದೆ. ಏಕೆಂದರೆ ಚಿಕ್ಕ ಮಕ್ಕಳಲ್ಲಿ ಈ ದೋಷವಿದ್ದರೆ ಆರಂಭದಲ್ಲೇ ಚಿಕಿತ್ಸೆ ನೀಡುವುದರಿಂದ ದೋಷ ನಿವಾರಣೆಯ ಪ್ರಮಾಣ ಹೆಚ್ಚಿರುತ್ತದೆ. ಆದ್ರೆ ಈ ಪರೀಕ್ಷೆ ಮಾಡಿಸುವುದು ಕಡ್ಡಾಯವಲ್ಲ. ನಿಮ್ಮ ಮಕ್ಕಳಿಗೆ ದೋಷವಿದೆ ಎಂಬ ಅನುಮಾನ ಮೂಡಿದರೆ ಮಾಡಿಸಬಹುದು. ಈ ಪರೀಕ್ಷೆಯಿಂದ ಮಕ್ಕಳ ಯಾವುದೇ ಅಂಗಕ್ಕೆ ಹಾನಿಯಾಗುವುದಿಲ್ಲ. ಮಕ್ಕಳಲ್ಲಿ ಶ್ರವಣ ದೋಷವಿದ್ದರೆ ಅವರ ಮಾತಿನ ಮೇಲೂ ಇದು ಪರಿಣಾಮ ಬೀರಲಿದೆ. ಅವರಲ್ಲಿ ಮಾತು ಬರುವುದು ತಡವಾಗುತ್ತದೆ. ಹಾಗೆ ಈ ದೋಷ ಬಹುಬೇಗ ಪತ್ತೆ ಮಾಡಿದರೆ ದೋಷಕ್ಕೆ ಪರಿಹಾರವೂ ಕೂಡ ಬಹುಬೇಗ ಪಡೆಯಬಹುದು ಎಂದು ಅರುಣ್ ಕುಮಾರ್ ಮಾಹಿತಿ ಹಂಚಿಕೊಂಡಿದ್ದಾರೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications











