Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಹರಡುವುದೇ ತಿಳಿಯುವುದಿಲ್ಲ ಈ ಥೈರಾಯ್ಡ್ ಕ್ಯಾನ್ಸರ್..! ಲಕ್ಷಣವೇನು ಗೊತ್ತಾ?
ಥೈರಾಯ್ಡ್ ಹಾರ್ಮೋನ್‌ಗಳ ಸ್ರವಿಸುವ ಗ್ರಂಥಿ ನಮ್ಮ ದೇಹಕ್ಕೆ ಅತ್ಯಂತ ಅವಶ್ಯಕ ಅಂಗವಾಗಿರಲಿದೆ. ದೇಹದ ಪ್ರತಿಯೊಂದು ಅಂಗವು ಸರಿಯಾಗಿ ಕಾರ್ಯ ನಿರ್ವಹಿಸಬೇಕಾದರೆ ಈ ಗ್ರಂಥಿ ಸ್ರವಿಸುವ ಥೈರಾಯ್ಡ್ ಹಾರ್ಮೋನ್‌ಗಳು ಮುಖ್ಯವಾಗುತ್ತದೆ. ಆದ್ರೆ ಇತ್ತೀಚಿಗೆ ಥೈರಾಯ್ಡ್ ಸಮಸ್ಯೆಯಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ.
ನಮ್ಮ ಗಂಟಲು ಭಾಗದಲ್ಲಿ ಚಿಟ್ಟೆಯಾಕಾರದಲ್ಲಿ ಇರುವ ಒಂದು ಅಂಗ ಇದಾಗಿದ್ದು, ಥೈರಾಯ್ಡ್ ಹಾರ್ಮೋನ್‌ಗಳು ನಮ್ಮ ದೇಹದ ತೂಕ, ಚಯಪಚಯ ಕ್ರಿಯೆ, ಹೃದಯದ ಆರೋಗ್ಯ ಕಾಪಾಡಲು ತುಂಬಾನೇ ಅವಶ್ಯಕ ಅಂಗವಾಗಿದೆ. ಆದ್ರೆ ಇತ್ತೀಚಿನ ದಿನಗಳಲ್ಲಿ ಥೈರಾಯ್ಡ್ ಕ್ಯಾನ್ಸರ್ ಪ್ರಕರಣಗಳನ್ನು ನೀವು ಕೇಳಿರಬಹುದು. ಹಾಗಾದ್ರೆ ಈ ಕ್ಯಾನ್ಸರ್ ಉಂಟಾಗಲು ಕಾರಣವೇನು? ಇದರ ಪರಿಣಾಮ ಏನಾಗಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.

ಥೈರಾಯ್ಡ್ ಕ್ಯಾನ್ಸರ್ ಆರಂಭಿಕ ಹಂತದಲ್ಲಿ ಯಾವುದೇ ಲಕ್ಷಣಗಳು ನಮಗೆ ಗೋಚರವಾಗುವುದಿಲ್ಲ. ಹಾಗೆ ಥೈರಾಯ್ಡ್ ರಕ್ತದಲ್ಲಿ ಅಯೋಡಿನ್ ಅನ್ನು ಬಳಸಿಕೊಂಡು ಥೈರಾಯ್ಡ್ ಹಾರ್ಮೋನ್ ಅನ್ನು ಉತ್ಪತ್ತಿ ಮಾಡುತ್ತದೆ. ದೇಹದಲ್ಲಿ ಕ್ಯಾಲ್ಸಿಯಂ ಮಟ್ಟ ನಿಯಂತ್ರಣದಲ್ಲಿಡಲು ಇದು ನೆರವಾಗಲಿದೆ. ಆದ್ರೆ ಥೈರಾಯ್ಡ್ ಕ್ಯಾನ್ಸರ್ ಹಲವು ಹಂತದವರೆಗೂ ಜೀವಕ್ಕೆ ಹಾನಿಮಾಡುವಷ್ಟು ಅಪಾಯಕಾರಿಯಾಗಿರುವುದಿಲ್ಲ.
ಥೈರಾಯ್ಡ್ ಕ್ಯಾನ್ಸರ್ ರೋಗಲಕ್ಷಣಗಳು
- ನುಂಗುವ ಸಮಯದಲ್ಲಿ ತೊಂದರೆ ಮತ್ತು ನೋವು
- ಕುತ್ತಿಗೆಯ ಬುಡದಲ್ಲಿ ಗಡ್ಡೆಯಂತಹ ಅನುಭವವಾಗುವುದು
- ಗಂಟಲು ನೋವು
- ಮಾತನಾಡುವಾಗ ಅಡೆತಡೆಯಾದಂತೆ ಆಗುವುದು
ಥೈರಾಯ್ಡ್ ಕ್ಯಾನ್ಸರ್‌ಗೆ ಕಾರಣವಾಗುವ ಅಂಶಗಳೇನು?
ಕೌಟುಂಬಿಕ ಇತಿಹಾಸ: ಮನೆಯ ಸದಸ್ಯರಲ್ಲಿ ಯಾರಿಗಾದರು ಈ ಥೈರಾಯ್ಡ್ ಸಮಸ್ಯೆ ಕಂಡುಬಂದರೆ ಈ ಸಮಸ್ಯೆ ಮುಂದಿನ ಪೀಳಿಗೆಗೂ ಹರಡುವ ಸಾಧ್ಯತೆ ಇರುವುದು ಹೆಚ್ಚು. ಇದು ವಂಶಾವಳಿಯಿಂದ ಬರುವ ಸಾಧ್ಯತೆ ಹೆಚ್ಚಿರುತ್ತದೆ.
ಜೆನೆಟಿಕ್ ಕಾರಣಗಳು: ಥೈರಾಯ್ಡ್ ಕ್ಯಾನ್ಸರ್‌ಗೆ ಜೀವನ ಶೈಲಿಯೂ ಕೂಡ ಕಾರಣವಾಗಲಿದೆ. ವಿಕಿರಣ ಅಥವಾ ಕೆಲವು ರಾಸಾಯನಿಕಗಳಿಗೆ ಒಡ್ಡಿಕೊಳ್ಳುವುದರಿಂದ ಕ್ಯಾನ್ಸರ್‌ಗೆ ಕಾರಣವಾಗುವ ಸಾಧ್ಯತೆ ಇರಲಿದೆ. ಹಾಗೆ ಧೂಮಪಾನ, ಮದ್ಯಪಾನ ಕೂಡ ಈ ಕ್ಯಾನ್ಸರ್ ಅಪಾಯ ಹೆಚ್ಚಿಸುತ್ತದೆ.
ಅಯೋಡಿನ್ ಕೊರತೆ: ಥೈರಾಯ್ಡ್ ಗ್ರಂಥಿಗೆ ಹಾರ್ಮೋನ್ ಉತ್ಪತ್ತಿ ಮಾಡಬೇಕಾದರೆ ಅಯೋಡಿನ್ ಅವಶ್ಯಕತೆ ಇರುತ್ತದೆ. ಆದ್ರೆ ದೇಹದಲ್ಲಿ ಅಲೋಡಿನ್ ಕೊರತೆಯಾದಾಗ ಈ ಗ್ರಂಥಿಯು ಹಾರ್ಮೋನ್‌ಗಳ ಉತ್ಪತ್ತಿ ಮಾಡಲು ಸಾಧ್ಯವಾಗುವುದಿಲ್ಲ. ಈ ಸ್ಥಿತಿಯನ್ನು ಗಾಯಿಟರ್ ಎಂದು ಕರೆಯಲಾಗುತ್ತದೆ. ನಂತರ ಇದು ಥೈರಾಯ್ಡ್ ಕ್ಯಾನ್ಸರ್‌ಗೆ ಹತ್ತಿರವಾಗಿಸುತ್ತದೆ.
ಥೈರಾಯ್ಡ್ ಕ್ಯಾನ್ಸರ್ ಹಲವು ಹಂತಗಳ ಒಳಗೊಂಡಿದೆ
ಮೊದಲ ಹಂತದಲ್ಲಿ ಥೈರಾಯ್ಡ್ ಕ್ಯಾನ್ಸರ್ ಪತ್ತೆ ಮಾಡುವುದು ಬಹಳ ಕಷ್ಟವಾಗಲಿದೆ. ಏಕೆಂದರೆ ಆರಂಭದಲ್ಲಿ ಥೈರಾಯ್ಡ್ ಕೋಶಗಳು ನಾಶವಾಗುವುದರಿಂದ ಕ್ಯಾನ್ಸರ್ ಆರಂಭವಾಗುತ್ತದೆ. ಆದ್ರೆ ಈ ಪ್ರಕ್ರಿಯೆ ನಮಗೆ ತಿಳಿಯುವುದಿಲ್ಲ. ಆದರೆ ಕ್ಯಾನ್ಸರ್ ಕೋಶಗಳು 2 ಸೆಂ.ಮೀಗಿಂತ ಹೆಚ್ಚು ದೊಡ್ಡದಾದಾಗ ಲಕ್ಷಣಗಳು ಗೋಚರವಾಗಲು ಆರಂಭಿಸುತ್ತದೆ. ಮೂರನೇ ಹಂತದಲ್ಲಿ ಕ್ಯಾನ್ಸರ್ ಕೋಶಗಳು ಥೈರಾಯ್ಡ್ ಗ್ರಂಥಿಯಿಂದ ದುಗ್ದರಸ ಗ್ರಂಥಿಗಳಿಗೆ ಹರಡಲು ಆರಂಭಿಸುತ್ತದೆ. 4ನೇ ಹಂತದಲ್ಲಿ ಈ ಕೋಶಗಳು ಮೂಳೆಗಳವರೆಗೂ ಹರಡಿರುತ್ತದೆ.
ಥೈರಾಯ್ಡ್ ಕ್ಯಾನ್ಸರ್‌ಗೆ ಚಿಕಿತ್ಸೆ ಏನು?
ಥೈರಾಯ್ಡ್ ಕ್ಯಾನ್ಸರ್ ಚಿಕಿತ್ಸೆಯು ಗೆಡ್ಡೆಯ ಹಂತ ಮತ್ತು ಪ್ರಕಾರವನ್ನು ಅವಲಂಬಿಸಿರುತ್ತದೆ. ಗೆಡ್ಡೆಯನ್ನು ತೆಗೆದು ಹಾಕುವುದು ಅನಿವಾರ್ಯವಾಗುತ್ತದೆ. ಥೈರಾಯ್ಡ್ ಗ್ರಂಥಿಯನ್ನು ಸಂಪೂರ್ಣವಾಗಿ ಅಥವಾ ಭಾಗಶಃ (ಸಣ್ಣ ಭಾಗ) ತೆಗೆದುಹಾಕಿದರೆ, ಅದನ್ನು ಥೈರಾಯ್ಡೆಕ್ಟಮಿ ಎಂದು ಕರೆಯಲಾಗುತ್ತದೆ. ಕೀಮೋಥೆರಪಿ, ರೇಡಿಯೇಶನ್ ಥೆರಪಿ, ಸಪೋರ್ಟಿವ್ ಕೇರ್ ಇತ್ಯಾದಿಗಳು ಚಿಕಿತ್ಸೆಯ ಇತರ ರೂಪಗಳಾಗಿವೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications