Latest Updates
-
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು!
ಮಳೆಗಾಲದಲ್ಲಿ ಅಸ್ತಮಾ ತಡೆಗಟ್ಟಲು ಈಗಲೇ ಈ ರೀತಿ ಮುನ್ನೆಚ್ಚರಿಕೆವಹಿಸಿ
ಮಳೆಗಾಲ ಶುರುವಾಯ್ತೆಂದರೆ ಅಸ್ತಮಾ ಇರುವವರು ತುಂಬಾನೇ ಜಾಗ್ರತೆವಹಿಸಬೇಕು, ಇಲ್ಲದಿದ್ದರೆ ಉಸಿರಾಟದ ಸಮಸ್ಯೆ ಮರುಕಳಿಸುವುದು. ಬೇಸಿಗೆಯಲ್ಲಿ ಅಸ್ತಮಾ ಸಮಸ್ಯೆ ಅಷ್ಟೇನು ಇರಲ್ಲ, ಅದೇ ಮಳೆಗಾಲ, ಚಳಿಗಾಲದಲ್ಲಿ ಉಲ್ಬಣವಾಗುವುದು.ಆದ್ದರಿಂದ ಅಸ್ತಮಾ ಸಮಸ್ಯೆ ಇರುವವರು ಕೆಲವೊಂದು ಮುನ್ನೆಚ್ಚರಿಕೆವಹಿಸುವುದು ಒಳ್ಳೆಯದು.
ಈ ಮಳೆಗಾಲದಲ್ಲಿ ಅಸ್ತಮಾ ತಡೆಗಟ್ಟಲು ಯಾವ ಬಗೆಯ ಮುನ್ನೆಚ್ಚರಿಕೆ ಒಳ್ಳೆಯದು, ಯಾವ ಯೋಗಾಸನ ಒಳ್ಳೆಯದು ಎಂದು ನೋಡೋಣ ಬನ್ನಿ:

ಮಾನ್ಸೂನ್ ಹೇಗೆ ಪರಿಣಾಮ ಬೀರುತ್ತದೆ?
* ತಣ್ಣನೆಯ ವಾತಾವರಣ: ಮಳೆಗಾಲದಲ್ಲಿ ವಾತಾವರಣ ತುಂಬಾ ತಂಪಾಗಿರುತ್ತದೆ.
* ಕಡಿಮೆ ಸೂರ್ಯನ ಬೆಳಕು: ಬೇಸಿಗೆಯಲ್ಲಿ ಸೂರ್ಯನ ಬೆಳಕು ಹೆಚ್ಚಾಗಿ ಇರುವುದಿಲ್ಲ
ಅಲರ್ಜಿ ಮತ್ತು ವೈರಲ್ ಸೋಂಕು: ಮಳೆಗಾಲದಲ್ಲಿ ವೈರಸ್, ಬ್ಯಾಕ್ಟಿರಿಯಾ ಈ ಬಗೆಯ ಸಮಸ್ಯೆ ಹೆಚ್ಚಾಗುವುದು, ಇದರಿಂದ ಕೂಡ ಅಸ್ತಮಾ ಕಾಯಿಲೆ ಅಧಿಕವಾಗುವುದು.
ಮಳೆಗಾಲದಲ್ಲಿ ಅಸ್ತಮಾ ತಡೆಗಟ್ಟಲು ಮುನ್ನೆಚ್ಚರಿಕೆಗಳು
ಬಿಸಿ ಬಿಸಿಯಾದ ಆಹಾರ, ನೀರು ಕುಡಿಯಿರಿ: ಮಳೆಗಾಲದಲ್ಲಿ ನೀವು ಬಿಸಿ ಬಿಸಿಯಾದ ಆಹಾರ ಸೇವಿಸಬೇಕು, ಬಿಸಿ ಬಿಸಿಯಾದ ನೀರು ಕುಡಿಯಿರಿ. ನಿಮ್ಮ ಆಹಾರದಲ್ಲಿ ಪ್ರೊಟೀನ್ ಅಧಿಕವರಿಲಿ. ಸೊಪ್ಪು, ತರಕಾರಿ, ಬೀನ್ಸ್ , ಕ್ಯಾರೆಟ್, ಹೂಕೋಸು, ಸಿಹಿ ಗೆಣಸು, ಮೊಳಕೆಬರಿಸಿದ ಕಾಳುಗಳು, ಮೊಟ್ಟೆ ಈ ಬಗೆಯ ಆಹಾರ ಬಳಸಿ.
ಸ್ಟೀಮ್ ತೆಗೆದುಕೊಳ್ಳಿ: ನೀರಿಗೆ ಜೀರಿಗೆ, ತುಳಸಿ, ಅರಿಶಿಣ ಹಾಕಿ ಕುದಿಸಿ ಆ ನೀರಿನ ಹಬೆ ತೆಗೆದುಕೊಳ್ಳಿ.
ಮನೆ ಸ್ವಚ್ಛವಾಗಿರಲಿ: ನೀವು ಶುದ್ಧ ಮಾಡಬೇಡಿ, ಇದರಿಂದ ಅಸ್ತಮಾ ಹೆಚ್ಚಾಗುವುದು, ಬೇರೆಯವರ ಸಹಾಯದಿಂದ ಮನೆಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ.
ಮನೆಮದ್ದುಗಳು
* ಕಷಾಯ ಕುಡಿಯುವುದರಿಂದ ತುಂಬಾ ಒಳ್ಳೆಯದು, ಆದರೆ ಕಷಾಯ ಮಿತಿಯಲ್ಲಿ ಸೇವಿಸಿ.
* ರಾತ್ರಿ 3 ಅಂಜೂರ ನೆನೆ ಹಾಕಿ ಬೆಳಗ್ಗೆ ಎದ್ದ ಮೇಲೆ ಖಾಲಿ ಹೊಟ್ಟೆಯಲ್ಲಿ ಆ ನೀರು ಕುಡಿಯುವುದರಿಂದ ಉಸಿರಾಟಕ್ಕೆ ಸಂಬಂಧಿಸಿದ ಸಮಸ್ಯೆ ತಡೆಗಟ್ಟಲು ಸಹಕಾರಿ.
* ಸಾಸಿವೆಯೆಣ್ಣೆಗೆ ಸ್ವಲ್ಪ ಕರ್ಪೂರ ಹಾಕಿ ಕಾಯಿಸಿ ಆ ಎಣ್ಣೆ ಸ್ವಲ್ಪ ಹದ ಬಿಸಿ ಇರುವಾಗ ಎದೆ ಭಾಗಕ್ಕೆ ಮಸಾಜ್ ಮಾಡಿ. ಇದರಿಂದ ಎದೆಯಲ್ಲಿ ಕಫ ತಡೆಗಟ್ಟಲು ಸಹಕಾರಿ.
ಮಳೆಗಾಲದಲ್ಲಿ ಉಸಿರಾಟದ ವ್ಯಾಯಾಮ ಹಾಗೂ ಕೆಲವೊಂದು ಯೋಗಾಸನಗಳು ಅಸ್ತಮಾ ತಡೆಗಟ್ಟಲು ಸಹಕಾರಿ:
ಉಸಿರಾಟದ ವ್ಯಾಯಾಮ ಮಾಡಿ: ಉಸಿರಾಟದ ವ್ಯಾಯಾಮ ಶ್ವಾಸಕೋಶದ ಆರೋಗ್ಯ ವೃದ್ಧಿಸುತ್ತದೆ. ಬಾಯಲ್ಲಿ ಉಸಿರಾಟದ ವ್ಯಾಯಾಮ ಬದಲು ಮೂಗಿನಲ್ಲಿ ಉಸಿರಾಟದ ವ್ಯಾಯಾಮ ಮಾಡುವುದರಿಂದ ಅಸ್ತಮಾ ಲಕ್ಷಣಗಳು ಕಡಿಮೆಯಾಗುವುದು.
ಈ ಆಸನಗಳು ಪ್ರತಿನಿತ್ಯ ಅಭ್ಯಾಸ ಮಾಡಿ:
* ಸೇತು ಬಂಧಾಸನ
* ಭುಜಾಂಗಾಸನ
* ಹಾಫ್ ಸ್ಪೈನಲ್ ಟ್ವಿಸ್ಟ್ ಭಂಗಿ
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
