Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
2 ವರ್ಷದಲ್ಲಿ 58 ಕೆ.ಜಿ ತೂಕ ಇಳಿಸಿದ ಯುವಕ..! ಆತನ ಡಯೆಟ್ ಏನಾಗಿತ್ತು.?
ದೇಹದ ತೂಕ ಹೆಚ್ಚಿಕೊಳ್ಳೋದು ಎಷ್ಟು ಕಷ್ಟವೋ ಅದಕ್ಕಿಂತಲೂ ಕಷ್ಟದ ಕೆಲಸ ಅಂದ್ರೆ ಅದು ದೇಹದ ತೂಕ ಇಳಿಸೋದು. ಇತ್ತೀಚಿನ ದಿನಗಳಲ್ಲಿ ಚಿಕ್ಕ ವಯಸ್ಸಿನವರೂ ಸಹ ಅಧಿಕ ತೂಕದಿಂದ ಪರದಾಡುವ ಪರಿಸ್ಥಿತಿ ನಾವು ನೋಡಿದ್ದೇವೆ. ಅವರು ಜಿಮ್‌ನಿಂದ ಹಿಡಿದು ಔಷಧಿ ಸಹ ತೆಗೆದುಕೊಳ್ಳುತ್ತಾರೆ.
ಇಷ್ಟೇ ಅಲ್ಲ ಡಯಟ್ ಎಂಬ ಹೆಸರಲ್ಲಿ ಊಟ ಬಿಡುವುದು, ಕಡಿಮೆ ತಿನ್ನುವುದು ನಿದ್ರೆ ಬಿಡುವುದು ಸೇರಿ ಅಪಾಯಕಾರಿ ರೀತಿಯಲ್ಲಿ ತೂಕ ಇಳಿಸಲು ಮುಂದಾಗುತ್ತಾರೆ. ಆದ್ರೆ ಇದೆಲ್ಲಾ ವಿಫಲ ಯತ್ನವಾಗಿಯೇ ಉಳಿದು ಅವರಲ್ಲಿ ಖಿನ್ನತೆ ಒತ್ತಡದಂತಹ ಸಮಸ್ಯೆಯೂ ಎದುರಾಗುವುದನ್ನು ನಾವು ನೋಡಿದ್ದೇವೆ.

ಆದರೆ ಇಲ್ಲೊಬ್ಬ ಯುವಕ ಬರೋಬ್ಬರಿ ಎರಡು ವರ್ಷದಲ್ಲಿ 58 ಕೆ.ಜಿ ಇಳಿಸಿದ್ದಾನೆ. ಆದ್ರೆ ಆತ ತೂಕ ಇಳಿಸಲು ಬೇರೆಯವರ ರೀತಿ ಡಯಟ್ ಆಗಲಿ, ಕಠಿಣ ಜಿಮ್ ನಿಯಮ ಏನನ್ನೂ ಪಾಲಿಸಲಿಲ್ಲವಂತೆ. ಹಾಗಾದ್ರೆ ಆತ ಇಷ್ಟು ತೂಕ ಇಳಿಸಿದ್ದು ಹೇಗೆ ಎಂಬ ಮಾಹಿತಿ ಇಲ್ಲಿದೆ ನೋಡಿ.
ಸೌರವ್ ಕುಮಾರ್ ತಿವಾರಿ ಎಂಬಾತ ಬರೋಬ್ಬರಿ 143.3 ಕೆಜಿ ತೂಕ ಹೊಂದಿದ್ದರು. ಓಡಾಡುವುದುದು, ಕೂರುವುದು ಯಾವುದಕ್ಕೂ ಸಮಸ್ಯೆ ಆಗದಿದ್ದರೂ ಅವರ ತೂಕ ಏರಿಕೆ ಸಮಸ್ಯೆಯಾಗುವ ಎಲ್ಲಾ ಲಕ್ಷಣವೂ ಅವರಿಗೆ ಎದುರಾಗಿತ್ತು. ಹೀಗಾಗಿ ಒಂದು ದಿನ ತೂಕ ಇಳಿಸಲೇಬೇಕು ಎಂದು ದೃಢಸಂಕಲ್ಪ ಮಾಡಿದ ಅವರು ಜಿಮ್‌ಗೆ ಸೇರಿದರು.
ಕಠಿಣ ಅಭ್ಯಾಸ ನಿತ್ಯದ ಕೆಲಸವಾಗಿ ಜಿಮ್ ಮೊದಲ ಆದ್ಯತೆ ಆಗಿತ್ತು. ಒಂದು ದಿನವೂ ತಪ್ಪಿಸದೆ ಜಿಮ್ ಹೋಗುತ್ತಿದ್ದರಂತೆ. ಅಷ್ಟೇ ಅಲ್ಲ ತರಬೇತುದಾರರು ತಿಳಿಸಿದಂತೆ ಪೌಷ್ಟಿಕ ಆಹಾರ ಹಾಗೂ ಕೆಲವು ಫ್ಯಾಟ್, ಡೈರಿ ಪ್ರೋಡಕ್ಸ್ ಸೇವನೆ ತ್ಯಜಿಸುವುದು ಸೇರಿದಂತೆ ಆಹಾರದಲ್ಲಿ ಕಠಿಣ ನಿಯಮ ಪಾಲಿಸುವಂತೆ ಹೇಳಲಾಗಿತ್ತು. ಈ ಕಠಿಣ ನಿಯಮಗಳ ಸಲುವಾಗಿ ಅವರು ಮೊದಲ ವರ್ಷದಲ್ಲಿ ಬರೋಬ್ಬರಿ 30 ಕೆ,ಜಿ ಇಳಿಸಿದ್ದರು.
ಆದರೆ ಅವರಿಗೆ ಇದು ಸಮಾಧಾನ ನೀಡಲಿಲ್ಲವಂತೆ. ಒಂದು ವರ್ಷದ ನಿರಂತರ ಹೋರಾಟ ಮತ್ತಷ್ಟು ಸವಾಲುಗಳ ಎದುರಿಸಲು ಪ್ರೇರೇಪಿಸಿತ್ತಂತೆ. ಹೀಗಾಗಿ ಅವರು ಸೈಕ್ಲಿಂಗ್ ಹಾಗೂ ಯೋಗದ ಮೊರೆ ಹೋದರು. ಏಕೆಂದರೆ ಕೊರೊನಾ ಸಮಯದಲ್ಲಿ ಎಲ್ಲಾ ಜಿಮ್‌ಗಳು ಬಂದ್ ಆದವು ಈ ವೇಳೆ ಅವರಿಗೆ ಸಮಸ್ಯೆ ಎದುರಾಯಿತು. ಹೀಗಾಗಿ ಜಿಮ್ ಬದಲು ಅವರು ಸೈಕ್ಲಿಂಗ್ ಹಾಗೂ ಯೋಗ ಮಾಡಲು ಆರಂಭಿಸಿದರು. ಇದು ಬರು ಬರುತ್ತ ಹವ್ಯಾಸವೇ ಆಯಿತು. ಬೆಳಗ್ಗೆಯೇ ಯೋಗ ಹಾಗೂ ಸೈಕ್ಲಿಂಗ್‌ಗಾಗಿ ಸಮಯ ಇಡುತ್ತಿದ್ದರು.
ಈ ಎರಡು ಕೆಲಸ ಅವರ ಜೀವನ ಬದಲಾಯಿಸಿತು. ಇದರ ಕಾರಣದಿಂದಾಗಿ ಅವರು ಎರಡು ವರ್ಷದಲ್ಲಿ ಬರೋಬ್ಬರಿ 58 ಕೆ.ಜಿ ಇಳಿಸಿದರು. ಯಾರು ಸಹ ನಂಬಲಾಗದ ಅವರ ಕಥೆಗೆ ಅವರೇ ಸ್ಪೂರ್ತಿಯಾಗಿದ್ದರು. ಆದರೆ ಇದು ಅಷ್ಟೊಂದು ಸುಲಭವಾಗಿರಲಿಲ್ಲವಂತೆ. ಸೈಕ್ಲಿಂಗ್‌ನಲ್ಲಿ ಅವರು ಮೊಣಕಾಲು ಗಾಯ ಮಾಡಿಕೊಂಡಿದ್ದರು. ಇದರಿಂದ ಹಲವು ದಿನಗಳ ಕಾಲ ಓಡಾಡುವುದು ಕಷ್ಟವಾಗಿತ್ತಂತೆ, ಆದ್ರೆ ಛಲ ಬಿಡದೆ ತೂಕ ಇಳಿಸುವ ಕಾರ್ಯದಲ್ಲಿ ನಿರತರಾಗಿ 58 ಕೆ.ಜಿ ಇಳಿಸಿದ್ದರು.
ಅವರ ಡಯಟ್ ಪ್ಲಾನ್ ಏನಾಗಿತ್ತು ಗೊತ್ತಾ?
ದೇಹಕ್ಕೆ ಯಾವ ಪೋಷಕಾಂಶಗಳು ಬೇಕಾಗಿದೆ ಎಂಬುದನ್ನು ಮೊದಲು ನಾವು ಅರಿತುಕೊಳ್ಳಬೇಕಂತೆ, ಎಲ್ಲಾ ಆಹಾರಗಳನ್ನು ಸೇವಿಸುವುದು, ಕ್ಯಾಲೋರಿಗಳ ಲೆಕ್ಕವಿದಲ್ಲದೆ ತಿನ್ನುವುದು ಆರೋಗ್ಯಕರ ಬೆಳವಣಿಗೆ ಅಲ್ಲ ಎಂದಿದ್ದಾರೆ.
ಆಹಾರವನ್ನು ಚೆನ್ನಾಗಿ ಅಗಿದು ಸಮಯ ತೆಗೆದುಕೊಂಡು ನುಂಗಬೇಕಂತೆ. ಅಲ್ಲದೆ ಒಂದು ತುತ್ತು ಹಾಗೂ ಮತ್ತೊಂದು ತುತ್ತಿನ ನಡುವೆ ಕನಿಷ್ಟ 2 ನಿಮಿಷಗಳ ಅಂತರವಾದರು ಇರಬೇಕಂತೆ. ಜೊತೆಗೆ ಒಮ್ಮೆ ಊಟ ಮಾಡಿದ ಬಳಿಕ 5 ಗಂಟೆಯ ಅವಧಿಯಲ್ಲಿ ಏನನ್ನೂ ಸೇವಿಸಬಾರದಂತೆ.
ಆದಷ್ಟು ದ್ರವ ಆಹಾರ ಸೇವನೆ ಉತ್ತಮವಂತೆ, ಹಣ್ಣು, ಜ್ಯೂಸ್ ಕುಡಿಯಬೇಕಂತೆ. ಮಲಗುವ ಮುನ್ನ ಲಘು ಊಟ, ಬೆಳಗ್ಗೆಯೂ ಲಘು ತಿಂಡಿ ಉತ್ತಮವಂತೆ. ಜೊತೆಗೆ ವಾರದಲ್ಲಿ ಒಂದು ದಿನ ಉಪವಾಸ ಮಾಡಬೇಕಂತೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications